ನಾಮಜಪದ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಯುನಿವರ್ಸಲ್ ಥರ್ಮೋ ಸ್ಕ್ಯಾನರ್ (ಯು.ಎ.ಎಸ್) ಈ ಉಪಕರಣದ ಮೂಲಕ ಮಾಡಿರುವ ವೈಜ್ಞಾನಿಕ ಪರೀಕ್ಷಣೆ
‘೧೪ ಮೇ ೨೦೨೧ ಮತ್ತು ೨೦ ಜೂನ್ ೨೦೨೧ ಈ ದಿನದ ದೈನಿಕ ‘ಸನಾತನ ಪ್ರಭಾತದಲ್ಲಿ ‘ನಿರ್ವಿಚಾರ, ‘ಓಂ ನಿರ್ವಿಚಾರ ಮತ್ತು ‘ಶ್ರೀ ನಿರ್ವಿಚಾರಾಯ ನಮಃ ಈ ನಾಮಜಪಕ್ಕೆ ಸಂಬಂಧಿಸಿದಂತೆ ಚೌಕಟ್ಟನ್ನು ಪ್ರಕಟಿಸಿ ಅದರ ಮೊದಲ ಪರಿಚಯವನ್ನು ಮಾಡಿಕೊಡಲಾಗಿತ್ತು. ಅದಕ್ಕನುಸಾರ ಸಾಧಕರು ಈ ನಾಮಜಪವನ್ನು ಮಾಡಲು ಆರಂಭಿಸಿದ್ದಾರೆ. ಸಾಧಕರು ‘ನಿರ್ವಿಚಾರ ಈ ನಾಮಜಪ ಅಥವಾ ಆ ನಾಮಜಪವನ್ನು ಮಾಡಲು ಕಠಿಣವೆನಿಸುತ್ತಿದ್ದರೆ ‘ಶ್ರೀ ನಿರ್ವಿಚಾರಾಯ ನಮಃ ಈ ನಾಮಜಪವನ್ನು ಕೆಲವು ತಿಂಗಳು ಪ್ರತಿದಿನ ಹೆಚ್ಚೆಚ್ಚು ಸಮಯ ಮಾಡಬೇಕು. ಕಾಲಾಂತರದಲ್ಲಿ ಈ ನಾಮಜಪವನ್ನು ಮಾಡಲು ಸಾಧ್ಯವಾಗ ತೊಡಗಿದರೆ, ಇದೇ ನಾಮಜಪವನ್ನು ಮುಂದೆ ಸತತವಾಗಿ ಮುಂದುವರಿಸಬೇಕು. ನಿರ್ವಿಚಾರ ಅಥವಾ ‘ಶ್ರೀ ನಿರ್ವಿಚಾರಾಯ ನಮಃ ಈ ನಾಮಜಪವು ‘ಗುರುಕೃಪಾಯೋಗಾನುಸಾರ ಸಾಧನಾಮಾರ್ಗದ ಕೊನೆಯ ನಾಮಜಪವಾಗಿದೆ ! (ಆಧಾರ : www.sanatan.org./kannada/93011.html)
ನಿರ್ವಿಚಾರ ನಾಮಜಪದಿಂದ ಸಾಧಕರು ಮತ್ತು ಸಂತರ ಮೇಲಾಗುವ ಪರಿಣಾಮವನ್ನು ವಿಜ್ಞಾನದ ಮೂಲಕ ಅಧ್ಯಯನಕ್ಕಾಗಿ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಯುನಿವರ್ಸಲ್ ಔರಾ ಸ್ಯ್ಯಾನರ್ (ಯು.ಎ.ಎಸ್.) ಈ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.
೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ೪ ಸಾಧಕರು, ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಮತ್ತು ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟದ ೫ ಸಾಧಕರು, ಆಧ್ಯಾತ್ಮಿಕ ತೊಂದರೆ ಇಲ್ಲದ ೩ ಸಾಧಕರು, ಆಧ್ಯಾತ್ಮಿಕ ತೊಂದರೆ ಇಲ್ಲದ ಮತ್ತು ಶೇ. ೬೦ ಕ್ಕಿಂತ ಹೆಚ್ಚು ಮಟ್ಟದ ೪ ಸಾಧಕರು, ಓರ್ವ ದೈವೀ ಬಾಲಕಿ ಮತ್ತು ಸದ್ಗುರು ಡಾ. ಮುಕುಲ ಗಾಡಗೀಳ, ಹೀಗೆ ಒಟ್ಟು ೧೭ ಸಾಧಕರು ಮತ್ತು ಓರ್ವ ಸಂತರು ಪಾಲ್ಗೊಂಡರು. ಪರೀಕ್ಷಣೆಯಲ್ಲಿನ ಸಾಧಕರು ಮತ್ತು ಸಂತರಿಗೆ ೧೭ ರಿಂದ ೨೩ ಜೂನ್ ೨೦೨೧ ಈ ಕಾಲಾವಧಿಯಲ್ಲಿ ಪ್ರತಿದಿನ ‘ನಿರ್ವಿಚಾರ ಈ ನಾಮಜಪವನ್ನು ೧೦ ನಿಮಿಷಗಳ ಕಾಲ ಕೇಳಿಸಲಾಯಿತು.
