The Jaipur Dialogues : ‘ಸನಾತನ ಹಿಂದೂ ಸಂಕಲ್ಪ ಪತ್ರ’ದ ಪ್ರಸ್ತಾವ ಪ್ರಸಿದ್ಧಿ !

  • ‘ಜಯಪುರ್ ಡೈಲಾಗ್ಜ’ ನ ಕೊನೆಯ ದಿನ

  • ರಾಜಕಾರಣ, ರಾಷ್ಟ್ರವಾದ, ಆಂತರಿಕಸುರಕ್ಷೆ ಮತ್ತು ಹಿಂದುತ್ವ ಈ ಅಂಶಗಳ ಕುರಿತಾದ ಚರ್ಚೆಯ ಮೂಲಕ ಕಾರ್ಯಕ್ರಮದ ಮುಕ್ತಾಯ !

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವಾಗ ಎಡದಿಂದ ಮೇಜರ ಜನರಲ್ (ನಿವೃತ್ತ) ರಾಜೀವ ನಾರಾಯಣನ್ ಮತ್ತು ಆದಿ ಅಚಿಂತ

ಜಯಪುರ (ರಾಜಸ್ಥಾನ) – ಕಾನೂನು ಮತ್ತು ಸುವ್ಯವಸ್ಥೆಯ ಸಂದರ್ಭದಲ್ಲಿ ರಾಜ್ಯ ಸರಕಾರಗಳ ಅಭಿಪ್ರಾಯ ವಿಭಿನ್ನವಾಗಿರಬಹುದು; ಆದರೆ ದೇಶದ ಆಂತರಿಕ ಭದ್ರತೆಯ ಸಂದರ್ಭದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಬೇಕಾಗುವುದು. ಶತ್ರುಗಳ ಬಗ್ಗೆ ಮಾಹಿತಿ ನೀಡಿ ಅವರನ್ನು ದೇಶದ್ರೋಹಿಗಳೆಂದು ಗುರುತಿಸಬೇಕಾಗುತ್ತದೆ ಮತ್ತು ನುಸುಳುಕೋರರಿಗೆ ಹೊರಗೆ ಹೋಗಲು ಅನಿವಾರ್ಯಗೊಳಿಸಬೇಕು. ಮೂರು ದಿನದ ‘ದ ಜಯಪುರ ಡೈಲಾಗ್ಜ’ ಯಿಂದ ಆಯೋಜಿಸಿರುವ ‘ರಿಕ್ಲೇಮಿಂಗ ಭಾರತ’ ಕಾರ್ಯಕ್ರಮದ ಕೊನೆಯ ದಿನ ದೇಶವಿದೇಶದಲ್ಲಿನ ತಜ್ಞರು, ಸಾಹಿತಿಗಳು ಮತ್ತು ವಿಚಾರವಂತರು ಉಪಸ್ಥಿತರಿರುವವವರ ಪ್ರಶ್ನೆಗಳಿಗೆ ಮೇಲಿನ ಉತ್ತರಗಳ ಮೂಲಕ ಮಾರ್ಗದರ್ಶನ ನೀಡಿದರು.

‘ಜಯಪುರ ಡೈಲಾಗ್ಜ’ನ ಅಧ್ಯಕ್ಷ ಸಂಜಯ ದೀಕ್ಷಿತ್ ಇವರು ‘ಸನಾತನ ಪ್ರಭಾತ’ದ ಘೋಷಣಾ ಪತ್ರ ಪ್ರಕಾಶನ ಮಾಡಿದರು. ಈ ಸಮಯದಲ್ಲಿ ಎಲ್ಲಾ ಹಿಂದುತ್ವನಿಷ್ಠರಿಂದ ಸನಾತನ ಧರ್ಮ ಇದು ರಾಷ್ಟ್ರವಾದ ಆಗಿರುವುದರಿಂದ ಸನಾತನ ಹಿಂದುಗಳ ಭೌಗೋಳಿಕ ಗಡಿ ಮತ್ತು ಸಂಸ್ಕೃತಿಯ ರಕ್ಷಣೆಯ ಜವಾಬ್ದಾರಿ ಭಾರತವು ನಿರ್ವಹಿಸುವುದು, ಈ ನಿರ್ಧಾರ ವ್ಯಕ್ತ ಪಡಿಸಲಾಯಿತು. ಮಹಾರಾಷ್ಟ್ರದಲ್ಲಿನ ಹಿರಿಯ ಪತ್ರಕರ್ತ ಭಾವು ತೊರಸೇಕರ ಇವರು, ‘ಜಯಪುರ ಜಾಹೀರನಾಮ’ ಮತ್ತು ಠರಾವು ಪತ್ರಕ್ಕೆ ಒಪ್ಪಿಗೆ ನೀಡಿದರು.

