‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ವ್ಯವಹಾರ ಮತ್ತು ವ್ಯವಹಾರದ ಪದ್ದತಿ’ ಈ ವಿಷಯದ ಕುರಿತು ಸಂಶೋಧನೆಯು ಇಂಗ್ಲೆಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷದ್‌ನಲ್ಲಿ ಮಂಡನೆ !
ಶಾಶ್ವತ ವಿಕಾಸ ಮತ್ತು ವ್ಯಾವಸಾಯಿಕ ಸಾಮಾಜಿಕ ಜವಾಬ್ದಾರಿ ಇವುಗಳ ಆಚೆಗೆ ‘ಆಧ್ಯಾತ್ಮಿಕ ಪರಿಣಾಮ’ ಹೆಸರಿನ ಒಂದು ಅಂಶವಿದೆ ಮತ್ತು ಹೊಸ ಉತ್ಪಾದನೆಗಳ ಮತ್ತು ಸೇವೆಗಳನ್ನು ನಿರ್ಮಿಸುವಾಗ ಅವುಗಳನ್ನು ಗಮನಕ್ಕೆ ತೆಗೆದುಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ. ಉದ್ಯಮ ಮತ್ತು ಗ್ರಾಹಕರು ಇಬ್ಬರೂ ಈ ಬಗ್ಗೆ ಅರಿವು ಇರುವುದು ಅಗತ್ಯವಿದೆ; ಸತತವಾಗಿ ನಕಾರಾತ್ಮಕ ಸ್ಪಂದನಗಳ ಸಂಪರ್ಕದಲ್ಲಿದ್ದರೆ ಅದರ ವ್ಯಕ್ತಿಯ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. ಪರಿಣಾಮಸ್ವರೂಪ ಸಮಾಜದ ಹಾನಿ, ಹಾಗೆಯೇ ವಾತಾವರಣದಲ್ಲಿ ಆಧ್ಯಾತ್ಮಿಕ ಪ್ರದೂಷಣೆಯಾಗುತ್ತದೆ. ಇದನ್ನು ತಡೆಗಟ್ಟಲು ಪ್ರತಿನಿತ್ಯ ಸಾಧನೆಯನ್ನು ಮಾಡುವುದೇ ಉಪಾಯವಾಗಿದೆ, ಎಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಶ್ರೀ. ಶಾನ್ ಕ್ಲಾರ್ಕ್ ಹೇಳಿದರು. ಅವರು 21 ಜುಲೈ 2021 ರಂದು ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿ ನಡೆದ ‘ದಿ ಸಿಕ್ಸ್‌ಟಿಂಥ್ ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆನ್ ಇಂಟರ್‌ಡಿಸಿಪ್ಲಿನರಿ ಸೋಶಿಯಲ್ ಸೈನ್ಸಸ್’ ಎಂಬ ವೈಜ್ಞಾನಿಕ ಪರಿಷದ್‌ನಲ್ಲಿ ಅವರು ಮಾತನಾಡುತ್ತಿದ್ದರು. ಈ ಪರಿಷದ್‌ನ ಆಯೋಜನೆ ‘ದಿ ಇಂಟರ್‌ಡಿಸಿಪ್ಲಿನರಿ ಸೋಶಿಯಲ್ ಸೈನ್ಸಸ್ ರಿಸರ್ಚ್ ನೆಟ್‌ವರ್ಕ್ ಆಂಡ್ ದಿ ಕಾಮನ್ ಗ್ರೌಂಡ್ ರಿಸರ್ಚ್ ನೆಟ್‌ವರ್ಕ್ಸ್, ಯುಕೆ’, ಈ ಸಂಸ್ಥೆ ಆಯೋಜಿಸಿತ್ತು. ಅವರು ‘ಹೌ ಕಾರ್ಪೊರೇಶನ್ಸ್ ಅಫೆಕ್ಟ್ ಸೊಸೈಟಿ ಅಟ್ ಎ ಸ್ಪಿರಿಚುವಲ್ ಲೆವೆಲ್’ ಎಂಬ ಸಂಶೋಧನಾ ಪ್ರಬಂಧವನ್ನು ಅವರು ಪ್ರಸ್ತುತಪಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆಯವರು ಈ ಶೋಧಪ್ರಬಂಧದ ಲೇಖಕರಾಗಿದ್ದು ಮತ್ತು ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಸಹ ಲೇಖಕರಾಗಿದ್ದಾರೆ.
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ವೈಜ್ಞಾನಿಕ ಪರಿಷದ್‌ನಲ್ಲಿ ಮಂಡಿಸಿದ 75 ನೇ ಪ್ರಸ್ತುತಿಯಾಗಿತ್ತು. ಈ ಹಿಂದೆ ವಿಶ್ವವಿದ್ಯಾಲಯವು 15 ರಾಷ್ಟ್ರೀಯ ಮತ್ತು 59 ಅಂತರರಾಷ್ಟ್ರೀಯ ವೈಜ್ಞಾನಿಕ ಪರಿಷದ್‌ಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದೆ. ಈ ಪೈಕಿ 5 ಅಂತರರಾಷ್ಟ್ರೀಯ ಪರಿಷದ್‌ಗಳಲ್ಲಿ ವಿಶ್ವವಿದ್ಯಾಲಯಕ್ಕೆ ‘ಅತ್ಯುತ್ತಮ ಸಂಶೋಧನಾ ಪ್ರಬಂಧ’ ಪ್ರಶಸ್ತಿಯನ್ನು ಪಡೆದಿದೆ.
