ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

(ಪರಾತ್ಪರ ಗುರು) ಡಾ. ಆಠವಲೆ

ವಿಜ್ಞಾನದ ಮಿತಿ

ಅಧ್ಯಾತ್ಮಶಾಸ್ತ್ರದಿಂದ ವಿಜ್ಞಾನವು ತಿಳಿಯುತ್ತದೆ, ಆದರೆ ವಿಜ್ಞಾನದಿಂದ ಅಧ್ಯಾತ್ಮವು ತಿಳಿಯುವುದಿಲ್ಲ. ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮ ಕಲಿಸದಿರುವುದರಿಂದ ಆದ ದುಷ್ಪರಿಣಾಮ ಇದುವರೆಗಿನ ೭೪ ವರ್ಷದವರೆಗೆ ಆಡಳಿತಗಾರರು ಮಕ್ಕಳಿಗೆ ಶಾಲೆಯಲ್ಲಿ ಹಿಂದೂ ಧರ್ಮವನ್ನು ಕಲಿಸದಿರುವುದರಿಂದ ಮಕ್ಕಳಿಗೆ ಹಿಂದೂ ಧರ್ಮದ ಮಹತ್ವವು ತಿಳಿದಿಲ್ಲ. ಅದುದರಿಂದ ಅವರಿಗೆ ಧರ್ಮದ ಅಭಿಮಾನವಿಲ್ಲ. ಆದರೆ ಮುಸಲ್ಮಾನರಿಗೆ ಧರ್ಮಾಭಿಮಾನ ಇರುವುದರಿಂದ ಜಗತ್ತಿನಲ್ಲಿ ಅವರ ಪ್ರಭುತ್ವವಿದೆ.

ಸಾಧನೆಯ ಮಹತ್ವ

ಕಣ್ಣಿನಿಂದ ಜಂತುಗಳು ಕಾಣಿಸುವುದಿಲ್ಲ; ಆದರೆ ಅದು ಸೂಕ್ಷ್ಮದರ್ಶಕ ಯಂತ್ರದಿಂದ ಕಾಣಿಸುತ್ತದೆ. ಅದರಂತೆ ಸೂಕ್ಷ್ಮದರ್ಶಕ ಯಂತ್ರದಿಂದ ಕಾಣಿಸದಿರುವ ಸೂಕ್ಷ್ಮಾತೀಸೂಕ್ಷ್ಮ ಜಗತ್ತು ಸಾಧನೆಯಿಂದ ತಿಳಿಯುತ್ತದೆ.

ಧರ್ಮಬಂಧನದ ಮಹತ್ವ

ವ್ಯಕ್ತಿ ಸ್ವಾತಂತ್ರ್ಯದಿಂದ ಮನುಷ್ಯನು ದಾರಿ ತಪ್ಪುತ್ತಾನೆ; ಏಕೆಂದರೆ ಅವನು ಸಾತ್ತ್ವಿಕನಾಗಿಲ್ಲ. ಹಾಗೆ ಆಗಬಾರದೆಂದು ಅವನಿಗೆ ಧರ್ಮಬಂಧನ ಇರಬೇಕು. – (ಪರಾತ್ಪರ ಗುರು) ಡಾ. ಆಠವಲೆ