ಪರಾತ್ಪರ ಗುರು ಡಾ. ಆಠವಲೆಯವರು ಇತರ ಸಂತರಂತೆ ಸಮಾಜದಲ್ಲಿ ಇತರರನ್ನು ಭೇಟಿಯಾಗದಿರಲು ಕಾರಣ !

ಪರಾತ್ಪರ ಗುರು ಡಾ. ಆಠವಲೆ

‘ನೀವು ಇತರ ಸಂತರಂತೆ ಸಮಾಜದಲ್ಲಿ ಯಾರನ್ನೂ ಏಕೆ ಭೇಟಿಯಾಗುವುದಿಲ್ಲ ?, ಎಂದು ಕೆಲವರು ನನಗೆ ಕೇಳಿದ್ದರು. ಅದರ ಉತ್ತರ ಹೀಗಿದೆ, ನಾನು ಭೇಟಿಯಾಗುವುದರಿಂದ ಸ್ಥಳ-ಕಾಲಕ್ಕನುಸಾರ ತುಂಬಾ ಸೀಮಿತ ಜನರಿಗೆ ಭೇಟಿಯ ನಿಜವಾದ ಲಾಭವಾಗುತ್ತದೆ. ಇತರರನ್ನು ಭೇಟಿಯಾಗದೇ ನಾನು ಹೆಚ್ಚು ಸಮಯ ಗ್ರಂಥ ಬರವಣಿಗೆಯ ಸೇವೆಯನ್ನು ಮಾಡುತ್ತಿರುತ್ತೇನೆ. ಆದುದರಿಂದ ಇದುವರೆಗೆ ೩೩೮ ಗ್ರಂಥಗಳ ೧೭ ಭಾಷೆಗಳಲ್ಲಿ ೮೨ ಲಕ್ಷ ೯ ಸಾವಿರ ಪ್ರತಿಗಳು ಮುದ್ರಣವಾಗಿದೆ. ಅವುಗಳಿಂದ ಜಗತ್ತಿನಾದ್ಯಂತದ ಸಾವಿರಾರು ಜಿಜ್ಞಾಸುಗಳಿಗೆ ಲಾಭವಾಗುತ್ತಿದೆ. ಅಂತಹ ಲಾಭ ಮುಂದೆ ನೂರಾರು ವರ್ಷಗಳವರೆಗೆ ಲಕ್ಷಾಂತರ ಜಿಜ್ಞಾಸುಗಳಿಗೆ ಆಗಲಿದೆ. – (ಪರಾತ್ಪರ ಗುರು) ಡಾ. ಆಠವಲೆ