ದೇವರ ಹಣ ಧರ್ಮಕ್ಕಾಗಿಯೇ ವಿನಿಯೋಗಿಸಬೇಕು

೧. ಕಾಂಗ್ರೆಸ್ಸಿನ ಹಿಂದೂದ್ವೇಷವನ್ನು ತಿಳಿಯಿರಿ !

‘ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್‌ಮೆಂಟ್’ ನಡೆಸಿದ ಅಧ್ಯಯನದಿಂದ ಭಗವದ್ಗೀತೆ, ಕೌಟಿಲ್ಯ ಅರ್ಥಶಾಸ್ತ್ರದಂತಹ ಪ್ರಾಚೀನ ಗ್ರಂಥಗಳನ್ನು ಸೈನ್ಯದ ತರಬೇತಿಯಲ್ಲಿ ಸೇರಿಸಲು ಶಿಫಾರಸ್ಸು ಮಾಡಿದೆ; ಆದರೆ ಕಾಂಗ್ರೆಸ್ ಇದನ್ನು ವಿರೋಧಿಸಿದೆ.

೨. ದೇವರ ಹಣ ಧರ್ಮಕ್ಕಾಗಿಯೇ ವಿನಿಯೋಗಿಸಬೇಕು

ದೇವಾಲಯದ ಭೂಮಿ ಮತ್ತು ಆಸ್ತಿಯ ವಿಷಯಕ್ಕೆ ಬಂದರೆ, ದೇವಸ್ಥಾನದಲ್ಲಿರುವ ದೇವರನ್ನೇ ‘ಮಾಲೀಕ’ ಎಂದು ಉಲ್ಲೇಖಿಸಬೇಕು. ಅರ್ಚಕರು ಕೇವಲ ಪೂಜಿಸುತ್ತಾರೆ ಮತ್ತು ಸಂಪತ್ತನ್ನು ನಿರ್ವಹಿಸುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ.

೩. ಕಾಶ್ಮೀರದಲ್ಲಿ ಹಿಂದೂಗಳ ಮಾನವಹಕ್ಕುಗಳನ್ನು ಏಕೆ ಗೌರವಿಸಿಲ್ಲ ?

‘ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಇದು ಇಸ್ಲಾಮಿ ನಿಯಮಗಳ ಆಧಾರದಲ್ಲಿ ಉತ್ತಮವಾಗಿ ಅಧಿಕಾರ ನಡೆಸುವುದು ಮತ್ತು ಅದು ಮಾನವಹಕ್ಕುಗಳನ್ನು ಗೌರವಿಸುವುದು ಎಂದು ನಿರೀಕ್ಷಿಸುತ್ತೇವೆ’, ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದರು.

೪. ಭಾರತದಲ್ಲಿ ಈ ರೀತಿ ಆಗುವ ಮೊದಲೇ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !

ತಾಲಿಬಾನ್ ಈಗ ವಾಸ್ತವಿಕತೆಯಾಗಿದೆ. ಇದನ್ನು ಅರ್ಥಮಾಡಿಕೊಳ್ಳಬೇಕು. ತಾಲಿಬಾನ್‌ವು ಅಫ್ಘಾನಿಸ್ತಾನದಲ್ಲಿ ಶರಿಯಾ ಕಾನೂನಿನ ಮೂಲಕ ಸರಕಾರ ನಡೆಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

೫. ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಅಗತ್ಯವಿದೆ !

ರಾಜಸ್ಥಾನದ ಮಾಲಪುರದ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಹಿಂದೂ ಕುಟುಂಬಗಳು ‘ನಾವು ಅಸಹಾಯಕರಾಗಿದ್ದೇವೆ ಮತ್ತು ನಮ್ಮ ಕುಟುಂಬದವರೊಂದಿಗೆ ಪಲಾಯನ ಮಾಡಬೇಕಾಗುತ್ತಿದೆ’, ಎಂಬ ಬರಹವುಳ್ಳ ಭಿತ್ತಿಪತ್ರಗಳನ್ನು ತಮ್ಮ ಮನೆ ಮತ್ತು ಅಂಗಡಿಗಳ ಹೊರಗೋಡೆಗಳಿಗೆ ನೇತು ಹಾಕಿದ್ದಾರೆ.

೬. ಕಾಶ್ಮೀರಿ ಪಂಡಿತರ ಬಗ್ಗೆ ಕಾಂಗ್ರೆಸ್ಸಿನ ಢೋಂಗಿಪ್ರೇಮವನ್ನು ಅರಿತುಕೊಳ್ಳಿ

ನನ್ನ ಕುಟುಂಬವೂ ಕಾಶ್ಮೀರಿ ಪಂಡಿತ ಆಗಿರುವುದರಿಂದ ಕಾಶ್ಮೀರಿ ಪಂಡಿತರು ನನ್ನ ಬಾಂಧವರಿದ್ದು ಅವರಿಗೆ ನಾನು ಸಹಾಯ ಮಾಡುವೆನು, ಎಂದು ಕಾಂಗ್ರೆಸ್ ನಾಯಕ ರಾಹುಲ ಗಾಂಧಿಯವರು ಜಮ್ಮೂ ಪ್ರವಾಸದಲ್ಲಿದ್ದಾಗ ಹೇಳಿದರು.

೭. ಹಿಂದೂ ದೇವತೆಗಳ ಇಂತಹ ಅವಮಾನವನ್ನು ಕಾನೂನು ಮಾರ್ಗದಲ್ಲಿ ನಿಲ್ಲಿಸಿ !

ಪಾಟಲಿಪುತ್ರದ ಶಿಲ್ಪಿ ಪಿಂಟು ಪ್ರಸಾದ್ ಇವರು ಶ್ರೀ ಗಣೇಶ ಚತುರ್ಥಿಯಂದು ಕ್ರಿಕೆಟ್ ಆಡುತ್ತಿರುವ ಶ್ರೀ ಗಣೇಶಮೂರ್ತಿಯನ್ನು ತಯಾರಿಸಿದ್ದಾರೆ.  ಶ್ರೀ ಗಣಪತಿಯನ್ನು ಬ್ಯಾಟಿಂಗ್ ಮಾಡುವುದನ್ನು ತೋರಿಸಲಾಗಿದೆ ಮತ್ತು ಅವನ ವಾಹನ ಇಲಿಯನ್ನು ಬೌಲಿಂಗ್ ಮಾಡುವಂತೆ ತೋರಿಸಲಾಗಿದೆ.