ಪೂರ್ಣಾವತಾರ ಮತ್ತು ಭಕ್ತವತ್ಸಲನಾದ ಶ್ರೀಕೃಷ್ಣನ ವೈಶಿಷ್ಟ್ಯಗಳು ಮತ್ತು ಅವನ ಚರಿತ್ರೆ !

ದೇವತೆಗಳ ಶಾಸ್ತ್ರಕ್ಕನುಸಾರ ಮಾಹಿತಿಯನ್ನು ನೀಡುವ ಮತ್ತು ಪರಿಪೂರ್ಣ ಅಧ್ಯಾತ್ಮಶಾಸ್ತ್ರವನ್ನು ಕಲಿಸುವ  ಸನಾತನ ಸಂಸ್ಥೆ !

೩೦ ಆಗಸ್ಟ್ ೨೦೨೧ ರ ದಿನದಂದು ‘ಶ್ರೀಕೃಷ್ಣ ಜಯಂತಿ’ (ಗೋಕುಲಾಷ್ಟಮಿ) ಇದೆ. ಈ ನಿಮಿತ್ತದಿಂದ….

ಯಾರಾದರೂ ನನಗೆ ಪ್ರೀತಿ ಮತ್ತು ಭಕ್ತಿಯಿಂದ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ಒಂದಿಷ್ಟು ನೀರನ್ನು ಅರ್ಪಿಸಿದರೆ ನಾನು ಅದನ್ನು ಸ್ವೀಕರಿಸುತ್ತೇನೆ – ಶ್ರೀಕೃಷ್ಣ

‘ಸಮರ್ಪಣಾ ಭಾವದಲ್ಲಿ ತುಂಬಾ ಶಕ್ತಿ ಇದೆ’, ಎಂಬುದು ಆಗಾಗ ಕಂಡುಬರುತ್ತದೆ. ಭಗವದ್ಗೀತೆಯಲ್ಲಿ ಭಗವಂತನು, ನನಗೆ ಎಲ್ಲವನ್ನು ಸಮರ್ಪಣೆ ಮಾಡು ಮತ್ತು ನಿಶ್ಚಿಂತ ಮನಸ್ಸಿನಿಂದ ವರ್ತಮಾನಕಾಲದಲ್ಲಿ ನನ್ನ ಅನುಸಂಧಾನದಲ್ಲಿ ಈಶ್ವರೀ ಕಾರ್ಯವೆಂದು ಕಾರ್ಯವನ್ನು ಮಾಡುತ್ತಿರು,’ ಎಂದು ಹೇಳುತ್ತಾನೆ. ಸಮರ್ಪಣೆ ಈ ಪ್ರಕ್ರಿಯೆಯು ಇಷ್ಟೊಂದು ಸಹಜ ಮತ್ತು ಸುಲಭವಿಲ್ಲ. ಶ್ರೀಕೃಷ್ಣನ ಮೇಲೆ ಭಾರವನ್ನು ಹಾಕುವುದು, ಸಮರ್ಪಣೆಯನ್ನು ಮಾಡುವುದು, ಅವನನ್ನು ಪೂರ್ಣವಾಗಿ ತಿಳಿದುಕೊಳ್ಳುವುದು, ಅವನು ನಮ್ಮ ಮನಸ್ಸಿನಲ್ಲಿ ಮೂರ್ತಿಯ ಸ್ವರೂಪದಲ್ಲಿ ಮೂಡುವುದು, ಅವನ ಮೇಲೆ ಪೂರ್ತಿ ಆತ್ಮವಿಶ್ವಾಸದಿಂದಿರುವುದು ಆವಶ್ಯಕವಿದೆ.

(ಪರಾತ್ಪರ ಗುರು) ಪರಶರಾಮ ಪಾಂಡೆ ಮಹಾರಾಜರು

ಋಷಿಮುನಿಗಳಿಗೆ ತಪಶ್ಚರ್ಯದಿಂದ ರಾಮನ ದರ್ಶನವಾದರೂ; ರಸಸ್ವಾದವಾಗದ ಕಾರಣ ಅದನ್ನು ಪಡೆಯಲು ಅವರೆಲ್ಲರೂ ರಾಮನಲ್ಲಿ ಬೇಡಿಕೊಳ್ಳುವುದು ಮತ್ತು ರಾಮನು ಕೃಷ್ಣಾವತಾರದಲ್ಲಿ ಅವರೆಲ್ಲರೂ ಗೋಪಿಯರಾಗಿ ಬಂದಾಗ ಆನಂದ ಸಿಗುವುದೆಂದು ಅವರಿಗೆ ಹೇಳುವುದು ಸಮರ್ಪಣೆ ಮಾಡಿದ ನಂತರವೂ ಸ್ವಲ್ಪ ಅಹಂಕಾರವು ಉಳಿದಿರುತ್ತದೆ. ಆದುದರಿಂದ ಜೀವನದಲ್ಲಿನ ಪರಮೋಚ್ಚವಾಗಿರುವ ಆತ್ಮಿಕ ಸುಖವು ಸಿಗುವುದಿಲ್ಲ. ರಾಮಜನ್ಮದಲ್ಲಿ ಋಷಿಗಳು ತಪಶ್ಚರ್ಯವನ್ನು ಮಾಡಿ ತಮ್ಮ ದೇಹವನ್ನು ನಿಸ್ತೇಜ ಮಾಡಿಕೊಂಡರು. ಅವರಿಗೆ ರಾಮನ ದರ್ಶನವಾಯಿತು. ಅವರಿಗೆ ‘ಇವನು ಭಗವಂತನಿರುವನು’, ಎಂದು ತಿಳಿಯಿತು; ಆದರೆ ಅವರ ಸಾತ್ತ್ವಿಕ ಭಾವವು ಜಾಗೃತವಾಗಲಿಲ್ಲ. ಅವರಿಗೆ ರಸಸ್ವಾದ ಸಿಗಲಿಲ್ಲ. ಅಗ ಅವರು ರಾಮನಲ್ಲಿ, “ನಮಗೆ ಆನಂದದ, ಮಧುರ ಭಾವದ ಆಸ್ವಾದನೆ ಬೇಕಾಗಿದೆ’’, ಎಂದು ಬೇಡಿಕೊಂಡರು. ಆಗ ರಾಮನು, “ಕೃಷ್ಣಾವತಾರದಲ್ಲಿ ನೀವೆಲ್ಲ ಗೋಪಿಯರಾಗಿ ಬಂದಾಗ ನಿಮಗೆ ಆನಂದ ಸಿಗುವುದು’’, ಎಂದು ಹೇಳಿದನು.

ಋಷಿಗಳು ಗೋಪಿಯರ ರೂಪದಲ್ಲಿ ಜನ್ಮತಾಳಿದ ನಂತರ ಶ್ರೀಕೃಷ್ಣನು ವಸ್ತ್ರಹರಣ ಮಾಡಿ ಅವರಲ್ಲಿನ ಸೂಕ್ಷ್ಮ ಅಹಂಕಾರವನ್ನು ನಾಶಗೊಳಿಸಿ ಅವರಲ್ಲಿ ತನ್ನ ನಿಜವಾದ ಆತ್ಮಸ್ವರೂಪವನ್ನು ಪ್ರಕಟಿಸುವುದು ಮತ್ತು ಅವರಿಗೆ ರಾಸಕ್ರೀಡೆಯಿಂದ ಮಧುರಭಾವದ ಆಸ್ವಾದನೆಯನ್ನು ನೀಡುವುದು ಅದರಂತೆ ಆ ಋಷಿಗಳು ಗೋಪಿಸ್ವರೂಪದಲ್ಲಿ ಜನಿಸಿದರು; ಆದರೆ ಅವರಿಗೆ ‘ನಾವು ಜ್ಞಾನಿ ಋಷಿಗಳಿದ್ದೇವೆ’, ಎಂಬ ಜ್ಞಾನವಿರುವುದರಿಂದ ಶ್ರೀಕೃಷ್ಣನಿಗೆ ಅವರ ವಸ್ತ್ರಹರಣ ಮಾಡಬೇಕಾಯಿತು. ಶ್ರೀಕೃಷ್ಣನು ವಸ್ತ್ರಹರಣ ಮಾಡಿ ಅವರಲ್ಲಿನ ಸೂಕ್ಷ್ಮ ಅಹಂಕಾರವನ್ನು ಇಲ್ಲದಂತೆ ಮಾಡಿ ಅವರಲ್ಲಿ ತನ್ನ ನಿಜವಾದ ಆತ್ಮಸ್ವರೂಪವನ್ನು ವ್ಯಕ್ತಗೊಳಿಸಿದನು. ಆದುದರಿಂದ ಅವರಿಗೆ ಅವರಲ್ಲಿನ ಸ್ನಾನ ಸ್ವರೂಪದ ಜ್ಞಾನವಾಗಿರುವುದರಿಂದ ನಾಚಿಕೆಯಾಯಿತು. ದುಷ್ಟಪ್ರವೃತ್ತಿಯು ಮೃದುವಾಯಿತು. ಅವರು ಶ್ರೀಕೃಷ್ಣನೊಂದಿಗೆ ತಲ್ಲೀನರಾದರು. ಅವರ ಚಿತ್ತವು ಈಗ ಶುದ್ಧವಾಯಿತು. ಹೃದಯದಲ್ಲಿನ ಆತ್ಮಭಾವವು ಜಾಗೃತವಾಯಿತು. ಶ್ರೀಕೃಷ್ಣನು ಅವರಿಗೆ ರಾಸಕ್ರೀಡೆಯಲ್ಲಿ ಸ್ಥಾನ ನೀಡಿ ಮಧುರಭಾವದ ಆಸ್ವಾದನೆಯನ್ನು ನೀಡಿದನು.

– (ಪರಾತ್ಪರ ಗುರು) ಪಾಂಡೆ ಮಹಾರಾಜರು (೩೦.೩.೨೦೧೫)