ಪ್ರೀತಿ, ಭಾವ ಮತ್ತು ಗುರುಗಳ ಮೇಲೆ ಅಚಲ ಶ್ರದ್ಧೆಯಿರುವ ಫ್ರಾನ್ಸ್‌ನಲ್ಲಿರುವ ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ಸಿರಿಯಾಕ್ ವಾಲೆ (೪೧ ವರ್ಷ) ಇವರು ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಸಾಮಾನ್ಯವಾಗಿ ಗುರುಗಳು ಶಿಷ್ಯರಿಗೆ ಆನಂದ ನೀಡುತ್ತಾರೆ. ಅಕ್ಟೋಬರ್ ೩೦ ರಂದು ಸೌ. ಯೋಯಾ ವಾಲೆ ಇವರು ಸಂತಪದವಿಯಲ್ಲಿ ವಿರಾಜಮಾನರಾಗಿ ನನಗೆ ಶಬ್ದಾತೀತ ಆನಂದ ನೀಡಿದರು !  – (ಪರಾತ್ಪರ ಗುರು) ಡಾ. ಆಠವಲೆ (೩೦.೧೦.೨೦೨೧)

ಪೂ. (ಸೌ.) ಯೋಯಾ ವಾಲೆ

ಸ್ಪಿರಿಚ್ಯುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್‌ನ (ಎಸ್.ಎಸ್.ಆರ್.ಎಫ್.ನ) ಫ್ರಾನ್ಸ್‌ನ; ಆದರೆ ಕೆಲವು ವರ್ಷಗಳಿಂದ ರಾಮನಾಥಿಯ ಸನಾತನದ ಆಶ್ರಮದಲ್ಲಿ ವಾಸ್ತವ್ಯದಲ್ಲಿರುವ ಸಾಧಕಿ ಸೌ. ಯೋಯಾ ಸಿರಿಯಾಕ್ ವಾಲೆ (೪೧ ವರ್ಷ) ಇವರು ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದ ಬಗ್ಗೆ ಅಕ್ಟೋಬರ್ ೩೦ ರಂದು ವಿದೇಶಿ ಸಾಧಕರ ಸತ್ಸಂಗದಲ್ಲಿ ಘೋಷಿಸಲಾಯಿತು.

ಪೂ. ಯೋಯಾ ವಾಲೆ ಇವರನ್ನು ಸನ್ಮಾನಿಸುತ್ತಿರುವ ಪೂ. ದೇಯಾನ್ ಗ್ಲೆಶ್ಚಿಚ್

ಈ ಸಮಯದಲ್ಲಿ ಪೂ. ವಾಲೆ ಇವರ ಮಗಳಾದ ಕು. ಅನಾಸ್ತಾಸಿಯಾ ವಾಲೆ (೧೭ ವರ್ಷ) ಇವಳು ವ್ಯಷ್ಟಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡ ಬಗ್ಗೆ ಘೋಷಿಸಲಾಯಿತು. ಪೂ. (ಸೌ.) ಯೋಯಾ ವಾಲೆ ಇವರನ್ನು ಅವರ ಸಹೋದರ ಪೂ. ದೇಯಾನ್ ಗ್ಲೆಶ್ಚಿಚ್ ಇವರು ಸನ್ಮಾನಿಸಿದರು.

ಪೂ. (ಸೌ.) ಯೋಯಾ ವಾಲೆ ಇವರ ಮಗಳಾದ ಕು. ಅನಾಸ್ತಾಸಿಯಾ ವಾಲೆ ಇವಳು ವ್ಯಷ್ಟಿ ಆಧ್ಯಾತ್ಮಿಕ ಮಟ್ಟ ಶೇ. ೬೧ ರಷ್ಟು ಪ್ರಾಪ್ತಮಾಡಿಕೊಂಡರೆಂದು ಘೋಷಿತ !

ಕು. ಅನಾಸ್ತಾಸಿಯಾ ವಾಲೆ

ಕು. ಅನಾಸ್ತಾಸಿಯಾ ವಾಲೆ ಇವರ ಸತ್ಕಾರವನ್ನು ಅವಳ ಸೋದರ ಮಾವ, ಅಂದರೆ ಪೂ. ದೇಯಾನ್ ಗ್ಲೆಶ್ಚಿಚ್ ಇವರು ಮಾಡಿದರು. ಸಂತರಾಗಿರುವ ಸಹೋದರನು ಸಂತ ಸಹೋದರಿಯ ಸನ್ಮಾನ ಮತ್ತು ಸಂತರಾಗಿರುವ ಸೋದರಮಾವನು ಶೇ. ೬೧ ರಷ್ಟು ಮಟ್ಟವನ್ನು ಪ್ರಾಪ್ತ ಮಾಡಿಕೊಂಡ ಸೋದರಸೊಸೆಯ ಸತ್ಕಾರವನ್ನು ಮಾಡುವ ಇದು ದುರ್ಲಭ ಘಟನೆಯಾಗಿದೆ !

ಕು. ಅನಾಸ್ತಾಸಿಯಾ ಇವರ ಸತ್ಕಾರವನ್ನು ಮಾಡುತ್ತಿರುವ ಪೂ. ದೇಯಾನ್ ಗ್ಲೆಶ್ಚಿಚ್

ಕು. ಅನಾಸ್ತಾಸಿಯಾ ವಾಲೆ ಇವಳ ವ್ಯಷ್ಟಿ ಆಧ್ಯಾತ್ಮಿಕ ಮಟ್ಟ ಶೇ. ೬೧ ರಷ್ಟಾಗುವ ಬಗೆಗಿನ ಅಂಶಗಳು

ಕು. ಅನಾಸ್ತಾಸಿಯಾ ಇವಳು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ್ದು ಅವಳ ವ್ಯಷ್ಟಿ ಆಧ್ಯಾತ್ಮಿಕ ಮಟ್ಟವು ಶೇ. ೬೧ ರಷ್ಟಾಗಿದೆ. ಅನಾಸ್ತಾಸಿಯಾಳಲ್ಲಿ ಭಾವ, ಅಂತರ್ಮುಖತೆ ಮತ್ತು ಸಾಧನೆಯ ತಳಮಳವೂ ಇದೆ. ಈ ಗುಣಗಳಿಂದ ಅವಳ ವ್ಯಷ್ಟಿ ಆಧ್ಯಾತ್ಮಿಕ ಮಟ್ಟವು ಶೇ. ೬೧ ರಷ್ಟಾಗಿದೆ. ಅವಳಲ್ಲಿನ ಸಮಷ್ಟಿ ಗುಣವು ಹೆಚ್ಚಾದಂತೆ ಸಮಷ್ಟಿ ಸಾಧನೆಯಲ್ಲಿಯೂ ಅವಳು ನೇತೃತ್ವ ಮುಂತಾದ ಗುಣಗಳಿಂದ ಕಾರ್ಯನಿರತರಾದರೆ ಸಮಷ್ಟಿ ಗುಣಗಳು ಬೆಳೆದು ಅವಳ ಸಮಷ್ಟಿ ಆಧ್ಯಾತ್ಮಿಕ ಮಟ್ಟವೂ ಶೇ. ೬೧ ರಷ್ಟಾಗುವುದು.