‘ಇಗ್ನೊ’ದಲ್ಲಿ ಜ್ಯೋತಿಷ್ಯ ಪಠ್ಯಕ್ರಮವನ್ನು ಶಾಶ್ವತವಾಗಿ ಇರಿಸಬೇಕು ಎಂಬುದಕ್ಕಾಗಿ ರಾಜ್ಯಪಾಲರನ್ನು ಭೇಟಿ ಮಾಡಿದ ಹಿಂದೂ ಜನಜಾಗೃತಿ ಸಮಿತಿ !

ಜ್ಯೋತಿಷ್ಯ ಶಾಸ್ತ್ರವು ವಿಜ್ಞಾನಾಧಿಷ್ಠಿತವೇ ಆಗಿದೆ ; ಪಠ್ಯಕ್ರಮಕ್ಕೆ ಮಹಾರಾಷ್ಟ್ರ ರಾಜ್ಯಪಾಲರ ಬೆಂಬಲ !

‘ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ’ದಲ್ಲಿ (ಇಗ್ನೊ) ಜ್ಯೋತಿಷ್ಯಶಾಸ್ತ್ರದ ವಿಷಯವನ್ನು ಪಠ್ಯಕ್ರಮದಲ್ಲಿ ಸೇರಿಸಲು ಕೆಲವು ತಥಾಕಥಿತ ಪ್ರಗತಿಪರ ಮತ್ತು ನಾಸ್ತಿಕ ಮಂಡಳಿಗಳಿಂದಾಗುವ ವಿರೋಧದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ ೪ ರಂದು, ಹಿಂದೂ ಜನಜಾಗೃತಿ ಸಮಿತಿಯ ನಿಯೋಗವು ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಹಾಗೂ ಕುಲಪತಿ ಮಾ. ಭಗತಸಿಂಗ ಕೊಶ್ಯಾರಿ ಇವರನ್ನು ಮುಂಬಯಿಯ ರಾಜಭವನದಲ್ಲಿ ಭೇಟಿಯಾಯಿತು. ಈ ಸಮಯದಲ್ಲಿ ಸಮಿತಿಯ ನಿಯೋಗದ ಹೇಳಿಕೆಯನ್ನು ಆಲಿಸಿದ ನಂತರ, ರಾಜ್ಯಪಾಲರು ‘ಜ್ಯೋತಿಷ್ಯಶಾಸ್ತ್ರವು ಕೇವಲ ಶಾಸ್ತ್ರವಾಗಿರದೇ ವಿಜ್ಞಾನವೇ ಆಗಿದೆ. ಅದನ್ನು ಜಗತ್ತಿನಾದ್ಯಂತ ಕಲಿಸಲಾಗುತ್ತದೆ. ನ್ಯಾಯಾಲಯವು ಜ್ಯೋತಿಷ್ಯಶಾಸ್ತ್ರದ ಸತ್ಯಾಸತ್ಯತೆಯನ್ನು ಒಪ್ಪಿಕೊಂಡಿದ್ದರಿಂದ ಅದನ್ನು ಯಾರು ವಿರೋಧಿಸಬಹುದು ? ನೀವು ನಿಮ್ಮ ಕಾರ್ಯವನ್ನು ಮುಂದುವರಿಸಿ, ನಾನು ನೋಡುತ್ತೇನೆ”, ಎಂದು ಭರವಸೆಯನ್ನು ನೀಡುತ್ತಾ ಜ್ಯೋತಿಷ್ಯಶಾಸ್ತ್ರದ ಪಠ್ಯಕ್ರಮವನ್ನು ಕಲಿಸಲು ಬೆಂಬಲ ನೀಡಿದರು. ಈ ಸಮಯದಲ್ಲಿ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ, ಮುಂಬಯಿ ವಕ್ತಾರರಾದ ಡಾ. ಉದಯ ಧುರಿ, ಮುಂಬಯಿ ಸಮನ್ವಯಕರಾದ ಶ್ರೀ. ಬಳವಂತ ಪಾಠಕ್, ಗೌಂಡ ಸಾರಸ್ವತ ಬ್ರಾಹ್ಮಣ ಟೆಂಪಲ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ. ಪ್ರವೀಣ ಕಾನವಿಂದೆ ಮತ್ತು ಶ್ರೀ ಶಿವಕಾರ್ಯ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಭಾಕರ ಭೋಸಲೆ ಇವರೆಲ್ಲರೂ ಉಪಸ್ಥಿತರಿದ್ದರು.

