ನಿಜವಾದ ಅರ್ಥದಲ್ಲಿ ಧರ್ಮದ ವಿಜಯವಾಗಲು, ‘ಹಿಂದೂ ರಾಜ್ಯದ ಸ್ಥಾಪನೆಯ ಧ್ಯೇಯವಿಟ್ಟು ಕೃತಿಶೀಲರಾಗಿ

. ‘ಹೇ ಆರ್ಯರೇ, ಹೇ ಹಿಂದೂಗಳೇ !  ಯಾವ ಧರ್ಮವು ಸಂಪೂರ್ಣ ವಿಶ್ವಕ್ಕೆ ‘ಬದುಕಿರಿ ಮತ್ತು ಬದುಕಲು ಬಿಡಿ, ಎಂಬ ಸಂದೇಶವನ್ನು ಎಲ್ಲಕ್ಕಿಂತ ಮೊದಲು ನೀಡಿತೋ, ಹಾಗೆಯೇ ಯಾವ ಧರ್ಮವು ಸಂಪೂರ್ಣ ವಿಶ್ವಕ್ಕೆ ಸಮಾನತೆ, ಮಾನವೀಯತೆ, ಸಹಜೀವನಯಂತಹ ಮಾನವತೆಯ ಉಚ್ಚ ಆದರ್ಶಗಳನ್ನು ನೀಡಿತೋ, ಅದು ಹಿಂದೂ ಧರ್ಮವೇ ಆಗಿದೆ ಮತ್ತು ನೀವು ಅಂತಹ ವಿಶ್ವದಲ್ಲಿನ ಸರ್ವಶ್ರೇಷ್ಠ, ಎಲ್ಲರಿಗಿಂತ ಪ್ರಾಚೀನ ಧರ್ಮದವರಾಗಿದ್ದೀರಿ, ನೀವು ಇದನ್ನು ಮರೆಯಬೇಡಿರಿ. ಇಂದು ಜಗತ್ತಿನಲ್ಲಿ ಕಂಡುಬರುವ ಅಲ್ಪಸ್ವಲ್ಪ ಮಾನವೀಯತೆಯು ವೇದಗಳಿಂದ ದೊರಕಿದ ಜ್ಞಾನವಾಗಿದೆ ಮತ್ತು ಅದು ಹಿಂದೂಗಳ ಐಕ್ಯತೆಯ ಮುಖ್ಯ ಆಧಾರವೂ ಆಗಿದೆ.

೨. ಒಂದು ವೇಳೆ ಹಿಂದೂಗಳಿಗೆ ತಮ್ಮ ಧರ್ಮ, ಸಂಸ್ಕೃತಿ, ದೇಶದ ರಕ್ಷಣೆ ಮತ್ತು ಸಂವರ್ಧನೆ ಬೇಕಾಗಿದ್ದರೆ, ಪ್ರತಿಯೊಬ್ಬ ಹಿಂದೂವು ತನ್ನ ಅಂತಃಕರಣದಲ್ಲಿ ಧರ್ಮರಕ್ಷಣೆಯ ವ್ರತವನ್ನು ತೆಗೆದುಕೊಳ್ಳಬೇಕು ಮತ್ತು ತನ್ನ ಯೋಗ್ಯತೆಗನುಸಾರ ಧರ್ಮರಕ್ಷಣೆಯ ವಿವಿಧ ಕಾರ್ಯಗಳಲ್ಲಿ ಸಹಾಯ ಮಾಡಬೇಕು; ಏಕೆಂದರೆ ಸದ್ಯದ ಸ್ಥಿತಿಯಲ್ಲಿ ಧರ್ಮರಕ್ಷಣೆಯ ಜವಾಬ್ದಾರಿಯು ಕೇವಲ ಸೈನ್ಯ, ಸರಕಾರ ಮತ್ತು ಕ್ಷತ್ರೀಯರೆಂದು ಅನಿಸಿಕೊಳ್ಳುವ ಜಾತಿ ಇವರ ಮೇಲಷ್ಟೇ ಇಲ್ಲ, ಅದು ಪ್ರತಿಯೊಬ್ಬ ಹಿಂದೂವಿನ ಮೇಲಿದೆ. ನಮಗೆ ನಮ್ಮ ಅಸ್ತಿತ್ವದ ಹೋರಾಟವನ್ನು ನಾವೇ ಹೋರಾಡಬೇಕಾಗಿದೆ. ನಮ್ಮ ಪೂರ್ವಜರು ನಮ್ಮ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಸಂಘರ್ಷ ಮಾಡಿ ನಮ್ಮನ್ನು ರಕ್ಷಿಸಿದ್ದಾರೆ. ಆದುದರಿಂದ ನಮ್ಮ ಭಾವಿ ಪೀಳಿಗೆಯ ರಕ್ಷಣೆಗಾಗಿ ತ್ಯಾಗ, ಸಂಘರ್ಷ ಮತ್ತು ಬಲಿದಾನ ಮಾಡುವುದು, ನಮ್ಮ ಕರ್ತವ್ಯವೇ ಆಗಿದೆ. ಅದಕ್ಕಾಗಿ ಸಂಪ್ರದಾಯ, ರಾಷ್ಟ್ರಭಾಷೆ, ಮಾತೃಭಾಷೆ, ಜಾತಿ, ಉಪಜಾತಿ, ಕ್ಷೇತ್ರ, ಪ್ರಾಂತ ಮುಂತಾದ ಭೇದಭಾವಗಳನ್ನು ಮರೆತು ಧರ್ಮರಕ್ಷಣೆಯ ಸಂಕಲ್ಪವನ್ನು ಮಾಡಿ ರಚನಾತ್ಮಕ ಕಾರ್ಯಕ್ಕಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಐಕ್ಯತೆಯ ಭಾವನೆಯು ಹೆಚ್ಚಾಗುವುದು, ರಾಷ್ಟ್ರಭಕ್ತಿ ಜಾಗೃತವಾಗುವುದು ಮತ್ತು ರಾಷ್ಟ್ರೀಯ ಐಕ್ಯತೆ ಮತ್ತು ಅಖಂಡತೆಯು ಸುರಕ್ಷಿತವಾಗಿರುವುದು.

. ‘ನಾವು ವೈಯಕ್ತಿಕ ಸ್ವಾರ್ಥ, ಪದವಿ, ಮಾನ-ಸನ್ಮಾನದ ಪ್ರಲೋಭನೆ ಮತ್ತು ಆರ್ಥಿಕ ಲಾಭವನ್ನು ತ್ಯಜಿಸಿ  ಹಾಗೆಯೇ ರಾಜಕೀಯ ಪಕ್ಷಗಳಲ್ಲಿ ಸಿಲುಕಿಕೊಳ್ಳದೇ, ಭಾರತದಲ್ಲಿ ಸಮತಾವಾದಿ ಮತ್ತು ಮಾನವತಾವಾದಿ ಹಿಂದೂ ರಾಜ್ಯವನ್ನು ಸ್ಥಾಪಿಸಲು ಎಲ್ಲರೂ ಒಂದಾಗಿ ಕಾರ್ಯನಿರತರಾಗೋಣ ! ಸದ್ಯದ ಸ್ಥಿತಿಯಲ್ಲಿ ಹಿಂದೂ ಧರ್ಮ, ಸಂಸ್ಕೃತಿ, ಹಿಂದೂಗಳ ಅಸ್ತಿತ್ವದ ರಕ್ಷಣೆ, ಇತರ ಎಲ್ಲ ಸಮಸ್ಯೆಗಳು ಮತ್ತು ಸವಾಲುಗಳಿಗೆ ಒಂದೇ ಒಂದು ಉತ್ತರ ಮತ್ತು ಉಪಾಯವೆಂದರೆ ಭಾರತದಲ್ಲಿ ‘ಹಿಂದೂ ರಾಜ್ಯವನ್ನು ಸ್ಥಾಪಿಸುವುದು, ಇದಕ್ಕಾಗಿ ಈಗಿನಿಂದಲೇ ಪ್ರಯತ್ನಿಸದಿದ್ದರೆ ನಂತರ, ‘ಹಿಂದೂ ರಾಜ್ಯ ಬರಲು ಅತ್ಯಂತ ಕಠಿಣವಾಗಬಹುದು.

(ಆಧಾರ : ‘ಸಾವರಕರ ಟೈಮ್ಸ್, ಮೇ ೨೦೧೦)