‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಪರಿಷತ್ತಿನ ವಿರುದ್ಧ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ವತಿಯಿಂದ ‘ಹಿಂದುತ್ವ ರಕ್ಷಣ ಸಭೆ’ !ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಸಹಿತ ಭಾರತಾದ್ಯಂತದ ಹಿಂದುತ್ವನಿಷ್ಠರ ಸಹಭಾಗ ! |
ಮುಂಬೈ – ಸಪ್ಟೆಂಬರ 11 2001 ರಂದು ಅಮೇರಿಕಾದ ಮೇಲೆ ಉಗ್ರಗಾಮಿಗಳಿಂದ ದಾಳಿಯಾದ ನಂತರ ಅಲ್ಲಿನ ನಾಗರಿಕರು ಮುಸಲ್ಮಾನರನ್ನು ಸಂಶಯದಿಂದ ದೃಷ್ಟಿಯಿಂದ ನೋಡಲಾರಂಭಿಸಿದರು. ಅದೇ ದೃಷ್ಟಿ ಹಿಂದೂಗಳ ಬಗ್ಗೆಯೂ ಉಂಟಾಗಬೇಕು ಎಂದು `ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ (ಜಾಗತಿಕ ಮಟ್ಟದಲ್ಲಿ ಹಿಂದುತ್ವದ ಉಚ್ಚಾಟನೆ) ಎಂಬ ಹಿಂದೂವಿರೋಧಿ ಪರಿಷತ್ತನ್ನು ಹಮ್ಮಿಕೊಳ್ಳಲಾಯಿತು. ಆದ್ದರಿಂದ ಹಿಂದೂಗಳು ಎಚ್ಚರಿಕೆಯಿಂದ ಇರಬೇಕು. ಈ ರೀತಿಯ ಅಪಪ್ರಚಾರಗಳಿಗೆ ವೈಚಾರಿಕ ಹಾಗೂ ಬೌದ್ಧಿಕ ಮಟ್ಟದಲ್ಲಿ ಅಭ್ಯಾಸಪೂರ್ಣವಾಗಿ ಉತ್ತರ ನೀಡಬೇಕು. ಈ ಪರಿಷತ್ತಿನ ಮಾಧ್ಯಮದಿಂದ ವೈಚಾರಿಕ ಭಯೋತ್ಪಾದನೆಯನ್ನು ಹರಡಲಾಯಿತು. ಹಿಂದೂ ಧರ್ಮದ ನಾಶ ಅಸಾಧ್ಯ, ಎಂಬುದು ಸತ್ಯ; ಆದರೆ ಧರ್ಮರಕ್ಷಣೆಗಾಗಿ ಬೂಟಾಟಿಕೆಯನ್ನು ಖಂಡಿಸಿ ಹಿಂದೂವಿರೋಧಿ ವಿಚಾರಗಳನ್ನು ವೈಚಾರಿಕವಾಗಿ ಪ್ರತಿಭಟಿಸಬೇಕು. ದೇಶ-ವಿದೇಶದಲ್ಲಿ ಹಿಂದೂವಿರೋಧಿ ಕಾರ್ಯಕ್ರಮಗಳ ಆಯೋಜನೆಯಾದರೆ ನಿದ್ರಿಸ್ತ ಹಿಂದೂಗಳನ್ನು ಜಾಗೃತಗೊಳಿಸಿ ಅವರಿಗೆ ತಿಳಿಯ ಪಡಿಸುವುದು, ಸನಾತನ ಹಿಂದೂ ಧರ್ಮದ ತತ್ತ್ವಜ್ಞಾನದ ಪ್ರಚಾರ ಮಾಡುವುದು, ಈ ಎಲ್ಲಾ ಹೊಣೆ ನಮ್ಮ ಮೇಲಿದೆ(ಹಿಂದುತ್ವನಿಷ್ಠರ ಮೇಲೆ). ಹಿಂದೂ ರಾಷ್ಟ್ರದ ಕಾರ್ಯಕ್ಕೆ ಆಶೀರ್ವಾದ ಹಾಗೂ ಯಶಸ್ಸು ಪ್ರಾಪ್ತವಾಗಿರುವುದರಿಂದ ನಾವು ಕೇವಲ ಕೃತಿ ಮಾಡಬೇಕಾಗಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆಯವರು ಮಾರ್ಗದರ್ಶನ ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಒಂದು ಭಾಗವೆಂದು ಸಪ್ಟೆಂಬರ 12 2021 ರಂದು ಒಂದು ‘ಆನ ಲೈನ್ ಹಿಂದುತ್ವ ರಕ್ಷಣೆ ಸಭೆ’ಯನ್ನು ಆಯೋಜಿಸಲಾಗಿದೆ. ಆ ಸಮಯದಲ್ಲಿ ಅವರು ಮಾರ್ಗದರ್ಶನ ಮಾಡುತ್ತಿದ್ದರು. ಆ ಸಭೆಗೆ ಭಾರತದಾದ್ಯಂತದ ವಿವಿಧ ರಾಜ್ಯಗಳೂ ಸೇರಿದಂತೆ ನೇಪಾಳ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಈ ದೇಶಗಳಿಂದ ಅನೇಕ ಹಿಂದುತ್ವನಿಷ್ಠರು ಉಪಸ್ಥಿತರಿದ್ದರು. ಇತ್ತೀಚೆಗಷ್ಟೇ ನಡೆದ ‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಎಂಬ ಹಿಂದೂ ವಿರೋಧಿ ಪರಿಷತ್ತಿನ ಸಂದರ್ಭದಲ್ಲಿ ಗಣ್ಯರು ತಮ್ಮ ವಿಚಾರಗಳನ್ನು ವ್ಯಕ್ತ ಪಡಿಸಿದರು.
ಸಭೆಯ ಪ್ರಾರಂಭದಲ್ಲಿ ಹಿಂದು ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಪೂ. ನೀಲೇಶ ಸಿಂಗಬಾಳರವರು ಸಭೆಯ ಉದ್ದೇಶವನ್ನು ಸ್ಪಷ್ಟ ಪಡಿಸಿದರು, ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರದ ಶ್ರೀ. ರಮೇಶ ಶಿಂದೆಯವರು ಈ ಸಭೆಯ ಪ್ರಸ್ತಾವನೆ ಮಾಡುವಾಗ ‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ದ ವಿರುದ್ಧ ಇಲ್ಲಿಯವರೆಗೂ ಕಾನೂನು ಬದ್ಧ ಮಾರ್ಗದಿಂದ ನಡೆಸಿದ ಹೋರಾಟಗಳ ವಿಷಯವಾಗಿ ಉಪಸ್ಥಿತರಿಗೆ ತಿಳಿಸಿಕೊಟ್ಟರು. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸರವರು ಈ ಸಭೆಯ ನಿರೂಪಣೆಯನ್ನು ಮಾಡಿದರು.