ಸರ್ವೋಚ್ಚ ನ್ಯಾಯಾಲಯವು ಜ್ಯೋತಿಷ್ಯಶಾಸ್ತ್ರದ ವಿರುದ್ಧದ ದಾವೆಯನ್ನು ತಿರಸ್ಕರಿಸುತ್ತಾ ‘ಕೆಲವು ಜನರು ಜ್ಯೋತಿಷ್ಯವನ್ನು ವಿರೋಧಿಸಿದೊಡನೆ ವಿಜ್ಞಾನದ ಯುಗದಲ್ಲಿ ಜ್ಯೋತಿಷ್ಯವು ಮೋಸಗಾರಿಕೆ ಎಂದಾಗುವುದಿಲ್ಲ’, ಎಂದು ಟಿಪ್ಪಣಿ ನೀಡಿದೆ. ಈ ಕುರಿತ ಮನವಿಯನ್ನು ಶ್ರೀ. ರಮೇಶ ಶಿಂದೆ ಇವರು ರಾಜ್ಯಪಾಲರಿಗೆ ನೀಡಿದರು ಮತ್ತು ಅದರ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ‘ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ’ದಲ್ಲಿ ಜ್ಯೋತಿಷ್ಯ ಶಾಸ್ತ್ರ ಕಲಿಸುವ ನಿರ್ಧಾರವನ್ನು ಎತ್ತಿಹಿಡಿಯುವಂತೆ ರಾಜ್ಯಪಾಲರಿಗೆ ವಿನಂತಿಯನ್ನು ಮಾಡಲಾಯಿತು. ಅದಕ್ಕೆ ರಾಜ್ಯಪಾಲರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಹಿಂದೂ ಧರ್ಮಕ್ಕೆ ವಿರುದ್ಧವಾಗಿರುವ ಕೃತಕ ಕೊಳಗಳಿಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಿ ಸರಕಾರವು ಜೇಡಿ ಮಣ್ಣಿನ ಗಣೇಶ ಮೂರ್ತಿಗೆ ಪ್ರೋತ್ಸಾಹ ನೀಡಬೇಕು, ಅದೇ ರೀತಿ ಹಿಂದೂ ಧರ್ಮದ ಅಪಪ್ರಚಾರಕ್ಕಾಗಿ ವಿಶ್ವಮಟ್ಟದಲ್ಲಿ ಆಯೋಜಿಸಿರುವ ‘ಡಿಸ್‌ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಎಂಬ ಅಂತರರಾಷ್ಟ್ರೀಯ ಕಾನ್ಫರೆನ್ಸ್‌ಅನ್ನು ಆಯೋಜಿಸುವ, ಅದರಲ್ಲಿ ಭಾಗವಹಿಸುವ ಮತ್ತು ಅವರಿಗೆ ಸಹಾಯ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು, ಎಂಬ ವಿಷಯಗಳ ಬಗ್ಗೆ ರಾಜ್ಯಪಾಲರಿಗೆ ಮನವಿಯನ್ನು ನೀಡಲಾಯಿತು.

ಕಾಗದದಿಂದ ನಿರ್ಮಿಸುವ ವಿಗ್ರಹಗಳನ್ನು ನಿಷೇಧಿಸಿ ಜೇಡಿ ಮಣ್ಣಿನ ಮೂರ್ತಿಗಳನ್ನು ಪ್ರೋತ್ಸಾಹಿಸಬೇಕು !

ಪರಿಸರ ಸ್ನೇಹಿಯಾಗಿದೆ ಎಂದು ಹೇಳಿ ಕಾಗದದ ವಿಗ್ರಹಗಳಿಗೆ ಪ್ರೋತ್ಸಾಹ ನೀಡುವಂತೆ ಆಗಿನ ಸರಕಾರವು ನಿರ್ಧರಿಸಿತ್ತು; ಆದರೆ ಕಾಗದದದ ಮೂರ್ತಿಗಳು ಮಾಲಿನ್ಯಕಾರಿಯಾಗಿರುವುದರಿಂದ ಅದನ್ನು ರಾಷ್ಟ್ರೀಯ ಹಸಿರು ಪ್ರಾಧಿಕಾರವು 2016 ರಲ್ಲಿ ನಿಷೇಧಿಸಿತ್ತು. ಅದೇ ರೀತಿ, ಮೇ 3, 2011 ರ ಸರಕಾರದ ನಿರ್ಣಯದ ಮೇಲೆ ಸ್ಥಗಿತಿಯನ್ನು ತರಲಾಗಿತ್ತು. ಆದರೂ, ಮಾರುಕಟ್ಟೆಯಲ್ಲಿ ಕಾಗದದ ಮೂರ್ತಿಗಳು ದೊಡ್ಡ ಪ್ರಮಾಣದಲ್ಲಿ ಬರುತ್ತಿದೆ. ಅದರ ಮೇಲೆ ನಿರ್ಬಂಧ ಹೇರಬೇಕಿದೆ ಮತ್ತು ನೈಸರ್ಗಿಕ ಬಣ್ಣಗಳನ್ನು ಹಚ್ಚಿರುವ ಜೇಡಿಮಣ್ಣಿನ ಮೂರ್ತಿಗಳನ್ನು ಪ್ರೋತ್ಸಾಹಿಸಬೇಕು ಎಂದು ಅವರು ಒತ್ತಾಯಿಸಿದರು. ರಾಜ್ಯಪಾಲರು ಈ ಬಗ್ಗೆ ಗಮನ ಹರಿಸುವ ಭರವಸೆ ನೀಡಿದರು.