ತಮಿಳುನಾಡಿನ ದೇವಸ್ಥಾನಗಳ ೨,೧೩೮ ಕೆಜಿ ಚಿನ್ನ ಕರಗಿಸುವ ರಾಜ್ಯ ಸರಕಾರದ ನಿರ್ಧಾರಕ್ಕೆ ಮದ್ರಾಸ್ ಉಚ್ಚನ್ಯಾಯಾಲಯದಿಂದ ತಡೆಯಾಜ್ಞೆ !

ಸರಕಾರವಲ್ಲ, ದೇವಸ್ಥಾನಗಳ ವಿಶ್ವಸ್ಥರು ಮಾತ್ರ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬಹುದು ! – ನ್ಯಾಯಾಲಯದಿಂದ ಸರಕಾರಕ್ಕೆ ಕಪಾಳಮೋಕ್ಷ!

  • ಹಿಂದೂಗಳ ದೇವಸ್ಥಾನಗಳ ಚಿನ್ನವನ್ನು ಕರಗಿಸುವ ಹಕ್ಕನ್ನು ನಾಸ್ತಿಕ ದ್ರಾವಿಡ ಮುನ್ನೇತ್ರ ಕಳಘಂ ಪಕ್ಷದ (ದ್ರಾವಿಡ ಪ್ರಗತಿ ಸಂಘದ) ಸರಕಾರಕ್ಕೆ ಯಾರು ನೀಡಿದರು? ದ್ರಮುಕ ಇಂತಹ ಹಸ್ತಕ್ಷೇಪವನ್ನು ಇತರ ಧರ್ಮಗಳ ಧಾರ್ಮಿಕ ಸ್ಥಳಗಳ ಸಂದರ್ಭದಲ್ಲಿ ಮಾಡಲು ಧೈರ್ಯ ಮಾಡುತ್ತಿತ್ತೇನು ? – ಸಂಪಾದಕರು 
  • ಹಿಂದೂ ರಾಷ್ಟ್ರದಲ್ಲಿ ದೇವಾಲಯಗಳು ಭಕ್ತರ ಕೈಯಲ್ಲಿರುತ್ತವೆ ಮತ್ತು ದೇವಾಲಯಗಳ ಹಣವನ್ನು ಧರ್ಮಕ್ಕಾಗಿ ಖರ್ಚು ಮಾಡಲಾಗುತ್ತದೆ ! – ಸಂಪಾದಕರು

ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ರಾಜ್ಯದ ದೇವಾಲಯಗಳಿಂದ ಚಿನ್ನವನ್ನು ಕರಗಿಸಲು ತಡೆಯಾಜ್ಞೆಯನ್ನು ನೀಡಿದೆ. ‘ಈ ನಿರ್ಧಾರವನ್ನು ಕೇವಲ ದೇವಾಲಯದ ವಿಶ್ವಸ್ಥರು ಮಾತ್ರ ತೆಗೆದುಕೊಳ್ಳಬಹುದು ಸರಕಾರವಲ್ಲ’, ಎಂಬ ಶಬ್ದಗಳಲ್ಲಿ ಉಚ್ಚ ನ್ಯಾಯಾಲಯವು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸರಕಾರವು ಅಂದಾಜು ೨,೧೩೮ ಕೆಜಿ ಚಿನ್ನವನ್ನು ಕರಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ರಾಜ್ಯ ಸರಕಾರದ ಈ ಆದೇಶವನ್ನು ಕೆಲವರು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ದೇವಾಲಯದಲ್ಲಿ ಭಕ್ತರು ಅರ್ಪಿಸುವ ಚಿನ್ನವನ್ನು ಸೂಕ್ತ ಲೆಕ್ಕ ಪರಿಶೋಧನೆ ನಡೆಸದೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಪಿಸಿ, ಸರಕಾರದ ಉದ್ದೇಶವನ್ನೇ ಪ್ರಶ್ನಿಸಲಾಗಿದೆ.

೧. ತಮಿಳುನಾಡು ಸರಕಾರವು ನ್ಯಾಯಾಲಯದಲ್ಲಿ ಮುಂದಿನಂತೆ ಯುಕ್ತಿವಾದ ಮಂಡಿಸಿತ್ತು – ದೇವಾಲಯದಲ್ಲಿ ಸಂಗ್ರಹವಾಗಿರುವ ಚಿನ್ನವನ್ನು ಕರಗಿಸಿ ಅದನ್ನು ಚಿನ್ನದ ಬಿಸ್ಕಟ್‌ಗಳಾಗಿ ಪರಿವರ್ತಿಸಲು ಸರಕಾರಕ್ಕೆ ಹಕ್ಕು ಇದೆ. ೨೪ ಕ್ಯಾರೆಟ್ ಚಿನ್ನದ ಬಿಸ್ಕತ್‌ಗಳನ್ನು ಬ್ಯಾಂಕ್‌ನಲ್ಲಿ ಇಟ್ಟು ಆ ಮೂಲಕ ಬರುವ ಹಣವನ್ನು ದೇವಸ್ಥಾನಗಳ ಅಭಿವೃದ್ಧಿಗೆ ಬಳಸಲಾಗುವುದು. ಕಳೆದ ೫೦ ವರ್ಷಗಳಿಂದ ಇಂತಹ ಪ್ರಕ್ರಿಯೆ ನಡೆಯುತ್ತಿದೆ.

