ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಆಧ್ಯಾತ್ಮಿಕ ಉಪಾಯಕ್ಕಾಗಿ ಇಟ್ಟಿರುವ ಮೆಂತೆಕಾಳುಗಳ ಮೇಲಾದ ಪರಿಣಾಮ

ಸಂತರ ವಿಷಯದ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ರೂಪೇಶ ರೇಡಕರ

‘ಪರಾತ್ಪರ ಗುರು ಡಾ. ಆಠವಲೆಯವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಿರಂತರವಾಗಿ ಕಾರ್ಯನಿರತರಾಗಿರುತ್ತಾರೆ. ಪರಾತ್ಪರ ಗುರು ಡಾಕ್ಟರರ ಈ ಮಹಾನ ಸಮಷ್ಟಿ ಕಾರ್ಯದಲ್ಲಿ ಅಡಚಣೆಗಳನ್ನುಂಟು ಮಾಡಲು ದೊಡ್ಡ ಕೆಟ್ಟ ಶಕ್ತಿಗಳು ಅವರ ಮೇಲೆ ಸೂಕ್ಷ್ಮದಿಂದ ಆಕ್ರಮಣಗಳನ್ನು ಮಾಡುತ್ತವೆ. ಸೂಕ್ಷ್ಮದಲ್ಲಿ ನಡೆಯುತ್ತಿರುವ ಈ ದೇವಾಸುರರ ಹೋರಾಟವು ಈಗ ಕೊನೆಯ ಹಂತವನ್ನು ತಲುಪಿದ್ದರಿಂದ ಕೆಟ್ಟ ಶಕ್ತಿಗಳು ತುಂಬಾ ಸಿಟ್ಟಿನಿಂದ ಪರಾತ್ಪರ ಗುರು ಡಾಕ್ಟರರ ಮೇಲೆ ಆಕ್ರಮಣಗಳನ್ನು ಮಾಡುತ್ತಿವೆ. ಇದರ ಪರಿಣಾಮವು ಪರಾತ್ಪರ ಗುರು ಡಾಕ್ಟರರ ಸ್ಥೂಲದೇಹದ ಮೇಲಾಗಿ ಅವರ ಶಾರೀರಿಕ ತೊಂದರೆಗಳು ಹೆಚ್ಚಾಗಿವೆ. ಪರಾತ್ಪರ ಗುರು ಡಾಕ್ಟರರಿಗಾಗುತ್ತಿರುವ ತೊಂದರೆಗಳ ನಿವಾರಣೆಯಾಗಿ ಅವರ ಆರೋಗ್ಯ ಚೆನ್ನಾಗಿರಬೇಕೆಂದು ಮಾರ್ಚ್ ೨೦೨೧ ರಲ್ಲಿ ಓರ್ವ ಸಂತರು ಪರಾತ್ಪರ ಗುರು ಡಾಕ್ಟರರ ಕೋಣೆಯ ಕಿಟಕಿಯಲ್ಲಿ ಗಾಜಿನ ಲೋಟದಲ್ಲಿ ಮೆಂತೆಕಾಳುಗಳನ್ನಿಡಲು ಹೇಳಿದ್ದರು. ಅವರು ಹೇಳಿದ ಈ ಆಧ್ಯಾತ್ಮಿಕ ಉಪಾಯವನ್ನು ೩.೩.೨೦೨೧ ರಿಂದ ೧೭.೫.೨೦೨೧ ರ ತನಕ ಮಾಡಲಾಯಿತು. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಆಧ್ಯಾತ್ಮಿಕ ಉಪಾಯಕ್ಕಾಗಿ ಇಟ್ಟಿರುವ ಮೆಂತೆಕಾಳುಗಳ ಮೇಲಾಗಿರುವ ಪರಿಣಾಮವನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಉಪಾಯಕ್ಕಾಗಿ ಇಟ್ಟಿದ್ದ ಮೆಂತೆಕಾಳು ಮತ್ತು ಸಾಮಾನ್ಯ ಮೆಂತೆಕಾಳುಗಳ ತುಲನಾತ್ಮಕ ಪರೀಕ್ಷಣೆಯನ್ನು ೧೮.೫.೨೦೨೧ ರಂದು ‘ಯು.ಎ.ಎಸ್. ಉಪಕರಣದ ಮೂಲಕ ಮಾಡಲಾಯಿತು.

