ಕೇಸರೀಕರಣದ ಗುಮ್ಮ!

ಹಿಂದೂದ್ವೇಷದಿಂದಾಗಿ ಕಪೋಲಕಲ್ಪಿತ ಕೇಸರೀಕರಣದ ಹುಯಿಲೆಬ್ಬಿಸುವವರ ವಿರುದ್ಧ ಕ್ರಮಕೈಗೊಳ್ಳುವುದು ಅವಶ್ಯಕವಾಗಿದೆ

ಯಾವುದಾದರೂ ವಿಚಾರಧಾರೆಯನ್ನು ತರ್ಕದ ಆಧಾರದಲ್ಲಿ ಪ್ರತಿವಾದ ಮಾಡಲು ಸಾಧ್ಯವಾಗದಿದ್ದಾಗ, ಅದರ ತೇಜೋವಧೆಗಾಗಿ ಅಪಪ್ರಚಾರದ ತಂತ್ರವನ್ನು ಅವಲಂಬಿಸಲಾಗುತ್ತದೆ. ಭಾರತದಲ್ಲಿರುವ ಜಾತ್ಯತೀತವಾದಿಗಳು, ಪ್ರಗತಿ(ಅಧೋಗತಿ)ಪರರು ಮತ್ತು ಅವರಿಗೆ ರಕ್ಷಣೆ ನೀಡುವ ಕಾಂಗ್ರೆಸ್ಸಿನ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಹೀಗೆಯೇ ಆಗಿದೆ. ಹಿಂದೂದ್ವೇಷದಿಂದ ತುಂಬಿಕೊಂಡಿರುವ ಜಾತ್ಯತೀತವಾದಿಗಳು ‘ಹಿಂದೂ ಪ್ರೊಪಗಂಡಾ'(ಪ್ರಚಾರತಂತ್ರ) ಮಾಡುತ್ತಿರುತ್ತಾರೆ, ಹಾಗೆಯೇ ಕೇಸರೀಕರಣದ ತಥಾಕಥಿತ ಆರೋಪವನ್ನು ಮಾಡುತ್ತಾರೆ. ಕಾಂಗ್ರೆಸ್ಸಿನ ಮುಖಂಡರು ಕೇಸರಿ ಭಯೋತ್ಪಾದನೆಯ ಕಪೋಲಕಲ್ಪಿತ ಕಥೆಗಳನ್ನು ಕಟ್ಟಿ ಅದನ್ನು ಹೇಳುತ್ತಾ ತಿರುಗುತ್ತಾರೆ. ಆದರೆ ಇದೆಲ್ಲದರ ಪೊಳ್ಳುತನ ಮಾತ್ರ ಮೇಲಿಂದ ಮೇಲೆ ಬಹಿರಂಗವಾಗುತ್ತದೆ. ಇತ್ತೀಚೆಗೆ ಲಕ್ಷದ್ವೀಪದ ಶಾಲೆಗಳಲ್ಲಿ ಮಧ್ಯಾಹ್ನದ ಭೋಜನದಿಂದ ಮಾಂಸಾಹಾರವನ್ನು ತೆಗೆದುಹಾಕಿದ್ದರ ವಿರುದ್ಧ ಜಾತ್ಯತೀತವಾದಿಗಳು ಸಲ್ಲಿಸಿದ್ದ ದೂರನ್ನು ಕೇರಳ ಉಚ್ಚನ್ಯಾಯಾಲಯವು ತಿರಸ್ಕರಿಸಿತ್ತು. ಲಕ್ಷದ್ವೀಪ ಸರಕಾರವು ಅಲ್ಲಿಯ ಶಾಲೆಗಳಲ್ಲಿ ಮಧ್ಯಾಹ್ನದ ಭೋಜನದಿಂದ ಮಾಂಸಾಹಾರವನ್ನು ತೆಗೆದುಹಾಕುವ ನಿರ್ಣಯವನ್ನು ತೆಗೆದುಕೊಂಡಿತ್ತು. ಈ ನಿರ್ಣಯದ ವಿರುದ್ಧ ದೇಶಾದ್ಯಂತದ ಜಾತ್ಯತೀತವಾದಿಗಳು ‘ಕೇಂದ್ರ ಸರಕಾರವು ಲಕ್ಷದ್ವೀಪದ ಕೇಸರಿಕರಣ ಮಾಡಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದ್ದರು. ಕೇರಳ ಉಚ್ಚ ನ್ಯಾಯಾಲಯದ ನಿರ್ಣಯವು ಜಾತ್ಯತೀತವಾದಿಗಳ ಟೊಳ್ಳುತನವನ್ನು ಬಹಿರಂಗಪಡಿಸಿತು.

