ಕೇರಳದಲ್ಲಿನ ‘ಅದ್ವೈತ ಆಶ್ರಮ’ದ ಸ್ವಾಮಿಗಳಾದ ಚಿದಾನಂದಪುರಿಯವರ ಮಾನಹಾನಿ ಮಾಡಲು ಸಾಮ್ಯವಾದಿಗಳಿಂದ ಅವಮಾನಕರ ಪ್ರಯತ್ನ !

ಅಪ್ರಾಪ್ತ ಹುಡುಗಿಯ ಲೈಂಗಿಕ ಶೋಷಣೆ ಮಾಡಿರುವ ಆರೋಪಿಯನ್ನು ರಕ್ಷಿಸುತ್ತಿದ್ದಾರೆಂಬ ಆರೋಪ

ಚರ್ಚನಲ್ಲಿ ಪಾದ್ರಿಗಳಿಂದ ನನ್, ಹುಡುಗ, ಹುಡುಗಿಯರ ಮೇಲಾಗುತ್ತಿರುವ ಲೈಂಗಿಕ ಶೋಷಣೆಯ ವಿರುದ್ಧ ಸಾಮ್ಯವಾದಿಗಳು ಏಕೆ ಧ್ವನಿ ಎತ್ತುವುದಿಲ್ಲ ? ಕೇರಳದಲ್ಲಿ ಇಂತಹ ಅನೇಕ ಘಟನೆಗಳು ನಡೆಯುತ್ತಿರುವಾಗ ಸಾಮ್ಯವಾದಿಗಳಿಂದ ಪಾದ್ರಿಗಳನ್ನು ರಕ್ಷಿಸುವ ಪ್ರಯತ್ನಗಳಾಗುತ್ತವೆ. ಆದರೆ ಹಿಂದೂಗಳ ಸಂತರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಅವರ ಮಾನಹಾನಿ ಮಾಡಲು ಸಾಮ್ಯವಾದಿಗಳು ಮುಂಚೂಣಿಯಲ್ಲಿರುತ್ತಾರೆ, ಇದೇ ಸಾಮ್ಯವಾದಿಗಳ ಡಾಂಭಿಕತೆಯಾಗಿದೆ ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು 

ಸ್ವಾಮಿ ಚಿದಾನಂದಪುರಿ

ಕಲ್ಲಿಕೋಟೆ (ಕೇರಳ) – ಇಲ್ಲಿನ ‘ಅದ್ವೈತ ಆಶ್ರಮ’ ಮತ್ತು ಅವರ ಪ್ರಮುಖ ಸ್ವಾಮಿಗಳಾದ ಚಿದಾನಂದಪುರಿಯವರ ಮೇಲೆ ಕೇರಳದ ಸಾಮ್ಯವಾದಿ ವಿಚಾರ ಸರಣಿಯ ಜನರು ಅಪ್ರಾಪ್ತ ಯುವತಿಯ ಲೈಂಗಿಕ ಶೋಷಣೆ ಮಾಡಿದರಿಗೆ ರಕ್ಷಣೆ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಸ್ವಾಮಿ ಚಿದಾನಂದಪುರಿಯವರು ಯಾವಾಗಲೂ ಹಿಂದುತ್ವದ ಸಮರ್ಥನೆಗಾಗಿ ಮಂಚೂಂಣಿಯಲ್ಲಿರುತ್ತಾರೆ. ಹಿಂದೂ ಧರ್ಮದ ಮೇಲಿನ ಆಘಾತಗಳನ್ನು ಅವರು ವಿರೋಧಿಸುತ್ತಾರೆ. ಆದುದರಿಂದಲೇ ಅವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿದ್ದಾರೆಂದು ಹೇಳಲಾಗುತ್ತಿದೆ.

1. ಜನವರಿ 2018 ರಲ್ಲಿ ಆಶ್ರಮದ ‘ಶ್ರೀ ಶಂಕರ ನ್ಯಾಸ’ದ ಭೂಮಿಯಲ್ಲಿ ‘ಕೇರಳ ಸ್ಟೇಟ್ ಸ್ಪೋರ್ಟ್ಸ್ ಕೌನ್ಸಿಲಿಂಗ್’, ‘ಕೇರಳ ಕಲರಿಪಯಟ್ಟು ಅಸೋಸಿಯೇಷನ್’ ಮತ್ತು ‘ಮಿನಿಸ್ಟ್ರಿ ಆಫ್ ಯೂತ್ ಅಫೇರ್ಸ್’ ಎಂಬ ಸರಕಾರಿ ಸಂಘಟನೆಗಳಿಂದ ಮಾನ್ಯತೆಯನ್ನು ಪಡೆದಿರುವ ‘ಪ್ರೆರಂಬ್ರಾ ಶಿವ ಶಕ್ತಿಕೇಂದ್ರ’ಕ್ಕೆ ಕಲರಿಪಯಟ್ಟು (ಕೇರಳದಲ್ಲಿನ ಕರಾಟೆಯ ವಿಧ) ಕಲಿಸಲು ಸಮಾಜದಿಂದ ಬಂದಿರುವಂತಹ ಬೇಡಿಕೆಯಿಂದಾಗಿ ಸ್ಥಳ ನೀಡಲಾಗಿತ್ತು. ಶ್ರೀ. ಮಜೀಂದ್ರನ್ ಗುರುಕ್ಕಲ ಇವರು ಈ ಕೇಂದ್ರದ ಮುಖ್ಯಸ್ಥರಾಗಿದ್ದರು.

2. 2018 ರಲ್ಲಿ ಕೇರಳ ರಾಜ್ಯದಲ್ಲಿ ಬಂದಂತಹ ನೆರೆಯಿಂದಾಗಿ ಈ ಕೇಂದ್ರವು ಕೆಲವು ತಿಂಗಳವರೆಗೆ ಮುಚ್ಚಲ್ಪಟ್ಟಿತ್ತು. ಅನಂತರ ಪುನಃ ಸ್ವಲ್ಪ ಸಮಯದವರೆಗೆ ವರ್ಗಗಳು ನಡೆಯುತ್ತಿದ್ದವು; ಆದರೆ ಕೊರೊನಾ ಮಹಾಮಾರಿಯಿಂದಾಗಿ ಅದು ಪುನಹ ಮುಚ್ಚಲ್ಪಟ್ಟಿತು. ಈ ಕೇಂದ್ರದಲ್ಲಿ ಅನೇಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಈ ಸಮಯದಲ್ಲಿ ಶ್ರೀ. ಮಜೀಂದ್ರನ್ ಗುರುಕ್ಕಲ ಇವರು ಅಪ್ರಾಪ್ತ ಹುಡುಗಿಯ ಶೋಷಣೆ ಮಾಡಿದ್ದಾರೆ ಎಂಬ ಆರೋಪವೂ ಈಗ ಬಹಿರಂಗವಾಗಿದೆ. ಆಗ ಆ ಹುಡುಗಿಯು 11 ವರ್ಷದವಳಾಗಿದ್ದಳು. ಅವಳಿಗೆ ಈಗ ಮಾನಸಿಕ ತೊಂದರೆಯಾಗುತ್ತಿದೆ. ಆದುದರಿಂದ ಅವಳನ್ನು ವೈದ್ಯರ ಬಳಿ ಕೊಂಡೊಯ್ದಾಗ ಆಕೆಯೊಂದಿಗೆ ಲೈಂಗಿಕ ಶೋಷಣೆಯಾಗಿರುವ ಮಾಹಿತಿಯು ಬಹಿರಂಗವಾಗಿದೆ. ಆದುದರಿಂದ ಶ್ರೀ. ಮಜೀಂದ್ರನ ಇವರನ್ನು ಬಂಧಿಸಲಾಗಿದೆ.

3. ಸ್ವಾಮೀಜಿ ಮತ್ತು ಆಶ್ರಮಕ್ಕೆ ಈ ಪ್ರಕರಣದಲ್ಲಿ ಯಾವುದೇ ಸಂಬಂಧವಿಲ್ಲದಿರುವಾಗಲೂ ಕಲರಿಪಯಟ್ಟುಗಾಗಿ ನೀಡಲಾದ ಜಾಗವು ಆಶ್ರಮದ್ದಾಗಿದೆ, ಎಂಬ ಒಂದೇ ಕಾರಣದಿಂದ ಸ್ವಾಮೀಜಿ ಮತ್ತು ಆಶ್ರಮವನ್ನು ಟೀಕಿಸಲಾಗುತ್ತಿದೆ.

4. ಈ ಪ್ರಕರಣದಲ್ಲಿ ನ್ಯಾಯಾಲಯದ ಪದ್ಧತಿಯಿಂದ ಸಂಪೂರ್ಣ ಅನ್ವೇಷಣೆಯಾಗಬೇಕಿದೆ ಎಂದು ಸ್ವಾಮೀಜಿ ಮತ್ತು ಆಶ್ರಮ ವ್ಯವಸ್ಥಾಪನೆಯರ ಅಭಿಪ್ರಾಯವಾಗಿದೆ. ಆಶ್ರಮ ಮತ್ತು ಸ್ವಾಮೀಜಿಯವರು ಪೊಲೀಸರಿಗೆ ಈ ಪ್ರಕರಣದಲ್ಲಿ ಯೋಗ್ಯವಾದ ಸಹಕಾರ ನೀಡುತ್ತಿದ್ದಾರೆ.

