ಸಾಧನೆ ಮತ್ತು ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯಿಂದ ಆತ್ಮಹತ್ಯೆಯನ್ನು ತಡೆಯಬಹುದು !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಸಾಧನೆಯಿಂದ ಆತ್ಮಹತ್ಯೆಯನ್ನು ಹೇಗೆ ತಡೆಗಟ್ಟಬಹುದು ?’ ಈ ವಿಷಯದ ಬಗ್ಗೆ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಶೋಧಪ್ರಬಂಧ ಮಂಡನೆ

ಶ್ರೀ. ಶಾನ್ ಕ್ಲಾರ್ಕ್

ಜಗತ್ತಿನಲ್ಲಿ ಪ್ರತಿ ವರ್ಷ ಸರಿಸುಮಾರು 8 ಲಕ್ಷ ವ್ಯಕ್ತಿಗಳು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ, ಅಂದರೆ ಪ್ರತೀ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ! ಇದರಲ್ಲಿ ಹೆಚ್ಚಿನ ವ್ಯಕ್ತಿಗಳು ಶಾರೀರಿಕವಾಗಿ ಅನಾರೋಗ್ಯವಿದ್ದುದರಿಂದ ಹೀಗೆ ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ ! ವ್ಯಕ್ತಿಯಲ್ಲಿ ಒತ್ತಡವನ್ನು ಎದುರಿಸುವ ಕ್ಷಮತೆಯು ಆತನ ಮಾನಸಿಕ ಊರ್ಜೆಯ ಮೇಲೆ ಅವಲಂಬಿಸಿರುತ್ತದೆ. ಒಬ್ಬ ವ್ಯಕ್ತಿಯಲ್ಲಿ ಸ್ವಭಾವದೋಷಗಳು ಹೆಚ್ಚಿದ್ದರೆ, ಹಿಂದೆ ಘಟಿಸಿದ ಘಟನೆಗಳ ಬಗ್ಗೆ ಮನಸ್ಸಿನಲ್ಲಿ ಒತ್ತಡವಿದ್ದರೆ, ಮನಸ್ಸಿನ ಊರ್ಜೆ ಅತ್ಯಂತ ಕಡಿಮೆ ಇರುತ್ತದೆ. ಅನೇಕ ಸಮಸ್ಯೆಗಳ ಹಿಂದೆ ಆಧ್ಯಾತ್ಮಿಕ ಕಾರಣಗಳಿರುತ್ತವೆ, ಉದಾ. ಪ್ರಾರಬ್ಧ, ಅತೃಪ್ತ ಪೂರ್ವಜರು ಹಾಗೂ ಸೂಕ್ಷ್ಮದ ಕೆಟ್ಟ ಶಕ್ತಿಗಳೂ ವ್ಯಕ್ತಿಗಳಿಗೆ ತೊಂದರೆ ಕೊಡುತ್ತವೆ ಹಾಗೂ ಆತನ ಸ್ವಭಾವದೋಷ ಹಾಗೂ ಪೂರ್ವಜನ್ಮದ ಕೊಡುಕೊಳ್ಳುವ ಲೆಕ್ಕಾಚಾರಗಳ ಆಧಾರದಲ್ಲಿ ಆತನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಣೆಗೊಳ್ಳುತ್ತಾನೆ. ಇವೆಲ್ಲವನ್ನು ಮೆಟ್ಟಿನಿಲ್ಲಲು ವ್ಯಕ್ತಿಯು ಸಾಧನೆ ಹಾಗೂ ಸ್ವಭಾವದೋಷ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡಬೇಕು, ಆಗ ಆತ್ಮಹತ್ಯೆಯನ್ನು ತಪ್ಪಿಸಬಹುದು, ಎಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಶ್ರೀ. ಶಾನ್ ಕ್ಲಾರ್ಕ್ ಇವರು ಪ್ರತಿಪಾದಿಸಿದರು. ಅವರು ‘ದಿ ಸವೆಂಥ ಇಂಟರನ್ಯಾಶನಲ್ ಕಾನ್ಫರೆನ್ಸ್ ಆನ್ ಪಬ್ಲಿಕ್ ಹೆಲ್ತ್, ಶ್ರೀಲಂಕಾ (The 7th International Conference on Public Health (ICOPH 2021), Sri Lanka) ಈ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಶೋಧ ಪ್ರಬಂಧವನ್ನು ಮಂಡಿಸುತ್ತಿರುವಾಗ ಮಾತನಾಡುತ್ತಿದ್ದರು. ಈ ಪರಿಷತ್ತನ್ನು ‘ದಿ ಇಂಟರನ್ಯಾಶನಲ್ ಇನ್ಸಿಟ್ಯೂಟ್ ಆಫ್ ನಾಲ್ಡೆಜ್ ಮ್ಯಾನೇಜಮೆಂಟ್, ಶ್ರೀಲಂಕಾ’ (The International Institute of Knowledge Management (TIIKM), Sri Lanka) ವತಿಯಿಂದ ಆಯೋಜಿಸಲಾಗಿತ್ತು.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಶೋಧಪ್ರಬಂಧದ ಲೇಖಕರಾಗಿದ್ದು, ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ. ಇದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ವೈಜ್ಞಾನಿಕ ಪರಿಷತ್ತಿನಲ್ಲಿ ಮಂಡಿಸಿದ 77 ನೇ ಶೋಧಪ್ರಬಂಧವಾಗಿತ್ತು. ಈ ಹಿಂದೆ 15 ರಾಷ್ಟ್ರೀಯ ಹಾಗೂ 61 ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ವಿವಿಧ ಶೋಧಪ್ರಬಂಧಗಳನ್ನು ಮಂಡಿಸಲಾಗಿತ್ತು. ಇದರಲ್ಲಿ ೫ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಮಂಡಿಸಿದ ಶೋಧಪ್ರಬಂಧಗಳಿಗೆ ‘ಸರ್ವೋತ್ತಮ ಶೋಧಪ್ರಬಂಧ’ ಪ್ರಶಸ್ತಿಯು ಲಭಿಸಿದೆ.