ಚರ್ಚಾಕೂಟ : ಸ್ವಾವಲಂಬಿ ಭಾರತದ ಮುಂದಿರುವ ಸವಾಲುಗಳು !

ಭೂ – ರಾಜಕಾರಣ (‘ಜಿಯೋ ಪಾಲಿಟಿಕ್ಸ್), ಭೂ ಅರ್ಥಶಾಸ್ತ್ರ (ಜಿಯೋ ಎಕನಾಮಿಕ್ಸ್) ಮತ್ತು ಭೂ ವ್ಯೂಹರಚನೆ (ಜಿಯೋ ಸ್ಟ್ಯಾಕ್ಟಜಿ)’ ಈ ಚರ್ಚಾಕೂಟದಲ್ಲಿ ವಿಜಯ ಸರದಾನ ಇವರು ಮಾತನಾಡಿ, ನಮ್ಮ ವ್ಯವಹಾರದ ಶಕ್ತಿ ಬಹಳ ಅಶಕ್ತವಾಗಿದೆ. ಅದಕ್ಕಾಗಿ ನಾವು ಶಕ್ತಿಶಾಲಿ ಕಾನೂನುಗಳು ರೂಪಿಸುವ ಅವಶ್ಯಕತೆ ಇದೆ. ಕಾರಣ ಭಾರತದ ಮಾರುಕಟ್ಟೆ ವಿಶಾಲವಾಗಿದೆ ಇದು ೧೪೫ ಕೋಟಿಯ ಜನರ ದೇಶವಾಗಿದೆ. ಆತ್ಮನಿರ್ಭರವಾಗುವುದಕ್ಕಾಗಿ ನಾವು ನಮ್ಮ ಆಂತರಿಕ ವ್ಯವಸ್ಥೆ ಸುಧಾರಿಸಬೇಕು ಮತ್ತು ಆತ್ಮಪರೀಕ್ಷಣೆ ಮಾಡಬೇಕು ಎಂದು ಹೇಳಿದರು.

ಪ್ರಸಿದ್ಧ ವಿಚಾರವಂತ ಅಂಕಿತ ಶಹಾ ಇವರು ಮಾತನಾಡಿ, ನಾವು ನಮ್ಮ ಪ್ರಾಚೀನ ಭಾರತವನ್ನು ನೆನಪಿಟ್ಟುಕೊಳ್ಳಬೇಕು. ಭೂ-ರಾಜಕಾರಣ ಮತ್ತು ಭೂ-ಅರ್ಥಶಾಸ್ತ್ರ ಇತಿಹಾಸದಿಂದ ಕಲಿಯಬೇಕು. ಇದರಲ್ಲಿ ನಮ್ಮ ಜೀವನದ ಉದ್ದೇಶ ಮತ್ತು ಪ್ರಯತ್ನ ಹೇಳಲಾಗಿದೆ ಎಂದು ಹೇಳಿದರು.

೨೦೧೪ ರಂತಹ ಮುಂದಿನ ೯೯ ವಿಜಯಗಳನ್ನು ಹಿಂದೂಗಳು ಆಚರಿಸಬೇಕಿದೆ !

‘೨೦೨೯ ರ ರಾಜಕಾರಣ’ ಈ ವಿಷಯದ ಕುರಿತು ಮಾತನಾಡುವಾಗ ಯುವ ಪತ್ರಕರ್ತ ಅನುಪಮ ಸಿಂಹ, ತೂಹೀನ ಸಿಂನ್ಹಾ, ಓಂಕಾರ ಚೌದರಿ, ಶಂತನೂ ಗುಪ್ತಾ ಮತ್ತು ಹರ್ಷವರ್ಧನ ತ್ರಿಪಾಠಿ ಇವರು ಮಾತನಾಡುತ್ತಾ, ೨೦೨೯ ರ ರಾಜಕಾರಣ ೨೦೧೪ ಕ್ಕಿಂತಲೂ ಒಳ್ಳೆಯದಾಗಿ ಇರುವುದು. ಕಾಂಗ್ರೆಸ್ ಹಿಂದುಳಿದಿದೆ. ಹಿಂದುಗಳು ೨೦೧೪ ರಂತೆ ಮುಂದೆ 99 ವಿಜಯವನ್ನು ಆಚರಿಸುವರು.

ಇಂಡಿ ಮೈತ್ರೀಕೂಟ ಎಂದರೆ ಭ್ರಷ್ಟ ವಿಚಾರಧಾರೆ ಮತ್ತು ಜಾತಿಯ ಆಧಾರದಲ್ಲಿ ಬಿರುಕು ಮೂಡಿಸುವ ಮುಗಿಯದಿರದ ಪ್ರಯತ್ನ ಆಗಿದೆ. ೨೦೩೪ ವರೆಗೆ ಈ ದೇಶದಲ್ಲಿ ಕಾಂಗ್ರೆಸ್ಸಿಗೆ ಒಂದು ಸ್ಥಾನ ಕೂಡ ಬರಬಾರದು. ೧೯೮೪ ರಿಂದ ಕಾಂಗ್ರೆಸ್ ಸತತವಾಗಿ ತಿರಸ್ಕರಿಸಲ್ಪಟ್ಟಿದೆ ಮತ್ತು ಅದರ ನಂತರ ಕೂಡ ಸರಕಾರಗಳು ಹೇಗೆ ನಡೆದವು ? ಇದು ಎಲ್ಲರೂ ನೋಡಿದ್ದಾರೆ. ಈಗಿನ ಸ್ಥಿರ ಸರಕಾರದ ವಿಷಯದಲ್ಲಿ ವಿರೋಧಕರಲ್ಲಿ ದೊಡ್ಡ ಆತಂಕವಿದೆ. ಆದ್ದರಿಂದ ವಿವಿಧ ಕಥೆಗಳನ್ನು ರಚಿಸಿ ದೇಶವನ್ನು ಅಶಕ್ತಗೊಳಿಸುವ ಪ್ರಯತ್ನ ಮುಂದುವರೆದಿದೆ.

ಕಳೆದ ೭೬ ವರ್ಷಗಳಲ್ಲಿ ಕಮ್ಯುನಿಸ್ಟರು ದೇಶಕ್ಕೆ ಗೆದ್ದಲದಂತೆ ಕೊರೆದರು ! : ‘ಹಿಂದುತ್ವದ ವಿರುದ್ಧ ಇಸ್ಲಾಂ ‘ಈ ಚರ್ಚಾಕೂಟದಲ್ಲಿನ ಅಭಿಪ್ರಾಯ

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವಾಗ ಎಡದಿಂದ ಅಭಿಜಿತ್ ಚಾವಡ, ಅಭಿಜಿತ್ ಅಯ್ಯರ್ ಮಿತ್ರ ಮತ್ತು ಸುಶಾಂತ ಸರೀನ

ಸಂಜೆಯ ಕೂಟದಲ್ಲಿ ‘ಹಿಂದುತ್ವ ವಿರುದ್ಧ ಇಸ್ಲಾಂ ‘ಈ ವಿಷಯಗಳ ಕುರಿತು ನಸಿರ್ ಅಹಮದ್ ಶೇಖ್, ಆಭಾಸ ಮಾಲಧಯಾರ, ನೀರಜ ಅತ್ರೀ, ನಾಜಿಯಾ ಇಲಾಹಿ ಖಾನ, ಕಾರ್ತಿಕ ಗೌರ ಮತ್ತು ಓಮೇಂದ್ರ ರತ್ನು ಇವರಂತಹವರು ಕೂಡ ತೀಕ್ಷ್ಣವಾಗಿ ಅವರ ಅಭಿಪ್ರಾಯವನ್ನು ಮಂಡಿಸಿದರು. ‘ಕಮ್ಯುನಿಸ್ಟ್ ಮತ್ತು ಭಾರತೀಯ ಮೌಲ್ಯ ಪ್ರಣಾಳಿಕರ’ ಈ ವಿಷಯದ ಕುರಿತು ಡಾ. ಸಚ್ಚಿದಾನಂದ ಶೇವಡೆ ಇವರು, ಕಮ್ಯುನಿಸ್ಟ್ ಬಹಳ ಜಾಣರಿರುತ್ತಾರೆ. ಅವರು ಕಾಶ್ಮೀರದಲ್ಲಿ ಇಸ್ಲಾಂನ ಬಗ್ಗೆ ಮಾತನಾಡುವುದಿಲ್ಲ, ಬದಲಾಗಿ ದೇಶದಲ್ಲಿನ ಇತರ ರಾಜ್ಯಗಳಲ್ಲಿ ಹಿಂದುಗಳ ವಿರುದ್ಧ ಮಾತನಾಡುತ್ತಾರೆ. ಹಿಂದುಗಳು ಮತ್ತು ಅವರ ದೇವತೆಗಳ ಕುರಿತು ಟೀಕಿಸುತ್ತಾರೆ. ಕಳೆದ ೭೬ ವರ್ಷದಲ್ಲಿ ಅವರು ದೇಶವನ್ನು ಗೆದ್ದಲಿನಂತೆ ಕೊರೆದಿದ್ದಾರೆ; ಆದರೆ ಈಗ ಕಾಲ ಬದಲಾಗಿದೆ ಎಂದು ಹೇಳಿದರು.