ಅನಂತರ ಶ್ರೀ. ಕ್ಲಾರ್ಕ್ ಇವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಬಳಸಿ ಮಾಡಲಾದ ವಿಫುಲ ಸಂಶೋಧನೆಗಳಲ್ಲಿನ 2 ಪ್ರಯೋಗಗಳ ಕುರಿತು ಮಾಹಿತಿಯನ್ನು ನೀಡಿದರು.
ಮೊದಲ ಪ್ರಯೋಗವು ಉಡುಪುಗಳ ಕುರಿತಾಗಿತ್ತು. ಈ ಪ್ರಯೋಗದಲ್ಲಿ ಓರ್ವ ಮಹಿಳೆಯು ಮುಂದಿನ 7 ಪ್ರಕಾರಗಳ ಉಡುಪುಗಳನ್ನು ಕ್ರಮದಿಂದ ಪ್ರತಿಯೊಂದನ್ನು 30 ನಿಮಿಷಗಳ ಕಾಲ ಧರಿಸಿದ್ದಳು – 1. ‘ವೈಟ್ ಇವನಿಂಗ್ ಗೌನ್’ (ಪಾದದತನಕ ಇರುವ ಬಿಳಿ ನಿಲುವಂಗಿ), 2. ‘ಬ್ಲ್ಯಾಕ್ ಟ್ಯೂಬ್ ಟಾಪ್ ಡ್ರೆಸ್’ (ಆಫ್ ಶೋಲ್ಡರ್’, ಅಂದರೆ ಭುಜಗಳ ಕಡೆಗೆ ತೆರೆದಿರುವ ಕಪ್ಪು ಬಣ್ಣದ ಪಾಶ್ಚಾತ್ಯ ಉಡುಪು), 3. ಕಪ್ಪು ಟಿ-ಶರ್ಟ ಮತ್ತು ಕಪ್ಪು ಪ್ಯಾಂಟ್, 4. ಬಿಳಿ ಟಿ-ಶರ್ಟ ಮತ್ತು ಬಿಳಿ ಪ್ಯಾಂಟ್, 5. ಸಲವಾರ-ಕುರ್ತಾ, 6. ಆರು ಗಜದ ಸೀರೆ ಮತ್ತು 7. ಒಂಬತ್ತುಗಜದ ಸೀರೆ. ಅವಳು ಪ್ರತಿಯೊಂದು ಉಡುಪನ್ನು ಧರಿಸುವ ಮೊದಲು ಮತ್ತು ಧರಿಸಿದ ನಂತರ ‘ಯು.ಎ.ಎಸ್.’ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಆ ಮಹಿಳೆಯು ಮೊದಲ 4 ಉಡುಪುಗಳನ್ನು ಧರಿಸಿದ ನಂತರ ಅವಳಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಹೆಚ್ಚಳವಾಗಿರುವುದು ಸ್ಪಷ್ಟವಾಯಿತು. ಅನಂತರದ 3 ಉಡುಪುಗಳನ್ನು ಧರಿಸಿದ ನಂತರ ಮಾತ್ರ ಅವಳಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಇಳಿಕೆಯಾಯಿತು. ಉಡುಪು ಕ್ರ. 2 ಮತ್ತು 4 ಇವುಗಳು ಒಂದೇ ರೀತಿಯದ್ದಾಗಿದ್ದವು, ಕೇವಲ ಬಣ್ಣಗಳಲ್ಲಿ ವ್ಯತ್ಯಾಸವಿತ್ತು. ಆದರೂ ಮಹಿಳೆಯು ಉಡುಪು ಕ್ರ. 3 (ಕಪ್ಪು ಬಣ್ಣದ ಉಡುಪು) ಧರಿಸಿದ್ದಾಗ ಉಡುಪು ಕ್ರ. 4 ರ ತುಲನೆಯಲ್ಲಿ ಅವಳಲ್ಲಿ ಬಹಳಷ್ಟು ಹೆಚ್ಚು ನಕಾರಾತ್ಮಕ ಊರ್ಜೆಯು ಕಂಡು ಬಂದಿತು. ಇದು ವೈಶಿಷ್ಟ್ಯಪೂರ್ಣವಾಗಿದೆ. ಮಹಿಳೆಯಲ್ಲಿ ಸಕಾರಾತ್ಮಕ ಊರ್ಜೆಯು ಕೇವಲ ಅವಳು ಕೊನೆಯ 3 ಉಡುಪುಗಳನ್ನು ಧರಿಸಿದಾಗ ಕಂಡು ಬಂದಿತು. ಈ ಪ್ರಯೋಗದಿಂದ, ಉಡುಪುಗಳ ವಿಧ ಮತ್ತು ಬಣ್ಣ ಇವುಗಳ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ (ಊರ್ಜೆಯ) ಸ್ತರದಲ್ಲಿ ಪರಿಣಾಮವಾಗುತ್ತದೆ; ಎರಡನೇಯ ಪ್ರಯೋಗದಲ್ಲಿ ನಾಲ್ಕು ಪ್ರಕಾರಗಳ ಸಂಗೀತದಿಂದ ವ್ಯಕ್ತಿಯ ಮೇಲಾದ ಪರಿಣಾಮವನ್ನು ಯು.ಎ.ಎಸ್. ಉಪಕರಣದ ಸಹಾಯದಿಂದ ಅಳೆಯಲಾಯಿತು.