ಬ್ರಿಟೀಷರು ಭಾರತೀಯರನ್ನು ಗುಲಾಮರನ್ನಾಗಿ ಮಾಡಲು ಮಾಡಿದ ಕಾನೂನುಗಳನ್ನು ಇಂದಿಗೂ ಚಾಲ್ತಿಯಲ್ಲಿಡುವುದು, ಇದು ರಾಷ್ಟ್ರಕ್ಕೆ ಅಪಾಯಕಾರಿ ! – ನ್ಯಾಯವಾದಿ ಅಂಕುರ್ ಶರ್ಮಾ, ಅಧ್ಯಕ್ಷರು, ಇಕ್ಕಜುಟ್ಟ ಜಮ್ಮು
ನಮ್ಮ ಸದ್ಯದ ‘ಭಾರತೀಯ ಕಾನೂನು ವ್ಯವಸ್ಥೆ’ಯು ಬ್ರಿಟೀಷ ವಸಾಹತುಶಾಹಿಯ ಪರಂಪರೆಯಾಗಿದೆ. 1857 ರ ದಂಗೆಯ ನಂತರ ಬ್ರಿಟೀಷರು ಭಾರತೀಯರ ಮೇಲೆ ದೌರ್ಜನ್ಯವೆಸಗಲು, ಅದೇ ರೀತಿ ಗುಲಾಮರನ್ನಾಗಿಸಲು ಯಾವ ಕಾನೂನುಗಳನ್ನು ಜಾರಿಗೆ ತಂದರೋ, ಅದು ದೇಶವು ಸ್ವತಂತ್ರವಾದ ನಂತರವೂ ಭಾರತದಲ್ಲಿ ಶಾಶ್ವತಗೊಳಿಸುವುದು ಒಂದು ರೀತಿಯ ದೇಶವಿರೋಧಿ ಕ್ರಮವಾಗಿದೆ, ಎಂದು ‘ಇಕ್ಕಜುಟ್ಟ ಜಮ್ಮು’ ಸಂಘಟನೆಯ ಅಧ್ಯಕ್ಷ ಹಾಗೂ ಜಮ್ಮು ಉಚ್ಚ ನ್ಯಾಯಾಲಯದ ನ್ಯಾಯವಾದಿ ಅಂಕುರ ಶರ್ಮಾ ಇವರು ಪ್ರತಿಪಾದಿಸಿದರು. 8 ಆಗಸ್ಟ್ 2021 ರಂದು, ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದಾದ್ಯಂತ ಬ್ರಿಟೀಷ ಕಾಲದ 222 ಕಾನೂನುಗಳನ್ನು ಸುಡುವ ರಾಷ್ಟ್ರವ್ಯಾಪಿ ಆಂದೋಲನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಲಾಗಿದ್ದ ‘ಭಾರತೀಯ ಕಾನೂನು ವ್ಯವಸ್ಥೆ : ಬದಲಾವಣೆಯ ಆವಶ್ಯಕತೆ’ ಕುರಿತಾದ ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.
ನ್ಯಾಯವಾದಿ ಅಂಕುರ್ ಶರ್ಮಾ ಅವರು ಮಾತನಾಡುತ್ತಾ, ಇಂದಿಗೂ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಇಲ್ಲ, ಗೋಹತ್ಯೆ ಮಾಡುವವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಇಲ್ಲ, ಜನಸಂಖ್ಯಾ ನಿಯಂತ್ರಣ ಅದೇ ರೀತಿ ಭಯೋತ್ಪಾದನೆ ವಿರುದ್ಧದ ಕಠಿಣ ಕಾನೂನುಗಳನ್ನು ಬಲವಾಗಿ ವಿರೋಧಿಸಲಾಗುತ್ತದೆ. ದೇಶದ ಹಿತಾಸಕ್ತಿಗೆ ಪೂರಕವಲ್ಲದ ಅನೇಕ ಕಾನೂನುಗಳಿವೆ, ಆದರೂ ಕೂಡ ನಾವು ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಒಂದು ರೀತಿಯಲ್ಲಿ, ನಮ್ಮ ಭಾರತದ ನಿಯಂತ್ರಣವು ಇತರರಿಗೆ ನೀಡಿದಂತಹ ಸ್ಥಿತಿಯಿದೆ, ಎಂದರು.
