ಕೇವಲ ಒಂದು ವರ್ಷ !

ಯಾವುದೇ ವಿಷಯವನ್ನು ಪೂರ್ಣ ಮಾಡಲು ಸಮಯಮಿತಿ ಆವಶ್ಯಕವಾಗಿರುತ್ತದೆ. ಅದು ಇಲ್ಲದಿದ್ದರೆ, ಕಾರ್ಯವು ದಿಕ್ಕು ತಪ್ಪುತ್ತದೆ ಅಥವಾ ಬಾಕಿ ಉಳಿಯುತ್ತದೆ. ವ್ಯಷ್ಟಿ ಜೀವನದಲ್ಲಿ ಅನೇಕ ಜನರು ಏನಾದರೂ ಧ್ಯೇಯವಿಟ್ಟುಕೊಂಡು ಮತ್ತು ಅದನ್ನು ಪೂರ್ತಿಗೊಳಿಸಲು ಸಮಯಮಿತಿಯನ್ನಿಟ್ಟುಕೊಂಡು ಪ್ರಯತ್ನಿಸುತ್ತಾರೆ. ಸಮಷ್ಟಿಯಲ್ಲಿ ಸರಕಾರ, ಆಡಳಿತ, ಕಂಪನಿಗಳು, ಇತ್ಯಾದಿಗಳೂ ತಮ್ಮ ಕಾರ್ಯದ ದೃಷ್ಟಿಯಿಂದ ಇದೇ ರೀತಿಯ ಸಮಯಮಿತಿಯನ್ನಿಟ್ಟು ಕಾರ್ಯ ಮಾಡಲು ಪ್ರಯತ್ನಿಸುತ್ತವೆ; ಇದರಲ್ಲಿ ಸರಕಾರಿ ಸ್ತರದಲ್ಲಿ ಎಷ್ಟು ಕೆಲಸಗಳು ಸಮಯಮಿತಿಯಲ್ಲಿ ಮುಗಿಯುತ್ತವೆ ? ಇದೊಂದು ಸಂಶೋಧನೆಯ ವಿಷಯವೆಂದೇ ಸಿದ್ಧವಾಗುತ್ತದೆ; ಆದರೆ, ‘ನಮಗೆ ಮಾಡಬೇಕಾದ ವಿಷಯಕ್ಕೆ ಸಮಯಮಿತಿ ಇರುವುದು ಆವಶ್ಯಕವಾಗಿರುತ್ತದೆ ಎಂದು ಪ್ರತಿಯೊಬ್ಬರಿಗೆ ಗೊತ್ತಿರುತ್ತದೆ. ಭಾರತದ ಸ್ವಾತಂತ್ರ್ಯದ ನಂತರ ದೇಶದಲ್ಲಿ ಪಂಚವಾರ್ಷಿಕ ಯೋಜನೆಯು ಆರಂಭವಾಯಿತು, ಅಂದರೆ ಮುಂದಿನ ೫ ವರ್ಷಗಳಲ್ಲಿ ಭಾರತವು ಯಾವ ಅಂಶಗಳ ಬಗ್ಗೆ ಅಭಿವೃದ್ಧಿಗಾಗಿ ಪ್ರಯತ್ನಿಸಬೇಕು, ಎಂಬ ಬಗ್ಗೆ ನಿಯೋಜನೆಯನ್ನು ಮಾಡಲಾಗುತ್ತಿತ್ತು. ಇದರಲ್ಲಿನ ಕೆಲವು ವಿಷಯಗಳು ನಿಯೋಜಿಸಿದ ೫ ವರ್ಷಗಳಲ್ಲಿಯೇ ಪೂರ್ಣಗೊಂಡವು ಎಂದು ಹೇಳಲು ಬರುವುದಿಲ್ಲ; ಆದರೆ ಮುಂದೆಂದೋ ಅವು ಪೂರ್ಣಗೊಂಡವು. ಹೀಗೂ ಆಗುತ್ತದೆ. ಅಭಿವೃದ್ಧಿಯೊಂದಿಗೆ ಭಾರತಕ್ಕೆ ಕಾಡುವ ಮುಖ್ಯ ಸಮಸ್ಯೆಗಳ ನಿವಾರಣೆಗೂ ಸಮಯಮಿತಿಯನ್ನು ಹಾಕಿಮಾಡುವುದು ಆವಶ್ಯಕವಾಗಿದೆ. ಅದನ್ನು ಆ ದೃಷ್ಟಿಯಿಂದ ನೋಡಲಿಲ್ಲ ಮತ್ತು ಈಗ ಅದರಲ್ಲಿ ಸ್ವಲ್ಪ ಪ್ರಯತ್ನವಾಗುತ್ತಿದೆ, ಎಂಬುದು ಕೇಂದ್ರ ಗೃಹಸಚಿವ ಅಮಿತ ಶಾಹ ಇವರ ಅಧ್ಯಕ್ಷತೆಯಲ್ಲಿ ದೇಶದಲ್ಲಿನ ನಕ್ಸಲಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆದ ನಕ್ಸಲವಾದ ವಿಷಯಕ್ಕೆ ಸಂಬಂಧಪಟ್ಟ ಸಭೆಯಲ್ಲಿ ಕಂಡು ಬಂದಿತು.

ಕೇಂದ್ರ ಗೃಹಸಚಿವ ಅಮಿತ ಶಾಹ ಇವರ ಅಧ್ಯಕ್ಷತೆಯಲ್ಲಿ ದೇಶದಲ್ಲಿನ ನಕ್ಸಲಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆದ ನಕ್ಸಲವಾದ ವಿಷಯಕ್ಕೆ ಸಂಬಂಧಪಟ್ಟ ಸಭೆ

ನಕ್ಸಲ್‌ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಗೃಹಸಚಿವ ಅಮಿತ ಶಾಹ ಇವರ ಸಭೆ

ಅಮಿತ ಶಾಹ ಇವರು ರಾಜ್ಯಗಳಿಗೆ ಮುಂದಿನ ವರ್ಷದಾದ್ಯಂತ ನಕ್ಸಲ್‌ವಾದವನ್ನು ನಾಶ ಮಾಡುವ ಧ್ಯೇಯವನ್ನು ನೀಡಿದ್ದಾರೆ. ಈ ಸಮಯಮಿತಿಯನ್ನು ಹೇಗೆ ತಲುಪುವುದು ? ಅದಕ್ಕಾಗಿ ಯಾವ ಸ್ತರಗಳಲ್ಲಿ ಮತ್ತು ಯಾವ ಹಂತಗಳಲ್ಲಿ ಪೂರ್ಣ ಮಾಡಬೇಕು ? ಈ ಬಗ್ಗೆಯೂ ಅವರು ಮಾರ್ಗದರ್ಶನ ಮಾಡಿದರು. ಅದಕ್ಕನುಸಾರ ಈಗ ಮುಂದಿನ ಒಂದು ವರ್ಷದಲ್ಲಿ ನಕ್ಸಲ್‌ವಾದವು ನಾಶವಾಗಲೇಬೇಕು, ಎಂಬ ದೃಷ್ಟಿಯಿಂದ ರಾಜ್ಯ ಸರಕಾರಗಳು ಪ್ರಯತ್ನಿಸುವವು, ಎಂಬ ಕೇವಲ ಅಪೇಕ್ಷೆ ಮಾಡುವುದು ನಮ್ಮ ಕೈಯಲ್ಲಿದೆ. ನಕ್ಸಲ್‌ವಾದವು ಆರಂಭವಾಗಿ ಇಂದು ೫೫ ವರ್ಷಗಳು ಉರುಳಿದವು. ಇಷ್ಟು