೨. ಇಂಡಿಕ್ ಕಲೆಕ್ಟಿವ್, ಎ.ವಿ.ಗೋಪಾಲಕೃಷ್ಣನ್ ಮತ್ತು ಎಂ.ಕೆ. ಸರ್ವಾನನ್ ಈ ಅರ್ಜಿದಾರರು ಸರಕಾರದ ನಿರ್ಧಾರವನ್ನು ವಿರೋಧಿಸಿದರು. ಅವರು ‘ರಾಜ್ಯ ಸರಕಾರ ಸಪ್ಟೆಂಬರ ೯ ರಂದು ಹೊರಡಿಸಿರುವ ಈ ಆದೇಶವು ‘ಹಿಂದೂ ಚಾರಿಟೆಬಲ್ ಅಂಡ್ ಚಾರಿಟೆಬಲ್ ಎಂಡೊಮೆಂಟ್ಸ್ ಆಕ್ಟ’, ‘ಪ್ರಾಚೀನ ಸ್ಮಾರಕ ಕಾಯ್ದೆ’, ‘ಆಭರಣ ನಿಯಮಗಳು’ ಮೊದಲಾದ ನಿಯಮಾವಳಿಗಳನ್ನು ಮತ್ತು ಕಾನೂನುಗಳನ್ನು ಉಲ್ಲಂಘಿಸುತ್ತದೆ. ಅಷ್ಟೇ ಅಲ್ಲ, ಉಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ’ ಎಂದು ಹೇಳಿದ್ದರು.

೩. ನ್ಯಾಯಾಲಯವು ಈ ವರ್ಷ ಜೂನ್ ೭ ರಂದು ದೇವಾಲಯದ ಆಸ್ತಿಗಳ ನೋಂದಣಿ ಮತ್ತು ಮೌಲ್ಯಮಾಪನಕ್ಕೆ ಆದೇಶಿಸಿತ್ತು. ‘ಕಳೆದ ೬೦ ವರ್ಷಗಳಿಂದ ರಾಜ್ಯದಲ್ಲಿ ಈ ರೀತಿ ಆಗುತ್ತಿಲ್ಲ’, ಎಂದು ನ್ಯಾಯಾಲಯ ಹೇಳಿತ್ತು.

೪. ಅರ್ಜಿದಾರರು, ಕಾನೂನಿನ ಪ್ರಕಾರ ದೇವಾಲಯಗಳ ಅಥವಾ ಸಂಸ್ಥೆಗಳ ವಿಶ್ವಸ್ಥರು ಚಿನ್ನವನ್ನು ಕರಗಿಸುವ ನಿರ್ಧಾರ ಕೈಗೊಳ್ಳುತ್ತಾರೆ. ಸರಕಾರವು ಈ ನಿರ್ಧಾರಕ್ಕೆ ಅನುಮತಿ ನೀಡುತ್ತ್ತದೆ; ಆದರೆ ತಮಿಳುನಾಡಿನ ಹೆಚ್ಚಿನ ದೇವಾಲಯಗಳಲ್ಲಿ ೧೦ ವರ್ಷಗಳಿಗಿಂತ ಹೆಚ್ಚುಕಾಲದಿಂದ ವಿಶ್ವಸ್ಥರ ನೇಮಕವೇ ಆಗಿರಲಿಲ್ಲ ಎಂದು ಹೇಳಿದ್ದಾರೆ.

೫. ನ್ಯಾಯಾಲಯವು ಈ ಯುಕ್ತಿವಾದವನ್ನು ಒಪ್ಪಿಕೊಂಡು ದೃಢವಾದ ನಿಲುವು ತಳೆದ ನಂತರ, ತಮಿಳುನಾಡು ಸರಕಾರವು ‘ದೇವಾಲಯಗಳಲ್ಲಿ ಮೊದಲು ವಿಶ್ವಸ್ಥರನ್ನು ನೇಮಿಸಲಾಗುವುದು’ ಎಂದು ಲಿಖಿತ ಭರವಸೆ ನೀಡಿತು. ‘ಮುಂದಿನ ಯಾವುದೇ ನಿರ್ಧಾರವನ್ನು ಸಂಸ್ಥಾನದ ಒಪ್ಪಿಗೆಯೊಂದಿಗೆ ಮಾತ್ರ ತೆಗೆದುಕೊಳ್ಳಲಾಗುವುದು’, ಎಂದು ಸ್ಪಷ್ಟಪಡಿಸಿದೆ.