ಸನಾತನ ಸಂಸ್ಥೆಯ ವತಿಯಿಂದ ಭಾರತದಾದ್ಯಂತ ನಡೆಸಲಾದ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ನಿಮಿತ್ತ…
‘ಗುರುಕೃಪೆಯಿಂದ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ (ಸನಾತನದ ೭೫ ನೇ ಸಮಷ್ಟಿ ಸಂತರು) ಇವರ ಮಾರ್ಗದರ್ಶಕ್ಕನುಸಾರ ಕರ್ನಾಟಕ ರಾಜ್ಯದಲ್ಲಿ ೧.೯.೨೦೨೧ ರಿಂದ ೩೧.೧೦.೨೦೨೧ ಈ ಕಾಲಾವಧಿಯಲ್ಲಿ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ವನ್ನು ಹಮ್ಮಿಕೊಳ್ಳಲಾಯಿತು. ಹಿಂದಿನ ಲೇಖನದಲ್ಲಿ ಪೂ. ರಮಾನಂದ ಗೌಡ ಇವರಿಗೆ ಈ ಅಭಿಯಾನದ ಸಂಕಲ್ಪನೆ ಹೇಗೆ ಹೊಳೆಯಿತು ? ಅವರು ತಳಮಳದಿಂದ ಮತ್ತು ಪರಿಶ್ರಮ ತೆಗೆದುಕೊಂಡು ಈ ಅಭಿಯಾನದ ನಿಯೋಜನೆಯನ್ನು ಹೇಗೆ ಮಾಡಿದರು ? ಮತ್ತು ಅದರಿಂದ ನಮಗೆ ಯಾವ ಅಂಶಗಳು ಕಲಿಯಲು ಸಿಕ್ಕಿದವು ?’, ಎಂಬ ಬಗ್ಗೆ ಕೊಡಲಾಗಿತ್ತು. ಈ ವಾರದ ಲೇಖನದಲ್ಲಿ ಗ್ರಂಥ ಅಭಿಯಾನದ ಪ್ರಸಾರವನ್ನು ‘ವಾಟ್ಸ್‌ಆಪ್’ ಮತ್ತು ಸಾಮಾಜಿಕ ಜಾಲತಾಣಗಳ (‘ಸೋಶಿಯಲ್ ಮೀಡಿಯಾ’) ಮೂಲಕ ಹೇಗೆ ಪ್ರಸಾರ ಮಾಡಲಾಯಿತು ? ಎಂಬುದನ್ನು ನೋಡೋಣ.
(ಭಾಗ – ೪)
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/52471.html |
೧. ವಾಟ್ಸ್‌ಆಪ್‌ನ ಮಾಧ್ಯಮದಿಂದಾದ ಪ್ರಸಾರ
ಅ. ‘ಗ್ರಂಥಗಳ ಮಹತ್ವ ಹೇಳುವ ಮಾಹಿತಿ’ಯನ್ನು (ಪೋಸ್ಟ್ ಮತ್ತು ವಿಡಿಯೋ ಪೋಸ್ಟ್) ಪ್ರಸಾರ ಮಾಡಲಾಯಿತು.
ಆ. ಅಭಿಯಾನದ ಪ್ರಸಾರ ಮಾಡುವ ಚಿತ್ರ ‘ಡಿ.ಪಿ.’ (‘ಡಿಸ್‌ಪ್ಲೇ ಪಿಕ್ಚರ್’) ಮೂಲಕ ಪ್ರಸಾರವಾಯಿತು.
ಇ. ಈ ಮಾಧ್ಯಮದಿಂದ ಕಳುಹಿಸಲಾದ ಎಲ್ಲ ಪೋಸ್ಟ್‌ಗಳು ೧ ಲಕ್ಷದ ೨೩ ಸಾವಿರ ಜನರ ವರೆಗೆ ತಲುಪಿದವು.
೨. ಸಾಧಕರು ಪ್ರಸಾರದ ದೃಷ್ಟಿಯಿಂದ ‘ವಾಟ್ಸಆಪ್’ನ ‘ಸ್ಟೇಟಸ್’ನಲ್ಲಿ ಗ್ರಂಥಕ್ಕೆ ಸಂಬಂಧಿಸಿದ ಕೆಲವು ಛಾಯಾಚಿತ್ರಗಳನ್ನು ಇಡುತ್ತಾರೆ. ಅದನ್ನು ನೋಡಿ ಕೆಲವು ಜಿಜ್ಞಾಸುಗಳು ಸಾಧಕರನ್ನು ಸಂಪರ್ಕಿಸಿ ಗ್ರಂಥಗಳಿಗೆ ಬೇಡಿಕೆಯನ್ನು ನೀಡಿದರು.
೩. ಅಭಿಯಾನದ ಬಗ್ಗೆ ತಯಾರಿಸಲಾದ ಪೋಸ್ಟ್ ನೋಡಿ ಜನರ ಮೇಲಿನ ಆವರಣವು ಕಡಿಮೆಯಾಗಿ ಅವರಿಗೆ ವಿಷಯವನ್ನು ಗ್ರಹಣ ಮಾಡಲು ಸಾಧ್ಯವಾಗುವುದು
ಅಭಿಯಾನದ ವಿಷಯದಲ್ಲಿ ತಯಾರಿಸಲಾದ ಒಂದೊಂದು ಪೋಸ್ಟ್ ನೋಡಿ ಜನರಿಗೆ ಚೈತನ್ಯ ಸಿಗುವುದು ಮತ್ತು ‘ಅವರಿಗೆ ವಿಷಯವೇನಿದೆ ಎಂಬುದನ್ನು ಗ್ರಹಣ ಮಾಡಲು ಸಾಧ್ಯವಾಗುತ್ತಿದೆ’, ಎಂದು ಗಮನಕ್ಕೆ ಬಂದಿತು.
೪. ಉದ್ಘಾಟನೆಯ ವಿಡಿಯೋವನ್ನು ನೋಡಿ ಅನೇಕ ಸಾಧಕರ ಭಾವಜಾಗೃತಿಯಾಯಿತು ಮತ್ತು ಸೇವೆ ಮಾಡಲು ಪ್ರೇರಣೆ ದೊರಕಿತು. ಈ ವಿಡಿಯೋದ ಮಾಧ್ಯಮದಿಂದ ‘ಎಲ್ಲರ ಬಳಿ ಚೈತನ್ಯದ ಪ್ರಕ್ಷೇಪಣೆಯಾಗುತ್ತಿದೆ’, ಎಂದು ಅರಿವಾಗುತ್ತಿತ್ತು.
೫. ಸಾಮಾಜಿಕ ಮಾಧ್ಯಮಗಳ ಮೂಲಕ ದೊರಕಿದ ಉತ್ತಮ ಸ್ಪಂದನೆ
‘ಸಾಮಾಜಿಕ ಮಾಧ್ಯಮಗಳಲ್ಲಿ ಗ್ರಂಥ ಅಭಿಯಾನದ ಯಾವ ಪೋಸ್ಟ್‌ಗಳು ಹೋಗುತ್ತಿದ್ದವೋ, ಅವುಗಳ ಮಾಧ್ಯಮದಿಂದ ಬಹಳಷ್ಟು ಚೈತನ್ಯವು ಹರಡುತ್ತಿದೆ ಮತ್ತು ಸಮಾಜದಲ್ಲಿ ಸಾತ್ತ್ವಿಕ ವಾತಾವರಣವನ್ನು ನಿರ್ಮಾಣ ಮಾಡುತ್ತಿದೆ’ ಎಂದು ಎಲ್ಲರ ಅನುಭವಕ್ಕೆ ಬರುತ್ತಿದೆ. ಸಾಮಾಜಿಕ ಮಾಧ್ಯಮಗಳಿಂದ ಈ ಅಭಿಯಾನಕ್ಕೆ ಉತ್ತಮ ಬೆಂಬಲ ದೊರಕಿತು.
೬. ಜ್ಞಾನಶಕ್ತಿ ಅಭಿಯಾನದ ಎಲ್ಲೆಡೆ ಆದ ಪ್ರಸಿದ್ಧಿ
ಅ. ಪೂ. ರಮಾನಂದ ಗೌಡ ಇವರ ಹಸ್ತದಿಂದ ದೀಪಪ್ರಜ್ವಲನೆಯನ್ನು ಮಾಡಿ ಅಭಿಯಾನವನ್ನು ಆರಂಭಿಸಲಾಯಿತು. ಅಭಿಯಾನದ ಪ್ರಸಾರ ಮಾಡುವ ಚಿತ್ರ (ಡಿ.ಪಿ.) ಮತ್ತು ‘ಪೋಸ್ಟ್’ನ್ನು ಲೋಕಾರ್ಪಣೆ ಮಾಡಿದರು.
ಆ. ಉದ್ಘಾಟನೆ ಸಮಾರಂಭ, ಗ್ರಂಥಗಳ ವಿಷಯ ಮತ್ತು ಅಭಿಯಾನ ಈ ವಿಷಯದ ಪತ್ರಿಕಾಪ್ರಕಟಣೆಯನ್ನು (ಪ್ರೆಸ್‌ನೋಟ್) ತಯಾರಿಸಿ ಎಲ್ಲರಿಗೂ ಕಳುಹಿಸಲಾಯಿತು. ಆ ವಾರ್ತೆಯು ೧೬ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿತು.
ಇ. ೫ ಪತ್ರಲೇಖನಗಳನ್ನು ಕಳುಹಿಸಲಾಗಿತ್ತು. ಅವು ೩೫ ದಿನಪತ್ರಿಕೆಗಳಲ್ಲಿ ಮುದ್ರಿತಗೊಂಡವು.
ಈ. ೨ ಸ್ಥಳೀಯ ದೂರಚಿತ್ರವಾಹಿನಿಯಲ್ಲಿ (ಟಿವಿ ಚ್ಯಾನಲ್‌ನಲ್ಲಿ) ‘ಗ್ರಂಥ ಅಭಿಯಾನ’ದ ಬಗ್ಗೆ ದೂರಚಿತ್ರವಾಹಿನಿಯ ಪರದೆಯಲ್ಲಿ ಕೆಳಗೆ ವಾಕ್ಯ ಬಲಗಡೆಯಿಂದ ಎಡಗಡೆ ಹೋಗುವಂತಹ ‘ಸ್ಕ್ರೋಲಿಂಗ್’ ಹಾಕಲಾಯಿತು.
ಉ. ೪ ದೂರದರ್ಶನವಾಹಿನಿಗಳಲ್ಲಿ ಜ್ಞಾನಶಕ್ತಿ ಅಭಿಯಾನದ ಚಿತ್ರೀಕರಣವಾಗಿ ಪ್ರಕ್ಷೇಪಣೆಯಾಗಿದೆ.
ಊ. ೫ ಆಕಾಶವಾಣಿ (ಎಫ್.ಎಮ್. ರೆಡಿಯೋ) ಕೇಂದ್ರದಲ್ಲಿ ಧ್ವನಿಮುದ್ರಣವಾಗಿ ಪ್ರಸಾರವಾಗಿದೆ.
ಎ. ಸಂಸ್ಥೆಯ ಎಲ್ಲ ಆನ್‌ಲೈನ್ ಸತ್ಸಂಗಗಳ ಕೊನೆಯಲ್ಲಿ ಈ ಅಭಿಯಾನದ ಬಗ್ಗೆ ಪ್ರಸಾರ ಮಾಡುತ್ತಿದ್ದೇವೆ.
ಏ. ಒಟ್ಟು ೧೧೫ ಸ್ಥಳಗಳಲ್ಲಿ ಫಲಕಪ್ರಸಿದ್ಧಿ ಮಾಡಲಾಗಿದೆ.
ಒ. ಕೆಲವು ಧರ್ಮಪ್ರೇಮಿಗಳು ಅಂಗಡಿಗಳು ಮತ್ತು ಕೆಲವರು ತಮ್ಮ ಚತುಷ್ಚಕ್ರ ವಾಹನದ ಮೇಲೆ ಫಲಕವನ್ನು ಹಾಕಿ ಅದರ ಪ್ರಸಾರ ಮಾಡಿದರು.
– ಶ್ರೀ. ಕಾಶಿನಾಥ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೯), ಸೌ. ಮಂಜುಳಾ ರಮಾನಂದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೫) ಮತ್ತು ಶ್ರೀ. ವಿಜಯ ರೇವಣಕರ (ಆಧ್ಯಾತ್ಮಿಕ ಮಟ್ಟ ಶೇ. ೬೫). (ಅಕ್ಟೋಬರ್ ೨೦೨೧)