‘ಉತ್ತರಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರನಿಷೇಧ ಕಾನೂನು – ೨೦೨೦’
೧. ಹೆಣ್ಣುಮಕ್ಕಳನ್ನು ಅಪಹರಿಸಿ ಅವರನ್ನು ಮತಾಂತರಿಸಲಾಗುತ್ತದೆ ಎಂಬ ಬಗ್ಗೆ ನಿಯುಕ್ತಗೊಳಿಸಿದ ಸಮಿತಿಯ ನಿರೀಕ್ಷಣೆಯ ಬಳಿಕ ‘ಲವ್ ಜಿಹಾದ್’ ಇದೆ ಎಂದು ಒಪ್ಪಿದ ಕೇರಳ ಉಚ್ಚ ನ್ಯಾಯಾಲಯ
‘ಉತ್ತರಪ್ರದೇಶ ಮತ್ತು ಗುಜರಾತ ರಾಜ್ಯಗಳಲ್ಲಿ ಮೊದಲ ಬಾರಿಗೆ ‘ಲವ್ ಜಿಹಾದ್ ವಿರೋಧಿ ಕಾನೂನನ್ನು ಜಾರಿಗೊಳಿಸಿರುವುದರಿಂದ ಅಲ್ಲಿನ ಹಿಂದೂಗಳಿಗೆ ಸ್ವಲ್ಪಮಟ್ಟಿಗೆ ಸಮಾಧಾನವಾಗಿದೆ. ಮತಾಂಧರು ಅಥವಾ ವಾಸನಾಂಧರು ಹಿಂದೂ ಹುಡುಗಿಯರೊಂದಿಗೆ ಆತ್ಮೀಯತೆ ಬೆಳೆಸಿ ಅವರ ಮೇಲೆ ಅತ್ಯಾಚಾರಗೈದು ಅವರನ್ನು ಮತಾಂತರಿಸಿ ಅವರೊಂದಿಗೆ ವಿವಾಹವಾಗುತ್ತಾರೆ. ವಿವಾಹದ ನಂತರ ಅವರನ್ನು ಅನೇಕ ರೀತಿಯಲ್ಲಿ ಪೀಡಿಸುತ್ತಾರೆ. ದೇಶದಲ್ಲಿ ಈ ರೀತಿಯ ‘ಲವ್ ಜಿಹಾದ್ ಕಳೆದ ಅನೇಕ ದಶಕಗಳಿಂದ ನಡೆದಿದೆ. ಮತಾಂಧರು ಕ್ರೈಸ್ತ ಯುವತಿಯರನ್ನು ಮತ್ತು ಮಹಿಳೆಯರನ್ನು ವಶಪಡಿಸಿಕೊಂಡು ಅವರೊಂದಿಗೆ ಮದುವೆಯಾಗುತ್ತಾರೆ ಎಂಬ ಸತ್ಯವನ್ನು ಕೇರಳದ ಕ್ರೈಸ್ತ ಚರ್ಚ್ ಆಡಳಿತ ಮಂಡಳಿಯೂ ಈಗ ಒಪ್ಪಿಕೊಂಡಿದೆ. ಹಿಂದುತ್ವನಿಷ್ಠರು ಈ ವಿಷಯದ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದ್ದಾಗ ಹಿಂದುತ್ವನಿಷ್ಠರಿಗೇ ಅಣಕಿಸುತ್ತಿದ್ದರು. ‘ಧರ್ಮವನ್ನು ನೋಡಿ ಪ್ರೇಮಿಸ ಬೇಕೇ ? ಎಂದು ಹೇಳುತ್ತಾ, ತಥಾಕಥಿತ ಸಮಾಜ ಸುಧಾರಕರು, ಚಲನಚಿತ್ರ ನಟನಟಿಯರು ಮತ್ತು ಪ್ರಗತಿಪರರು ಹಿಂದುತ್ವನಿಷ್ಠರನ್ನು ತಿರಸ್ಕಾರ ಮತ್ತು ಅವಹೇಳನೆ ಮಾಡಿದರು. ‘ಲವ್ ಜಿಹಾದ್ ನ ಹೆಚ್ಚುತ್ತಿರುವ ಪ್ರಕರಣಗಳನ್ನು ನೋಡಿ ಕೇರಳ ಉಚ್ಚ ನ್ಯಾಯಾಲಯಕ್ಕೆ ‘ಈ ವಿಷಯದಲ್ಲಿ ಸ್ವತಃ ಗಮನ ಹರಿಸಬೇಕು, ಎಂದೆನಿಸಿತು. ಇದಕ್ಕಾಗಿ ನ್ಯಾಯಾಲಯವು ಒಂದು ಸಮಿತಿಯನ್ನು ರಚಿಸಿತು. ಸಮಿತಿಯಲ್ಲಿ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಿದ್ದರು. ಈ ಎಲ್ಲ ಸದಸ್ಯರು ಈ ಬಗ್ಗೆ ಆಳವಾಗಿ ವಿಚಾರ ಮಾಡಿ ಸಂತ್ರಸ್ತರ ಸಾಕ್ಷಿಯನ್ನು ದಾಖಲಿಸಿಕೊಂಡರು, ಯಾವೆಲ್ಲ ಪದ್ದತಿಯಲ್ಲಿ ಹುಡುಗಿಯರನ್ನು ಅಪಹರಿಸಿ ಅವರೊಂದಿಗೆ ಮದುವೆಯಾಗಿರುವ ನಾಟಕವಾಡಿರುವುದನ್ನು ನೋಡಿದಾಗ, ‘ಇದು ಮತಾಂತರದ ಕೃತ್ಯವಾಗಿದೆ, ಎಂದು ಸಮಿತಿಯ ಗಮನಕ್ಕೆ ಬಂದಿತು. ತದನಂತರ ಉಚ್ಚ ನ್ಯಾಯಾಲಯವು ‘ಲವ್ ಜಿಹಾದ್ ಇದೆಯೆಂದು ಸ್ಪಷ್ಟವಾಗಿ ನಮೂದಿಸಿತು.
೨. ಉತ್ತರಪ್ರದೇಶ ಮತ್ತು ಗುಜರಾತ ಈ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ‘ಲವ್ ಜಿಹಾದ್’ ವಿರೋಧಿ ಕಾನೂನು ರೂಪಿಸುವುದು
ಮತಾಂಧರೊಂದಿಗೆ ಹಿಂದೂ ಹುಡುಗಿಯರ ವಿವಾಹವಾಗುತ್ತದೆ; ಆದರೆ ಈ ಪ್ರಕಾರವು ಅಲ್ಲಿಯೇ ನಿಲ್ಲುವುದಿಲ್ಲ. ವಿವಾಹದ ಬಳಿಕ ಹುಡುಗಿಯರನ್ನು ದೊಡ್ಡ ಪ್ರಮಾಣದಲ್ಲಿ ಪೀಡಿಸಲಾಗುತ್ತದೆ, ಹಾಗೆಯೇ ಅವರನ್ನು ಭಯೋತ್ಪಾದಕ ಕೃತ್ಯಗಳನ್ನು ಮಾಡಲು ಬಳಸಲಾಗುತ್ತದೆ ಎಂಬುದು ಗಮನಕ್ಕೆ ಬಂದ ಬಳಿಕ, ಉತ್ತರಪ್ರದೇಶದ ಪ್ರಖರ ಧರ್ಮಪ್ರೇಮಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ತಮ್ಮ ರಾಜ್ಯದಲ್ಲಿ ‘ಲವ್ ಜಿಹಾದ್ ವಿರೋಧಿ ಹಾಗೆಯೇ ‘ಉತ್ತರಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಸುಗ್ರೀವಾಜ್ಞೆ – ೨೦೨೦ (ಯುಪಿ ಪ್ರೊಹಿಬಿಶನ್ ಆಫ್ ಅನ್‌ಲಾಫುಲ್ ಕನ್‌ವರ್ಶನ ಆಫ್ ರಿಲಿಜನ್ ಆರ್ಡಿನನ್ಸ್- ೨೦೨೦) ಹೆಸರಿನ ಕಾನೂನು