ಅದ್ವೈತ ಆಶ್ರಮದ ಸ್ವಾಮಿ ಚಿದಾನಂದಪುರಿ ಇವರ ಮೇಲೆ ಹುರುಳಿಲ್ಲದ ಆರೋಪವನ್ನು ಮಾಡುವ ಕಮ್ಯುನಿಸ್ಟ್ ರು ‘ಲವ್ ಜಿಹಾದ್’ ಮತ್ತು ‘ನನ್ ಮೇಲಿನ ದೌರ್ಜನ್ಯ’ ಪ್ರಕರಣಗಳ ಬಗ್ಗೆ ಯಾಕೆ ಮೌನದಿಂದಿರುತ್ತಾರೆ ? – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ರಮೇಶ ಶಿಂದೆ

ಸ್ವಾಮಿ ಚಿದಾನಂದಪುರಿ ಯಾವಾಗಲೂ ಹಿಂದುತ್ವದ ಬೆಂಬಲಕ್ಕೆ ನಿಲ್ಲುತ್ತಾರೆ. ಅವರು ಹಿಂದೂ ಧರ್ಮದ ಮೇಲಿನ ಆಘಾತಗಳನ್ನು ಸಹ ವಿರೋಧಿಸುತ್ತಿದ್ದಾರೆ. ಆದ್ದರಿಂದಲೇ ಅವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ. ಹಿಂದೂ ಸಂತರನ್ನು ಅವಮಾನಿಸುವ ಕಮ್ಯುನಿಸ್ಟರ ಪ್ರಯತ್ನಗಳು ಇದೇ ಮೊದಲನೆಯದ್ದಲ್ಲ, ಕಮ್ಯುನಿಸ್ಟರು ಈ ಹಿಂದೆಯೂ ಅನೇಕ ಬಾರಿ ಇಂತಹ ಪ್ರಯತ್ನಗಳನ್ನು ಮಾಡಿದ್ದಾರೆ. ಸ್ವಾಮಿಜಿಯೊಂದಿಗೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಯ ಅಯೋಗ್ಯ ಕೃತ್ಯಕ್ಕೆ ಸ್ವಾಮೀಜಿಯವರನ್ನು ಏಕೆ ಗುರಿಯಾಗಿಸಲಾಗುತ್ತಿದೆ ? ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ ಸ್ವಾಮಿ ಚಿದಾನಂದಪುರಿಯ ಬೆಂಬಲವಿದೆ ಎಂದು ಆರೋಪಿಸುತ್ತಿರುವ ಕಮ್ಯುನಿಸ್ಟರು, ಕೇರಳದಲ್ಲಿ ‘ಲವ್ ಜಿಹಾದ್’ಗೆ ಬಲಿಯಾಗಿ ಹಿಂದೂ ಹುಡುಗಿಯರ ಶೋಷಣೆಯಾಗುತ್ತಿರುವ ಬಗ್ಗೆ ಅಥವಾ ನನ್ ಮೇಲೆ ಲೈಂಗಿಕ ಅತ್ಯಾಚಾರ ಮಾಡಿದ ಬಿಶಪ್ ಫ್ರಾಂಕೊ ಮುಲಕ್ಕಲ ಪ್ರಕರಣದಲ್ಲಿ ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ? ಇದೇ ಕಮ್ಯುನಿಸ್ಟರ ಬೂಟಾಟಿಕೆಯಾಗಿದೆ. ಇದರಿಂದ, ಕಮ್ಯುನಿಸ್ಟರು ಅನ್ಯಾಯದ ವಿರುದ್ಧ ಅಲ್ಲ, ಆದರೆ ಹಿಂದೂ ಧರ್ಮ, ಹಿಂದೂ ಸಂತರು, ಹಿಂದೂ ಸಂಸ್ಕೃತಿಯ ವಿರುದ್ಧ ಹೋರಾಡಲು ಬಯಸುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಅದ್ವೈತ ಆಶ್ರಮದ ಸ್ವಾಮಿ ಚಿದಾನಂದಪುರಿ ವಿರುದ್ಧದ ಆರೋಪಗಳು ನಿರಾಧಾರವಾಗಿದ್ದು, ನಾವು ಕೂಡ ಸ್ವಾಮೀಜಿಯ ಬೆಂಬಲಕ್ಕಿದ್ದೇವೆ ಎಂದು ದೃಢವಾದ ನಿಲುವನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಈ ಪ್ರಕರಣದ ಬಗ್ಗೆ ವ್ಯಕ್ತಪಡಿಸಿದ್ದಾರೆ.