ಶ್ರೀ. ಶಾನ್ ಕ್ಲಾರ್ಕ್ ಇವರು ‘ಒತ್ತಡ ಹಾಗೂ ಆತ್ಮಹತ್ಯೆಯ ಬಗ್ಗೆ ಮಾಡಿದ ಆಧ್ಯಾತ್ಮಿಕ ಸಂಶೋಧನೆ, ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿರುವ ಮೂಲಭೂತ ಕಾರಣಗಳು ಹಾಗೂ ಅದರ ಮೇಲಿನ ಉಪಾಯ’ ಇತ್ಯಾದಿ ಮಹತ್ವದ ಅಂಶಗಳನ್ನು ಈ ಸಮಯದಲ್ಲಿ ಸ್ಪಷ್ಟಪಡಿಸಿದರು. ಆತ್ಮಹತ್ಯೆ ತಡೆಯಲು ಮಾಡಬೇಕಾದ ಪ್ರಯತ್ನಗಳ ಸಾರವನ್ನು ಮಂಡಿಸಿದ ಶ್ರೀ. ಶಾನ್ ಕ್ಲಾರ್ಕ್ ಇವರು, ನಾಮಜಪ ಇದು ಅತ್ಯಂತ ಸುಲಭ ಹಾಗೂ ಉಪಯುಕ್ತವಿರುವ ಆಧ್ಯಾತ್ಮಿಕ ಸಾಧನೆಯಾಗಿದೆ. ನಾಮಜಪದಿಂದ ವ್ಯಕ್ತಿಯಲ್ಲಿ ಸ್ವಭಾವದೋಷ-ನಿರ್ಮೂಲನೆಗಾಗಿ ಆವಶ್ಯಕವಿರುವ ಊರ್ಜೆ ನಿರ್ಮಾಣವಾಗುತ್ತದೆ. ‘ಓಂ ನಮೋ ಭಗವತೆ ವಾಸುದೇವಾಯ’ ಇದು ಸದ್ಯದ ಕಾಲಕ್ಕೆ ಅತ್ಯಂತ ಉಪಯುಕ್ತವಾಗಿರುವ ನಾಮಜಪವಾಗಿದೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ. ಅದೇರೀತಿ ‘ಶ್ರೀ ಗುರುದೇವ ದತ್ತ’ ಈ ನಾಮಜಪವು ಪೂರ್ವಜರ ತೊಂದರೆಯಿಂದ ರಕ್ಷಣೆಯನ್ನು ಮಾಡುತ್ತದೆ, ಇದರೊಂದಿಗೆ ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ ಮೂಲಕ ನಮ್ಮ ಮನಸ್ಸಿನಲ್ಲಿನ ಸ್ವಭಾವದೋಷಗಳ ಮೇಲೆ ಹಿಡಿತ ಸಾಧಿಸಲು ಸುಲಭವಾಗುತ್ತದೆ. ಮಾನಸಿಕ ಅನಾರೋಗ್ಯದ ಅಂತರ್ಗತ ‘ಹೆಚ್ಚಳ ಮತ್ತು ಪ್ರತಿಬಂಧ’ ಇದಕ್ಕಾಗಿ ವ್ಯಕ್ತಿಯು ಈ ಮೇಲಿನ ಆಂಶಗಳನ್ನು ಅಂಗೀಕರಿಸಿದರೆ ಆತ್ಮಹತ್ಯೆಯ ಪ್ರಮಾಣ ಖಂಡಿತ ಕ್ಷೀಣಿಸಲು ಸಾಧ್ಯವಿದೆ’ ಎಂದು ಹೇಳಿದರು.