ರಾಜಸ್ಥಾನ ಉಚ್ಚ ನ್ಯಾಯಾಲಯದ ನ್ಯಾಯವಾದಿ ಮೋತಿಸಿಂಗ್ ರಾಜಪುರೋಹಿತ ಅವರು ಮಾತನಾಡುತ್ತಾ, ಪ್ರತಿಯೊಂದು ದೇಶದ ಕಾನೂನು ಆ ದೇಶದ ಪ್ರಮುಖ ಧರ್ಮಗಳನ್ನು ಪ್ರತಿನಿಧಿಸುತ್ತದೆ. ಬ್ರಿಟೀಷರು ಮಾಡಿದ ಕಾನೂನಿನ ಮುಖ್ಯ ಅಂಶವೆಂದರೆ ಕ್ರೈಸ್ತ ಧರ್ಮದ ಪ್ರಸಾರ ಮಾಡುವುದಾಗಿತ್ತು. ಈ ಕಾನೂನುಗಳು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ನಾಶಮಾಡುವ ಪರಿಕಲ್ಪನೆಯನ್ನು ಹೊಂದಿರುವುದರಿಂದ ಅವುಗಳು ರದ್ದಾಗಬೇಕು. ಭಾರತೀಯರ ಶ್ರದ್ಧೆ ಮತ್ತು ಸಂಸ್ಕೃತಿಯನ್ನು ಆಧರಿಸಿದ ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಬೇಕು, ಎಂದರು.
ಈ ಸಮಯದಲ್ಲಿ, ಲಷ್ಕರ-ಎ-ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಈಶ್ವರಪ್ರಸಾದ ಖಂಡೆಲವಾಲ ಇವರು ಮಾತನಾಡುತ್ತಾ, ಕಾನೂನು ದೇಶದ ಆತ್ಮವಾಗಿರುತ್ತದೆ. ಭಾರತೀಯರನ್ನು ಗುಲಾಮರನ್ನಾಗಿ ಮಾಡಲು ಮತ್ತು ಲೂಟಿ ಮಾಡಲು ಮತ್ತು ಅವರ ಮೇಲೆ ಅನ್ಯಾಯ ಮಾಡಲು ನಿರ್ಮಿಸಿದ ಕಾನೂನು ನಾವು ಇಂದಿಗೂ ಸ್ವೀಕರಿಸುತ್ತಿದ್ದರೆ, ಇಂದಿಗೂ ನಾವು ನಿಜವಾದ ಅರ್ಥದಲ್ಲಿ ಸ್ವಾತಂತ್ರರಾಗಿಲ್ಲ. ನಮ್ಮ ದೇಶದಲ್ಲಿ ಭಯೋತ್ಪಾದಕರಿಗಾಗಿ ಸರ್ವೋಚ್ಚ ನ್ಯಾಯಾಲಯ ರಾತ್ರಿ ತೆರೆಯುತ್ತದೆ ಮತ್ತು ಸಂತರಿಗಾಗಿ ತೆರೆಯುವುದಿಲ್ಲ, ಇದು ವಿಚಿತ್ರವಾಗಿದೆ. ಇಂದಿಗೂ ನ್ಯಾಯವ್ಯವಸ್ಥೆಯಲ್ಲಿ ಕುಳಿತಿರುವ ಜನರಿಗೆ ಧರ್ಮ ಅಥವಾ ಭಾರತೀಯ ಸಂಪ್ರದಾಯಗಳ ಪರಿಚಯವಿಲ್ಲ. ಆದ್ದರಿಂದ ಅವರು ತೆಗೆದುಕೊಂಡ ಹೆಚ್ಚಿನ ನಿರ್ಧಾರಗಳು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿರುತ್ತವೆ, ಅದನ್ನು ಭಾರತೀಯರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ, ಎಂದರು.
ಹಿಂದೂ ವಿಧಿಜ್ಞ ಪರಿಷತ್ತಿನ ಸಂಘಟಕರಾದ ನ್ಯಾಯವಾದಿ ನೀಲೇಶ ಸಾಂಗೋಲಕರ ಇವರು ಮಾತನಾಡುತ್ತಾ, ಬ್ರಿಟೀಷರು ಕ್ರಾಂತಿಕಾರಿಗಳು ಮತ್ತು ಭಾರತೀಯರನ್ನು ಹಿಂಸಿಸಲು ಜಾರಿಗೊಳಿಸಿದ 222 ಕಾನೂನುಗಳು ಇಂದಿಗೂ ಜಾರಿಯಲ್ಲಿವೆ. ಅದರೊಂದಿಗೆ ಹಿಂದೂಗಳ ಮೇಲೆ ಧಾರ್ಮಿಕ ಅನ್ಯಾಯವನ್ನು ಉಂಟುಮಾಡುವ ‘ಪ್ಲೆಸಸ್ ಆಫ್ ವರ್ಶಿಪ್ ಆಕ್ಟ್’ ನಂತಹ ಅನೇಕ ಧರ್ಮವಿರೋಧಿ ಕಾನೂನುಗಳಿವೆ. ಇದರ ವಿರುದ್ಧವೂ ಹೋರಾಡಬೇಕಾಗಿದೆ ಎಂದು ಹೇಳಿದರು.