ಚೀನಾ ಮತ್ತು ತಾಲಿಬಾನಿನ ನಡುವಿನ ಸಂಬಂಧವು ಅಷ್ಟೊಂದು ಉತ್ತಮವಾಗಿಲ್ಲ ಆದುದರಿಂದ ಅವು ಯಾವುದಾದರೊಂದು ಮಾರ್ಗವನ್ನು ಹುಡುಕಲು ಪ್ರಯತ್ನಿಸುತ್ತಿವೆ ! – ಜೋ ಬಾಯಡೆನ

ವಾಷಿಂಗ್ಟನ (ಅಮೇರಿಕಾ) – ಚೀನಾ ಮತ್ತು ತಾಲಿಬಾನ್ ನಡುವಿನ ಸಂಬಂಧ ಅಷ್ಟೇನೂ ಉತ್ತಮವಾಗಿಲ್ಲ. ಆದ್ದರಿಂದಲೇ ಅವರು ತಾಲಿಬಾನಿಗೆ ಸಹಾಯ ಮಾಡಿ ಈ ಪ್ರಕ್ಷುಬ್ಧತೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ರಷ್ಯಾ, ಇರಾನ್ ಮತ್ತು ಪಾಕಿಸ್ತಾನಗಳೂ ಇದೇ ರೀತಿಯಲ್ಲಿ ಪ್ರಯತ್ನಿಸುತ್ತಿವೆ. ‘ಈಗ ನಾವು ತಾಲಿಬಾನಿನೊಂದಿಗೆ ಹೇಗೆ ವರ್ತಿಸಬೇಕು? ಎಂದು ಎಲ್ಲ ದೇಶಗಳು ಚಡಪಡಿಸುತ್ತಿವೆ ಎಂದು ಅಮೆರಿಕದ ರಾಷ್ಟ್ರಾಧ್ಯಕ್ಷರಾದ ಜೋ ಬಾಯಡೆನ ಇವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾಲಿಬಾನ್ ಮತ್ತು ಚೀನಾದ ನಡುವೆ ಹೆಚ್ಚುತ್ತಿರುವ ಆತ್ಮೀಯತೆ, ಹಾಗೆಯೇ ಚೀನಾದಿಂದ ತಾಲಿಬಾನಿಗೆ ಸಿಗಲಿರುವ ಆರ್ಥಿಕ ಸಹಾಯವು ಚಿಂತೆಯ ವಿಷಯವಾಗಿದೆಯೇ ? ಎಂಬ ಪ್ರಶ್ನೆಗೆ ಉತ್ತರಿಸುವಾಗ ಬಾಯಡೆನರವರು ಈ ರೀತಿಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.