ಸಂದೀಪ ಬಾಲಕೃಷ್ಣನ್ ಇವರು, ಕಮ್ಯುನಿಸ್ಟರು ಸಮಾಜವನ್ನು ಎರಡು ಭಾಗದಲ್ಲಿ ವಿಭಜಿಸಿದ್ದಾರೆ. ಚಲನಚಿತ್ರ, ನಾಟಕ, ಸಾಹಿತ್ಯ, ವಿಜ್ಞಾನ, ಶಿಕ್ಷಣ, ಕುಟುಂಬ ಮುಂತಾದ ಎಲ್ಲಾ ವಿಷಯಗಳು ಅವರ ವಿಚಾರಧಾರೆಯ ಪ್ರಕಾರವೇ ನಿಶ್ಚಯವಾಗಿದೆ; ಅವು ತಮ್ಮ ಬಲದಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಅವರಿಗೆ ಎಡಪಂಥೀಯರು ಎನ್ನದೆ, ‘ಕಮ್ಯುನಿಸ್ಟ್'(ಕೋಮುವಾದಿ) ಎಂದು ಹೇಳಬೇಕು, ಎಂದು ಹೇಳಿದರು.

ಅಭಿಜಿತ ಚಾವಡ ಇವರು, ಪಾಕಿಸ್ತಾನದಲ್ಲಿ ‘ಐ ಎಸ್ ಐ’ ಅಂತಹ ಅನೇಕ ಸಂಘಟನೆಗಳು ಕಾರ್ಯನಿರತವಾಗಿದೆ. ಪಾಕಿಸ್ತಾನದ ತಾಲಿಬಾನ್ ಮತ್ತು ಅಪಘಾನಿಸ್ತಾನ್ ಇವುಗಳಲ್ಲಿ ಸೌಹಾರ್ದಯುತ ಸಂಬಂಧವಿಲ್ಲ. ಈ ದೇಶಗಳು ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆಯ ಮೂಲಕ ತಮ್ಮ ಆರ್ಥಿಕ ವ್ಯವಸ್ಥೆ ನಿಭಾಯಿಸುವ ಪ್ರಯತ್ನ ಮಾಡುತ್ತವೆ. ಹೀಗೆ ಮಾಡಿದರೂ ಕೂಡ ಅವುಗಳು ವಿಫಲವಾಗಿವೆ ಎಂದು ಹೇಳಿದರು.

ಅಭಿಜಿತ್ ಅಯ್ಯರ್ ಮಿತ್ರ ಇವರು, ಪಾಕಿಸ್ತಾನ್, ಅಪಘಾನಿಸ್ತಾನ್ ಮತ್ತು ಇರಾನ್ ಈ ದೇಶಗಳು ಆರ್ಥಿಕ ಕಳ್ಳಸಾಗಾಣಿಕೆ ಮತ್ತು ಭಯೋತ್ಪಾದನೆಯಲ್ಲಿ ತೊಡಗಿವೆ; ಆದರೆ ಮೂರು ದೇಶಗಳ ವಿಕಾಸವಾಗಿಲ್ಲ, ಎಂದು ಹೇಳಿದರು.