೧ ಅ. ಪರೀಕ್ಷಣೆಯಲ್ಲಿ ಸಾಧಕರ ಮೇಲೆ ‘ನಿರ್ವಿಚಾರ ನಾಮಜಪದ ಸಕಾರಾತ್ಮಕ ಪರಿಣಾಮವಾಗುವುದು : ಪರೀಕ್ಷಣೆಯಲ್ಲಿ ಸಾಧಕರ ಮೇಲೆ ‘ನಿರ್ವಿಚಾರ ನಾಮಜಪದಿಂದಾದ ಪರಿಣಾಮವನ್ನು ತೋರಿಸುವ ಕೋಷ್ಟಕವನ್ನು ಮುಂದೆ ನೀಡಲಾಗಿದೆ.
೧ ಆ. ಸದ್ಗುರು ಡಾ. ಮುಕುಲ ಗಾಡಗೀಳ ಇವರು ‘ನಿರ್ವಿಚಾರ ನಾಮಜಪವನ್ನು ಕೇಳಿಸಿಕೊಂಡಿದ್ದರಿಂದ ಅವರಲ್ಲಿನ ಸಕಾರಾತ್ಮಕ ಊರ್ಜೆಯು ಶೇ. ೧೫ ರಿಂದ ಶೇ. ೧೮ ರಷ್ಟು ಹೆಚ್ಚಾದ ಬಗ್ಗೆ ‘ಯು.ಎ.ಎಸ್ ನಿರೀಕ್ಷಣೆಯಲ್ಲಿ ಕಂಡು ಬರುವುದು : ಈ ಪರೀಕ್ಷಣೆ ಯಲ್ಲಿ ೧೮, ೨೦ ಮತ್ತು ೨೩ ಜೂನ್ ಈ ದಿನದಂದು ‘ನಿರ್ವಿಚಾರ ಈ ನಾಮಜಪವನ್ನು ಕೇಳುವ ಮೊದಲು ಮತ್ತು ೧೦ ನಿಮಿಷಗಳ ಕಾಲ ಕೇಳಿದ ನಂತರ ಸದ್ಗುರು ಡಾ. ಮುಕುಲ ಗಾಡಗೀಳ ಇವರ ಛಾಯಾಚಿತ್ರಗಳನ್ನು ತೆಗೆಯಲಾಯಿತು. ಈ ಎಲ್ಲ ಛಾಯಾಚಿತ್ರಗಳ ‘ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡಲಾಯಿತು. ಸದ್ಗುರು ಡಾ. ಮುಕುಲ ಗಾಡಗೀಳ ಇವರಲ್ಲಿ ಆರಂಭದಲ್ಲಿಯೂ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇತ್ತು ಮತ್ತು ನಾಮಜಪವನ್ನು ಕೇಳಿದ ನಂತರ ಅವರಲ್ಲಿನ ಸಕಾರಾತ್ಮಕ ಊರ್ಜೆಯು ಸುಮಾರು ಶೇ. ೧೫ ರಿಂದ ಶೇ. ೧೮ ರಷ್ಟು ಹೆಚ್ಚಾಯಿತು. ಇದು ಮುಂದಿನ ಪುಟದಲ್ಲಿರುವ ಕೋಷ್ಟಕದಿಂದ ತಿಳಿಯುವುದು.
೧ ಇ. ಪರೀಕ್ಷಣೆಯಲ್ಲಿ ಸಾಧಕರ ಮತ್ತು ಸಂತರ ಮೇಲೆ ‘ನಿರ್ವಿಚಾರ ನಾಮಜಪದ ಪರಿಣಾಮವು ೪ ದಿನಗಳ ಕಾಲ ಉಳಿದುಕೊಳ್ಳುವುದು : ೨೩.೬.೨೦೨೧ ಈ ದಿನದಂದು ನಾಮಜಪದ ಪ್ರಯೋಗವು ಮುಗಿದ ನಂತರ ಮರುದಿನದಿಂದ (೨೪.೬.೨೦೨೧ ರಿಂದ) ಪ್ರತಿದಿನ ಸಾಧಕರು ಮತ್ತು ಸಂತರು ಅವರ ಮೂಲ ನೋಂದಣಿಗೆ (Baseline Reading) ಬರುವವರೆಗೆ ಅವರನ್ನು ಉಪಕರಣದ ಮೂಲಕ ನಿರೀಕ್ಷಣೆಯನ್ನು ಮಾಡಲಾಯಿತು. ಈ ಕಾಲಾವಧಿಯಲ್ಲಿ ಅವರಿಗೆ ಈ ನಾಮಜಪವನ್ನು ಕೇಳಿಸಲಾಗಿರಲಿಲ್ಲ. ಪರೀಕ್ಷಣೆಯಲ್ಲಿನ ಎಲ್ಲ ಸಾಧಕರು ಮತ್ತು ಸಂತರು ೨೭.೬.೨೦೨೧ ಈ ದಿನದಂದು ಅವರ ಮೂಲ ನೋಂದಣಿಗೆ ಬಂದರು. ಇದರಿಂದ ಪರೀಕ್ಷಣೆಯಲ್ಲಿನ ಸಾಧಕರು ಮತ್ತು ಸಂತರ ಮೇಲೆ ‘ನಿರ್ವಿಚಾರ ನಾಮಜಪದ ಪರಿಣಾಮವು ಸುಮಾರು ೪ ದಿನ ಉಳಿಯಿತು, ಎಂಬುದು ಗಮನಕ್ಕೆ ಬರುತ್ತದೆ.
೨. ‘ನಿರ್ವಿಚಾರ ನಾಮಜಪದ ಬಗ್ಗೆ ಮಹತ್ವಪೂರ್ಣ ಅಂಶಗಳು
‘ನಿರ್ವಿಚಾರ ನಾಮಜಪವನ್ನು ಕೇಳಿದ್ದರಿಂದ ಪರೀಕ್ಷಣೆಯಲ್ಲಿನ ಎಲ್ಲ ಸಾಧಕರ ಮೇಲೆ ಸಕಾರಾತ್ಮಕ ಪರಿಣಾಮವಾಗಿದ್ದರೂ, ಈ ನಾಮಜಪವನ್ನು ಯಾರು ಮಾಡಬೇಕು ಮತ್ತು ಯಾರು ಮಾಡಬಾರದು, ಹಾಗೆಯೇ ಎಷ್ಟು ಸಮಯ ಮಾಡಬೇಕು, ಎಂದು ತಿಳಿಯಲು ಮುಂದಿನ ಅಂಶಗಳನ್ನು ಗಮನದಲ್ಲಿಡಬೇಕು.
೨ ಅ. ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ‘ನಿರ್ವಿಚಾರ ಈ ನಾಮಜಪವನ್ನು ಮಾಡಬಾರದು; ಅವರು ಆಧ್ಯಾತ್ಮಿಕ ಸ್ತರದ ಉಪಾಯಗಳಿಗಾಗಿ ಹೇಳಿದ ನಾಮಜಪವನ್ನೇ ಮಾಡಬೇಕು :
‘ನಿರ್ವಿಚಾರ ಈ ನಾಮಜಪವು ನಿರ್ಗುಣದ ಕಡೆಗೆ ಕರೆದೊಯ್ಯುವ ಜಪವಾಗಿದೆ. ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ಈ ನಾಮಜಪವನ್ನು ಮಾಡತೊಡಗಿದರೆ ಅವರಿಗೆ ಕೆಟ್ಟ ಶಕ್ತಿಗಳಿಂದ ವಿರೋಧವಾಗಬಹುದು. ಈ ವಿರೋಧವು ತೀವ್ರ ಸ್ವರೂಪದ್ದಾದರೆ, ತೊಂದರೆ ಇರುವ ಸಾಧಕನ ತೊಂದರೆಯ ತೀವ್ರತೆಯು ಹೆಚ್ಚಾಗಬಹುದು ಮತ್ತು ಅದಕ್ಕಾಗಿ ಸಂತರಿಗೆ ನಾಮಜಪವನ್ನು ಮಾಡಲು ಸಮಯ ನೀಡಬೇಕಾಗಬಹುದು. ಆದುದರಿಂದ ಕೆಟ್ಟ ಶಕ್ತಿಗಳ ತೀವ್ರ, ಮಧ್ಯಮ ಮತ್ತು ಮಂದ ತೊಂದರೆ ಇರುವ ಸಾಧಕರು ಅವರಿಗೆ ಆಧ್ಯಾತ್ಮಿಕ ಉಪಾಯಗಳಿಗಾಗಿ ಹೇಳಲಾದ ನಾಮಜಪವನ್ನೇ ಮಾಡಬೇಕು. ಇದರ ಕಾರಣವೆಂದರೆ ಆ ಸಾಧಕರಿಗಾಗಿ ಕೆಟ್ಟ ಶಕ್ತಿಗಳ ತೊಂದರೆಯು ದೂರವಾಗುವುದೇ ಮಹತ್ವದ್ದಾಗಿದೆ. ಆದುದರಿಂದ ಅವರು ಉಪಾಯಗಳ ಕಾಲಾವಧಿಯು ಪೂರ್ಣವಾದ ನಂತರವೂ ಉಪಾಯಗಳಲ್ಲಿ ಬಂದ ನಾಮಜಪಗಳ ಪೈಕಿ ಯಾವುದಾದರೊಂದು ನಾಮಜಪವನ್ನು ಉಳಿದ ಸಮಯದಲ್ಲಿ ಬರುವಾಗ-ಹೋಗುವಾಗ ಮಾಡಬೇಕು. (ಆಧಾರ : www.sanatan.org/kannada/93011.html)
೨ ಆ. ಆಧ್ಯಾತ್ಮಿಕ ತೊಂದರೆ ಇರುವ ಮತ್ತು ಶೇ. ೬೦ ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಮಟ್ಟವಿರುವ ಸಾಧಕರು ‘ನಿರ್ವಿಚಾರ ಈ ನಾಮಜಪವನ್ನು ಅವರಿಗಿರುವ ಜಪದ ಒಟ್ಟು ಸಮಯದ ಪೈಕಿ ಶೇ. ೨೦ ರಷ್ಟು ಸಮಯ ಮಾಡಬೇಕು : ‘ಆಧ್ಯಾತ್ಮಿಕ ತೊಂದರೆ ಇರುವ ಮತ್ತು ಶೇ. ೬೦ ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಸಾಧಕರು ‘ನಿರ್ವಿಚಾರ ಈ ನಾಮಜಪವನ್ನು ಅವರಿಗಿರುವ ಜಪದ ಒಟ್ಟು ಸಮಯದ ಪೈಕಿ ಶೇ. ೨೦ ರಷ್ಟು ಸಮಯ ಮಾಡಬೇಕು. (ಆಧಾರ : www.sanatan.org/kannada/93011.html)
೨ ಇ. ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕರು ‘ನಿರ್ವಿಚಾರ ಈ ನಾಮಜಪವನ್ನು ಮಾಡುವ ಪ್ರಯತ್ನ ಮಾಡಬೇಕು : ‘ನಿರ್ವಿಚಾರ ಈ ನಾಮಜಪವು ‘ನಿರ್ಗುಣ ಸ್ಥಿತಿಗೆ ಕರೆದೊಯ್ಯುತ್ತದೆ. ಆದುದರಿಂದ ಕುಲದೇವತೆಯ ನಾಮಜಪವನ್ನು ಮಾಡುವ ಸಾಧಕರಿಗೆ ಅಥವಾ ಶೇ. ೬೦ ಕ್ಕಿಂತ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವ ಸಾಧಕರಿಗೆ ಈ ನಾಮಜಪವನ್ನು ಮಾಡುವುದು ಕಠಿಣವಾಗಬಹುದು. ಇದಕ್ಕಾಗಿ ಅವರು ತಾವು ಯಾವಾಗಲೂ ಮಾಡುವ ಜಪದೊಂದಿಗೆ ಈ ನಾಮಜಪವನ್ನು ಮಾಡಲು ಪ್ರಯತ್ನಿಸಬೇಕು. ಈ ನಾಮಜಪವನ್ನು ಮಾಡಲು ಸಾಧ್ಯವಾಗ ತೊಡಗಿದರೆ ಅದನ್ನು ನಿರಂತರ ಮಾಡಬೇಕು. ಏಕೆಂದರೆ ಕೊನೆಗೆ ಸಾಧನೆಯ ಮುಂದಿನ ಮಟ್ಟವನ್ನು ತಲುಪಿ ಪೂರ್ಣ ಸಮಯ ಅದೇ ನಾಮಜಪವನ್ನು ಮಾಡುವುದಿರುತ್ತದೆ. (ಆಧಾರ : www.sanatan.org/kannada/93011.html)
೨ ಈ. ಆಧ್ಯಾತ್ಮಿಕ ತೊಂದರೆ ಇಲ್ಲದ ಮತ್ತು ಶೇ. ೬೦ ಕ್ಕಿಂತಲೂ ಹೆಚ್ಚು ಮಟ್ಟವಿರುವ ಸಾಧಕರು ‘ನಿರ್ವಿಚಾರ ಈ ನಾಮಜಪವನ್ನೇ ಮಾಡಬೇಕು :‘ನಿರ್ವಿಚಾರ ಈ ಜಪವಾಗಲು ಸಾಧಕರ ಆಧ್ಯಾತ್ಮಿಕ ಮಟ್ಟವು ಕನಿಷ್ಟಪಕ್ಷ ಶೇ. ೬೦ ರಷ್ಟಿರುವುದು, ಅಂದರೆ ಅವನ ಮನೋಲಯದ ಆರಂಭವಾಗುವುದು ಆವಶ್ಯಕವಾಗಿದೆ. ಅನಂತರ ಆ ಸಾಧಕನು ನಿರ್ವಿಚಾರ ಸ್ಥಿತಿಗೆ ಹೋಗಬಹುದು. ‘ನಿರ್ವಿಚಾರ ಈ ನಾಮಜಪವು ‘ನಿರ್ಗುಣ ಸ್ಥಿತಿಗೆ ಕರೆದೊಯ್ಯುವ ನಾಮಜಪವಾಗಿರುವುದರಿಂದ ಆಧ್ಯಾತ್ಮಿಕ ತೊಂದರೆ ಇಲ್ಲದ ಮತ್ತು ಶೇ. ೬೦ ಕ್ಕಿಂತ ಹೆಚ್ಚು ಮಟ್ಟವಿರುವ ಸಾಧಕರು ‘ನಿರ್ವಿಚಾರ ಜಪವನ್ನೇ ಮಾಡಬೇಕು. (ಆಧಾರ : www.sanatan.org/kannada/93011.html)
೩. ‘ನಿರ್ವಿಚಾರ ನಾಮಜಪದ ಪ್ರಯೋಗದ ನಿಷ್ಕರ್ಷ
‘ನಿರ್ವಿಚಾರ ನಾಮಜಪದ ಬಗ್ಗೆ ಮಾಡಿದ ಸಂಶೋಧಾತ್ಮಕ ಪರೀಕ್ಷಣೆಯಿಂದ ‘ನಿರ್ವಿಚಾರ ಈ ಜಪವು ಆಧ್ಯಾತ್ಮಿಕ ತೊಂದರೆ ಇಲ್ಲದ ಮತ್ತು ಶೇ. ೬೦ ಕ್ಕಿಂತ ಹೆಚ್ಚು ಮಟ್ಟವಿರುವ ಸಾಧಕರಿಗಾಗಿ ಉಪಯುಕ್ತವಾಗಿದೆ, ಎಂಬುದು ಗಮನಕ್ಕೆ ಬರುತ್ತದೆ. ಇದರಿಂದ ಇದರ ಒಟ್ಟಾರೆ ಪರಿಣಾಮವು ಗಮನಕ್ಕೆ ಬರುತ್ತದೆ. ಇದಕ್ಕಾಗಿ ಸಾಧಕರು ಯಾವಾಗಲೂ ಮಾಡುವ ನಾಮಜಪದೊಂದಿಗೆ ಈ ನಾಮಜಪವನ್ನು ಮಾಡಲು ಪ್ರಯತ್ನಿಸಬೇಕು. ಅದರ ಅಭ್ಯಾಸವಾದರೆ, ಮುಂದೆ ಇದೇ ಜಪವನ್ನು ಮುಂದುವರಿಸಬೇಕು.
ಕುಲದೇವತೆಯ ಸಗುಣ ಉಪಾಸನೆಯ ನಾಮಜಪದಿಂದ ಗುರುಕೃಪಾಯೋಗಾನುಸಾರ ಸಾಧನಾಮಾರ್ಗದಲ್ಲಿನ ಕೊನೆಯ ‘ನಿರ್ವಿಚಾರ ಈ ನಿರ್ಗುಣ ಸ್ಥಿತಿಗೆ ಕರೆದೊಯ್ಯುವ ಈ ನಾಮಜಪದವರೆಗೆ ಸಾಧಕರ ಸಾಧನಾಪ್ರವಾಸವನ್ನು ಮಾಡಿಸಿಕೊಳ್ಳುವ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೧.೮.೨೦೨೧)
ವಿ-ಅಂಚೆ ವಿಳಾಸ (ಈಮೇಲ್) : [email protected]
* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು. *ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |