ಸಾಧಕಿಗೆ ಕೈಲಾಸ ಪರ್ವತದಲ್ಲಿ ಮತ್ತು ಮಾನಸರೋವರದ ಬಗ್ಗೆ ಬಂದ ಅನುಭೂತಿ

ಸಾಧಕಿಗೆ ಕೈಲಾಸ ಪರ್ವತ ಮತ್ತು ಮಾನಸರೋವರದ ದರ್ಶನ ಪಡೆಯುವ ಇಚ್ಛೆಯಾದ ಕಾರಣ ಅವಳು ಸೂಕ್ಷ್ಮದಲ್ಲಿ ಕೈಲಾಸಕ್ಕೆ ಪ್ರದಕ್ಷಿಣೆ ಹಾಕುವುದು ಮತ್ತು ಪರಾತ್ಪರ ಗುರು ಡಾಕ್ಟರರಿಗೆ ಪ್ರದಕ್ಷಿಣೆ ಹಾಕಿ ‘ಗುರುಚರಣಗಳಲ್ಲಿಯೆ ಎಲ್ಲ ತೀರ್ಥಗಳು ಮತ್ತು ಸಪ್ತಲೋಕಗಳಿವೆ’, ಎಂದು ಭಗವಾನ ಶಿವನು ಹೇಳುವುದು

ಸೌ. ಧನಶ್ರೀ ಕೇಳಶಿಕರ್‌

೧. ಕೈಲಾಸ ಪರ್ವತದ ಚಿತ್ರವನ್ನು ನೋಡಿದಾಗ ‘ಕೈಲಾಸ ಪರ್ವತ ಮತ್ತು ಮಾನಸರೋವರ’ದ ದರ್ಶನ ಪಡೆಯುವ ಇಚ್ಛೆಯುಂಟಾಗಿ ಸೂಕ್ಷ್ಮದಲ್ಲಿ ದರ್ಶನ ಪಡೆಯುವುದು : ‘ಒಮ್ಮೆ ನಾನು ಕೈಲಾಸ ಪರ್ವತದ ಚಿತ್ರವನ್ನು ನೋಡಿದಾಗ ‘ಕೈಲಾಸ ಪರ್ವತ ಮತ್ತು ಮಾನಸರೋವರದ ದರ್ಶನ ಪಡೆಯಬೇಕು’, ಎಂದು ಇಚ್ಛೆಯಾಯಿತು. ಅನಂತರ ೨-೩ ದಿನ ನಾನು ಸೂಕ್ಷ್ಮದಲ್ಲಿ ಕೈಲಾಸ ಪರ್ವತಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದೆ. ಅಲ್ಲಿ ಭಗವಾನ ಶಿವ, ಪಾರ್ವತಿ, ಶ್ರೀ ಗಣಪತಿ, ಶ್ರೀ ಕಾರ್ತಿಕೇಯ ಮತ್ತು ನಂದಿ ಇವರನ್ನು ಭೇಟಿಯಾಗಿ ಮನಃಪೂರ್ವಕ ಎಲ್ಲರ ಪೂಜೆ ಮಾಡುತ್ತಿದ್ದೆ. ಆಗ ತುಂಬಾ ಆನಂದವಾಗುತ್ತಿತ್ತು.