ರಚಿಸಿದರು. ತದನಂತರ ಗುಜರಾತಿನ ಅಂದಿನ ಮುಖ್ಯಮಂತ್ರಿ ವಿಜಯ ರೂಪಾಣಿಯವರು ಅದರ ಅನುಕರಣೆಯನ್ನು ಮಾಡಿದರು, ಇವೆರಡೂ ರಾಜ್ಯಗಳ ಕಾನೂನುಗಳಿಗೆ ರಾಷ್ಟ್ರಪತಿಗಳ ಅನುಮೋದನೆ ದೊರಕಿದೆ. ಮೊದಲು ಇಂತಹ ಪ್ರಕರಣಗಳಲ್ಲಿ ಮತಾಂಧರು ಪ್ರೌಢ ಬಾಲಕಿಯರನ್ನು ಅಪಹರಿಸಿ ಅವರ ಮೇಲೆ ಬಲಾತ್ಕಾರ ಮಾಡುತ್ತಿದ್ದರು ಮತ್ತು ನಂತರ ಸಂತ್ರಸ್ತೆಯನ್ನು ವಿವಾಹವಾಗುವುದಾಗಿ ಹೇಳಿ (ಮೋಸ ಮಾಡಿ) ತಾವು ತಪ್ಪಿಸಿಕೊಳ್ಳುತ್ತಿದ್ದರು. ಇದೆಲ್ಲವೂ ಯಾವುದೇ ಸದ್ದುಗದ್ದಲವಿಲ್ಲದೇ ನಡೆಯುತ್ತಿತ್ತು. ಈಗ ಕಾನೂನು ಜಾರಿಯಾಗಿರುವುದರಿಂದ ಮತಾಂಧರಿಗೆ ಜಾಮೀನು ಸಿಗುವುದಿಲ್ಲ. ಹಾಗಾಗಿ ಈಗ ಅವರಿಗೆ ಕಾನೂನಿನ ವಿರುದ್ಧವೇ ಹೋರಾಡಬೇಕಾಗುವುದು. ಇಂತಹ ಕೆಲವು ಅರ್ಜಿಗಳು ಇಂದು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಅಂತಿಮ ತೀರ್ಪಿಗಾಗಿ ದಾರಿ ಕಾಯುತ್ತಿವೆ.
೩. ಉತ್ತರಪ್ರದೇಶ ಸರಕಾರದ ‘ಲವ್ ಜಿಹಾದ್’ ವಿರೋಧಿ ಕಾನೂನಿನ ಕೆಲವು ನಿಯಮಗಳು
ಅ. ವಿವಾಹವಾಗಲು ಇಚ್ಛೆಯಿರುವ ಯುವಕ ಅಥವಾ ಯುವತಿಯು ತಮ್ಮ ಹೆಸರಿನೊಂದಿಗೆ ಎಲ್ಲ ವಿವರವಾದ ಮಾಹಿತಿಯಿರುವ ಅರ್ಜಿಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದೂವರೆ ತಿಂಗಳು ಮೊದಲು ಕೊಡಬೇಕು. ಈ ಅರ್ಜಿಯನ್ನು ಕೊಡುವಾಗ ಅವಳು ‘ನಾನು ಪ್ರಜ್ಞಾವಂತಳಾಗಿದ್ದು ನನ್ನ ಮೇಲೆ ಯಾವುದೇ ರೀತಿಯ ಬಲವಂತಿಕೆ, ಆಗ್ರಹ, ಒತ್ತಡ ಇತ್ಯಾದಿಗಳಿಲ್ಲ, ಅದೇ ರೀತಿ ನನಗೆ ಯಾವುದೇ ರೀತಿಯ ಪ್ರಲೋಭನೆಗಳನ್ನು, ಆಸೆ-ಆಮಿಷಗಳನ್ನು ತೋರಿಸಿಲ್ಲ. ನಾನು ನನ್ನ ಸ್ವಂತ ಮನಸ್ಸಿನಿಂದ ಸಂತೋಷದಿಂದ ಧರ್ಮವನ್ನು ಬದಲಾಯಿಸುತ್ತಿದ್ದೇನೆ, ಎಂದು ಸ್ಪಷ್ಟವಾಗಿ ನಮೂದಿಸಬೇಕು.
ಆ. ಅರ್ಜಿ ಪ್ರಾಪ್ತವಾದ ಬಳಿಕ ಜಿಲ್ಲಾಧಿಕಾರಿಗಳು ವಿವಾಹದ ಒಂದು ತಿಂಗಳು ಮೊದಲು ಈ ಮಾಹಿತಿಯನ್ನು ಸೂಚನಾ ಫಲಕದ ಮೇಲೆ ಪ್ರಕಟಿಸಬೇಕು. ಆ ಅರ್ಜಿಯ ಪರಿಶೀಲನೆಯನ್ನು ಮಾಡಬೇಕು. ಅಲ್ಲದೇ ಮತಾಂತರಗೊಳ್ಳುವುದಾಗಿ ಹೇಳಿರುವ ವ್ಯಕ್ತಿಯು ಜಿಲ್ಲಾ ನ್ಯಾಯದಂಡಾಧಿಕಾರಿಗಳ ಎದುರಿಗೆ ಉಪಸ್ಥಿತರಾಗಬೇಕು. ಅಲ್ಲಿ ಅವರು ತಮ್ಮ ಮತಾಂತರವನ್ನು ದೃಢಪಡಿಸಬೇಕು. ಈ ವಿಷಯದಲ್ಲಿ ಯಾರಿಗಾದರೂ ಆಕ್ಷೇಪಣೆಗಳಿದ್ದರೆ, ಅವರ ಹೇಳಿಕೆಯನ್ನು ಪಡೆಯಬೇಕು. ಈ ಕಾನೂನಿನ ಉಲ್ಲಂಘನೆಯಾದರೆ, ಆರೋಪಿಗೆ ೬ ತಿಂಗಳುಗಳ ಶಿಕ್ಷೆಯಾಗಬಹುದು.
ಇ. ಈ ಪ್ರಕರಣದ ಬಗ್ಗೆ ಆಳವಾಗಿ ವಿಚಾರಣೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳು ಈ ವಿವಾಹಕ್ಕೆ ಅಥವಾ ಮತಾಂತರಕ್ಕೆ ಅನುಮೋದನೆ ಕೊಡುತ್ತಾರೆ ಮತ್ತು ಆ ರೀತಿಯ ಪ್ರಮಾಣ ಪತ್ರವನ್ನು ಸಂಬಂಧಪಟ್ಟವರಿಗೆ ಕೊಡಲಾಗುತ್ತದೆ.
೪. ಹೊಸ ಕಾನೂನಿನಿಂದಾಗಿ ಉತ್ತರಪ್ರದೇಶದಲ್ಲಿ ‘ಲವ್ ಜಿಹಾದ್ ಪ್ರಕರಣಗಳ ಖಟ್ಲೆಗಳಲ್ಲಿ ಆರೋಪಿಗಳಿಗೆ ಜಾಮೀನು ಸಿಗದಿರುವುದು
ಕೆಲವು ದಿನಗಳ ಹಿಂದೆ ಉತ್ತರಪ್ರದೇಶದಲ್ಲಿ ಹಿಂದೂ ಹುಡುಗಿಯನ್ನು ಅಪಹರಿಸಿ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ಒಬ್ಬ ಮತಾಂಧ ಯುವಕನನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಲಾಯಿತು. ತದನಂತರ ಅವನನ್ನು ಜಾಮೀನಿನ ಮೇಲೆ ಬಿಡಿಸಿಕೊಳ್ಳಲು ಅವರಿಬ್ಬರ ವಿವಾಹವಾಗಿದೆ ಎಂದು ಹೇಳಲಾಯಿತು. ಈ ಮತಾಂಧರಿಗೆ ಮೌಲ್ವಿಗಳೂ ಕೂಡಲೇ ಮದುವೆಯನ್ನು ಮಾಡುತ್ತಾರೆ ಮತ್ತು ಮದುವೆಯಾಗಿದೆ ಎಂದು ಪ್ರಮಾಣಪತ್ರವನ್ನೂ ಕೊಡುತ್ತಾರೆ. ಇಲ್ಲಿಯೂ ಅದೇ ಆಯಿತು. ಈ ಪ್ರಕರಣ ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ದಾಖಲಾದ ಬಳಿಕ ‘ಮತಾಂಧ ಯುವಕ ಮತ್ತು ಹಿಂದೂ ಹುಡುಗಿಯ ಮದುವೆಯಾಗಿದೆ, ಆದುದರಿಂದ ಆರೋಪಿಯ ಜಾಮೀನು ಮಂಜೂರು ಮಾಡಬೇಕು, ಎಂದು ನ್ಯಾಯಾಲಯದಲ್ಲಿ ಕೋರಿದರು. ಅದಕ್ಕೆ ‘ಈ ಮದುವೆ ಉತ್ತರಪ್ರದೇಶ ಸರಕಾರ ಜಾರಿಗೊಳಿಸಿರುವ ಕಾನೂನಿನ ಕಲಂ ೮ ಮತ್ತು ೯ ರ ವಿರುದ್ಧ ವಾಗಿದೆ, ಆದುದರಿಂದ ಈ ಮದುವೆಗೆ ಸಿಂಧುತ್ವವನ್ನು ಕೊಡಲು ಸಾಧ್ಯವಿಲ್ಲ. ಅಲ್ಲದೇ ಮದುವೆಯಾಗಿದೆ ಎಂದು ಜಾಮೀನು ಮಂಜೂರು ಮಾಡಲೂ ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿ ನ್ಯಾಯಾಲಯವು ಮತಾಂಧನ ದೂರನ್ನು ತಿರಸ್ಕರಿಸಿತು. ಕಾನೂನಿನ ನಿಯಮಗಳಂತೆ ವಿವಾಹ ಮಾಡಿಕೊಳ್ಳುವಾಗ ಮತಾಂಧನು ಸರಕಾರದ ಪೂರ್ವಾನುಮತಿ ಪಡೆದಿರಲಿಲ್ಲ. ಈ ಕಾರಣದಿಂದ ನ್ಯಾಯಾಲಯವು ಜಾಮೀನು ನಿರಾಕರಿಸಿತು.
೫. ಮುಸಲ್ಮಾನ ಹುಡುಗಿಯನ್ನು ವಿವಾಹವಾಗಲು ಅವಳ ಧರ್ಮವನ್ನು ಸ್ವೀಕರಿಸಿದ ಹಿಂದೂ ಹುಡುಗನಿಗೆ ನ್ಯಾಯಾಲಯ ಹೊಸ ಕಾನೂನಿನಂತೆ ಜಾಮೀನು ನಿರಾಕರಿಸುವುದು
ಒಬ್ಬ ಹಿಂದೂ ಹುಡುಗನು ಮುಸಲ್ಮಾನ ಹುಡುಗಿಯ ಜೊತೆ ಮದುವೆಯಾಗಲು ಹಿಂದೂ ಧರ್ಮವನ್ನು ಬಿಟ್ಟು ಮುಸಲ್ಮಾನ ಧರ್ಮವನ್ನು ಸ್ವೀಕರಿಸಿದನು. ಆ ಹುಡುಗನು ೫.೩.೨೦೧೯ ರಂದು ಆ ಹುಡುಗಿಯ ಜೊತೆಗೆ ವಿವಾಹವಾದನು ಮತ್ತು ಮೌಲ್ವಿ ಅಥವಾ ಕಾಜಿಯಿಂದ ಪ್ರಮಾಣಪತ್ರವನ್ನು ಪಡೆದನು. ಅವನ ವಿರುದ್ಧ ಮೊಕದ್ದಮೆ ದಾಖಲಾಯಿತು. ಆಗ ಅವನು ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ನೀಡಿದನು. ಅವನ ವಿವಾಹಕ್ಕೆ ಕಾನೂನಿನ ಮಾನ್ಯತೆ ಸಿಗಬೇಕು ಎಂದು ಅವನು ಮತಾಂತರಗೊಂಡ ಬಳಿಕ ನಮ್ಮ ವಿವಾಹವಾಗಿದ್ದು, ಕಾಜಿಯು ನಮಗೆ ಆ ರೀತಿ ಪ್ರಮಾಣಪತ್ರ ನೀಡಿದ್ದಾನೆ. ವಿವಾಹವಾಗಿರುವ ಬಗ್ಗೆ ಪ್ರಮಾಣಪತ್ರ ಇರುವುದರಿಂದ ನಮಗೆ ಜಾಮೀನು ಸಿಗಬೇಕು ಮತ್ತು ನಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಬೇಕು ಎಂದು ಪ್ರತಿವಾದ ಮಾಡಿದನು. ಇದಕ್ಕೆ ಉತ್ತರಪ್ರದೇಶದ ಉಚ್ಚ ನ್ಯಾಯಾಲಯವು ಈ ಪ್ರಕರಣವು ‘ಲವ್ ಜಿಹಾದ್’ ತಡೆಗಟ್ಟಲು ಜಾರಿಗೊಳಿಸಲಾಗಿರುವ ಕಾನೂನಿನ ಅನ್ವಯ ಕಲಂ ೮ ಮತ್ತು ೯ ರ ಉಲ್ಲಂಘನೆಯಾಗಿರುವುದರಿಂದ ನಾವು ಇಂತಹ ಮತಾಂತರಕ್ಕೆ ಮಾನ್ಯತೆ ಕೊಡುವುದಿಲ್ಲ, ಎಂದು ಸ್ಪಷ್ಟವಾಗಿ ಹೇಳಿತು.
