ರಾಜಕಾರಣದಲ್ಲಿ ನಿವೃತ್ತಿಯ ವಯಸ್ಸೆಷ್ಟು ?

ಗಲ್ಲಿಯಿಂದ ದಿಲ್ಲಿಯವರೆಗೆ ರಾಜಕಾರಣದಲ್ಲಿ ಹಿರಿಯ ನಾಗರಿಕರು ಸತತವಾಗಿ ಸಕ್ರಿಯರಾಗಿರುತ್ತಾರೆ. ಅವರು ರಾಜಕಾರಣದಿಂದ ನಿವೃತ್ತರಾಗಬೇಕು, ಹಾಗೆಯೇ ಯುವ ಪೀಳಿಗೆಯನ್ನು ಮುಂದೆ ತರುವ ಪ್ರಯತ್ನವನ್ನು ಮಾಡಬೇಕು. ಅವರ ಮಾರ್ಗವನ್ನು ಸುಗಮಗೊಳಿಸಬೇಕು. ಹೇಗೆ ಸರಕಾರಿ ಕೆಲಸದಲ್ಲಿ ೫೮-೬೦ ವರ್ಷಗಳಾದ ನಂತರ ನಿವೃತ್ತರಾಗ ಬೇಕಾಗುತ್ತದೆ. ಹೀಗಿರುವಾಗ ರಾಜಕಾರಣದಲ್ಲಿ ನಿವೃತ್ತಿಯ ವಯಸ್ಸಾದರೂ ಎಷ್ಟು ? ಅಮೇರಿಕದಂತಹ ದೇಶದಲ್ಲಿ ಯಾವುದಾದರೊಂದು ದೊಡ್ಡ ಹುದ್ದೆ (ಅಧ್ಯಕ್ಷ)ಯನ್ನು ಅನುಭವಿಸಿದ ಹಿರಿಯ ವ್ಯಕ್ತಿಗಳು ನಿವೃತ್ತರಾಗುತ್ತಾರೆ. ಹಾಗೆಯೇ ಯುವ ನೇತಾರರಿಗೆ ದಾರಿ ಮಾಡಿಕೊಡುತ್ತಾರೆ. ಈ ರೀತಿ ಅನುಕರಣೆಯನ್ನು ನಾವು ಏಕೆ ಮಾಡಬಾರದು ? – ಶ್ರೀ. ಸಖಾರಾಮ ಏಕಶಿಂಗೆ, ಕೊಲ್ಲಾಪುರ.