ಮಿಥ್ಯಾರೋಪಗಳ  ಸರಮಾಲೆ!

ಕೇಂದ್ರದಲ್ಲಿ ರಾಷ್ಟ್ರಪ್ರೇಮಿ ಭಾಜಪ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣದಂತಹ ಮಹತ್ವದ ಕ್ಷೇತ್ರದಲ್ಲಿ ರಾಷ್ಟ್ರಹಿತಕ್ಕೆ ಅನುಗುಣವಾಗಿ ಬದಲಾವಣೆ ಮಾಡಿತು. ಇದರಿಂದ ಅನೇಕ ದಶಕಗಳಿಂದ ಮುಂದುವರಿದಿದ್ದ ಕಾಂಗ್ರೆಸ್ಸಿನ ಹಸಿರುಕರಣದ ಮತ್ತು ತಥಾಕಥಿತ  ಜಾತ್ಯತೀತವಾದಿಗಳ ಪರಂಪರೆ ಅಪಾಯಕ್ಕೆ ಸಿಲುಕಿತು. ಇದರಿಂದ ಕಂಗೆಟ್ಟ ಜಾತ್ಯತೀತವಾದಿಗಳು ಮತ್ತು ಕಾಂಗ್ರೆಸ್ಸಿನ ಮುಖಂಡರು ಕೇಂದ್ರ ಸರಕಾರದ ನಿರ್ಣಯಕ್ಕೆ ಕೇಸರೀಕರಣದ ಲೇಬಲ್ ನೀಡಲು ಪ್ರಾರಂಭಿಸಿದರು. ಕೇಂದ್ರ ಸರಕಾರವು ಮೊಗಲರನ್ನು ಹೊಗಳುವ ಇತಿಹಾಸವನ್ನು ಬದಲಾಯಿಸಿ ಹಿಂದೂ ರಾಜರುಗಳ ಇತಿಹಾಸವನ್ನು ಪಠ್ಯಕ್ರಮದಲ್ಲಿ ಸಮಾವೇಶಗೊಳಿಸಿದಾಗ ‘ಇತಿಹಾಸದ ಕೇಸರೀಕರಣ ಪ್ರಾರಂಭಿಸಲಾಗಿದೆಯೆಂದು’ ಹುಯಿಲೆಬ್ಬಿಸಿದರು. ಶಾಲೆಗಳಲ್ಲಿ ಭಗವದ್ಗೀತೆಯ ಶ್ಲೋಕವನ್ನು ಕಲಿಸುವ ನಿರ್ಣಯವನ್ನು ತೆಗೆದುಕೊಂಡಾಗ ‘ಶಿಕ್ಷಣದ ಕೇಸರೀಕರಣ’ ಎಂದು ಅದನ್ನು ವಿರೋಧಿಸಿದರು. ಕೆಲವು ದಿನಗಳ ಹಿಂದೆ ಭಾರತೀಯ ಸೈನ್ಯಾಧಿಕಾರಿಗಳಿಗೆ ಭಗವದ್ಗೀತೆ ಮತ್ತು ಕೌಟಿಲ್ಯ ಅರ್ಥಶಾಸ್ತ್ರವನ್ನು ಕಲಿಸುವಂತೆ ಶಿಫಾರಸ್ಸು ಮಾಡಲಾಗಿತ್ತು. ಇದನ್ನು ವಿರೋಧಿಸಲು ಕಾಂಗ್ರೆಸ್ ತಕ್ಷಣವೇ ಮುಂದಾಯಿತು. ‘ಸೈನ್ಯದ ರಾಜಕೀಕರಣ ಮಾಡಬಾರದು’ ಎಂದು ಸುಳ್ಳು ಆರೋಪವನ್ನು ಹೊರಿಸಲು ಪ್ರಾರಂಭಿಸಿತು. ಈ ಸುಳ್ಳು ಆರೋಪದ ಕುರಿತು ಸ್ವಲ್ಪದರಲ್ಲಿ ಹೇಳುವುದಾದರೆ ಮತ್ತೊಮ್ಮೆ ಹಿಂದೂಗಳ ಧರ್ಮಗ್ರಂಥಗಳನ್ನು ಅಂದರೆ ಕಾಂಗ್ರೆಸ್-ಜಾತ್ಯತೀತವಾದಿಗಳ ಭಾಷೆಯಲ್ಲಿ ಕೇಸರಿಕರಣವನ್ನು ವಿರೋಧಿಸಿದರು. ಹಾಗೆಯೇ ‘ಮುಸಲ್ಮಾನ ಸೈನಿಕರಿಂದಾಗಿ ಕಾರ್ಗಿಲ್ ಯುದ್ಧದಲ್ಲಿ ಜಯ ಸಿಕ್ಕಿತು’ ಎಂದು ಹೇಳಿ, ತಾವು ಮಾತ್ರ ಸೈನ್ಯಕ್ಕೆ ಕೋಮುಬಣ್ಣ ನೀಡಲು ಕಾಂಗ್ರೆಸ್‌ನವರು ಮರೆಯಲಿಲ್ಲ. ಒಟ್ಟಾರೆ ಹೇಳುವುದೇನೆಂದರೆ, ದೇಶದಲ್ಲಿ ಸದ್ಯ ಕೇಸರೀಕರಣದ ಆರೋಪದಡಿಯಲ್ಲಿ ಹಿಂದೂದ್ವೇಷ ಬಹಿರಂಗವಾಗಿ ಮುಂದುವರಿದಿದೆ. ಸುಳ್ಳು ಆರೋಪಗಳ ಸರಮಾಲೆಯೇ ಮುಂದುವರಿದಿದೆ. ಈ ಮೂಲಕವಾದರೂ ಅಲ್ಪಸಂಖ್ಯಾತರ ಮತಗಳು ದೊರೆತು ಕಳೆದುಕೊಂಡಿರುವ ಅಧಿಕಾರ ಮರಳಿ ಸಿಗುವುದೇ? ಎಂದು ಕಾಂಗ್ರೆಸ್‌ನವರ ಚಡಪಡಿಕೆ ಪ್ರಾರಂಭವಾಗಿದೆ. ಸತ್ಯ ಇತಿಹಾಸವನ್ನು ಕಲಿಸುವುದು ಮತ್ತು ವ್ಯಕ್ತಿಯ ಉತ್ಕರ್ಷವನ್ನು ಮಾಡುವ ಶಿಕ್ಷಣವನ್ನು ನೀಡುವುದನ್ನು ಯಾರಾದರೂ ಕೇಸರೀಕರಣ ಎಂದು ಹೇಳುತ್ತಿದ್ದರೆ, ಹಾಗೆ ಹೇಳುವವರ ಉದ್ದೇಶದ ಮೇಲೆ ಪ್ರಶ್ನೆಚಿಹ್ನೆ ಮೂಡುತ್ತದೆ.

ಕೇಸರೀಕರಣದ ಹುಯಿಲೆಬ್ಬಿಸುವವರ ಬಣ್ಣ!

ಕೇಸರೀಕರಣದ ಗುಮ್ಮನನ್ನು ಸೃಷ್ಟಿಸುವ ಜಾತ್ಯತೀತವಾದಿಗಳು ಮತ್ತು ಕಾಂಗ್ರೆಸ್‌ನವರ ನಡುವಳಿಕೆಯು ಅವರ ನಿಷ್ಠೆ ಯಾವ ಬಣ್ಣದೊಂದಿಗೆ ಇದೆ? ಎಂದು ತೋರಿಸುತ್ತದೆ. ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರಕಾರ ‘ಭಾಜಪವು ಇತಿಹಾಸದ ಕೇಸರೀಕರಣ ಮಾಡಿತು. ಈಗ ನಾವು ಅದನ್ನು ಸುಧಾರಿಸುತ್ತೇವೆ’ ಎಂದು ನಾಟಕವಾಡಿತು. ಸ್ವಾತಂತ್ರ್ಯವೀರ ಸಾವರಕರ ಇವರನ್ನು ‘ದೇಶಭಕ್ತ’ ಮತ್ತು ‘ಕ್ರಾಂತಿವೀರ’ ಎನ್ನುವ ಉಲ್ಲೇಖವನ್ನು ತೆಗೆದುಹಾಕಿ ಅವರನ್ನು ‘ಕ್ಷಮೆಯಾಚಿಸುವ’ ಎನ್ನುವ ಆಕ್ರೋಶಗೊಳ್ಳುವಂತೆ ಉಲ್ಲೇಖಿಸಿತು. ಹೀಗೆ ಮಾಡಿದ ಕಾಂಗ್ರೆಸ್ ತನ್ನ ಹಿಂದೂದ್ವೇಷಿ ಮುಖವಾಡವನ್ನು ತಾನೇ ಬಹಿರಂಗಪಡಿಸಿದೆ. ನಿಜ ಹೇಳಬೇಕೆಂದರೆ ಸತ್ಯ ಇತಿಹಾಸವನ್ನು ಹೇಳದಿರುವ ರಾಜಕೀಯ ಷಡ್ಯಂತ್ರವು ಗಾಂಧಿ-ನೆಹರೂರವರ ಕಾಲದಿಂದ ಪ್ರಾರಂಭವಾಗಿದೆ. ಮತಾಂಧತೆಯ ಆಧಾರದಲ್ಲಿ ಎಷ್ಟೋ ಪ್ರಕರಣಗಳು ದೇಶದಲ್ಲಿ ಜರುಗುತ್ತವೆ; ಆದರೆ ಜಾತ್ಯತೀತವಾದಿಗಳು ಮತ್ತು ಕಾಂಗ್ರೆಸ್ಸಿನವರು ಇಂತಹ ಪ್ರಕರಣಗಳ ವಿಷಯದಲ್ಲಿ ಯಾವತ್ತೂ ಮಾತನಾಡುವುದಿಲ್ಲ; ನಿರ್ಲಕ್ಷಿಸುತ್ತಾರೆ. ಏಕೆಂದರೆ ಅವರು ಹಿಂದೂಗಳಾಗಿರುವುದಿಲ್ಲ. ಸ್ವಾತಂತ್ರ್ಯದ ನಂತರ ಹಿಂದೂ ಧರ್ಮ, ಭಾಷೆ ಮತ್ತು ಇತಿಹಾಸಕ್ಕಾಗಿರುವ ದುರ್ದೆಶೆಯು ಆಂಗ್ಲರ ಆಳ್ವಿಕೆಯ ಕಾಲಾವಧಿಯಲ್ಲಿಯೂ ಆಗಿರಲಿಲ್ಲ. ಸಾಮ್ಯವಾದಿ ಮತ್ತು ಕಾಂಗ್ರೆಸ್ ಇವರ ಪ್ರಭಾವದಿಂದ ದೇಶದಲ್ಲಿರುವ ಶಿಕ್ಷಣಗಳಲ್ಲಿ ಹಿಂದೂ ಧರ್ಮವನ್ನು ತ್ಯಾಜ್ಯವೆಂದು ನಿರ್ಧರಿಸಲಾಯಿತು. ಹಿಂದೂ ಧರ್ಮ ಮತ್ತು ಅದರ ಚೇತನವನ್ನು ಕೀಳಾಗಿ ಪರಿಗಣಿಸುವುದು ಮತ್ತು ಮುಸಲ್ಮಾನರನ್ನು ಮೇಲ್ದರ್ಜೆಗೇರಿಸುವುದು ಈ ಧೋರಣೆಯನ್ನು ಕಾಂಗ್ರೆಸ್ ಸ್ವೀಕರಿಸಿತು. ಅದನ್ನೇ ಕಲಿಸುವ ದೃಷ್ಟಿಕೋನದಿಂದ ಪಠ್ಯಪುಸ್ತಕಗಳನ್ನು ಸಿದ್ಧಗೊಳಿಸಿತು. ಇದರಿಂದ ಸಮಾಜದಲ್ಲಿ ನಿಧಾನವಾಗಿ ಹಿಂದೂವಿರೋಧಿ ವಿಚಾರಗಳನ್ನು ಬಿತ್ತಲಾಯಿತು. ಕಾಂಗ್ರೆಸ್ಸಿನ ಅಧಿಕಾರ ಅವಧಿಯಲ್ಲಿದ್ದ ಅಲ್ಪಸಂಖ್ಯಾತ ಶಿಕ್ಷಣಮಂತ್ರಿಗಳು ಶಿಕ್ಷಣವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ಮಾಡಿದರು? ಎಂಬ ಸಂಶೋಧನೆಯನ್ನು ಕೈಕೊಳ್ಳುವ ಅವಶ್ಯಕತೆಯಿದೆ; ಏಕೆಂದರೆ ಅವರು ಭಾರತೀಯರನ್ನು ಭಾರತೀಯ ಶಿಕ್ಷಣವನ್ನು ಮತ್ತು ಪರಂಪರೆಯಿಂದ ವಂಚಿತಗೊಳಿಸಿದರು. ಕೆಲವು ವರ್ಷಗಳ ಹಿಂದೆ ಅಲೀಗಡ ಮುಸ್ಲಿಂ ವಿದ್ಯಾಪೀಠದ ವಿದ್ಯಾರ್ಥಿಗಳು ‘ಘಟಿಕೋತ್ಸವ(ಪದವಿಪ್ರದಾನ ಸಮಾರಂಭ)ದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರಧಾರೆಯ ವ್ಯಕ್ತಿ ಬಂದರೆ ಕೆಟ್ಟ ಪರಿಣಾಮವಾಗಲಿದೆ’ ಎಂದು ಬೆದರಿಕೆ ಹಾಕಿದ್ದರು. ಎನ್.