೬. ಮುಸಲ್ಮಾನ ಹುಡುಗಿ ಮತ್ತು ಹಿಂದೂ ಹುಡುಗ ಇವರ ವಿವಾಹ ಹೊಸ ಕಾನೂನಿನ ಕಲಂ ೯ ರ ಉಲ್ಲಂಘನೆಯಾಗುವುದರಿಂದ ಉಚ್ಚ ನ್ಯಾಯಾಲಯವು ವಿವಾಹಕ್ಕೆ ಮಾನ್ಯತೆಯನ್ನು ಕೊಡದಿರುವುದು
ಒಂದು ಪ್ರಕರಣದಲ್ಲಿ ಮುಸಲ್ಮಾನ ಹುಡುಗಿಯು ಹಿಂದೂ ಹುಡುಗನನ್ನು ವಿವಾಹವಾಗಿ ಮತಾಂತರಗೊಂಡಿದ್ದಳು. ಈ ವಿವಾಹವು ಆರ್ಯ ಸಮಾಜ ಪದ್ಧತಿಯಿಂದ, ಅಂದರೆ ಹಿಂದೂ ಪದ್ಧತಿಯಿಂದ ಆಗಿತ್ತು. ಅದಕ್ಕೆ ಆರ್ಯ ಸಮಾಜವು ೨೭.೨.೨೦೧೯ ರಂದು ಮಾನ್ಯತೆಯನ್ನು ನೀಡಿತ್ತು. ಈ ವಿವಾಹವೂ ಹೊಸ ಕಾನೂನಿನ ಕಲಂ ೯ ರ ಉಲ್ಲಂಘನೆಯಾಗಿತ್ತು. ಆದುದರಿಂದ ಉಚ್ಚ ನ್ಯಾಯಾಲಯವು ಈ ವಿವಾಹಕ್ಕೂ ಮಾನ್ಯತೆಯನ್ನು ನೀಡಲಿಲ್ಲ ಮತ್ತು ಅರ್ಜಿಯನ್ನು ತಿರಸ್ಕರಿಸಿತು.
೭. ಹೊಸ ಕಾನೂನಿನಿಂದಾಗಿ ಸಮಾಜಕ್ಕೆ ‘ಲವ್ ಜಿಹಾದ್’ನ ಸತ್ಯ ತಿಳಿಯುವುದು
ವಾಸ್ತವದಲ್ಲಿ ಮತಾಂಧರಿಂದ ಪ್ರತಿದಿನ ‘ಲವ್ ಜಿಹಾದ್’ನ ನೂರಾರು ಪ್ರಕರಣಗಳು ನಡೆಯುತ್ತಿರುತ್ತವೆ. ಅನೇಕ ಹಿಂದೂ ಹುಡುಗಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತದೆ. ಆದರೆ ಈ ಬಗ್ಗೆ ಎಲ್ಲಿಯೂ ಚರ್ಚೆ ಆಗುವುದಿಲ್ಲ, ಅಲ್ಲದೇ ಅದನ್ನು ಬಹಿರಂಗವಾಗಿ ಯಾರೂ ಒಪ್ಪಿಕೊಳ್ಳಲೂ ಸಿದ್ಧರಿರುವುದಿಲ್ಲ. ಉತ್ತರಪ್ರದೇಶದಲ್ಲಿ ಕಾನೂನು ಜಾರಿ ಆಗಿರುವುದರಿಂದ ಸಧ್ಯ ಧರ್ಮಾಂಧ ಆರೋಪಿಗಳ ವಿರುದ್ಧ ಅನೇಕ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗುತ್ತಿವೆ ಮತ್ತು ಅನ್ಯ ಮಾರ್ಗವಿಲ್ಲದೇ ಅವರಿಗೆ ಜಾಮೀನಿಗಾಗಿ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗ ಬೇಕಾಗುತ್ತಿದೆ. ಜಾಮೀನು ನಿರಾಕರಿಸಿದ ಮಲೆ ಅಥವಾ ಜಾಮೀನು ಕೊಟ್ಟಮೇಲೆ, ಆ ತೀರ್ಪಿನ ಪ್ರತಿಯನ್ನು ಸಂಕೇತಸ್ಥಳದಲ್ಲಿ ಇಡಲಾಗುತ್ತದೆ, ಇದರಿಂದ ಈ ವಿಷಯದ ಮಾಹಿತಿಯು ಸಮಾಜಕ್ಕೆ ಸಿಗುತ್ತಿದೆ.
೮. ‘ಲವ್ ಜಿಹಾದ್’ ವಿರೋಧಿ ಕಾನೂನನ್ನು ದೇಶಾದ್ಯಂತ ಜಾರಿಗೊಳಿಸಬೇಕು, ಕೇಂದ್ರ ಸರಕಾರದಿಂದ ಸಮಸ್ತ ಹಿಂದೂಗಳ, ಇಷ್ಟೇ ಅಪೇಕ್ಷೆ !
ಕಳೆದ ಅನೇಕ ದಶಕಗಳಿಂದ ವಾಸನಾಂಧರು ಸಾವಿರಾರು ಹಿಂದೂ ಯುವತಿಯರ ಅಪಹರಣವನ್ನು ಮಾಡಿ ಧರ್ಮಾಂತರಗೊಳಿಸುತ್ತಿದ್ದಾರೆ. ಈ ಷಡ್ಯಂತ್ರ್ಯಕ್ಕೆ ಬಲಿಯಾಗುವ ಹಿಂದೂ ಕುಟುಂಬವೇ ಅದನ್ನು ಎದುರಿಸಬೇಕಾಗುತ್ತದೆ. ಇತರ ಹಿಂದೂಗಳು ಆ ಕುಟುಂಬಕ್ಕೆ ಸಹಾಯ ಮಾಡುವುದಿಲ್ಲ. ಧರ್ಮಾಂಧರು ಹಿಂದೂಗಳ ಅಸಂಘಟನೆಯ ಲಾಭವನ್ನು ಪಡೆಯುತ್ತಾರೆ. ಅವರಿಂದ ಕಿಶೋರ ವಯಸ್ಸಿನ ಬಾಲಕಿಯರಿಂದ ಹಿಡಿದು ವಿವಾಹಿತ ಸ್ತ್ರೀಯರಿಗೂ ದುರ್ಬೊಧನೆ ಮಾಡಿ, ದುಷ್ಟಕಾರ್ಯಕ್ಕೆ ಓಡಿಸಿಕೊಂಡು ಹೋಗುತ್ತಾರೆ. ನಂತರ ಅವರ ಧರ್ಮಾಂತರವನ್ನು ಮಾಡಿ ಅವರೊಂದಿಗೆ ವಿವಾಹವಾಗುತ್ತಾರೆ ಅಥವಾ ಲೈಂಗಿಕ ಅತ್ಯಾಚಾರವನ್ನು ನಡೆಸಿ ಅವರನ್ನು ಬಿಡುತ್ತಾರೆ. ಕೆಲವು ಸಲ ಈ ಷಡ್ಯಂತ್ರ್ಯಕ್ಕೆ ಬಲಿಯಾಗಿರುವ ಹುಡುಗಿಯರನ್ನು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸುತ್ತಾರೆ. ಅವರ ಹೆಸರಿನಿಂದ ಬ್ಯಾಂಕು ಖಾತೆಗಳನ್ನು ತೆರೆಯಲಾಗುತ್ತದೆ. ಇಂತಹ ಖಾತೆಗಳಲ್ಲಿ ಹವಾಲಾ ಮೂಲಕ ಹಣ ತರಿಸಿಕೊಳ್ಳುವುದು ಮತ್ತು ಆ ಹಣವನ್ನು ಭಯೋತ್ಪಾದಕ ಕೃತ್ಯಗಳಿಗೆ ಉಪಯೋಗಿಸುವುದು ಮಾಡುತ್ತಾರೆ. ಅಲ್ಲದೇ ಈ ಮಹಿಳೆಯರ ಹೆಸರಿನ ಇ-ಮೇಲ್ ಖಾತೆಯನ್ನು ತೆರೆದು ಅವರ ಹೆಸರಿನಿಂದ ಸಂಭಾಷಣೆಯನ್ನು ಮಾಡುತ್ತಾರೆ ಮತ್ತು ಸಿಕ್ಕಿಬಿದ್ದಾಗ ಹಿಂದೂ ಮಹಿಳೆಗೆ (ಲವ್ ಜಿಹಾದ್‌ಗೆ ಬಲಿಯಾಗಿರುವ) ಆರೋಪಿ ಎಂದು ನ್ಯಾಯಾಲಯದ ಮುಂದೆ ನಿಲ್ಲಬೇಕಾಗುತ್ತದೆ. ಇದೆಲ್ಲವೂ ಈ ರೀತಿ ನಡೆಯುತ್ತದೆ.
ಹಿಂದೂಗಳ ಸುದೈವದಿಂದ ಅನೇಕ ದಶಕಗಳ ವರೆಗೆ ನೋವು ದುಃಖಗಳನ್ನು ಸಹಿಸಿದ ಬಳಿಕ ‘ಲವ್ ಜಿಹಾದ್’ ವಿರೋಧಿ ಕಾನೂನನ್ನು ಕನಿಷ್ಟಪಕ್ಷ ೨ ರಾಜ್ಯಗಳಲ್ಲಿಯಾದರೂ ರಚಿಸಲಾಯಿತು. ಕೇವಲ ೧-೨ ರಾಜ್ಯಗಳಲ್ಲಿ ಇಂತಹ ಕಾನೂನು ಆಗಿರುವುದರಿಂದ ಹಿಂದೂಗಳ ಮತಾಂತರ ನಿಲ್ಲುವುದಿಲ್ಲ. ಹಿಂದಿನ ೭ ವರ್ಷಗಳಿಂದ ಕೇಂದ್ರದಲ್ಲಿ ಮತ್ತು ಕೆಲವು ಕಾಲಾವಧಿಯಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾಜಪದ ಆಡಳಿತವಿದೆ. ಇಂದು ಉತ್ತರಪ್ರದೇಶ ಮತ್ತು ಗುಜರಾತ ರಾಜ್ಯಗಳಲ್ಲಿ ‘ಲವ್ ಜಿಹಾದ್’ ವಿರೋಧಿ ಕಾನೂನು ಜಾರಿಗೊಳಿಸಿರುವುದರಿಂದ ಹಿಂದೂಗಳಿಗೆ ಸ್ವಲ್ಪಮಟ್ಟಿಗೆ ಸಮಾಧಾನ ಹಾಗೂ ಭರವಸೆ ಸಿಕ್ಕಿದೆ. ಅದೇ ಸಮಾಧಾನ ಮತ್ತು ಭರವಸೆ ಇನ್ನುಳಿದ ಕೋಟ್ಯಾವಧಿ ಹಿಂದೂಗಳಿಗೆ ಸಿಗಬೇಕೆಂದು ‘ಭಾಜಪ ಮತ್ತು ಕೇಂದ್ರ ಸರಕಾರ’ ಇಂತಹ ಕಾನೂನನ್ನು ಭಾರತಾದ್ಯಂತ ಜಾರಿಗೊಳಿಸಬೇಕು, ಇಷ್ಟೇ, ಅವರಿಂದ ಸರ್ವಸಾಮಾನ್ಯ ಹಿಂದೂಗಳ ಅಪೇಕ್ಷೆ.
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿಗಳು, ಮುಂಬೈ ಉಚ್ಚ ನ್ಯಾಯಾಲಯ (೭.೭.೨೦೨೧)