ಉತ್ತರಾಖಂಡದಲ್ಲಿ ಹಿಂದೂಯೇತರರ ಪ್ರವೇಶ ನಿಷೇಧಿಸಲು ಕಾನೂನು ರೂಪಿಸಿ ! – ಮಹಾಮಂಡಲೇಶ್ವರ ಸ್ವಾಮಿ ಆನಂದ ಸ್ವರೂಪ ಮಹಾರಾಜ

‘ಕಾಲಿ ಸೇನೆ’ಯ ರಾಷ್ಟ್ರೀಯ ಅಧ್ಯಕ್ಷ ಮಹಾಮಂಡಲೇಶ್ವರ ಸ್ವಾಮಿ ಆನಂದ ಸ್ವರೂಪ ಮಹಾರಾಜ ಇವರ ಆಗ್ರಹ

ಹರಿದ್ವಾರ (ಉತ್ತರಾಖಂಡ) – ‘ಕಾಲಿ ಸೇನ’ ಈ ಧಾರ್ಮಿಕ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಮಹಾಮಂಡಲೇಶ್ವರ ಸ್ವಾಮಿ ಆನಂದ ಸ್ವರೂಪ ಮಹಾರಾಜ ಇವರು ಉತ್ತರಾಖಂಡದಲ್ಲಿ ಹಿಂದೂಯೇತರರ ಪ್ರವೇಶ ನಿಷೇಧಿಸಲು ಕಾನೂನು ರೂಪಿಸಲು ಆಗ್ರಹಿಸಿದ್ದಾರೆ. ಅವರು, ‘ದೇವ ಭೂಮಿ ಉತ್ತರಖಂಡದಲ್ಲಿ ಲವ್ ಜಿಹಾದ್, ಉಗುಳು ಜಿಹಾದ್, ಲ್ಯಾಂಡ್ ಜಿಹಾದ್ ಇವುಗಳಂತಹ ಅನೇಕ ಜಿಹಾದಗಳು ಬೆಳಕಿಗೆ ಬರುತ್ತೇವೆ. ಇದು ಸರಕಾರದ ಬೇಜವಾಬ್ದಾರಿತನದ ಪರಿಣಾಮವಾಗಿದೆ. ಉತ್ತರಖಂಡದಲ್ಲಿ ಹಿಂದೂಯೇತರರ ಪ್ರವೇಶದ ಕುರಿತು ಜನವರಿ ೧೨, ೨೦೨೫ ವರೆಗೆ ನಿಷೇಧಿಸದಿದ್ದರೆ, ತೀವ್ರ ಪ್ರತಿಭಟನೆ ನಡೆಸಲಾಗುವುದು ಮತ್ತು ಈ ಪ್ರತಿಭಟನೆ ಎಷ್ಟು ತೀವ್ರವಾಗಿರುವುದು ಎಂದರೆ ಸರಕಾರಿ ವ್ಯವಸ್ಥೆಯ ಪ್ರಯತ್ನದ ನಂತರ ಕೂಡ ಅದು ನಿಲ್ಲುವುದಿಲ್ಲ’, ಎಂದು ಅವರು ಉತ್ತರಖಂಡದಲ್ಲಿನ ಭಾಜಪ ಸರಕಾರಕ್ಕೆ ಎಚ್ಚರಿಕೆ ನೀಡಿದರು. ‘ಈ ಹಿಂದೆ ಉತ್ತರಾಖಂಡದಲ್ಲಿ ಎರಡುವರೆ ತಿಂಗಳ ಕಾಲ ಜನರ ಜೊತೆಗೆ ಸಂಪರ್ಕ ನಡೆಸಲಾಗುವುದು’, ಹೀಗೂ ಕೂಡ ಅವರು ಈ ಸಮಯದಲ್ಲಿ ಸ್ಪಷ್ಟಪಡಿಸಿದರು.

ಹರಿದ್ವಾರ ಮತ್ತು ಋಷಿಕೇಶ್ ಇಲ್ಲಿ ಹಿಂದೂಯೇತರರ ವಾಸಿಸುವುದು, ಭೂಮಿ ಖರೀಧಿಸುವುದು ಕಾನೂನಿನ ಪ್ರಕಾರ ನಿಷೇಧ !