ವರ್ಷಗಳಾದರೂ ನಮ್ಮಿಂದ ನಕ್ಸಲ್‌ವಾದವನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ ಎಂಬುದು ಭಾರತಕ್ಕೆ ಲಜ್ಜಾಸ್ಪದವೇ ಆಗಿದೆ. ಅದಕ್ಕಾಗಿ ‘ಈಗ ನೀಡಲಾದ ಒಂದು ವರ್ಷದ ಸಮಯಮಿತಿಯನ್ನು ನಾವು ಈ ಮೊದಲೇ ಏಕೆ ಹಾಕಿಕೊಳ್ಳಲಿಲ್ಲ ?, ಎಂಬ ಪ್ರಶ್ನೆಯು ಯಾವುದೇ ರಾಷ್ಟ್ರಪ್ರೇಮಿ ನಾಗರಿಕರ ಮನಸ್ಸಿನಲ್ಲಿ ಖಂಡಿತ ಮೂಡುತ್ತದೆ. ಹಾಗೆಯೇ ‘ಒಂದು ವೇಳೆ ನಕ್ಸಲ್‌ವಾದಕ್ಕೆ ಒಂದು ವರ್ಷ ನೀಡಿದರೆ, ದೇಶದಲ್ಲಿ ಕಳೆದ ೩೦ ವರ್ಷಗಳಿಂದಿರುವ ಮತ್ತು ನಾಶ ಮಾಡಲು ಸಾಧ್ಯವಾಗದಿರುವ ಜಿಹಾದಿ ಭಯೋತ್ಪಾದನೆಯನ್ನು ನಾಶ ಮಾಡಲು ಒಂದು ವರ್ಷವನ್ನು ನೀಡಬೇಕು, ಎಂದು ರಾಷ್ಟ್ರಪ್ರೇಮಿಗಳ ಆಗ್ರಹವಾಗಿರಬಹುದು ಮತ್ತು ಅದರಲ್ಲಿ ತಪ್ಪೇನಿಲ್ಲ. ನಕ್ಸಲ್‌ವಾದವು ಮೊದಲಿನ ತುಲನೆಯಲ್ಲಿ ಕಡಿಮೆಯಾಗಿದೆ ಎಂಬುದನ್ನು ಅಲ್ಲಗಳೆಯಲಾಗದಿದ್ದರೂ ಇಷ್ಟು ವರ್ಷಗಳ ಕಾಲ ಅದರ ಅಸ್ತಿತ್ವವಿದೆ, ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಈ ೫೫ ವರ್ಷಗಳಲ್ಲಿ ಸಾವಿರಾರು ನಾಗರಿಕರ ಸಾವನ್ನಪ್ಪಿದರು ಮತ್ತು ಅಷ್ಟೇ ಭದ್ರತಾ ಪಡೆಯ ಸೈನಿಕರು ಹುತಾತ್ಮರಾದರು. ಇಷ್ಟು ವರ್ಷಗಳ ಕಾಲ ೨೨ ರಾಜ್ಯಗಳು ಅಶಾಂತಿಯಿಂದ ಕಂಗೆಟ್ಟವು. ಸಮಾಜದ ಮೇಲೆ ಅದರ ಪರಿಣಾಮವಾಯಿತು. ಯಾವುದಾದರೊಂದು ರಾಷ್ಟ್ರದಲ್ಲಿ ಇಂತಹ ವಿಧದ ಹಿಂಸಾಚಾರವನ್ನು ನಾಗರಿಕರಿಂದ ಒಂದು ವಿಚಾರವನ್ನಿಟ್ಟುಕೊಂಡು ಮಾಡುವುದು ಶೋಭಾಯಮಾನವಲ್ಲ.

