* ಮೂಗಿನಲ್ಲಿ ಔಷಧಿಯನ್ನು ಹಾಕುವ ಪದ್ಧತಿಯು ಆಯುರ್ವೇದದಲ್ಲಿ ಸಾವಿರಾರು ವರ್ಷಗಳಿಂದ ಇದೆ. ಇದನ್ನೇ ಈಗ ವಿಜ್ಞಾನವು ಹೇಳುತ್ತಿದೆ. ಇದರಿಂದ ಆಯುರ್ವೇದದ ಮಹತ್ವವು ಗಮನಕ್ಕೆ ಬರುತ್ತದೆ ! – ಸಂಪಾದಕರು * ಹಿಂದೂಗಳನ್ನು ‘ಗೋಮೂತ್ರ ಕುಡಿಯುವವರು’ ಮತ್ತು ‘ವನವಾಸಿ’ ಗಳೆಂದು ಹೀಯಾಳಿಸುವ ಮತ್ತು ಹಿಂದುತ್ವವನ್ನು ಉಚ್ಚಾಟಿಸಲು ತುದಿಗಾಲಲ್ಲಿ ನಿಂತಿರುವ ಮಂಡಳಿ ಈಗ ಚಕಾರ ಎತ್ತುವುದಿಲ್ಲ ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು |
ನವದೆಹಲಿ – ನ್ಯಾಷನಲ್ ಮೆಡಿಸಿನಲ್ ಪ್ಲಾಂಟ ಬೋರ್ಡ್ (ರಾಷ್ಟ್ರೀಯ ಔಷಧಿ ವನಸ್ಪತಿ ಮಂಡಳಿ) ಯು ಕೊರೊನಾ ಪ್ರತಿಬಂಧಕ ಉಪಚಾರ ಪದ್ಧತಿಯಲ್ಲಿ ಮೂಗಿನಲ್ಲಿ ಅಣು ತೈಲ ಅಥವಾ ಎಳ್ಳಿನ ಎಣ್ಣೆಯನ್ನು ಹಾಕಬೇಕು ಎಂದು ಹೇಳಿದೆ. ರೋಗನಿರೋಧಕತೆಯೊಂದಿಗೆ ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಎಣ್ಣೆಯನ್ನು ಉಪಯೋಗಿಸಿದ ನಂತರ ಪುಪ್ಪುಸಗಳಲ್ಲಿನ ವಿಷಾಣುಗಳ ಪ್ರಮಾಣವು ಕಡಿಮೆಯಾಗಿ ನ್ಯೂಮೋನಿಯಾದ ತೀವ್ರತೆಯು ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ.
ಕೊರೊನಾ ರೋಗಾಣುವಿನ ಸೋಂಕು ಶ್ವಾಸ ನಳಿಕೆಯ ಮೇಲಿನ ಭಾಗದಲ್ಲಿ ಆರಂಭವಾಗುತ್ತದೆ. ಈ ಸೋಂಕಿನಿಂದ ರೋಗಿಯ ಪುಪ್ಪುಸಗಳ ಮೇಲೆ ಪರಿಣಾಮವಾಗಿ ಅವನಿಗೆ ಉಸಿರಾಡಲು ತೊಂದರೆಯಾಗುತ್ತದೆ. ಇದಕ್ಕೆ ಉಪಾಯವೆಂದು ಶ್ವಾಸ ನಳಿಕೆಯಲ್ಲಿ ಈ ರೋಗಾಣುಗಳು ಪ್ರವೇಶಿಸದಂತೆ ಮಾಡುವುದು ಅವಶ್ಯಕವಾಗಿದೆ. ಇದಕ್ಕಾಗಿ ಮೂಗಿನಲ್ಲಿ ಅಣು ತೈಲ ಅಥವಾ ಎಳ್ಳೆಣ್ಣೆಯನ್ನು ಹಾಕಬೇಕು ಎಂದು ಮಂಡಳಿಯು ಹೇಳಿದೆ. ಅಣು ತೈಲವನ್ನು ಬಳಸುವ ಕೊರೊನಾ ರೋಗಿಗಳಲ್ಲಿ ಎಣ್ಣೆಯನ್ನು ಬಳಸದೆ ಉಪಚಾರ ಪಡೆಯುತ್ತಿರುವ ರೋಗಿಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪುಪ್ಪುಸಗಳಲ್ಲಿನ ಸೋಂಕು ಕಡಿಮೆಯಾಗುತ್ತಿರುವುದು ಕಂಡುಬಂದಿದೆ. ಆದರೆ ಎಳ್ಳೆಣ್ಣೆಯನ್ನು ಬಳಸಿದ ರೋಗಿಗಳ ಪುಪ್ಪುಸಗಳಲ್ಲಿನ ಸೋಂಕಿನ ಮೇಲೆ ಹೆಚ್ಚಿನ ಪರಿಣಾಮ ಕಂಡುಬಂದಿಲ್ಲ. ಅಣು ತೈಲದ ಉಪಚಾರದಿಂದ ರೋಗಾಣುಗಳ ಪ್ರಮಾಣವು ಕಡಿಮೆಯಾಗಿ ರೋಗದ ತೀವ್ರತೆಯು ಕಡಿಮೆಯಾಗುತ್ತಿರುವುದು ಕಂಡುಬಂದಿದೆ.