ಹರಿದ್ವಾರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ಸ್ವಾಮಿ ಆನಂದ ಸ್ವರೂಪ ಇವರು, ಉತ್ತರಾಖಂಡದಲ್ಲಿನ ಪ್ರತಿಯೊಂದು ಗ್ರಾಮದಲ್ಲಿ ಮತ್ತು ನಗರದಲ್ಲಿ ಜನರನ್ನು ಜಾಗರೂಕ ಗೊಳಿಸಲಾಗುವುದು ಮತ್ತು ಬೆಂಬಲ ಪಡೆಯಲಾಗುವುದು. ನಾವು ಯಾವುದೇ ಪರಿಸ್ಥಿತಿಯಲ್ಲಿ ಉತ್ತರಾಖಂಡ ಅನ್ನು ಇಸ್ಲಾಮಿಕರಣವಾಗಲು ಬಿಡುವುದಿಲ್ಲ. 1915 ರಲ್ಲಿ ಹರಿದ್ವಾರ ಮತ್ತು ಋಷಿಕೇಶದಲ್ಲಿ ಒಂದು ಕಾನೂನು ಜಾರಿಗೊಳಿಸಲಾಗಿತ್ತು. ಅದರ ಅಡಿಯಲ್ಲಿ ಹಿಂದೂಯೇತರರು ಇಲ್ಲಿ ಶಾಶ್ವತವಾಗಿ ವಾಸಿಸುವುದು, ಭೂಮಿ ಖರೀದಿ ಮಾಡುವುದು ಅಥವಾ ಇತರ ಆಸ್ತಿಪಾಸ್ತಿ ಖರೀದಿಸುವುದು ಅಕ್ರಮವಾಗಿದೆ. ಈ ನಿಯಮ ಇಂದಿಗೂ ಕೂಡ ಜಾರಿಯಲ್ಲಿದೆ. ಉತ್ತರಾಖಂಡ ಸರಕಾರವು ಈ ಕಾನೂನನ್ನು ವಿಸ್ತರಿಸಿ ಅದು ಸಂಪೂರ್ಣ ರಾಜ್ಯದಲ್ಲಿ ಜಾರಿಗೊಳಿಸಬೇಕು, ಎಂದು ನಮ್ಮ ಇಚ್ಛೆ ಆಗಿದೆ ಎಂದು ಹೇಳಿದರು. ಉತ್ತರಾಖಂಡದ ಇಸ್ಲಾಮೀಕರಣದ ಕುರಿತು ಸರಕಾರ ಬೇಜವಾಬ್ದಾರಿತನ ತೋರಿದೆ. ಸುನಿಯೋಜಿತ ಷಡ್ಯಂತ್ರದ ಭಾಗವೆಂದು ಉತ್ತರಾಖಂಡದ ಇಸ್ಲಾಮಿಕರಣ ಮಾಡಲಾಗುತ್ತಿದೆ ಎಂದು ಹೇಳಿದರು.

ಉತ್ತರಾಖಂಡವನ್ನು ಕಾಶ್ಮೀರವಾಗದಂತೆ ರಕ್ಷಿಸಬೇಕು !

ಸ್ವಾಮಿ ಆನಂದ ಸ್ವರೂಪ ಇವರು ಮಾತು ಮುಂದುವರೆಸುತ್ತಾ, ರಾಜ್ಯ ಸರಕಾರ ನಿದ್ರೆಸುತ್ತಿದ್ದೂ ಅವರನ್ನು ಎಚ್ಚರಗೊಳಿಸಬೇಕಿದೆ. ಹಿಮಾಲಯ ಇದು ಯಾರಿಗೂ ವಾಸಿಸಲು ಅಲ್ಲ, ಅದು ತಪಸ್ವಿಗಳ ಸ್ಥಳವಾಗಿದೆ. ಇದು ಒಂದು ಆಧ್ಯಾತ್ಮಿಕ ನೆಲವಾಗಿದೆ. ಹಿಮಾಲಯ ಇದು ನಮ್ಮ ಹಿಂದುಗಳ ದೇವಸ್ಥಾನವಾಗಿದೆ. ಹಿಮಾಲಯದಲ್ಲಿನ ದೇವತ್ವವನ್ನು ನಾವು ರಕ್ಷಿಸಬೇಕು. ಉತ್ತರಖಂಡ ಮತ್ತು ಹಿಮಾಲಯದ ಪ್ರದೇಶ ೧೯೯೦ ರ ಕಾಶ್ಮೀರವಾಗುತ್ತಿದೆ ಮತ್ತು ನಾವು ನಮ್ಮ ಉತ್ತರಖಂಡವನ್ನು ಕಾಶ್ಮೀರವಾಗದಂತೆ ರಕ್ಷಿಸಬೇಕಿದೆ. ಉತ್ತರಾಖಂಡ ಸರಕಾರಕ್ಕೆ ಏನು ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಓರ್ವ ಸಂತರು ಈ ರೀತಿ ಏಕೆ ಆಗ್ರಹಿಸಬೇಕಾಗುತ್ತದೆ, ಇದರ ಅರ್ಥ ಪರಿಸ್ಥಿತಿ ಗಂಭೀರವಾಗಿದೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಭಾಜಪದ ಸರಕಾರ ಇರುವುದುರಿಂದ ಈ ಪ್ರಕರಣದ ಕುರಿತು ಗಾಂಭೀರ್ಯತೆಯಿಂದ ಯೋಗ್ಯ ನಿರ್ಣಯ ತೆಗೆದುಕೊಳ್ಳುವುದು ಆವಶ್ಯಕವಾಗಿದೆ, ಇಲ್ಲವಾದರೆ ಹಿಂದುಗಳ ಧಾರ್ಮಿಕ ಸ್ಥಳದಲ್ಲಿ ಬಾಂಗ್ಲಾದೇಶದಂತೆ ಪರಿಸ್ಥಿತಿ ನಿರ್ಮಾಣವಾಗಬಹುದು !