‘ಸಮಾನತೆಯ ಕಲ್ಪನೆಯು ತತ್ತ್ವಜ್ಞಾನದಲ್ಲಿ ಹೆಚ್ಚು ಮೂಲಭೂತವಾಗಿದೆ. ಇಂದಿನ ಸಮಾಜವಾದಿ ವಿಚಾರಗಳ ಮಿತಿಗಳು ಮಾನವನ ವಿಚಾರಗಳಲ್ಲಿಯೇ ಮುಕ್ತಾಯವಾಗುತ್ತದೆ. ಡಾ. ಪಾವಲಾವ್ ಪ್ರಯೋಗಕ್ಕಾಗಿ ಜೀವಂತ ನಾಯಿಗೆ ಕಿರುಕುಳ ನೀಡಿದ್ದಾನೆ. ಇಲ್ಲಿ ನಾಮದೇವರಂತಹ ಸಂತರು ನಾಯಿ ತಮ್ಮ ರೊಟ್ಟಿಯನ್ನು ಎತ್ತಿಕೊಂಡು ಓಡಿದಾಗ, ನಾಯಿಗೆ ಒಣ ರೊಟ್ಟಿಯಿಂದ ಹೊಟ್ಟೆ ನೋಯಿಸಬಾರದು, ಎಂದು ಅವರು ತುಪ್ಪದ ಬಟ್ಟಲನ್ನು ತೆಗೆದುಕೊಂಡು ನಾಯಿಯನ್ನು ಹಿಂಬಾಲಿಸಿದರು. ಮಾನವರ ಬಗ್ಗೆ ಅಷ್ಟೇ ಅಲ್ಲದೇ ಪ್ರಾಣಿಗಳ ಮೇಲೆಯೂ ಕರುಣೆ ತೋರಿಸುವ ಭಾರತದಲ್ಲಿ ಸಮಾನತೆಯ ವಿಚಾರಗಳ ಬೀಜವಿಲ್ಲ, ಎಂದಿಲ್ಲ’.
– ಸ್ವಾಮಿ ವಿಜ್ಞಾನಾನಂದ, (ಆಧಾರ: ಮನಃಶಕ್ತಿ , ಜೂನ್ ೨೦೦೧)