೧. ಆಡಳಿತವು ನಿದ್ರಿಸುತ್ತಿದೆಯೇ ?
ನವ ದೆಹಲಿಯ ಆಜಾದ್‌ಪುರದ ಮೇಲ್ಸೇತುವೆಯ ಮೇಲೆ ಅಕ್ರಮವಾಗಿ ಸಣ್ಣ ಮಜಾರ್ (ಇಸ್ಲಾಮಿಕ್ ಪೀರ್ ಅಥವಾ ಫಕೀರ್ ಸಮಾಧಿ) ನಿರ್ಮಾಣದಿಂದ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ ಎಂಬ ವಾರ್ತೆ ಭಿತ್ತರವಾಗಿದೆ.
೨. ಸಾಮ್ಯವಾದಿ ಪಕ್ಷಗಳನ್ನು ನಿಷೇಧಿಸಿರಿ !
ಭಾರತ ಮತ್ತು ಅಮೇರಿಕ ನಡುವಿನ ೨೦೦೭-೦೮ ರ ಅಣು ಒಪ್ಪಂದವನ್ನು ತಡೆಯಲು ಚೀನಾವು ಭಾರತದ ಸಾಮ್ಯವಾದಿ ನಾಯಕರನ್ನು ಹಿಡಿತದಲ್ಲಿಟ್ಟು ಕೊಂಡಿತ್ತು ಎಂದು ನಿವೃತ್ತ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಇವರು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.
೩. ಹಿಂದೂ ರಾಷ್ಟ್ರದ ಆವಶ್ಯಕತೆಯನ್ನು ತಿಳಿಯಿರಿ !
ಮುರಾದಾಬಾದ್ (ಉತ್ತರ ಪ್ರದೇಶ) ದ ಶಿವವಿಹಾರ್ ಸಂಕೀರ್ಣದಲ್ಲಿ ಮಾನಸಿಕ ಹಿಂಸೆಯಿಂದಾಗಿ ೮೧ ಹಿಂದೂ ಕುಟುಂಬಗಳು ‘ಮನೆಗಳು ಮಾರಾಟಕ್ಕಿವೆ’ ಎಂದು ಜಾಹೀರಾತು ಫಲಕಗಳನ್ನು ಹಾಕಿವೆ. ಮತಾಂಧರು ಮಾಂಸ ಸೇವಿಸಿ ಅದರ ಉಳಿದ ಅವಶೇಷಗಳನ್ನು ಬಡಾವಣೆಯಲ್ಲಿರುವ ಹಿಂದೂಗಳ ಮನೆಗಳ ಮುಂದೆ ಎಸೆಯುತ್ತಾರೆ ಎಂದು ಹಿಂದೂಗಳು ಆರೋಪಿಸಿದ್ದಾರೆ.
೪. ಪಾಕಿಸ್ತಾನದಲ್ಲಿ ಹಿಂದೂಗಳನ್ನು ಯಾವಾಗ ರಕ್ಷಿಸಲಾಗುತ್ತದೆ ?
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭೋಂಗ್ ನಗರದಲ್ಲಿ ಮತಾಂಧರು ಗಣಪತಿ ದೇವಸ್ಥಾನವನ್ನು ಧ್ವಂಸ ಮಾಡಿದರು. ದೇವಸ್ಥಾನದಲ್ಲಿರುವ ಶ್ರೀ ಗಣೇಶ, ಶಿವ ಮತ್ತು ಪಾರ್ವತಿಯ ವಿಗ್ರಹಗಳು ಹಾಗೂ ಅಲಂಕಾರಿಕ ಗಾಜಿನ ವಸ್ತುಗಳನ್ನು ಮತಾಂಧರು ಒಡೆದಿದ್ದಾರೆ.
೫. ಭಾರತದಲ್ಲಿ ಹೀಗಾಗಲು ಹಿಂದೂ ರಾಷ್ಟ್ರವೇ ಬೇಕು !
ಪೋಲಂಡ್‌ನ ವಾರ್ಸಾ ವಿಶ್ವವಿದ್ಯಾಲಯದ ಗ್ರಂಥಾಲಯದ ಹೊರಗೋಡೆಯಲ್ಲಿ ಉಪನಿಷತ್ತಿನ ಸಂಸ್ಕೃತದ ಶ್ಲೋಕಗಳನ್ನು ಬರೆಯಲಾಗಿದೆ. ಇದರ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿದೆ.
೬. ಹಜ ಹೌಸ್ ಪ್ರಸ್ತಾಪವನ್ನು ರದ್ದು ಮಾಡಿರಿ !
ಆಮ್ ಆದ್ಮಿ ಪಕ್ಷದ ಸರಕಾರವು ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಹಜ ಹೌಸ್‌ಗಾಗಿ ೭ ಸಾವಿರ ಚದರ ಮೀಟರ ಭೂಮಿಯನ್ನು ನೀಡಿದೆ. ಅಲ್ಲದೇ ಸರಕಾರವು ಅದಕ್ಕಾಗಿ ೧೦೦ ಕೋಟಿ ರೂಪಾಯಿಗಳ ವೆಚ್ಚ ಮಾಡಲಿದೆ. ಹಿಂದುತ್ವನಿಷ್ಠ ಸಂಘಟನೆಗಳು ಇದನ್ನು ವಿರೋಧಿಸಿವೆ.
೭. ಈ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !
ಬಾಂಗ್ಲಾದೇಶದ ಶಿಯಾಲಿ ಗ್ರಾಮದಲ್ಲಿ ಆಗಸ್ಟ್ ೭ ರಂದು ಮಧ್ಯಾಹ್ನ ನೂರಾರು ಮತಾಂಧರು ೧೦ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿ ನಾಶಪಡಿಸಿದರು. ಇದರಲ್ಲಿ ೪ ದೊಡ್ಡ ಮತ್ತು ೬ ಸಣ್ಣ ದೇವಾಲಯಗಳ ಸಮಾವೇಶವಿದೆ.