ಸಿ.ಇ.ಆರ್.ಟಿ. ಪುಸ್ತಕದಲ್ಲಿ ‘ಮೊಗಲರು ಮಂದಿರಗಳ ದುರಸ್ತಿ ಕಾರ್ಯವನ್ನು ಮಾಡುತ್ತಿದ್ದರು’ ಎಂದು ಸಾರಾಸಗಟು ಸುಳ್ಳು ಇತಿಹಾಸವನ್ನು ಬರೆದಿದ್ದಾರೆ. ಕ್ರೈಸ್ತರು ಬಹುಸಂಖ್ಯೆಯಲ್ಲಿರುವ ಮಿಝೋರಾಂ ರಾಜ್ಯದಲ್ಲಿ ಶಪಥವಿಧಿಯ ಸಮಾರಂಭದಲ್ಲಿ ಬೈಬಲ್‌ನ ಪಂಕ್ತಿಗಳನ್ನು ಉಚ್ಚರಿಸಲಾಗಿತ್ತು. ಈ ಎಲ್ಲ ಘಟನೆಗಳ ಬಣ್ಣ ಯಾವುದು? ಎನ್ನುವುದನ್ನು ಹೇಳಲು ಕೇಸರೀಕರಣದ ಕುಂಟುನೆಪ ಮಾಡುವವರು ಮುಂದೆ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಕಪಟ ನಾಟಕವಾಡುವ ಜಾತ್ಯತೀತವಾದಿಗಳು ತಮಗೆ ಅನುಕೂಲವಾಗುವಂತೆ ತಮ್ಮ ಬಣ್ಣವನ್ನು ಬದಲಾಯಿಸುತ್ತಾರೆ.

ಕೇಸರಿಯನ್ನು ಗೌರವಿಸಬೇಕು!

‘ಕೇಸರಿ’ ಇದೊಂದು ಪವಿತ್ರ ಬಣ್ಣವಾಗಿದೆ. ಶ್ರೀರಾಮ, ಶ್ರೀಕೃಷ್ಣರ ವಿಜಯಧ್ವಜ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಸಂಪೂರ್ಣ ಕಲ್ಯಾಣಕರವಾದ ಹಿಂದವೀ ಸ್ವರಾಜ್ಯದ ಬಣ್ಣವೂ ಕೇಸರಿಯೇ ಆಗಿತ್ತು. ಕೇಸರಿ ಬಣ್ಣವು ಧರ್ಮ, ಸಮೃದ್ಧಿ, ಅಸ್ಮಿತೆ, ಶೌರ್ಯ ಮತ್ತು ಜ್ಞಾನದ ಪ್ರತೀಕವಾಗಿದೆ. ಇಂತಹ ಶ್ರೇಷ್ಠ ಕೇಸರಿ ಬಣ್ಣವು ಯಾವಾಗಲೂ ಗೌರವಿಸಲ್ಪಡಬೇಕು. ಹಿಂದೂದ್ವೇಷದ ಕಾರಣದಿಂದ ಒಂದು ವೇಳೆ ಯಾರಾದರೂ ಈ ಶಬ್ದವನ್ನು ದುರುಪಯೋಗಿಸುತ್ತಿದ್ದಲ್ಲಿ ಅಂತಹವರ ವಿರುದ್ಧ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸಿರುವ ಬಗ್ಗೆ ಕ್ರಮ ಜರುಗಿಸಬೇಕು. ಹಾಗೆಯೇ ಕೇಸರಿಕರಣದ ಆರೋಪಗಳ ತೆರೆಮರೆಯಲ್ಲಿ ಇತಿಹಾಸದ್ರೋಹ ಮಾಡುವವರ ವಿರುದ್ಧವೂ  ಕ್ರಮ ಜರುಗಿಸಬೇಕಾಗಿದೆ.