ಅಫಫಾನಿಸ್ತಾನದ ಸಮಸ್ಯೆಯ ವಿಷಯವಾಗಿ ಅಮೇರಿಕಾ, ರಷ್ಯಾ ಮತ್ತು ಭಾರತ ಇವರ ನಡುವೆ ಭಾರತದಲ್ಲಿ ಚರ್ಚೆ

(ಎಡದಿಂದ  ರಷ್ಯಾದ ಸುರಕ್ಷಾ ಪರಿಷತ್ತಿನ ಮುಖ್ಯಸ್ಥ ನಿಕೋಲಾಯ ಪತ್ರುಶೇವ್ಹಾ ಮತ್ತು ಪ್ರಧಾನಿ ನರೇಂದ್ರ ಮೋದಿ)

ನವದೆಹಲಿ – ಭಾರತವು ಅಫಫಾನಿಸ್ತಾನದ ಸಮಸ್ಯೆಯ ಬಗ್ಗೆ ಅಮೇರಿಕಾ ಮತ್ತು ರಷ್ಯಾ ಇವರನ್ನು ಒಟ್ಟುಗೂಡಿಸಿದೆ. ಭಾರತದ ಪ್ರಯತ್ನದಿಂದ ಅಮೆರಿಕಾದ ಗೂಢಚಾರ ಸಂಸ್ಥೆ ಸಿ.ಐ.ಎ.ಯ ಮುಖ್ಯಸ್ಥ ವಿಲಿಯಂ ಬನ್ರ್ಸ ಮತ್ತು ರಷ್ಯಾದ ಸುರಕ್ಷಾ ಪರಿಷತ್ತಿನ ಮುಖ್ಯಸ್ಥ ನಿಕೋಲಾಯ ಪತ್ರುಶೇವ್ಹಾ ಇವರನ್ನು ಒಂದೇ ಸಮಯಕ್ಕೆ ನವದೆಹಲಿಯಲ್ಲಿ ಕರೆಯಲಾಗಿದೆ. ಇದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗುತ್ತದೆ. ಆಗಸ್ಟ್ 24 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ದೂರವಾಣಿ ಮುಖಾಂತರ ಚರ್ಚಿಸಿದ್ದರು. ಇದರ ಮುಂದಿನ ಚರ್ಚೆಗಾಗಿ ಪತ್ರುಶೇವ್ಹಾ ಇವರು ಭಾರತದ ಪ್ರವಾಸದಲ್ಲಿರುವರು, ಹೀಗೆಂದು ರಷ್ಯಾದ ರಾಯಭಾರಿ ಕಚೇರಿಯ ಮೂಲಗಳಿಂದ ಹೇಳಲಾಗಿದೆ. ಪತ್ರುಶೇವ್ಹಾ ಸೆಪ್ಟೆಂಬರ 8 ರಂದು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ ಮತ್ತು ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ ಡೋವಾಲ ಇವರನ್ನು ಭೇಟಿಯಾದರು.