೨. ಓರ್ವ ಶಿವಭಕ್ತರು ಕೈಲಾಸ ಪರ್ವತದ ವಿಭೂತಿ, ಮಾನಸರೋವರದ ತೀರ್ಥ ಮತ್ತು ‘ಕೈಲಾಸ ಪ್ರದಕ್ಷಿಣೆ’, ಈ ಗ್ರಂಥವನ್ನು ತಂದು ಕೊಡುವುದು : ಅನಂತರ ೨-೩ ದಿನಗಳಲ್ಲಿ ಓರ್ವ ಶಿವಭಕ್ತರು ಕೈಲಾಸ ಪರ್ವತದ ವಿಭೂತಿ, ಮಾನಸರೋವರದ ತೀರ್ಥ ಮತ್ತು ‘ಕೈಲಾಸ ಪ್ರದಕ್ಷಿಣೆ’, ಈ ಗ್ರಂಥವನ್ನು ನೀಡಿದರು. ೨೭ ಸಲ ಕೈಲಾಸ ಮಾನಸರೋವರದ ಪ್ರದಕ್ಷಿಣೆ ಹಾಕಿರುವ ಶ್ರೀ. ಶಂಕರ ವೈದ್ಯ ಇವರು ಈ ಗ್ರಂಥವನ್ನು ಬರೆದಿದ್ದರು. ನನಗೆ ಇದು ಒಂದು ದೊಡ್ಡ ಅನುಭೂತಿಯಾಗಿತ್ತು. ಕೈಲಾಸ ಪ್ರದಕ್ಷಿಣೆಗೆ ಹೋಗುವ ಮೊದಲೇ ದೇವರು ನನಗೆ ಪ್ರಸಾದ ಮತ್ತು ಆಶೀರ್ವಾದ ಕೊಟ್ಟಿದ್ದರು.

೩. ಭಗವಾನ ಶಿವನು ‘ಇಂದು ನಾನು ಕೂಡ ನಿನ್ನ ಜೊತೆಗೆ ಪ್ರದಕ್ಷಿಣೆ ಹಾಕುವೆನು’, ಎಂದು ಹೇಳಿ ಮಾತಾ ಪಾರ್ವತಿ, ಶ್ರೀಗಣಪತಿ, ಶ್ರೀ ಕಾರ್ತಿಕೇಯ ಮತ್ತು ನಂದಿ ಇವರ ಜೊತೆಗೆ ಪರಾತ್ಪರ ಗುರುದೇವರಿಗೆ ಪ್ರದಕ್ಷಿಣೆ ಹಾಕಲು ಆರಂಭಿಸುವುದು : ಅನಂತರ ನಾನು ನಿತ್ಯದಂತೆ ಕೈಲಾಸ ಪರ್ವತಕ್ಕೆ ಸೂಕ್ಷ್ಮದಿಂದ ಪ್ರದಕ್ಷಿಣೆ ಹಾಕತೊಡಗಿದೆ. ಅಲ್ಲಿ ‘ಶಿವ-ಪಂಚಾಯತನ’ವೂ ಇತ್ತು. ಭಗವಾನ ಶಿವನು ನನಗೆ ಹೇಳಿದನು, ‘ಇಂದು ನಾನು ಕೂಡ ನಿನ್ನ ಜೊತೆಗೆ ಪ್ರದಕ್ಷಿಣೆ ಹಾಕುವೆನು.’ ‘ಶಿವ-ಪಂಚಾಯತನ’ದ ಮಾತೆ ಪಾರ್ವತಿ, ಶ್ರೀ ಗಣಪತಿ, ಶ್ರೀ ಕಾರ್ತಿಕೇಯ ಮತ್ತು ನಂದಿ ಇವರು ಕೂಡ ನನ್ನ ಜೊತೆಗೆ ಕೈಲಾಸ ಪ್ರದಕ್ಷಿಣೆ ಹಾಕುವ ಇಚ್ಛೆಯನ್ನು ವ್ಯಕ್ತಪಡಿಸಿದರು. ನಂತರ ಭಗವಾನ ಶಿವನು ಸೂಕ್ಷ್ಮ ರೂಪದಲ್ಲಿ ನಮ್ಮನ್ನು ರಾಮನಾಥಿ ಆಶ್ರಮದಲ್ಲಿ ಪರಾತ್ಪರ ಗುರುದೇವರ ಕೋಣೆಗೆ ಕರೆದುಕೊಂಡು ಹೋದನು. ಭಗವಾನ ಶಿವನು ಕೋಣೆಯ ಹೊರಗೆ ನಿಂತುಕೊಂಡು ಒಳಗೆ ಹೋಗಲು ಅನುಮತಿಯನ್ನು ಪಡೆದನು. ನಂತರ ನಾವು ಎಲ್ಲರೂ ಒಳಗೆ ಹೋಗಿ ಕುರ್ಚಿಯಲ್ಲಿ ಕುಳಿತಿರುವ ಪರಾತ್ಪರ ಗುರುದೇವರಿಗೆ ಅತ್ಯಂತ ಶರಣಾಗತಭಾವದಲ್ಲಿ ಪ್ರದಕ್ಷಿಣೆ ಹಾಕಿದೆವು.

ಭಗವಾನ ಶಿವನು ವರ್ಣಿಸಿದ ಗುರುಚರಣಗಳ ಮಹತ್ವ !

ಭಗವಾನ ಶಿವನು ನನಗೆ ಹೇಳಿದನು, ‘ನಿನ್ನ ಗುರುಗಳ ಚರಣಗಳ ಹೆಬ್ಬೆರಳಿನಲ್ಲಿಯೇ ಎಲ್ಲ ತೀರ್ಥಗಳ ಸಮಾವೇಶವಿದೆ. ಸಪ್ತಲೋಕಗಳ ಎಲ್ಲ ಲೋಕಗಳು ಅವರ ಚರಣಗಳಲ್ಲಿಯೇ ಇವೆ, ಆದ್ದರಿಂದ ನೀನು ಇನ್ನೂ ಏನನ್ನು ಹುಡುಕುತ್ತಿದ್ದೀ ? ಗುರುಚರಣಗಳಿಗೆ ಸಂಪೂರ್ಣ ಶರಣಾಗಿ ತನು, ಮನ ಮತ್ತು ಬುದ್ಧಿಯನ್ನು ತ್ಯಾಗ ಮಾಡಿದರೆ, ನಿನಗೆ ಬೇರೆ ಎಲ್ಲಿಗೂ ಹೋಗುವ ಅವಶ್ಯಕತೆಯಿಲ್ಲ.’ ಈ ಅನುಭೂತಿಯು ಗುರುಗಳ ಮಹತ್ವವನ್ನು ದೃಢಗೊಳಿಸಲು ಮತ್ತು ನನ್ನ ಮನಸ್ಸನ್ನು ಗುರುಚರಣಗಳಲ್ಲಿ ಸ್ಥಿರಗೊಳಿಸಲಿಕ್ಕಾಗಿಯೆ ಇತ್ತು. ಅನಂತರ ನಾನು ಗುರುದೇವರಲ್ಲಿ ಕ್ಷಮೆ ಯಾಚಿಸಿದೆನು. ‘ಹೇ ಗುರುದೇವರೆ, ನನ್ನಂತಹ ಕ್ಷುದ್ರ ಜೀವಕ್ಕೆ ನಿಮ್ಮ ಅವತಾರತ್ವದ ಬಗ್ಗೆ ತಿಳಿಯುವುದಿಲ್ಲ, ಆದರೂ ನೀವು ನನ್ನ ಮೇಲೆ ನಿರಂತರ ಕೃಪೆಯನ್ನು ತೋರಿಸುತ್ತೀರಿ.’ ಈ ಅನುಭೂತಿಯನ್ನು ನೀಡಿದ್ದಕ್ಕಾಗಿ ನಾನು ನಿಮ್ಮ ಶ್ರೀ ಚರಣಗಳಿಗೆ ಪುಷ್ಪಗಳನ್ನು ಅರ್ಪಿಸುತ್ತೇನೆ

– ಸೌ. ಧನಶ್ರೀ ಪ್ರದೀಪ ಕೇಳಶಿಕರ್, ಠಾಣೆ, ಮಹಾರಾಷ್ಟ್ರ. (೫.೯.೨೦೧೮)