ಗೋವಾದ ರಾಮನಾಥಿಯ ಸನಾತನ ಆಶ್ರಮದ ಪರಿಸರದಲ್ಲಿರುವ ದೇವಸ್ಥಾನಗಳ ಕಳಸಗಳಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

ದೇವಸ್ಥಾನಗಳ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.)’ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ 

‘ಹಿಂದಿನ ಕಾಲದಿಂದಲೂ ಹಿಂದೂಗಳ ದೇವಸ್ಥಾನಗಳು ಚೈತನ್ಯದ ಮುಖ್ಯ ಸ್ರೋತಗಳಾಗಿವೆ. ದೇವಸ್ಥಾನಗಳಿಗೆ ದರ್ಶನಕ್ಕೆ ಹೋದರೆ, ನಮಗೆ ಅಲ್ಲಿನ ಸಾತ್ವಿಕತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ, ಹಾಗೆಯೇ ಅಲ್ಲಿನ ಸಾತ್ತ್ವಿಕ ವಾತಾವರಣದಿಂದ ದೇವತೆಗಳ ಬಗೆಗಿನ ಭಕ್ತಿಭಾವ ವೃದ್ಧಿಸಲೂ ಸಹಾಯವಾಗುತ್ತದೆ. ದೇವಸ್ಥಾನದೊಳಗೆ ಪ್ರವೇಶಿಸುವ ಮೊದಲು ದೇವಸ್ಥಾನದ ಆವರಣದಿಂದ ದೇವಸ್ಥಾನದ ಕಳಸದ ದರ್ಶನವನ್ನು ಪಡೆದುಕೊಳ್ಳಬೇಕು ಮತ್ತು ಕಳಸಕ್ಕೆ ನಮಸ್ಕಾರ ಮಾಡಬೇಕು ಎಂಬ ಶಾಸ್ತ್ರವಿದೆ. ಹೀಗೆ ಮಾಡುವುದರಿಂದ ಕಳಸದ ತುದಿಯಿಂದ ಹೊರಹೊಮ್ಮಿ ದೂರದ ವರೆಗೆ ಹರಡುವ ಸಾತ್ತ್ವಿಕ ಲಹರಿಗಳು ಕಾರ್ಯನಿರತವಾಗುತ್ತವೆ ಮತ್ತು ಅದರ ಲಾಭವು ದರ್ಶನ ಪಡೆಯುವ ಜೀವಕ್ಕೆ ಆಗುತ್ತದೆ. ಜೀವದ ಸ್ಥೂಲದೇಹದ ಸುತ್ತಲೂ ಕಳಸದಿಂದ ಬರುವ ಸಾತ್ತ್ವಿಕ ಲಹರಿಗಳ ಕವಚ ನಿರ್ಮಾಣವಾಗುವುದರಿಂದ ದೇವಸ್ಥಾನದ ಒಳಗೆ ಪ್ರವೇಶ ಮಾಡಿದ ಬಳಿಕ ಸಿಗುವ ಸಾತ್ತ್ವಿಕ ಲಹರಿಗಳನ್ನು ಆದಷ್ಟು ಅಧಿಕ ಪ್ರಮಾಣದಲ್ಲಿ ಗ್ರಹಣ ಮಾಡುವ ಕ್ಷಮತೆ ಜೀವದಲ್ಲಿ ನಿರ್ಮಾಣವಾಗುತ್ತದೆ. ಹಾಗೆಯೇ ಕಳಸವನ್ನು ನೋಡುವುದರಿಂದ ಜೀವದ ಈಶ್ವರನ ಬಗೆಗಿನ ಭಾವ ಹೆಚ್ಚಾಗಲು ಸಹಾಯವಾಗುತ್ತದೆ’. (ಆಧಾರ: ಸನಾತನದ ಗ್ರಂಥ ‘ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುವ ಮೊದಲಿನ ಕೃತಿಗಳ ಶಾಸ್ತ್ರ’)

ಶ್ರೀ ಭವಾನಿದೇವಿಯ ದೇವಸ್ಥಾನದ ಕಳಸ
ಶ್ರೀ ಮಾರುತಿ ದೇವಸ್ಥಾನದ ಕಳಸ
ಶ್ರೀಸಿದ್ಧಿವಿನಾಯಕ ದೇವಸ್ಥಾನದ ಕಳಸ

ರಾಮನಾಥಿಯ (ಗೋವಾ) ಸನಾತನದ ಆಶ್ರಮವು ವಿಶ್ವಾದ್ಯಂತದ ಸಾಧಕರಿಗೆ ದೀಪಸ್ತಂಭದಂತೆ ಕಾರ್ಯವನ್ನು ಮಾಡುತ್ತದೆ. ಸನಾತನ ಆಶ್ರಮ-ಪರಿಸರದಲ್ಲಿ ಸಪ್ತರ್ಷಿಗಳ ಆಜ್ಞೆಯಂತೆ ಶ್ರೀ ಸಿದ್ಧಿವಿನಾಯಕನ ಮತ್ತು ಶ್ರೀ ಮಾರುತಿಯ ದೇವಸ್ಥಾನ ಮತ್ತು ಶ್ರೀ ವಿದ್ಯಾಚೌಡೇಶ್ವರಿ ದೇವಿಯ ಆಜ್ಞೆಯಿಂದ ಶ್ರೀ ಭವಾನಿದೇವಿಯ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನಗಳ ಮೇಲೆ ಅಳವಡಿಸಲಾಗಿರುವ ಕಳಸಗಳ ರಚನೆಯನ್ನು, ಅವುಗಳಿಂದ ಆಯಾ ದೇವತೆಗಳ ತತ್ತ್ವ(ಚೈತನ್ಯ) ಆದಷ್ಟು ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿಸುವಂತೆ ಮಾಡಲಾಗಿದೆ. ವಿಜ್ಞಾನದ ಮೂಲಕ ಈ ಮೂರೂ ದೇವಸ್ಥಾನಗಳ ಕಳಸಗಳ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ಅಧ್ಯಯನ ಮಾಡಲು ಅವುಗಳನ್ನು ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದ ಮೂಲಕ ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ರೂಪೇಶ ರೇಡಕರ

೧. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿನ ನಿರೀಕ್ಷಣೆಗಳ ವಿಶ್ಲೇಷಣೆ – ಸನಾತನ ಆಶ್ರಮದ ಪರಿಸರದಲ್ಲಿನ ದೇವಸ್ಥಾನಗಳ ಕಳಸಗಳಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

ಸನಾತನ ಆಶ್ರಮದ ಪರಿಸರದಲ್ಲಿರುವ ದೇವಸ್ಥಾನಗಳ ಕಳಸಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇಲ್ಲ. ಅವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ (ಚೈತನ್ಯ) ಇದೆ ಎಂಬುದು ಮುಂದಿನ ಕೋಷ್ಟಕದಿಂದ ತಿಳಿಯುತ್ತದೆ.

ಟಿಪ್ಪಣಿ – ಕೆಲವು ಅನಿವಾರ್ಯ ಕಾರಣಗಳಿಂದ ಪ್ರಾಣಪ್ರತಿಷ್ಠಾಪನೆ ವಿಧಿಯ ಬಳಿಕ ಮತ್ತು ಪರಾತ್ಪರ ಗುರು ಡಾ. ಆಠವಲೆಯವರು ಕಳಸಕ್ಕೆ ಹಸ್ತಸ್ಪರ್ಶ ಮಾಡಿದ ಬಳಿಕ ಕಳಸದ ಪರೀಕ್ಷಣೆಯನ್ನು ಮಾಡಲಾಗಿಲ್ಲ.

ಸೌ. ಮಧುರಾ ಕರ್ವೆ

೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

ಕಳಸಗಳಿಗೆ ಆದಷ್ಟು ವಾತಾವರಣದ ಆರ್ದ್ರತೆಯ ಪರಿಣಾಮವಾಗಬಾರದು ಮತ್ತು ಅವುಗಳ ಚೈತನ್ಯ ಪ್ರಕ್ಷೇಪಿಸುವ ಕ್ಷಮತೆ ಹಾಗೇ ಉಳಿಯಬೇಕೆಂದು ಮೂರೂ ದೇವಸ್ಥಾನಗಳ ಕಳಸಗಳಿಗೆ ‘ಲಾಕರ ಪೇಂಟನ’ (ತುಕ್ಕು ನಿರೋಧಕ ರಸಾಯನದಿಂದ) ಬಣ್ಣವನ್ನು ಹಚ್ಚಲಾಗಿದೆ. ಸಾಧಕರು ದೇವಸ್ಥಾನಗಳ ಕಳಸಗಳ ಬಣ್ಣದ ಕೆಲಸವನ್ನು ಅತ್ಯಂತ ಭಾವಪೂರ್ಣವಾಗಿ ಮಾಡಿರುವುದರಿಂದ ಕಳಸಗಳ ಚೈತನ್ಯದಲ್ಲಿ ಹೆಚ್ಚಳವಾಗಿದೆ. ಪ್ರಾಣಪ್ರತಿಷ್ಠಾಪನೆ ವಿಧಿಯ ಬಳಿಕ ಕಳಸಗಳ ಚೈತನ್ಯದಲ್ಲಿ ಮತ್ತಷ್ಟು ಹೆಚ್ಚಳವಾಯಿತು.

೨ ಅ. ಸಂತರು ಕಳಸಗಳಿಗೆ ಹಸ್ತಸ್ಪರ್ಶ ಮಾಡಿದ ಬಳಿಕ ಆ ಕಳಸಗಳಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿರುವುದರ ಕಾರಣ : ‘ಪರಾತ್ಪರ ಗುರು ಡಾ. ಆಠವಲೆಯವರು ಶ್ರೀ ವಿಷ್ಣುಸ್ವರೂಪ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಬ್ಬರೂ ಶ್ರೀ ಮಹಾಲಕ್ಷ್ಮಿಸ್ವರೂಪರಾಗಿದ್ದಾರೆ’ ಎಂದು ಸಪ್ತರ್ಷಿಗಳು ನಾಡಿಪಟ್ಟಿಯಿಂದ ಹೇಳಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರ ಚೈತನ್ಯಮಯ ಹಸ್ತಸ್ಪರ್ಶದಿಂದ ಶ್ರೀ ಸಿದ್ಧಿವಿನಾಯಕನ ಕಳಸದಲ್ಲಿನ ಶ್ರೀ ಸಿದ್ಧಿವಿನಾಯಕನ ತತ್ತ್ವ ಮತ್ತು ಶ್ರೀ ಭವಾನಿದೇವಿಯ ಕಳಸದಲ್ಲಿನ ದೇವಿತತ್ತ್ವ ಎರಡೂ ತತ್ತ್ವ್ವಗಳು ಜಾಗೃತವಾಗಿ ಕಾರ್ಯನಿರತವಾದವು. ಶ್ರೀಸತ್‌ಶಕ್ತಿ(ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ(ಸೌ.) ಅಂಜಲಿ ಗಾಡಗೀಳ ಇವರ ಚೈತನ್ಯಮಯ ಹಸ್ತಸ್ಪರ್ಶದಿಂದ ಶ್ರೀ ಮಾರುತಿಯ ಕಳಸದಲ್ಲಿನ ಶ್ರೀ ಮಾರುತಿಯ ಮಾರಕತತ್ತ್ವ ಜಾಗೃತವಾಗಿ ಕಾರ್ಯನಿರತವಾಗಿದೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧.೫.೨೦೨೧)

ವಿ-ಅಂಚೆ ವಿಳಾಸ : [email protected]


ಸನಾತನದ ಆಶ್ರಮ ಪರಿಸರದಲ್ಲಿರುವ ಮೂರೂ ದೇವಸ್ಥಾನಗಳ ಕಳಸಗಳಲ್ಲಿ ಮೊದಲಿನಿಂದಲೇ (ಪ್ರಾಣಪ್ರತಿಷ್ಠಾಪನೆ ವಿಧಿಯನ್ನು ಮಾಡುವ ಮೊದಲು) ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ (ಚೈತನ್ಯ) ಇರುವುದರ ಕಾರಣ

