ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 2 ಸಾವಿರ 500 ಕ್ಕೂ ಹೆಚ್ಚು ಮಸೀದಿಗಳು ಮತ್ತು ದೇವಸ್ಥಾನಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆದು ಹಾಕಲಾಗಿದೆ. ರಾಜ್ಯದ ಕಾನಪುರ, ಲಕ್ಷ್ಮಣಪುರಿ, ಗೋರಖಪುರ, ಸಂತ ಕಬೀರನಗರ, ಅಜಂಗಢ, ಪಿಲಿಭಿತ್ ಮತ್ತು ಕಾನ್ಪುರದಲ್ಲಿ ಬೃಹತ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಡಿಸೆಂಬರ್ 6 ರಂದು ಮುಂಜಾನೆ 4 ಗಂಟೆಯಿಂದ ಅನುಮತಿಯಿಲ್ಲದೇ ಹಾಕಲಾಗಿದ್ದ, ಹಾಗೆಯೇ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ಶಬ್ದವಿರುವ ಧ್ವನಿವರ್ಧಕದ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಲಾಯಿತು. ಇಡೀ ಕಾರ್ಯಾಚರಣೆಯು ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಮೇಲ್ವಿಚಾರಣೆಯಲ್ಲಿ ನಡೆಯುತ್ತಿತ್ತು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆದೇಶದ ಬಳಿಕ ಕಾರ್ಯಾಚರಣೆ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಡಿಸೆಂಬರ್ 4 ರಂದು ಆನ್ಲೈನ್ ಸಭೆ ನಡೆಸಿ ಅನುಮತಿಯಿಲ್ಲದೇ ಹಚ್ಚಲಾಗಿರುವ ಧ್ವನಿವರ್ಧಕಗಳನ್ನು ಹುಡುಕಿ ಕಾರ್ಯಾಚರಣೆ ನಡೆಸುವಂತೆ ಪೊಲೀಸರಿಗೆ ಆದೇಶ ನೀಡಿದ್ದರು. ಹಾಗೆಯೇ ಅದಕ್ಕೂ ಮುನ್ನ ಮಂದಿರ ಮತ್ತು ಮಸೀದಿಯ ನಿರ್ವಹಣೆ ನೋಡಿಕೊಳ್ಳುವವರನ್ನು ಭೇಟಿ ಮಾಡಿ ತಾವಾಗಿ ತೆಗೆದು ಹಾಕುವಂತೆ ಹೇಳಲು ಸೂಚಿಸಿದ್ದರು. ತದನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಕಾನ್ಪುರದಲ್ಲಿ ಮೌಲಾನರ ವಿರೋಧ
ಕಾನ್ಪುರದಲ್ಲಿ ಪೊಲೀಸರು 24 ಗಂಟೆಗಳಲ್ಲಿ 54 ಧ್ವನಿವರ್ಧಕಗಳನ್ನು ತೆಗೆದಿದ್ದಾರೆ. ಇದಕ್ಕೆ ಮೌಲಾನರು (ಇಸ್ಲಾಂನ ವಿದ್ವಾಂಸರು) ಅಸಮಾಧಾನವನ್ನು ವ್ಯಕ್ತಪಡಿಸಿದರು. ಅವರು, ‘ನಿಯಮಾನುಸಾರ ಅಳವಡಿಸಲಾಗಿದ್ದ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ಸಹ ತೆಗೆದುಹಾಕಲಾಗಿದೆ’, ಆ ಸಂದರ್ಭದಲ್ಲಿ ಯಾವುದೇ ಪೂರ್ವ ಸೂಚನೆ ನೀಡಿಲ್ಲ. ನಾವು ದಿನಕ್ಕೆ 5 ಬಾರಿ 5 ನಿಮಿಷಗಳಿಗಿಂತ ಕಡಿಮೆ ಸಮಯ ಬಳಸಿದರೂ, ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
ನಗರ ಖಾಜಿ (ಇಸ್ಲಾಮಿಕ್ ಕಾನೂನು ತಜ್ಞ ಮತ್ತು ನ್ಯಾಯಾಧೀಶ) ಹಫೀಜ್ ಅಬ್ದುಲ ಖುದ್ದೂಸ ಹಾದಿ ಇವರು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ, ‘ಈ ಹಿಂದೆಯೂ ಪೊಲೀಸರು ಕಾರ್ಯಾಚರಣೆ ನಡೆಸಿದಾಗಲೂ ಎಲ್ಲವೂ ಮಾನದಂಡದ ಪ್ರಕಾರವೇ ನಡೆಯುತ್ತಿತ್ತು ಒಂದು ವೇಳೆ ನಿಯಮಾನುಸಾರ ಇದ್ದರೆ ಅವುಗಳನ್ನು ತೆಗೆದುಹಾಕಬಾರದು’ ಎಂದು ಹೇಳಿದರು.
ಸಂಪಾದಕೀಯ ನಿಲುವು
|