ಬಂಗಾಲದ ನಕ್ಸಲಬಾಡಿಯಲ್ಲಿ ಚಾರು ಮುಝುಮದಾರ ಮತ್ತು ಕಾನೂ ಸನ್ಯಾಲ ಈ ಭಾರತೀಯ ಕಮ್ಯುನಿಸ್ಟ್ (ಸಾಮ್ಯವಾದಿ) ಪಕ್ಷದ ಮುಖಂಡರಿಂದ ನಕ್ಸಲವಾದಿ ಆಂದೋಲನವು ಆರಂಭವಾಯಿತು. ಕಾರ್ಮಿಕರು ಮತ್ತು ರೈತರ ಬಗೆಗಿನ ಸರಕಾರದ ಅಯೋಗ್ಯ ನಿಲುವಿನಿಂದ ಅವರು ಸಶಸ್ತ್ರ ಆಂದೋಲನವನ್ನು ಆರಂಭಿಸಿದರು ಮತ್ತು ಕೆಲವು ವರ್ಷಗಳಲ್ಲಿ ಅವರು ದೇಶದ ಅನೇಕ ರಾಜ್ಯಗಳಿಗೆ ತಲುಪಿದರು. ಅವರ ಬೇಡಿಕೆಗಳು, ಅವರ ಅಪೇಕ್ಷೆಗಳ ಕಡೆಗೆ ಈಗ ನೋಡಿದರೆ ಅವು ಅಳಿದು ಹೋಗಿದ್ದು ಈಗ ಕೇವಲ ಹಿಂಸೆ, ಕಪ್ಪಾ, ಅಪರಾಧ ಇವುಗಳ ಕಡೆಗೆಯೇ ನಕ್ಸಲವಾದಿಗಳ ಸೆಳೆತವು ಉಳಿದುಕೊಂಡಿದೆ. ಮಹಿಳಾ ನಕ್ಸಲವಾದಿಗಳನ್ನು ಲೈಂಗಿಕವಾಗಿ ಶೋಷಣೆ ಮಾಡುವ ಅವರ ಕೃತ್ಯಗಳಿಂದ ಅವರ ಈಗಿನ ಮಾನಸಿಕತೆಯೂ ಬಯಲಾಗಿದೆ. ಇದು ನಕ್ಸಲವಾದಿಗಳ ಅಧೋಗತಿಯೇ ಆಗಿದೆ. ಈ ಸ್ಥಿತಿಗೆ ತಲುಪಿದ ನಕ್ಸಲವಾದಿಗಳ ಮೇಲೆ ಕೊನೆಯ ಪ್ರಹಾರ ಮಾಡಲು ಮುಂದಿನ ಒಂದು ವರ್ಷ ಸಾಕು ಎಂದು ಸಿದ್ಧವಾಗಬೇಕು.

ಜಿಹಾದಿ ಭಯೋತ್ಪಾದನೆಯ ಬಗ್ಗೆ ಏನು ?

ಈ ಪ್ರಶ್ನೆಯು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಈಗ ಮೂಡಿರಬಹುದು. ‘೫೫ ವರ್ಷಗಳಿಂದಿರುವ ನಕ್ಸಲವಾದವನ್ನು ನಾಶ ಮಾಡುವುದಕ್ಕಾಗಿ ೧ ವರ್ಷ ನೀಡಲಾಗಿದೆ, ಆದರೆ ಕಳೆದ ೩೦ ವರ್ಷಗಳಿಂದ ನಡೆಯುತ್ತಿರುವ ಜಿಹಾದಿ ಭಯೋತ್ಪಾದನೆಯನ್ನು ನಾಶ ಮಾಡಲು ಇನ್ನು ಎಷ್ಟು ಸಮಯ ದಾರಿಯನ್ನು ಕಾಯಬೇಕು ? ಎಂಬುದರ ಲೆಕ್ಕಾಚಾರವನ್ನು ಭಾರತೀಯರು ಮಾಡಬೇಕೇ ?, ಎಂಬ ಪ್ರಶ್ನೆಯೂ ಮೂಡುತ್ತದೆ. ‘ಮೊದಲು