ಕೊರೊನಾದ ಮೂರನೇ ಅಲೆ : ಚಿಕ್ಕ ಮಕ್ಕಳ ಕಾಳಜಿ ವಹಿಸುವ ಕುರಿತು ಆಯುರ್ವೇದದ ಕೆಲವು ಉಪಾಯಗಳು

ವೈದ್ಯ ಮನೋಜ ಶರ್ಮಾ

ಕೊರೊನಾದ ಮೂರನೆಯ ಅಲೆಯು ಚಿಕ್ಕ ಮಕ್ಕಳ ದೃಷ್ಟಿಯಿಂದ ಹೆಚ್ಚು ಅಪಾಯಕಾರಿಯಾಗಿರುವ ಸಾಧ್ಯತೆ ಇದೆ. ಈ ಕಾಲದಲ್ಲಿ ಚಿಕ್ಕ ಮಕ್ಕಳ ಕಾಳಜಿಯನ್ನು ಯಾವ ರೀತಿ ತೆಗೆದುಕೊಳ್ಳಬಹುದು, ಎಂದು ಕೋಟಾ (ರಾಜಸ್ಥಾನ)ದ ವೈದ್ಯರಾದ ಮನೋಜ ಶರ್ಮಾ ಇವರು ವಿಡಿಯೋದ ಮಾಧ್ಯಮದಿಂದ ಹೇಳಿದ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

೧. ಬೆಳಗ್ಗೆ-ಸಾಯಂಕಾಲ ನಿಯಮಿತವಾಗಿ ದೇಶಿ ಹಸುವಿನ ತುಪ್ಪ ಅಥವಾ ಬಾದಾಮಿಯ ತೈಲವನ್ನು ಬೆಚ್ಚಗೆ ಮಾಡಿ ೨-೩ ಹನಿಗಳನ್ನು ಮೂಗಿನಲ್ಲಿ ಹಾಕಬೇಕು. ಮಕ್ಕಳ ಪ್ರಕೃತಿ ನಾಜೂಕಾಗಿರುವುದರಿಂದ ಅವರಿಗೆ ಅಣು ತೈಲ ಅಥವಾ ಸಾಸಿವೆ ಎಣ್ಣೆ ಇವುಗಳನ್ನು ಬಳಸಬಾರದು.

. ಎರಡು ಚಮಚ ಬೆಚ್ಚಗೆ ಮಾಡಿದ ಹಸುವಿನ ತುಪ್ಪದಲ್ಲಿ ೨ ಚಿಟಿಕೆಯಷ್ಟು ಸೈಂಧವ ಲವಣವನ್ನು ಹಾಕಿ ಅದರಿಂದ ಎದೆ ಮತ್ತು ಬೆನ್ನು ಇವುಗಳ ಮೇಲೆ ಹಗುರವಾಗಿ ಮಾಲೀಶ ಮಾಡಬೇಕು. ಇದರಿಂದ ಫುಫ್ಫಸಗಳ ಕ್ಷಮತೆಯು ಹೆಚ್ಚಾಗಿ ಕಫವಿದ್ದರೆ ಅದು ಕಡಿಮೆಯಾಗಲು ಸಹಾಯವಾಗುತ್ತದೆ. ಈ ಉಪಾಯವನ್ನು ರಾತ್ರಿ ಮಲಗುವಾಗ ಮಾಡಬೇಕು.

. ಚಿಕ್ಕ ಮಕ್ಕಳಿಗೆ ಬಿಸಿ ಹಾಲಿನಲ್ಲಿ ಅರಿಶಿಣ, ಹಸಿ ಶುಂಠಿ ಅಥವಾ ಒಣ ಶುಂಠಿಯನ್ನು ಹಾಕಿ ಸಾಧ್ಯವಾದರೆ ಹಗಲಿನಲ್ಲಿ ಕುಡಿಯಲು ಕೊಡಬೇಕು. ಈ ಘಟಕಗಳಿಂದ ಹಾಲು ಚೆನ್ನಾಗಿ ಜೀರ್ಣವಾಗಿ ಹೊಸ ಕಫವು ತಯಾರಾಗುವ ಪ್ರಕ್ರಿಯೆಯು ನಿಲ್ಲುತ್ತದೆ.

. ಮಕ್ಕಳಿಗೆ ಸ್ನಾನ ಮಾಡುವ ೩೦ ನಿಮಿಷಗಳ ಮೊದಲು ಸಾಸಿವೆ ಅಥವಾ ಎಳ್ಳೆಣ್ಣೆಯಿಂದ ಮಾಲೀಶ ಮಾಡಬೇಕು.

ಮೇಲಿನ ಉಪಾಯಗಳನ್ನು ಚಿಕ್ಕ ಮಕ್ಕಳೊಂದಿಗೆ ಇತರರೂ ಮಾಡಬಹುದು.

ಟಿಪ್ಪಣಿ : ಎಲ್ಲಿ ತುಪ್ಪ ಅಥವಾ ಸಾಸಿವೆ ಎಣ್ಣೆಯೆಂದು ಹೇಳಲಾಗಿದೆಯೋ, ಅಲ್ಲಿ ಅದು ಸಿಗದಿದ್ದರೆ, ಕೊಬ್ಬರಿ ಎಣ್ಣೆಯನ್ನು ಬಳಸಬಹುದು. ಬೇಸಿಗೆ ದಿನಗಳಲ್ಲಿ ಉಷ್ಣತೆಯು ಹೆಚ್ಚಾಗಿರುತ್ತದೆ, ಕೊಬ್ಬರಿ ಎಣ್ಣೆಯು ತಂಪಾಗಿರುವುದರಿಂದ ಅದನ್ನು ಬಳಸಬೇಕು. ಹಾಗೆಯೇ ಕೊಬ್ಬರಿ ಎಣ್ಣೆಯಿಂದ ಜಂತುಗಳು ಸಾಯುತ್ತವೆ, ಎಂದು ಸಾಬೀತಾಗಿದೆ.

– ವೈದ್ಯ ಮನೋಜ ಶರ್ಮಾ, ಕೋಟಾ, ರಾಜಸ್ಥಾನ.