೧ ಅ. ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಗಳ ಸಂದರ್ಭದಲ್ಲಿ ಪರೀಕ್ಷಣೆಯ ವಿಶ್ಲೇಷಣೆ – ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಉಪಾಯಕ್ಕಾಗಿ ಇಟ್ಟಿರುವ ಮೆಂತೆಕಾಳುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ, ಹಾಗೆಯೇ ಸಕಾರಾತ್ಮಕ ಊರ್ಜೆಯೂ ಕಂಡು ಬಂದಿತು : ಸಾಮಾನ್ಯ ಮೆಂತೆಕಾಳುಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ; ಆದರೆ ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಉಪಾಯಕ್ಕಾಗಿ ಇಟ್ಟಿರುವ ಮೆಂತೆಕಾಳುಗಳಲ್ಲಿ ಮಾತ್ರ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡು ಬಂದಿತು. ಸಾಮಾನ್ಯ ಮೆಂತೆಕಾಳುಗಳ ತುಲನೆಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಇಟ್ಟಿರುವ ಮೆಂತೆಕಾಳುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯೂ ಕಂಡು ಬಂದಿತು. ಇದು ಮುಂದೆ ನೀಡಲಾದ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

ಸೌ. ಮಧುರಾ ಕರ್ವೆ

೨ ಅ. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಉಪಾಯಕ್ಕಾಗಿ ಇಟ್ಟಿರುವ ಮೆಂತೆಕಾಳುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬರುವುದರ ಕಾರಣ : ದೊಡ್ಡ ಕೆಟ್ಟ ಶಕ್ತಿಗಳು ಪರಾತ್ಪರ ಗುರು ಡಾಕ್ಟರರ ಮೇಲೆ ಸೂಕ್ಷ್ಮದಿಂದ ಮಾಡಿದ ಆಕ್ರಮಣಗಳಿಂದಾಗಿ ಅವರ ಸ್ಥೂಲದೇಹದ ಸುತ್ತಲೂ ನಕಾರಾತ್ಮಕ ಸ್ಪಂದನಗಳ ಆವರಣ ಬಂದಿತು. ಇದರಿಂದಾಗಿ ಪರಾತ್ಪರ ಗುರು ಡಾಕ್ಟರರ ಶಾರೀರಿಕ ತೊಂದರೆಯು ಹೆಚ್ಚಾಯಿತು. ‘ಪರಾತ್ಪರ ಗುರು ಡಾಕ್ಟರರ ದೇಹದ ಸುತ್ತಲೂ ಬಂದಿದ್ದ ನಕಾರಾತ್ಮಕ ಆವರಣವು ದೂರವಾಗಿ ಅವರ ಆರೋಗ್ಯ ಚೆನ್ನಾಗಿರಬೇಕು, ಎಂಬ ಉದ್ದೇಶದಿಂದ ಓರ್ವ ಸಂತರು ಮೆಂತೆಕಾಳುಗಳನ್ನು ಅವರ ಕೋಣೆಯಲ್ಲಿ ಇಡಲು ಹೇಳಿದ್ದರು. ಈ ಮೆಂತೆಕಾಳುಗಳನ್ನು ಪರಾತ್ಪರ ಗುರು ಡಾಕ್ಟರರ ಕೋಣೆಯಲ್ಲಿ ಇಟ್ಟಿದ್ದರಿಂದ ಪರಾತ್ಪರ ಗುರು ಡಾಕ್ಟರರ ದೇಹದ ಸುತ್ತಲಿದ್ದ ನಕಾರಾತ್ಮಕ ಸ್ಪಂದನಗಳು ಮೆಂತೆಕಾಳುಗಳಲ್ಲಿ ಆಕರ್ಷಿತವಾದವು.

೨ ಆ. ಪರಾತ್ಪರ ಗುರು ಡಾಕ್ಟರ್ ಆಠವಲೆಯವರ ಕೋಣೆಯಲ್ಲಿ ಉಪಾಯಕ್ಕಾಗಿ ಇಟ್ಟಿದ್ದ ಮೆಂತೆಕಾಳುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯೂ ಕಂಡುಬರುವುದರ ಕಾರಣ : ಪರಾತ್ಪರ ಗುರು ಡಾಕ್ಟರ್ ಆಠವಲೆಯವರ ಕೋಣೆಯಲ್ಲಿ ಉಪಾಯಕ್ಕಾಗಿ ಇಟ್ಟಿದ್ದ ಮೆಂತೆಕಾಳುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯೂ ಕಂಡುಬಂದಿತು. ಇದು ವೈಶಿಷ್ಟ್ಯಪೂರ್ಣವಾಗಿದೆ. ಇದರ ಕಾರಣವೆಂದರೆ, ಪರಾತ್ಪರ ಗುರು ಡಾಕ್ಟರರ ದೇಹದ ಸುತ್ತಲಿರುವ ನಕಾರಾತ್ಮಕ ಸ್ಪಂದನಗಳ ಆವರಣ ಕಡಿಮೆಯಾಗುತ್ತಾ ಹೋಗಿದ್ದರಿಂದ ಅವರಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದ ಮೆಂತೆಕಾಳುಗಳು ಸಕಾರಾತ್ಮಕ ಸ್ಪಂದನಗಳಿಂದ ತುಂಬಿಕೊಂಡವು.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೦.೬.೨೦೨೧)

ವಿ-ಅಂಚೆ : [email protected]


ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಮೆಂತೆಕಾಳುಗಳನ್ನು ಇಟ್ಟಾಗ ಅವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಹೀಗೆ ಎರಡೂ ಊರ್ಜೆಗಳು ಕಂಡುಬರುವುದರ ಹಿಂದಿನ ಆಧ್ಯಾತ್ಮಿಕ ಕಾರಣ !

೧. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಮೆಂತೆಕಾಳುಗಳನ್ನಿಟ್ಟ ಮೇಲೆ ಸೂಕ್ಷ್ಮದಲ್ಲಿ ಘಟಿಸಿದ ಪ್ರಕ್ರಿಯೆ

ಕು. ಮಧುರಾ ಭೋಸಲೆ

ಪರಾತ್ಪರ ಗುರು ಡಾ. ಆಠವಲೆ ಯವರಲ್ಲಿ ಕಾರ್ಯನಿರತವಾಗಿರುವ ವಿಷ್ಣುತತ್ತ್ವದಿಂದಾಗಿ ಅವರಿಂದ ಪೃಥ್ವಿಯಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಮಹಾನ ಅವತಾರಿ ಕಾರ್ಯವು ನಡೆಯುತ್ತಿದೆ. ಈ ಅವತಾರಿ ಕಾರ್ಯವನ್ನು ಮಾಡುತ್ತಿರುವಾಗ ಅವರಿಂದ ಸೂಕ್ಷ್ಮ ಸ್ತರದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಈಶ್ವರೀ ಚೈತನ್ಯವು ಪ್ರಕ್ಷೇಪಿಸುತ್ತದೆ. ಹಾಗೆಯೇ ಈ ಕಾರ್ಯವು ಆಗಬಾರದೆಂದು ಪಾತಾಳದ ದೊಡ್ಡ ಕೆಟ್ಟ ಶಕ್ತಿಗಳು ಅವರ ಮೇಲೆ ಸೂಕ್ಷ್ಮ ಸ್ತರದಲ್ಲಿ ಆಕ್ರಮಣಗಳನ್ನು ಮಾಡುತ್ತಿವೆ. ಈ ರೀತಿ ಪರಾತ್ಪರ ಗುರು ಡಾ. ಆಠವಲೆಯವರ ದೇಹ ಮತ್ತು ಅವರು ವಾಸಿಸುತ್ತಿರುವ ಕೋಣೆ ಈ ಎರಡೂ ಸ್ಥಾನಗಳು ಸೂಕ್ಷ್ಮ ಯುದ್ಧಭೂಮಿಗಳೇ ಆಗಿವೆ. ಆದುದರಿಂದ ಅವರು ಅಥವಾ ಅವರ ಕೋಣೆಯ ಸಂಪರ್ಕಕ್ಕೆ ಬರುವ ಘಟಕಗಳ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಈ ಎರಡೂ ಊರ್ಜೆಗಳ ಪರಿಣಾಮವಾಗುತ್ತದೆ. ಇದೇ ಪ್ರಕ್ರಿಯೆಯು ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿಟ್ಟ ಮೆಂತೆಕಾಳುಗಳ ಮೇಲೆಯೂ ಆಗಿದೆ. ಹಾಗಾಗಿ ಮೆಂತೆಕಾಳುಗಳಲ್ಲಿ ಎರಡೂ ವಿಧದ ಊರ್ಜೆಗಳು ಕಂಡುಬಂದವು.

೨. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿಟ್ಟ ಮೆಂತೆಕಾಳುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬರುವುದರ ಹಿಂದಿನ ಕಾರ್ಯಕಾರಣಭಾವ

ಮೆಂತೆಕಾಳುಗಳಿಂದ ಔಷಧಿ ಗುಣಗಳ ಗಂಧಮಯ ಲಹರಿಗಳ ಪ್ರಕ್ಷೇಪಣೆಯಾಗುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿಟ್ಟ ಮೆಂತೆಕಾಳುಗಳಿಂದ ಔಷಧಿ ಲಹರಿಗಳ ಪ್ರಕ್ಷೇಪಣೆ ಆಗುವಾಗ ಅವುಗಳ ಕಡೆಗೆ ಕೋಣೆಯಲ್ಲಿನ ಸ್ಪಂದನಗಳು ಸಹ ಕೆಲವೊಂದು ಪ್ರಮಾಣದಲ್ಲಿ ಆಕರ್ಷಿತವಾದವು. ಪರಾತ್ಪರ ಗುರು ಡಾ. ಆಠವಲೆಯವರ ಮೇಲೆ ಪಾತಾಳದಲ್ಲಿನ ಕೆಟ್ಟ ಶಕ್ತಿಗಳು ಸೂಕ್ಷ್ಮದಲ್ಲಿ ಮಾಡಿದ ಆಕ್ರಮಣಗಳಿಂದಾಗಿ, ಅವರ ದೇಹದ ಸುತ್ತಲೂ ತೊಂದರೆದಾಯಕ ಶಕ್ತಿಯ ಆವರಣ ನಿರ್ಮಾಣವಾಯಿತು. ಈ ತೊಂದರೆದಾಯಕ ಶಕ್ತಿಯು ಮೆಂತೆಕಾಳುಗಳಲ್ಲಿ ಆಕರ್ಷಿತವಾಯಿತು. ಇದರಿಂದ ಮೆಂತೆಕಾಳುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡು ಬಂದಿತು. ಮೆಂತೆ ಕಾಳುಗಳು ಬಹಳಷ್ಟು ಪ್ರಮಾಣದಲ್ಲಿ ತೊಂದರೆದಾಯಕ ಶಕ್ತಿಯನ್ನು ತಮ್ಮಕಡೆಗೆ ಎಳೆದುಕೊಂಡಿದ್ದರಿಂದ ಪರಾತ್ಪರ ಗುರು ಡಾ. ಆಠವಲೆಯವರ ದೇಹದ ಕೆಟ್ಟ ಶಕ್ತಿಗಳಿಂದಾಗಿ ಹೆಚ್ಚಾಗಿದ್ದ ತಾಪಮಾನವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಯಿತು.

೩. ಸಾಮಾನ್ಯ ಮೆಂತೆಕಾಳುಗಳ ತುಲನೆಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಇಟ್ಟಿರುವ ಮೆಂತೆಕಾಳುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬರುವುದರ ಹಿಂದಿನ ಕಾರ್ಯಕಾರಣಭಾವ

ಪರಾತ್ಪರ ಗುರು ಡಾ. ಆಠವಲೆಯವರಿಂದ ಪ್ರಕ್ಷೇಪಿಸುವ ಸಗುಣ-ನಿರ್ಗುಣ ಸ್ತರದ ಚೈತನ್ಯದಿಂದ ಅವರ ಕೋಣೆಯಲ್ಲಿನ ವಸ್ತುಗಳು ಮತ್ತು ವ್ಯಕ್ತಿಗಳ ಮೇಲೆ ಪರಿಣಾಮವಾಗುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿಟ್ಟಿರುವ ಮೆಂತೆಕಾಳುಗಳಲ್ಲಿ ಅವರ ಕೋಣೆಯ ಸಗುಣ-ನಿರ್ಗುಣ ಸ್ತರದ ಚೈತನ್ಯಲಹರಿಗಳು ಆಕರ್ಷಿತವಾಗಿದ್ದರಿಂದ ಅವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬಂದಿತು. ಮೆಂತೆಕಾಳು ಮೂಲದಲ್ಲಿಯೇ ಸಾತ್ತ್ವಿಕವಾಗಿರುತ್ತವೆ. ಅವುಗಳ ಸಂಪರ್ಕ ಚೈತನ್ಯ ಲಹರಿಗಳೊಂದಿಗೆ ಬರದಿರುವ  ಕಾರಣ ಅವುಗಳಲ್ಲಿ ಸಕಾರಾತ್ಮಕ ಊರ್ಜೆಯು ಸ್ವಲ್ಪ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ನಮ್ಮ ಗಮನಕ್ಕೆ ಬರುವುದೇನೆಂದರೆ, ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿಟ್ಟ ವಸ್ತುಗಳ ಮೇಲೆ ಕೋಣೆಯ ಸ್ಪಂದನಗಳ ಪರಿಣಾಮವಾಗಿ ಅವುಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬರುತ್ತದೆ ಮತ್ತು ಅವು ಸಕಾರಾತ್ಮಕ ಊರ್ಜೆಯಿಂದ ತುಂಬಿಕೊಳ್ಳುತ್ತವೆ.

– ಕು. ಮಧುರಾ ಭೋಸಲೆ (ಸೂಕ್ಷ್ಮದಲ್ಲಿ ಪ್ರಾಪ್ತಿಯಾದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೬.೨೦೨೧)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.