ಹಿಂದೂ ಜನಜಾಗೃತಿ ಸಮಿತಿಯ ‘ಚರ್ಚಾ ಹಿಂದೂ ರಾಷ್ಟ್ರ ಕಿ’ ಈ ವಿಚಾರ ಸಂಕಿರಣದಲ್ಲಿ
ಪ್ರಸ್ತುತ ಭಾರತೀಯ ಮುಸಲ್ಮಾನರು ಕೇವಲ ಮಾಂಸ ಮಾತ್ರವಲ್ಲ, ಪ್ರತಿಯೊಂದು ಆಹಾರ ಮತ್ತು ವಸ್ತುಗಳೂ ಇಸ್ಲಾಮ್‍ಗನುಸಾರ ಮಾನ್ಯತೆ ಅಂದರೆ `ಹಲಾಲ್’ ಇರಬೇಕೆಂದು ಆಗ್ರಹಿಸುತ್ತಿದ್ದಾರೆ. ಅದಕ್ಕಾಗಿ ವಿವಿಧ ಕಂಪನಿಗಳಿಗೆ ‘ಹಲಾಲ್ ಸರ್ಟಿಫಿಕೆಟ್ (ಪ್ರಮಾಣಪತ್ರ)’ ಪಡೆಯುವುದನ್ನು ಅನಿವಾರ್ಯಗೊಳಿಸಲಾಗುತ್ತಿದೆ. ಈ ಮೂಲಕ, ಧರ್ಮದ ಆಧಾರದಲ್ಲಿ ನಡೆಸಲ್ಪಡುವ ‘ಇಸ್ಲಾಮಿಕ್ ಆರ್ಥಿಕವ್ಯವಸ್ಥೆ’, ಅಂದರೆ ‘ಹಲಾಲ್ ಇಕಾನಾಮಿ’ಯನ್ನು ಅತ್ಯಂತ ಕಪಟತನದಿಂದ ಈ ಜಾತ್ಯತೀತ ಭಾರತದಲ್ಲಿ ಜಾರಿಗೊಳಿಸಲಾಗಿದೆ. ಈ ‘ಹಲಾಲ್ ಆರ್ಥಿಕ ವ್ಯವಸ್ಥೆ’ ಎಂದರೇನು ?, ಯಾವುದೆಲ್ಲ ಉತ್ಪನ್ನಗಳನ್ನು `ಹಲಾಲ್’ ಎಂದು ಮಾರಾಟ ಮಾಡಲಾಗುತ್ತಿದೆ ?, ಯಾವ ಉದ್ಯಮಗಳು ‘ಹಲಾಲ್ ಸರ್ಟಿಫಿಕೇಶನ್’ಗೆ ಬಲಿಯಾಗಿವೆ ?, ಇದರಲ್ಲಿ ಸರಕಾರದ ಯಾವೆಲ್ಲ ಇಲಾಖೆಗಳು ತೊಡಗಿಕೊಂಡು ‘ಹಲಾಲ್ ಪ್ರಾಮಾಣಿಕೃತ’ ವಸ್ತುಗಳನ್ನು ಮಾರಾಟ ಮಾಡುತ್ತವೆ ?, ‘ಹಲಾಲ್ ಆರ್ಥಿಕ ವ್ಯವಸ್ಥೆ’ಯಿಂದ ಇತರ ವ್ಯಾಪಾರಿಗಳ ಮೇಲೆ ಯಾವ ರೀತಿ ಪರಿಣಾಮವಾಗುತ್ತಿದೆ ?, ‘ಹಲಾಲ್ ಸರ್ಟಿಫಿಕೆಟ್’ ತೆಗೆದುಕೊಳ್ಳಲು ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ, ಅವು ಸರಕಾರಿಯಾಗಿದೆಯೇ ಅಥವಾ ಖಾಸಗಿ ಆಗಿದೆಯೇ ?, ‘ಹಲಾಲ್ ಆರ್ಥಿಕ ವ್ಯವಸ್ಥೆ’ಯಿಂದ ಪಡೆದ ಹಣವನ್ನು ನಿಖರವಾಗಿ ಯಾವುದಕ್ಕೆ ಬಳಸಲಾಗಿದೆ ?, ಇದು ಹಾಗೂ ಈ ರೀತಿಯ ಅನೇಕ ಪ್ರಶ್ನೆಗಳ ಬಗ್ಗೆ ಉತ್ತರ ಪಡೆಯಲು ‘ಹಿಂದೂ ಜನಜಾಗೃತಿ ಸಮಿತಿ’ಯ ವತಿಯಿಂದ ‘ಚರ್ಚಾ ಹಿಂದೂರಾಷ್ಟ್ರ ಕೀ’ ಈ ವಿಚಾರ ಸಂಕಿರಣ ಸರಣಿಯಲ್ಲಿನ ‘ಹಲಾಲ್ ಸರ್ಟಿಫಿಕೆಶನ್ : ಒಂದು ಆರ್ಥಿಕ ಜಿಹಾದ್’ ಈ ಕುರಿತು ಹಿಂದಿ ಭಾಷೆಯಲ್ಲಿ ‘ವಿಶೇಷ ಸಂವಾದ’ವನ್ನು ಆಯೋಜಿಸಲಾಗಿದೆ.
ಈ ‘ವಿಶೇಷ ಸಂವಾದ’ದಲ್ಲಿ ‘ಜಟಕಾ ಸರ್ಟಿಫಿಕೆಶನ್ ಅಥಾರಿಟಿ’ಯ ಚೇರಮೇನ್ ಶ್ರೀ. ರವಿ ರಂಜನ್ ಸಿಂಗ್, ‘ವಿವೇಕಾನಂದ ಕಾರ್ಯ ಸಮಿತಿ’ಯ ಅಧ್ಯಕ್ಷ ಶ್ರೀ. ನೀರಜ ಅತ್ರಿ, ಅದೇ ರೀತಿ ಈ ವಿಷಯದ ಕುರಿತು ಅಧ್ಯಯನಕಾರ ಹಾಗೂ ‘ಹಿಂದೂ ಜನಜಾಗೃತಿ ಸಮಿತಿ’ಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು 18 ಸೆಪ್ಟೆಂಬರ್ 2021 ರಂದು ಸಂಜೆ 7 ಗಂಟೆಗೆ ಸಮಿತಿಯ ಜಾಲತಾಣ ‘Hindujagruti.org’, ‘HinduJagruti’ ಯ ‘ಯೂಟ್ಯೂಬ್ ಚಾನೆಲ್’ನಲ್ಲಿ ಮತ್ತು ‘@HindujagrutiOrg’ ಈ ಟ್ವಿಟರ್ ಹ್ಯಾಂಡಲ್‍ನಲ್ಲಿ ಎಲ್ಲರೂ ವೀಕ್ಷಿಸಬಹುದು. ಹಿಂದೂ ಸಮಾಜವು ಹಲಾಲ್ ಪ್ರಮಾಣೀಕೃತ ಆಹಾರ-ವಸ್ತುಗಳನ್ನು ತೆಗೆದುಕೊಳ್ಳುತ್ತಿಲ್ಲವಲ್ಲ, ಎಂಬುದನ್ನು ಅರ್ಥಮಾಡಿಕೊಳ್ಳಲು, ಈ ಕಾರ್ಯಕ್ರಮವನ್ನು ತಪ್ಪದೇ ನೋಡಬೇಕು ಮತ್ತು ಅದನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯದ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಕರೆ ನೀಡಿದ್ದಾರೆ.
ಈ ಕಾರ್ಯಕ್ರಮವನ್ನು ಈ ಕೆಳಗಿನ ಲಿಂಕ್‍ನಲ್ಲಿ ವೀಕ್ಷಿಸಬಹುದು!