ಅಫ್ಘಾನಿಸ್ತಾನಕ್ಕೆ 4 ಸಾವಿರ 714 ಕೋಟಿ ರೂಪಾಯಿಯ ಸಹಾಯಧನ ಘೋಷಿಸಿದ ಅಮೆರಿಕಾ

ಅಮೆರಿಕಾದ ಗಾಂಧಿಗಿರಿ ! ಇದು ಹಾವಿಗೆ ಹಾಲು ಕುಡಿಸಿದಂತೆ ಆಗಿದೆ ! ಮಾನವೀಯತೆಯ ಹೆಸರಿನಲ್ಲಿ ಕೊಡಲಾಗುವ ಸಹಾಯಧನವು ಬಡ ಅಫ್ಘಾನೀ ನಾಗರಿಕರಿಗೆ ಸಿಗುವುದೋ ಅಥವಾ ತಾಲಿಬಾನ್ ಉಗ್ರರು ತಮಗಾಗಿ ಖರ್ಚು ಮಾಡುವರೋ, ಈ ಬಗ್ಗೆ ಯಾರು ಮತ್ತು ಹೇಗೆ ನಿಗಾ ಇಡುವರು ? ಈ ಮೊದಲು ಅಮೇರಿಕಾವು ಈ ರೀತಿಯಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿತ್ತು ಮತ್ತು ಪಾಕಿಸ್ತಾನವು ಅದನ್ನು ಜಿಹಾದಿ ಉಗ್ರರ ಮೇಲೆ ಖರ್ಚು ಮಾಡಿದೆ ಎಂಬ ಇತಿಹಾಸವಿದೆ ! – ಸಂಪಾದಕರು 

ವಾಷಿಂಗ್ಟನ(ಅಮೆರಿಕ) – ಅಮೆರಿಕಾದಿಂದ ಅಫ್ಘಾನಿಸ್ತಾನದ ನಾಗರಿಕರಿಗಾಗಿ 4 ಸಾವಿರ 714 ಕೋಟಿ ರೂಪಾಯಿ ಸಹಾಯ ಘೋಷಿಸಲಾಗಿದೆ. ವಿಶ್ವಸಂಸ್ಥೆಯ ಅಮೆರಿಕಾದ ರಾಯಭಾರಿ ಲಿಂಡಾ ಥೋಮ್ಪಸನ ಗ್ರೀನಫಿಲ್ಡ್ ಇವರು ‘ಈ ಆರ್ಥಿಕ ಸಹಾಯವನ್ನು ಮಾನವೀಯತೆಯ ದೃಷ್ಟಿಯಿಂದ ನೀಡುತ್ತಿದ್ದೇವೆ’, ಎಂದು ಹೇಳಿದ್ದಾರೆ. ‘ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಇನ್ನಷ್ಟು ಸಹಾಯ ನೀಡುವ ವಿಚಾರ ಮಾಡಲಾಗುವುದು’, ಎಂದೂ ಕೂಡ ಅವರು ಸ್ಪಷ್ಟಪಡಿಸಿದರು. ಈ ಮೊದಲು ಚೀನಾ ಕೂಡ ಅಫ್ಘಾನಿಸ್ತಾನಕ್ಕೆ 2 ಸಾವಿರ 283 ಕೋಟಿ ರೂಪಾಯಿ ಸಹಾಯ ಮಾಡುವುದಾಗಿ ಘೋಷಿಸಿತ್ತು. ಅದರಲ್ಲಿ ಆಹಾರ ಮತ್ತು ಕೊರೋನಾ ಲಸಿಕೆಗಳು ಒಳಗೊಂಡಿದ್ದವು. ಇದು ಚೀನಾವು ಅಫ್ಘಾನಿಸ್ತಾನಕ್ಕೆ ಮಾಡಿರುವ ಸಹಾಯದ ಮೊದಲ ಹಂತವಾಗಿತ್ತು ಎಂದು ಚೀನಾದ ವಿದೇಶಾಂಗ ಸಚಿವಾಲಯದಿಂದ ಹೇಳಲಾಗಿದೆ.