‘ಹಿಂದುತ್ವವೇ ವಿಶ್ವಬಂಧುತ್ವದ ನಿಜವಾದ ಆಧಾರ’ ಈ ಕುರಿತು ಆಯೋಜಿಸಲಾದ ವಿಶೇಷ ಸಂವಾದ !

ಹಿಂದೂ ಸಂಸ್ಕೃತಿಯು ವಿಶ್ವಬಂಧುತ್ವದ ಮತ್ತು ಇತರ ಸಂಸ್ಕೃತಿಗಳು 9/11 ರಂದು ವಿಶ್ವ ವಿಧ್ವಂಸದ ಸಂದೇಶವನ್ನು ನೀಡಿವೆ ! – ಡಾ. ಸಚ್ಚಿದಾನಂದ ಶೆವಡೆ, ಲೇಖಕರು ಮತ್ತು ಪ್ರವಚನಕಾರರು

ಸ್ವಾಮಿ ವಿವೇಕಾನಂದರು 128 ವರ್ಷಗಳ ಹಿಂದೆ 9/11 ರಂದು ಅಮೆರಿಕಾದ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಸಂಸ್ಕೃತಿಯು ವಿಶ್ವಬಂಧುತ್ವದ ಸಂದೇಶ ನೀಡುತ್ತದೆ ಎಂಬುದು ತೋರಿಸಿದ್ದರು, ಅದೇ ಅಮೇರಿಕಾದಲ್ಲಿ ೨೦ ವರ್ಷಗಳ ಹಿಂದೆ 9/11 ರಂದು ಭಯೋತ್ಪಾದಕ ದಾಳಿ ಮಾಡಿ ಇತರ ಸಂಸ್ಕೃತಿಗಳು ವಿಶ್ವ ವಿಧ್ವಂಸದ ಸಂದೇಶವನ್ನು ನೀಡುತ್ತವೆ ಎಂಬುದು ಬೆಳಕಿಗೆ ಬಂದಿದೆ. ಇದು ಇವೆರಡು ಸಂಸ್ಕೃತಿಗಳ ನಡುವಿನ ವ್ಯತ್ಯಾಸವಿದೆ. ಇಂದು ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮಹಿಳೆಯರ ಜೊತೆ ಹೇಗೆ ವರ್ತಿಸುತ್ತಾರೆ ಎಂಬುದು ನಾವು ನೋಡುತ್ತಿದ್ದೇವೆ. ಜಗತ್ತಿನಲ್ಲಿ ೮೫ ಭಯೋತ್ಪಾದಕ ಸಂಘಟನೆಗಳಿವೆ. ಅದರಲ್ಲಿ ಮುಖ್ಯವಾಗಿ ಇಸ್ಲಾಮಿ, ಕ್ರಿಶ್ಚಿಯನ್ ಮತ್ತು ಕಮ್ಯುನಿಸ್ಟ್ ಸೈದ್ಧಾಂತಿಕ ಸಂಸ್ಥೆಗಳನ್ನು ಒಳಗೊಂಡಿವೆ. ಇದರಲ್ಲಿ ಒಂದೂ ಕೂಡ ಹಿಂದೂ ಸಂಘಟನೆ ಇಲ್ಲ. ಜಗತ್ತಿನಲ್ಲಿ ನಾಲ್ಕನೇಯ ಎಲ್ಲಕ್ಕಿಂತ ದೊಡ್ಡ ಜನಸಂಖ್ಯೆ ಹಿಂದೂಗಳದ್ದಾಗಿದೆ. ಕಾಶ್ಮೀರದಿಂದ ನಾಲ್ಕುವರೆ ಲಕ್ಷ ಹಿಂದೂಗಳು ನಿರಾಶ್ರಿತರಾದರೂ ಅದರಲ್ಲಿ ಒಬ್ಬ ವ್ಯಕ್ತಿಯೂ ಭಯೋತ್ಪಾದಕನಾಗಲಿಲ್ಲ; ಏಕೆಂದರೆ ಹಿಂದೂಗಳು ಸಹಿಷ್ಣುಗಳಾಗಿದ್ದಾರೆ. ಹಿಂದೂಗಳು ಎಂದಾದರೂ ಖಡ್ಗದ ಬಲದಲ್ಲಿ ಮತ್ತು ಕೈಯಲ್ಲಿ ಧರ್ಮಗ್ರಂಥವನ್ನು ಹಿಡಿದು ಧರ್ಮವನ್ನು ವಿಸ್ತರಿಸಲಿಲ್ಲ. ‘ಸಂಘರ್ಷ ಬೇಡ, ಸಹಕಾರ ಬೇಕು’, ‘ನಾಶ ಬೇಡ, ಸ್ವೀಕಾರ ಬೇಕು’, ‘ಕುಸಂವಾದ ಬೇಡ, ಸಂವಾದ ಬೇಕು’, ಈ ರೀತಿಯ ಮೂರು ಅಂಶದ ಆಧಾರದಲ್ಲಿ ಹಿಂದೂ ಧರ್ಮವು ವಿಶ್ವಬಂಧುತ್ವದ ಪ್ರೇರಣೆ ನೀಡುತ್ತದೆ, ಎಂದು ಸುಪ್ರಸಿದ್ಧ ಲೇಖಕ ಮತ್ತು ಪ್ರವಚನಕಾರ ಡಾ. ಸಚ್ಚಿದಾನಂದ ಶೆವಡೆ ಇವರು ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಹಿಂದುತ್ವವೇ ವಿಶ್ವಬಂಧುತ್ವದ ನಿಜವಾದ ಆಧಾರ’ ಎಂಬ ವಿಷಯದ ಮೇಲೆ ‘ಆನ್‌ಲೈನ್’ನಲ್ಲಿ ಆಯೋಜಿಸಿದ್ದ ‘ವಿಶೇಷ ಸಂವಾದ’ದಲ್ಲಿ ಮಾತನಾಡುತ್ತಿದ್ದರು.

ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಹಿಂದೂ ಧರ್ಮವು ವಿಶ್ವಬಂಧುತ್ವದ ಆಚರಣೆ ಮತ್ತು ಬೋಧನೆಯನ್ನು ನೀಡುತ್ತಿರುವಾಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದೂ ಧರ್ಮದ ವಿರುದ್ಧ ‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಪರಿಷತ್ತನ್ನು ಆಯೋಜಿಸಲಾಗುತ್ತಿದೆ. ಅದರಲ್ಲಿ ಒಬ್ಬಾನೊಬ್ಬ ವಕ್ತಾರನೂ ಹಿಂದೂ ಧರ್ಮದ ಅಭ್ಯಾಸವಿರುವವನಿಲ್ಲ. ಎಲ್ಲರೂ ಎಡಪಂಥೀಯ ವಕ್ತಾರರು ಸಹಭಾಗಿ ಆಗಿದ್ದಾರೆ. ಇದರಲ್ಲಿ ಭಾರತದ ಆಯೇಷಾ ಕಿಡವಾಯಿ, ಆನಂದ್ ಪಟವರ್ಧನ್, ಬಾನು ಸುಬ್ರಹ್ಮಣ್ಯಂ, ಮೊಹಮ್ಮದ್ ಜುನೈದ್, ಮೀನಾ ಕಂದಾಸ್ವಾಮಿ, ನೇಹಾ ದೀಕ್ಷಿತ್ ಭಾಗವಹಿಸಿದ್ದಾರೆ. ಅವರು ಹಿಂದೂಗಳ ವಿರುದ್ಧ ಇಂತಹ ಪರಿಷತ್ತುಗಳನ್ನು ನಡೆಸಬಹುದು. ಇದರಿಂದ ಹಿಂದುಗಳು ಸಹಿಷ್ಣುಗಳು ಎಂಬುದನ್ನು ಸಾಬೀತಾಗುತ್ತದೆ. ಇತರ ಧರ್ಮಗಳ ವಿರುದ್ಧ ಇಂತಹ ಪರಿಷತ್ತು ನಡೆಸಲು ಎಡಪಂಥೀಯರಿಗೆ ಧೈರ್ಯವಿದೆಯೇ? ಇದರ ಪರಿಣಾಮವೇನಾಗಬಹುದು, ಇದು ‘ಚಾರ್ಲಿ ಹೆಬ್ಡೋ’ದಿಂದ ಗಮನಕ್ಕೆ ಬರಬಹುದು. ತದ್ವಿರುದ್ಧ ಈ ಹಿಂದೂ ವಿರೋಧಿ ಪರಿಷತ್ತಿನಿಂದಾಗಿ ಹಿಂದೂ ಸಮಾಜವು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದಾಗುತ್ತಿದೆ. ಎಡಪಂಥೀಯರಿಗೆ ಕೇವಲ ವಿವಾದವನ್ನು ಸೃಷ್ಟಿಸುವ ಅಭ್ಯಾಸವಿದೆ. ಅವರಿಗೆ ವಿವಾದವನ್ನು ಪರಿಹರಿಸಲು ಬರುವುದಿಲ್ಲ. ಆದ್ದರಿಂದ ಅವರ ರಷ್ಯಾದಂತಹ ದೊಡ್ಡ ದೇಶವು ಛಿದ್ರವಿಛಿದ್ರಗೊಂಡಿದೆ. ಹಲವರ ಧ್ವನಿಯನ್ನು ಹತ್ತಿಕ್ಕಿದ ಚೀನಾ ನಾಳೆ ಕೂಡ ವಿಭಜನೆಯಾಗುವ ಸಾಧ್ಯತೆಯಿದೆ. ಇತರರಿಗೆ ಸಿದ್ಧಾಂತ ಮತ್ತು ಪ್ರಜಾಪ್ರಭುತ್ವವನ್ನು ಬೋಧಿಸುವ ಎಡಪಂಥೀಯರ ದೇಶದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ ? ಹಿಟ್ಲರನ ಉದಾಹರಣೆಯನ್ನು ಯಾವಾಗಲೂ ಉಲ್ಲೇಖಿಸುವ ಎಡಪಂಥೀಯರು, ಎಡಪಂಥೀಯ ವಿಚಾರವಾದಿಯಾದ ಸ್ಟಾಲಿನ್ ಹಿಟ್ಲರ್‌ಗಿಂತ ಹೆಚ್ಚಿನ ಜನರನ್ನು ಕೊಂದಿದ್ದಾನೆ ಸ್ಟಾಲಿನ್ 2 ಕೋಟಿ ಜನರನ್ನು ಕೊಂದರೆ, ಮಾವೋ ೩ ಕೋಟಿ ಚೀನಿಯರನ್ನು ಕೊಂದನು. ಈ ಸತ್ಯವು ಜನರ ತನಕ ಹೋಗಬೇಕು’ ಎಂದು ಡಾ. ಶೆವಾಡೆ ಈ ಸಮಯದಲ್ಲಿ ಹೇಳಿದರು.