ಸದ್ಗುರು (ಡಾ.) ಮುಕುಲ ಗಾಡಗೀಳ

‘ದೇವಸ್ಥಾನದ ಶಿಖರವು (ಕಳಸವು) ಬ್ರಹ್ಮಾಂಡದಲ್ಲಿನ ನಿರ್ಗುಣ ಲಹರಿಗಳನ್ನು ಗ್ರಹಿಸುತ್ತದೆ ಮತ್ತು ಯಾವ ದೇವತೆಯ ದೇವಸ್ಥಾನವಿರುತ್ತದೆಯೋ, ಅದರ ಲಹರಿಗಳು ಶಿಖರದಿಂದ ಪ್ರಕ್ಷೇಪಿಸುತ್ತವೆ’. (ಆಧಾರ : ಸನಾತನದ ಗ್ರಂಥ ‘ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುವ ಮೊದಲಿನ ಕೃತಿಗಳ ಶಾಸ್ತ್ರ’) ಪರಾತ್ಪರ ಗುರು ಡಾ. ಆಠವಲೆಯವರು ಸ್ಪಂದನ ಶಾಸ್ತ್ರಕ್ಕನುಸಾರ ಮತ್ತು ಕಾಲಾನುಸಾರ ‘ದೇವಸ್ಥಾನಗಳ ಕಳಸಗಳ ರಚನೆ ಹೇಗಿರಬೇಕು?’ ಎಂಬುದರ ಬಗ್ಗೆ ಚಿತ್ರಕಾರ ಸಾಧಕಿ ಸೌ. ಜಾಹ್ನವಿ ಶಿಂದೆ ಇವರಿಗೆ ಅಮೂಲ್ಯ ಮಾರ್ಗದರ್ಶನ ಮಾಡಿದರು.

ಸೌ. ಜಾಹ್ನವಿ ಶಿಂದೆ ಇವರು ಸೂಕ್ಷ್ಮ ಸ್ಪಂದನಗಳ ಅಧ್ಯಯನ ಮಾಡಿ ಮೂರೂ ದೇವಸ್ಥಾನಗಳ ಕಳಸಗಳ ಚಿತ್ರಗಳನ್ನು ಬಿಡಿಸಿದರು ಮತ್ತು ಅವುಗಳನ್ನು ಪರಾತ್ಪರ ಗುರು ಡಾಕ್ಟರರಿಗೆ ತೋರಿಸಿದರು. ಅವರು ಮಾಡಿದ ಮಾರ್ಗದರ್ಶನಕ್ಕನುಸಾರ ಆ ಚಿತ್ರಗಳಲ್ಲಿ ಆವಶ್ಯಕವಿರುವ ಬದಲಾವಣೆಗಳನ್ನು ಮಾಡಲಾಯಿತು. ‘ಈ ಕಳಸಗಳ ಚಿತ್ರಗಳಿಂದ ಆಯಾ ದೇವತೆಗಳ ತತ್ತ್ವಗಳು ಪ್ರಕ್ಷೇಪಿಸುತ್ತಿವೆ’ ಎಂಬುದು ಗಮನಕ್ಕೆ ಬಂದ ಮೇಲೆ ಪರಾತ್ಪರ ಗುರು ಡಾಕ್ಟರರು ಆ ಕಳಸಗಳ ಚಿತ್ರಗಳನ್ನು ಅಂತಿಮಗೊಳಿಸಿದರು. ಚಿತ್ರಗಳಲ್ಲಿ ನೀಡಲಾಗಿರುವ ರಚನೆಯಂತೆ (ಆಕಾರದಂತೆ) ಮೂರೂ ದೇವಸ್ಥಾನಗಳ ಕಳಸಗಳನ್ನು ತಾಮ್ರ ಧಾತುವಿನಿಂದ ತಯಾರಿಸಲಾಯಿತು. ಈ ಕಳಸಗಳಿಂದ ಆಯಾ ದೇವತೆಗಳ ತತ್ತ್ವಗಳು (ಚೈತನ್ಯ) ಪ್ರಕ್ಷೇಪಿಸುತ್ತವೆ ಎಂಬುದನ್ನು ಪುನಃ ದೃಢಪಡಿಸಿಕೊಳ್ಳಲಾಯಿತು.

ಇದರ ಪ್ರಮಾಣವು ಪ್ರತಿಯೊಂದು ಕಳಸದಿಂದ ಪ್ರಕ್ಷೇಪಿಸುವ ಪಂಚತತ್ತ್ವಗಳ ಪ್ರಮಾಣದಿಂದ ಸಿಗುತ್ತದೆ. ಈ ಪ್ರಮಾಣವನ್ನು ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ.

