`ಫೇಸ್ ಬುಕ್’ ಗೆ ಜಿಹಾದಿ ಭ್ಯೋತ್ಪಾದಕರಲ್ಲ, ಆದರೆ ಸನಾತನ ಸಂಸ್ಥೆ ಅಪಾಯಕಾರಿ ಎಂದು ಅನಿಸುತ್ತದೆ ! – ಸನಾತನ ಸಂಸ್ಥೆ

ಪರಾರಿಯಾಗಿರುವ ಭಯೋತ್ಪಾದಕ ಜಾಕಿರ್ ನಾಯಿಕ್, ವಿವಿಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಇವರದ್ದು ಮಾತ್ರ ಪಟ್ಟಿಯಲ್ಲಿ ಹೆಸರಿಲ್ಲ !

ಶ್ರೀ. ಚೇತನ ರಾಜಹಂಸ

ಇತ್ತೀಚೆಗೆ ಅಮೇರಿಕಾದಲ್ಲಿ ‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ ಕಾನ್ಫರೆನ್ಸ್’ ಮೂಲಕ ಹಿಂದೂ ಧರ್ಮದ ವಿರುದ್ಧ ವಿಷ ಕಾರಲಾಯಿತು ಮತ್ತು ಹಿಂದುತ್ವವನ್ನೇ ಭಯೋತ್ಪಾದನೆಯೊಂದಿಗೆ ಜೋಡಿಸಲು ಪ್ರಯತ್ನಿಸಿತು. ಇದರಿಂದಲೇ ಅಮೇರಿಕಾದಲ್ಲಿ ಹಿಂದುತ್ವದ ಬೆಳೆಯುತ್ತಿರುವ ಪ್ರಭಾವದ ವಿರುದ್ಧ ಪಿತೂರಿ ನಡೆಯುತ್ತಿದೆ ಎಂಬುದು ತೋರ್ಪಡುತ್ತದೆ. ಇದರ ಪರಿಣಾಮವಾಗಿ ಹಿಂದೂ ಧರ್ಮದ ಪ್ರಸಾರ ಮಾಡುವ ಸನಾತನ ಸಂಸ್ಥೆಯಂತಹ ಅಧ್ಯಾತ್ಮಿಕ ಸಂಸ್ಥೆಯನ್ನು ‘ಅಪಾಯಕಾರಿ’ ಎಂದು ನಿರ್ಧರಿಸುವಂತೆ ‘ಫೇಸ್‌ಬುಕ್’ನಂತಹ ಸಾಮಾಜಿಕ ಮಾಧ್ಯಮಗಳು ಪ್ರಯತ್ನಿಸುತ್ತಿವೆ. ವಾಸ್ತವದಲ್ಲಿ ಭಾರತವು ಭಯೋತ್ಪಾದಕ ಮತ್ತು ಅಪಾಯಕಾರಿಯಾಗಿರುವ ಡಾ. ಜಾಕಿರ್ ನಾಯಕ್‌ನ ೫೦ ಕ್ಕೂ ಹೆಚ್ಚು ಖಾತೆಗಳನ್ನು ಇದೇ ’ಫೇಸ್‌ಬುಕ್’ ಅಹೋರಾತ್ರಿ ಪ್ರಸಾರ ಮಾಡುತ್ತಿದೆ, ಅದು ಮಾತ್ರ ‘ಫೇಸ್‌ಬುಕ್’ಗೆ ಅಪಾಯಕಾರಿ ಎಂದು ಅನಿಸುತ್ತಿಲ್ಲ. ಇದರಿಂದಲೇ ‘ಫೇಸ್‌ಬುಕ್’ನ ಹಿಂದೂವಿರೋಧಿ ನಿಲುವು ಸ್ಪಷ್ಟವಾಗುತ್ತದೆ, ಎಂದು ಸನಾತನ ಸಂಸ್ಥೆಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ಹೇಳಿದ್ದಾರೆ.

ಕಳೆದ ವಾರವಷ್ಟೇ, ‘ಫೇಸ್‌ಬುಕ್’ನ ಮಾಜಿ ಡಾಟಾ ವಿಜ್ಞಾನಿ ಫ್ರಾನ್ಸಿಸ್ ಹೊಗನ್ ಇವರು ‘ಫೇಸ್‌ಬುಕ್ ಇದು ಮಕ್ಕಳ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ’ ಎಂದು ಅಮೇರಿಕಾದ ಸಂಸತ್ತಿನಲ್ಲಿ ಸಾಕ್ಷಿ ನೀಡಿದ್ದಾರೆ. ಈ ಹಿಂದೆಯೂ ‘ಫೇಸ್‌ಬುಕ್’ನಿಂದ ನಾಗರಿಕರ ಖಾಸಗಿ ಮಾಹಿತಿಯನ್ನು ‘ಲೀಕ್’ ಮಾಡುವ ಮತ್ತು ನಾಗರಿಕರ ಮೇಲೆ ನಿಗಾ ಇರಿಸಿದ ಆರೋಪದ ಮೇಲೆ ‘ಫೇಸ್‌ಬುಕ್’ನ ಸಂಸ್ಥಾಪಕ ಮಾರ್ಕ್ ಜುಕರಬರ್ಗ್ ಇವರನ್ನು ಅಮೇರಿಕಾದ ಸಂಸತ್ತಿನಲ್ಲಿ ನಿಲ್ಲಿಸಿ ಪ್ರಶ್ನಿಸಲಾಗಿತ್ತು. ಆದ್ದರಿಂದ ಇಂತಹ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿರುವ ‘ಫೇಸ್‌ಬುಕ್’ನಂತಹ ಕಂಪನಿಗಳ ಗೌಪ್ಯ ಪಟ್ಟಿಯಲ್ಲಿ ಯಾರ ಹೆಸರುಗಳಿವೆ, ಈ ಬಗ್ಗೆ ಸನಾತನದ ದೃಷ್ಟಿಕೋನದಿಂದ ಎಳ್ಳಷ್ಷು ಮಹತ್ವವಿಲ್ಲ. ‘ಫೇಸ್‌ಬುಕ್’ ಸನಾತನ ಸಂಸ್ಥೆಯ ಒಂದಾದರೂ ಪೋಸ್ಟ್ ಅಕ್ಷೇಪಾರ್ಹ ಅಥವಾ ಸಮಾಜವಿರೋಧಿವಿದೆಯೇ ಎಂಬುದನ್ನು ತೋರಿಸಲಿ ಎಂದು ನಾವು ಫೇಸ್‌ಬುಕ್‌ಗೆ ಸವಾಲೊಡ್ಡುತ್ತೇವೆ. ಸನಾತನ ಸಂಸ್ಥೆಯು ಭಾರತೀಯ ಸಂವಿಧಾನ ಮತ್ತು ಕಾನೂನುಗಳನ್ನು ಪಾಲಿಸಿ ಧರ್ಮಪ್ರಸಾರ ಮಾಡುವ ಒಂದು ಆಧ್ಯಾತ್ಮಿಕ ಸಂಸ್ಥೆಯಾಗಿದೆ. ಸನಾತನವನ್ನು ನಿಷೇಧಿಸುವ ಬಗ್ಗೆ ವಿರೋಧಕ ಬೇಡಿಕೆಗೆ ಭಾರತ ಸರಕಾರವು ‘ಅಂತಹ ಯಾವುದೇ ಪ್ರಸ್ತಾಪವಿಲ್ಲ’ ಎಂದು ಆಗಾಗ ಸ್ಪಷ್ಟಪಡಿಸಿದೆ.

ಅಮೇರಿಕಾದಲ್ಲಿ ಹಿಂದುತ್ವದ ವಿರುದ್ಧ ಪ್ರಚಾರ ಮಾಡುವ ಕ್ರಮಬದ್ಧವಾಗಿ ಸಂಚು ನಡೆಯುತ್ತಿದೆ. 2014 ರ ಹಿಂದೆ ಸರಿ ಸುಮಾರು ಎಂಟು ವರ್ಷಗಳ ಕಾಲ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರನ್ನು ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಮೇರಿಕಾಗೆ ಭೇಟಿ ನೀಡುವುದನ್ನು ನಿಷೇಧಿಸಿತ್ತು. ೨೦೧೮ ರಲ್ಲಿ ‘ಸಿ.ಐ.ಎ.’ ಈ ಅಮೇರಿಕಾದ ಗೂಢಾಚಾರ ಸಂಸ್ಥೆಯ ಪಟ್ಟಿಯಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಅನ್ನು ‘ಮಿಲಿಟಂಟ್’ ಧಾರ್ಮಿಕ ಸಂಘಟನೆಗಳೆಂದು ವರ್ಗೀಕರಿಸಿತ್ತು. ಈಗ ‘ಫೇಸ್‌ಬುಕ್’ನ ಪಟ್ಟಿಯಲ್ಲಿ ಸನಾತನ ಸಂಸ್ಥೆಯ ಹೆಸರು ಬರುವುದು, ಇದು ಸನಾತನ ಸಂಸ್ಥೆಯು ಹಿಂದೂ ಧರ್ಮವನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಬಾಗಿಯಾಗಿದೆ ಎಂಬ ಆರೋಪವಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ 42 ಅಂಗಸಂಸ್ಥೆಗಳು ‘ಫೇಸ್‌ಬುಕ್’ಗೆ ಅಪಾಯಕಾರಿ ಎಂದು ಅನಿಸುವುದಿಲ್ಲ; ಆದರೆ ತೆಲಂಗಾಣಾ ಭಾಜಪ ಶಾಸಕ ಶ್ರೀ. ರಾಜಸಿಂಗ್ ಠಾಕೂರ್, ಹಿಂದುತ್ವವನ್ನು ಬಹಿರಂಗವಾಗಿ ಪ್ರಸಾರ ಮಾಡುವ ‘ಸುದರ್ಶನ ಚಾನೆಲ್’ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಗೆ ಕಾರ್ಯನಿರತವಾಗಿರುವ ಹಿಂದೂ ಜನಜಾಗೃತಿ ಸಮಿತಿಯ ‘ಫೇಸ್‌ಬುಕ್’ ಖಾತೆ ಅಪಾಯಕಾರಿ ಎಂದು ಅನಿಸುತ್ತದೆ, ಇದು ಅತ್ಯಂತ ಖಂಡನೀಯ ಮತ್ತು ತಾರತಮ್ಯದಿಂದ ಕೂಡಿದೆ ಎಂದೂ ಶ್ರೀ. ಚೇತನ ರಾಜಹಂಸ ಹೇಳಿದ್ದಾರೆ.