ಆಂತರಿಕ ಸಮಸ್ಯೆಗಳನ್ನು ಬಿಡಿಸೋಣ ಮತ್ತು ನಂತರ ಹೊರಗಿನದ್ದು ಎಂದು ಸರಕಾರದ ನಿಲುವಾಗಿರಬಹುದು, ಎಂದು ಸಹ ಕೆಲವರು ಹೇಳಬಹುದು. ಜಿಹಾದಿ ಭಯೋತ್ಪಾದನೆಯ ಸಮಸ್ಯೆಯು ಪಾಕ್‌ನಿರ್ಮಿತವಾಗಿದೆ. ಅದನ್ನು ನಾಶ ಮಾಡದೇ ಭಾರತದಲ್ಲಿನ ಭಯೋತ್ಪಾದನೆಯು ನಾಶವಾಗಲು ಸಾಧ್ಯವಿಲ್ಲ. ಅದನ್ನು ನಾಶ ಮಾಡಲು ಯುದ್ಧವೇ ಏಕೈಕ ಉಪಾಯವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಸ್ವತಂತ್ರ ಮಾಡುವುದು, ಇದು ಅವರ ಮೊದಲ ಹೆಜ್ಜೆಯೆಂದು ಸಿದ್ಧವಾಗುತ್ತದೆ. ಅದೇ ಸಮಯಕ್ಕೆ ಚೀನಾ ಪಾಕಿಸ್ತಾನದ ಸಹಾಯಕ್ಕೆ ಧಾವಿಸಿ ಬರುವ ಸಾಧ್ಯತೆ ಇರುವುದರಿಂದ ಅದರ ಪರಿಣಾಮವು ಬೇರೆಯಾಗಬಹುದು ಎಂಬ ವಿಚಾರವನ್ನು ಸರಕಾರವು ಮಾಡುತ್ತಿರಬಹುದು ಮತ್ತು ಅದರಿಂದಾಗಿಯೇ ಜಿಹಾದಿ ಭಯೋತ್ಪಾದನೆಯನ್ನು ನಾಶ ಮಾಡಲು ಸರಕಾರವು ಪ್ರಯತ್ನಿಸಲಾರದು ಎಂಬ ತರ್ಕವನ್ನು ರಾಷ್ಟ್ರಪ್ರೇಮಿಗಳು ಮಾಡುತ್ತಿರ ಬಹುದು, ಎಂಬುದರಲ್ಲಿ ಸಂದೇಹವಿಲ್ಲ. ಆದ್ದರಿಂದಲೇ ಸರಕಾರವು ಇತರ ದೇಶಗಳ ಮೂಲಕ ಪಾಕಿಸ್ತಾನವನ್ನು ಆರ್ಥಿಕ, ಸಾಮಾಜಿಕ ಮುಂತಾದ ಮಾಧ್ಯಮಗಳಿಂದ ಪ್ರತಿಬಂಧಿಸಲು ಪ್ರಯತ್ನಿಸುತ್ತಿದೆ, ಎಂದು ಗಮನಕ್ಕೆ ಬರುತ್ತದೆ. ಆದರೂ ಅದಕ್ಕೆ ಎಷ್ಟು ಯಶಸ್ಸು ದೊರಕಬಹುದು ? ಮತ್ತು ಅದರಿಂದ ಭಾರತದ ಸಮಸ್ಯೆಯು ಎಷ್ಟು ಕಡಿಮೆಯಾಗಬಹುದು ? ಎಂಬ ಪ್ರಶ್ನೆಯು ಹಾಗೆಯೇ ಉಳಿಯುತ್ತದೆ. ಕಾಶ್ಮೀರದಲ್ಲಿ ಕಲಮ್ ೩೭೦ ಅನ್ನು ವಜಾ ಮಾಡಿದ ನಂತರ ಅಲ್ಲಿನ ಕಲ್ಲೆಸೆತದ ಘಟನೆಗಳು ಕಡಿಮೆಯಾದವು. ಭಯೋತ್ಪಾದನೆಗಾಗಿ ನಡೆಯುವ ಹಣದ ಪೂರೈಕೆಯು ಕಡಿಮೆಯಾಯಿತು. ಆದರೂ ಅವರ ಆಕ್ರಮಣಗಳು ನಡೆಯುತ್ತಲೇ ಇವೆ. ಹಿಂದೂಗಳನ್ನು ಪುನಃ ಗುರಿ ಮಾಡಲಾಗುತ್ತಿದೆ. ಅಫಘಾನಿಸ್ತಾನದ ಮೇಲೆ ತಾಲಿಬಾನ್ ನಿಯಂತ್ರಣ ಪಡೆದ ನಂತರ ಕಾಶ್ಮೀರದಲ್ಲಿ ಭಯೋತ್ಪಾದನೆಯು ಹೆಚ್ಚಾಗುವ ಸಾಧ್ಯತೆಯನ್ನು ಹೇಳಲಾಗುತ್ತಿದೆ. ಇಸ್ಲಾಮಿಕ ಸ್ಟೇಟ್‌ನಿಂದ ರಕ್ತಪಾತವಾಗುವ ಮೊದಲೇ ಅದರ ಮೇಲೆ ಕ್ರಮಕೈಗೊಳ್ಳಲಾಗುತ್ತಿದೆ, ಇದು ಒಳ್ಳೆಯ ವಿಷಯವಾಗಿದೆ; ಆದರೆ ಯಾವ ವಿಚಾರಸರಣಿಯಿಂದ ದೇಶದಲ್ಲಿನ ಮತಾಂಧ ಯುವಕರು ಮತ್ತು ಕೆಲವು ಯುವತಿಯರೂ ಜಿಹಾದಿ ಭಯೋತ್ಪಾದನೆಯ ಕಡೆಗೆ ಹೊರಳುತ್ತಿರುವರೋ, ಆ ವಿಚಾರಸರಣಿಯ ಮೇಲಾದರೂ ಸರಕಾರವು ಆಕ್ರಮಣ ಮಾಡಬಹುದು, ಎಂದು ಅನಿಸುತ್ತದೆ. ಯಾವ ಸಮಾಜದಿಂದ ಮತ್ತು ಯಾವ ಧಾರ್ಮಿಕ ವಿಷಯಗಳಿಗಾಗಿ ಜಿಹಾದ್, ಮೂಲಭೂತವಾದ ಮತ್ತು ಮತಾಂಧತೆಯು ಸಂರಕ್ಷಿಸಲಾಗುತ್ತಿದೆ ? ಅದನ್ನು ದೇಶದೆದುರು ಬಹಿರಂಗಪಡಿಸಬೇಕು. ಅದಕ್ಕಾಗಿ ಸರಕಾರವು ವಿಚಾರಪೂರ್ವಕ ಪ್ರಯತ್ನ ಮಾಡಬೇಕು. ಜಿಹಾದಿ ಭಯೋತ್ಪಾದನೆಗೆ ಯಾವ ವಿಷಯಗಳಿಂದಾಗಿ ಪ್ರೋತ್ಸಾಹ ಸಿಗುತ್ತದೆಯೋ ಅದನ್ನು ನಾಶ ಮಾಡಬೇಕು. ಭಯೋತ್ಪಾದನೆಗೆ ಎಲ್ಲಿಂದ ಶಿಕ್ಷಣ ಸಿಗುತ್ತದೋ ಅದರ ಮೇಲೆ ಆಕ್ರಮಣ ಮಾಡಬೇಕು. ಇಂತಹ ಬೇರೆ ಯಾವುದಾದರೂ ವಿಚಾರಸರಣಿ ಇದ್ದರೆ, ಅದನ್ನು ಬಹಿರಂಗಪಡಿಸಿ ಅದರ ವಿರುದ್ದ ದೇಶದಲ್ಲಿ ಚರ್ಚೆಯನ್ನು ನಡೆಸಬೇಕು. ಸರಕಾರವು ಇದನ್ನಾದರೂ ಮುಂದಿನ ಒಂದು ವರ್ಷದಲ್ಲಿ ಮಾಡಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !