ತಾಲೀಬಾನ್ ಅಧಿಕಾರವನ್ನು ಪಡೆಯಲು ಪ್ರಯತ್ನಿಸಿದರೆ ಅಫ್ಘಾನಿಸ್ತಾನವು ಸಂಪೂರ್ಣವಾಗಿ ನಶಿಸಿಹೋಗುವ ಅಪಾಯ ! – ವಿಶ್ವ ಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್

ವಿಶ್ವ ಸಂಸ್ಥೆಯು ಇಂತಹ ಹೇಳಿಕೆಗಳನ್ನು ನೀಡುವುದಕ್ಕಿಂತ ತಾಲಿಬಾನನ್ನು ಸಂಪೂರ್ಣವಾಗಿ ನಾಶ ಮಾಡಲು ಏಕೆ ಪ್ರಯತ್ನಿಸುವುದಿಲ್ಲ ? – ಸಂಪಾದಕರು 

ಆಂಟೋನಿಯೊ ಗುಟೆರೆಸ್

ನ್ಯೂಯಾರ್ಕ್ (ಅಮೇರಿಕಾ) – ವಿಶ್ವ ಸಂಸ್ಥೆಯ ಮುಖ್ಯಸ್ಥರಾದ ಆಂಟೋನಿಯೊ ಗುಟೆರೆಸರವರು ತಾಲಿಬಾನ್‍ಗೆ ದಾಳಿಯನ್ನು ಕೂಡಲೇ ನಿಲ್ಲಿಸುವಂತೆ ಹಾಗೂ ಅಫ್ಘಾನಿಸ್ತಾನದಲ್ಲಿನ ಜನರ ಹಿತಕ್ಕಾಗಿ ಪರಸ್ಪರರ ಮೇಲೆ ವಿಶ್ವಾಸವಿಟ್ಟುಕೊಂಡು ಸಂಧಾನ ಮಾಡಿಕೊಳ್ಳಲು ಆಹ್ವಾನಿಸಿದೆ. ಅದೇ ರೀತಿ ‘ಶಸ್ತ್ರಾಸ್ತ್ರಗಳ ಮೂಲಕ ಅಧಿಕಾರವನ್ನು ಪಡೆಯಲು ಪ್ರಯತ್ನಿಸುವುದೆಂದರೆ ದಾರಿತಪ್ಪಿದಂತೆ ಆಗಿದೆ. ಆದ್ದರಿಂದ ದೀರ್ಘಕಾಲ ಆಂತರಿಕ ಯುದ್ಧವಾಗಬಹುದು ಮತ್ತು ಅಫ್ಘಾನಿಸ್ತಾನವು ಸಂಪೂರ್ಣವಾಗಿ ನಾಶವಾಗುವ ಆತಂಕವಿದೆ. ಅಫ್ಘಾನಿಸ್ತಾನ ಹಾಗೂ ತಾಲಿಬಾನಿನ ಪ್ರತಿನಿಧಿಗಳ ನಡುವೆ ದೊಹಾದಲ್ಲಿ ನಡೆದ ಚರ್ಚೆಯಿಂದ ಸಂಧಾನದ ಬಗ್ಗೆ ಏನಾದರೂ ಮಾರ್ಗ ಸಿಗಬಹುದು, ಎಂದು ಗುಟೆರೆಸರವರು ಹೇಳಿದರು. ಗುಟೆರಸರವರು ತಮ್ಮ ಮಾತನ್ನು ಮುಂದುವರೆಸುತ್ತಾ, ಯುದ್ಧದ ಕಾಲದಲ್ಲಿ ಅಮಾಯಕ ನಾಗರಿಕರ ಮೇಲೆ ದಾಳಿ ಮಾಡುವುದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದರು.