‘ಮೆಟಾ’ ಸಂಸ್ಥೆಯ ಸ್ಥಾಪಕ ಮತ್ತು ಬಿಲಿಯನೇರ್ ಮಾರ್ಕ್ ಜುಕರ್ಬರ್ಗ್ ನಿಂದ ಮಾಹಿತಿ

ನ್ಯೂಯಾರ್ಕ(ಅಮೇರಿಕಾ) – ಕೆಲವು ದೇಶಗಳು ನಾವು ಒಪ್ಪದ ಕಾನೂನುಗಳನ್ನು ಹೊಂದಿವೆ. ಒಂದು ಕಾಲವಿತ್ತು, ಯಾರೋ ಫೇಸ್ಬುಕ್ನಲ್ಲಿ ಪ್ರವಾದಿ ಮಹಮ್ಮದ್ ಅವರ ಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ ಪಾಕಿಸ್ತಾನದಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ, ನನ್ನ ವಿರುದ್ಧ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗಾಗಿ ಬೇಡಿಕೆ ಮಾಡಲಾಗಿತ್ತು ವಿಷಯ ಎಲ್ಲಿಯವರೆಗೆ ತಲುಪಿದೆಯೋ, ನನಗೆ ತಿಳಿದಿಲ್ಲ; “ನಾನು ಪಾಕಿಸ್ತಾನಕ್ಕೆ ಹೋಗುವ ವಿಚಾರ ಮಾಡದೇ ಇದ್ದರಿಂದ, ನಾನು ಹೆಚ್ಚು ಚಿಂತಿಸುತ್ತಿರಲಿಲ್ಲ” ಎಂದು `ಮೆಟಾ’ದ ಸಂಸ್ಥಾಪಕ ಮತ್ತು ಬಿಲಿಯನೇರ್ ಮಾರ್ಕ್ ಜುಕರ್ಬರ್ಗ್ ಹೇಳಿದರು. ಅವರು ಜೋ ರೋಗನ್ ಅವರ ‘ಪಾಡ್ಕಾಸ್ಟ್’ (ವಿವಿಧ ವಿಷಯಗಳ ಕುರಿತು ಧ್ವನಿಮುದ್ರಿತ ಮಾಡಿದ ಸಂಭಾಷಣೆಗಳ ಪ್ರಸಾರ)ದಲ್ಲಿ ಮಾತನಾಡುತ್ತಿದ್ದರು.
ಜುಕರ್ಬರ್ಗ್ ಮಾತನಾಡಿ,
ಕೆಲವು ದೇಶಗಳ ಕಾನೂನುಗಳು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ಅವರು ನಾವು ತಪ್ಪೆಂದು ಭಾವಿಸದ ಬಹಳಷ್ಟು ವಿಷಯಗಳನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಲು ಬಯಸುತ್ತಾರೆ. ಸರಕಾರಗಳು ತಂತ್ರಜ್ಞಾನ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಿದರೆ, ಅದು ಒಂದು ದೊಡ್ಡ ಅಂಶವಾಗುತ್ತದೆ’, ಎಂದು ಹೇಳಿದರು.
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !
ರಷ್ಯಾ: ಕಳೆದ ೬ ತಿಂಗಳುಗಳಲ್ಲಿ ೪೪ ಟನ್ ಚಿನ್ನ ಮಾರಾಟ!
ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವು ಮತ್ತು ಪಾಕಿಸ್ತಾನಿಗಳಿಗೆ ನೀಡಲಾಗುವ ವೀಸಾವನ್ನು ತಡೆಹಿಡಿಯಬೇಕು!
೧೨ ವರ್ಷಗಳ ನಂತರ ಎಲ್ಲಾ ಆರೋಪಿಗಳನ್ನು ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆ!
ಪಾಕ್ ಸೈನ್ಯವು ಕಾರ್ಗಿಲ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಮೃತದೇಹಗಳನ್ನು ಹಿಂದೂಗಳ ವಶಕ್ಕೆ ನೀಡಿತು !
ಈ ಹಿಂದೆ ನನ್ನನ್ನು ಬಂಗಾಳದಿಂದ ಹೊರಗಟ್ಟಿದ ನಾಯಕರು ಈಗಲೂ ನನ್ನನ್ನು ಭಾಜಪ ಮತ್ತು ಸಂಘವನ್ನು ಬೆಂಬಲಿಸುವವಳು ಎಂದು ಬಿಂಬಿಸುತ್ತಿದ್ದಾರೆ! : Taslima Nasrin