ಮೇಲಿನ ಕೋಷ್ಟಕದಿಂದ ಗಮನಕ್ಕೆ ಬರುವುದೇನೆಂದರೆ, ಗಣಪತಿಯಲ್ಲಿ ಪೃಥ್ವಿತತ್ತ್ವದ ಪ್ರಮಾಣ ಹೆಚ್ಚಿರುವುದರಿಂದ ಶ್ರೀ ಸಿದ್ಧಿವಿನಾಯಕನ ದೇವಸ್ಥಾನದ ಕಳಸದಿಂದ ಪ್ರಕ್ಷೇಪಿಸುವ ಪಂಚತತ್ತ್ವಗಳಲ್ಲಿ ಪೃಥ್ವಿತತ್ತ್ವದ ಪ್ರಮಾಣ ಹೆಚ್ಚಿದೆ. ದೇವಿಯಲ್ಲಿ ತೇಜತತ್ತ್ವದ ಪ್ರಮಾಣ ಹೆಚ್ಚಿರುವುದರಿಂದ ಶ್ರೀ ಭವಾನಿದೇವಿಯ ದೇವಸ್ಥಾನದ ಕಳಸದಿಂದ ಪ್ರಕ್ಷೇಪಿಸುವ ಪಂಚತತ್ತ್ವಗಳಲ್ಲಿನ ತೇಜತತ್ತ್ವದ ಪ್ರಮಾಣ ಹೆಚ್ಚಿದೆ. ಮಾರುತಿಯಲ್ಲಿ ವಾಯುತತ್ತ್ವ್ವದ ಪ್ರಮಾಣ ಹೆಚ್ಚಿರುವುದರಿಂದ ಶ್ರೀ ಮಾರುತಿಯ ದೇವಸ್ಥಾನದ ಕಳಸದಿಂದ ಪ್ರಕ್ಷೇಪಿಸುವ ಪಂಚತತ್ತ್ವಗಳಲ್ಲಿ ವಾಯುತತ್ತ್ವದ ಪ್ರಮಾಣ ಹೆಚ್ಚಿದೆ.

– ಸದ್ಗುರು (ಡಾ.) ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ಸನಾತನದ ಆಶ್ರಮದ ಪರಿಸರದಲ್ಲಿನ ಮೂರೂ ದೇವಸ್ಥಾನಗಳ ಕಳಸಗಳ ಆಕಾರ ಮತ್ತು ಅದರಿಂದ ಪ್ರಕ್ಷೇಪಿಸುವ ಸ್ಪಂದನಗಳ ವಿಧ

ಕು. ಮಧುರಾ ಭೋಸಲೆ

‘ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಕಳಸದ ಆಕಾರ ಮೋದಕದಂತಿದ್ದರೆ, ಶ್ರೀ ಭವಾನಿ ದೇವಿಯ ಮತ್ತು ಶ್ರೀ ಮಾರುತಿಯ ದೇವಸ್ಥಾನಗಳ ಕಳಸಗಳ ಆಕಾರ ನಿರಂಜನದ ಜ್ಯೋತಿಯ ಆಕಾರದಂತೆ ಇದೆ. ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನಕ್ಕನುಸಾರ ಸಿದ್ಧಪಡಿಸಲಾದ ಶ್ರೀ ಸಿದ್ಧಿವಿನಾಯಕನ ದೇವಸ್ಥಾನದ ಕಳಸದಿಂದ ‘ಆನಂದ ಮತ್ತು ‘ಭಾವ’ ಇವುಗಳ ಸ್ಪಂದನಗಳು, ಶ್ರೀ ಭವಾನಿದೇವಿಯ ದೇವಸ್ಥಾನದ ಕಳಸದಿಂದ ‘ತಾರಕ ಶಕ್ತಿ’ ಮತ್ತು ‘ಭಾವ’ ಇವುಗಳ ಸ್ಪಂದನಗಳು ಮತ್ತು ಶ್ರೀ ಮಾರುತಿಯ ದೇವಸ್ಥಾನದ ಕಳಸದಿಂದ ‘ಮಾರಕ ಶಕ್ತಿಯ ಸ್ಪಂದನಗಳು ಪ್ರಕ್ಷೇಪಿಸುತ್ತವೆ’.  ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರೆತ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.