ಬಂಗಾಲ ಹಿಂಸಾಚಾರದ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು ನೀಡಿದ ಸಮಾಧಾನಕರ ತೀರ್ಪು !

‘ಬಂಗಾಲದ ವಿಧಾನಸಭಾ ಚುನಾವಣೆ ಇತ್ತೀಚೆಗಷ್ಟೇ ಮುಕ್ತಾಯವಾಯಿತು. ಈ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ದೊರಕಿತು. ಚುನಾವಣೆಯಲ್ಲಿ ಆಯ್ಕೆಗೊಂಡ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಪಕ್ಷದವರ (ಹಿಂದೂಗಳ) ವಿರುದ್ಧ ಬೃಹತ್ ಪ್ರಮಾಣದಲ್ಲಿ ಹಿಂಸಾಚಾರ ನಡೆಸಿದರು. ಆ ಗಲಭೆಯಲ್ಲಿ ಪೀಡಿತರ ಪರವಾಗಿ ಬಂಗಾಲ ಉಚ್ಚ ನ್ಯಾಯಾಲಯದ ಸಂವಿಧಾನ ಪೀಠವು ಇತ್ತೀಚೆಗಷ್ಟೇ ಒಂದು ಮಹತ್ವಪೂರ್ಣ ತೀರ್ಪನ್ನು ನೀಡಿದೆ. ಈ ತೀರ್ಪು ಹಿಂದೂಗಳಿಗೆ ಆಶಾದಾಯಕ ಮತ್ತು ಭರವಸೆ ನೀಡುವಂತಹದ್ದಾಗಿದ್ದು, ನ್ಯಾಯಾಲಯದ ಮೇಲಿನ ವಿಶ್ವಾಸವನ್ನು ಅಧಿಕ ದೃಢಪಡಿಸುವಂತಹದ್ದಾಗಿದೆ.

೧. ಬಂಗಾಲ ತೃಣಮೂಲ ಕಾಂಗ್ರೆಸ್ಸಿನ ಜನರು ವಿಪಕ್ಷದವರ ಮೇಲೆ (ಹಿಂದೂಗಳ) ಭೀಕರ ದೌರ್ಜನ್ಯ ಮಾಡುವುದು

ವಿಧಾನಸಭೆ ಚುನಾವಣೆಯಲ್ಲಿ ಅತ್ಯಧಿಕ ಬಹುಮತ ದೊರೆತ ಬಳಿಕ ಮಮತಾ ಬ್ಯಾನರ್ಜಿಯವರ ತೃಣಮೂಲ ಪಕ್ಷದ ಕಾರ್ಯಕರ್ತರು ವಿಪಕ್ಷದವರನ್ನು ಗುರಿ ಮಾಡಿ, ಅವರ ಮನೆ, ಅಂಗಡಿಗಳನ್ನು ಸುಟ್ಟರು. ಅವರ ಮನೆಗಳಲ್ಲಿನ ವಸ್ತುಗಳನ್ನು ಲೂಟಿ ಮಾಡಿದರು. ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಅಲ್ಲದೇ ಅವರ ಉದ್ಯೋಗಗಳನ್ನು ನಿಲ್ಲಿಸಿದರು. ರಸ್ತೆಯ ಬದಿಯಲ್ಲಿ ಮಾರಾಟ ಮಾಡುವ ಅನೇಕ ಮಾರಾಟಗಾರರನ್ನು ಮಾರುಕಟ್ಟೆ ಯಿಂದ ಹೊರದಬ್ಬಿದರು. ಅನೇಕ ಅಂಗಡಿಯವರ ಪ್ರವೇಶದ್ವಾರದ ಎದುರಿಗೆ ಅಡ್ಡಿಯನ್ನುಂಟು ಮಾಡಿದರು. ಅವರ ದೂರು ದುಮ್ಮಾನಗಳನ್ನು ನಿರ್ಲಕ್ಷಿಸಿದರು. ಕೆಲವು ಸ್ಥಳಗಳಲ್ಲಿ ನೊಂದವರಿಗೆ ದೂರು ದಾಖಲಿಸಲು ಸಾಧ್ಯವಾಗಬಾರದು ಪ್ರಯತ್ನಿಸಲಾಯಿತು. ಇದರಿಂದ ನೂರಾರು ನೊಂದ ಹಿಂದೂ ಕುಟುಂಬದವರು ಮನೆ, ಆಸ್ತಿಪಾಸ್ತಿಗಳನ್ನು ಬಿಟ್ಟು ಪಕ್ಕದ ಆಸ್ಸಾಂ ರಾಜ್ಯದಲ್ಲಿ ಆಶ್ರಯ ಪಡೆದರು. ವಿಶೇಷವೆಂದರೆ ಈ ನೊಂದ ಜನರಲ್ಲಿ ಭಾಜಪದ ಮತದಾರರಿದ್ದಾರೆ.

೨. ದಂಗೆಕೋರರು ಸೃಷ್ಟಿಸಿದ ಭಯದ ವಾತಾವರಣದಿಂದ ಸ್ಥಳಾಂತರಗೊಂಡ ಹಿಂದೂಗಳು ತಮ್ಮ ತಮ್ಮ ಗ್ರಾಮಗಳಿಗೆ ಹಿಂತಿರುಗಲು ನಿರಾಕರಿಸುವುದು

ಹಿಂಸಾಚಾರದ ಭಯದ ವಾತಾವರಣ ಯಾವ ಮಟ್ಟದಲ್ಲಿತ್ತು ಎಂದರೆ, ಹಿಂಸಾಚಾರ ನಿಂತ ಬಳಿಕವೂ ಸ್ಥಳಾಂತರಗೊಂಡ ನೊಂದವರು ತಮ್ಮ ತಮ್ಮ ಗ್ರಾಮಗಳಿಗೆ ಮರಳಲು ಸಿದ್ಧರಾಗಿರಲಿಲ್ಲ. ನೊಂದವರು ನೀಡಿದ ದೂರನ್ನು ಹಿಂಪಡೆಯುವಂತೆ ಅವರ ಮೇಲೆ ಒತ್ತಡವನ್ನು ಹೇರಲಾಗುತ್ತಿದೆ ಎಂದು ಅವರು ಹೇಳಿದರು. ಭಯಂಕರ ಪ್ರಮಾಣದಲ್ಲಿ ಹಿಂಸಾಚಾರವಾಗುತ್ತಿರುವಾಗ ಅದನ್ನು ತಡೆಯಲು ಪೊಲೀಸರು ಅಥವಾ ಆಡಳಿತ ಪಕ್ಷದವರು ಯಾವುದೇ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಿಲ್ಲ. ನೊಂದವರ ದೂರನ್ನು ಕೂಡ ದಾಖಲಿಸಿಕೊಳ್ಳಲಿಲ್ಲ. ಇದರಿಂದ ನೊಂದ ನಾಗರಿಕರು ಮಾನವಾಧಿಕಾರ ಆಯೋಗ ಹಾಗೂ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಗಳನ್ನು ದಾಖಲಿಸಿದರು. ಪ್ರಿಯಾಂಕಾ ಹೆಸರಿನ ಅರ್ಜಿದಾರಳು ತನ್ನ ಮನವಿಯಲ್ಲಿ ತಾನು ೧೨ ರಿಂದ ೧೫ ಜಿಲ್ಲೆಗಳನ್ನು ತಿರುಗಾಡಿದ್ದು, ಪ್ರತಿಯೊಂದು ಜಿಲ್ಲೆಯಲ್ಲಿ ಜನರ ಮೇಲೆ ದೌರ್ಜನ್ಯಗಳಾಗಿವೆ. ಅನೇಕ ಜನರು ನಿರಾಶ್ರಿತರಾಗಿದ್ದು, ಬೇರೆ ರಾಜ್ಯಕ್ಕೆ ಓಡಿ ಹೋಗಿದ್ದಾರೆ. ಅವರ ಉಪಜೀವನ ಸ್ಥಗಿತಗೊಂಡಿದ್ದು, ಈ ಭಯಾನಕ ವಾತಾವರಣದ ಕಾರಣದಿಂದ ಅವರು ಮರಳಿ ಬರಲು ಸಿದ್ಧರಿಲ್ಲ ಎಂದು ಹೇಳಿದ್ದಾಳೆ.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೩. ಬಂಗಾಲ ಉಚ್ಚ ನ್ಯಾಯಾಲಯವು ಹಿಂಸಾಚಾರದ ಪ್ರಕರಣದ ಕುರಿತು ಸಮಿತಿಯನ್ನು ರಚಿಸಿ, ಆ ಸಮಿತಿಯು ಸಂಪೂರ್ಣ ರಾಜ್ಯದಲ್ಲಿ ಪ್ರವಾಸ ಮಾಡಿ ವರದಿಯನ್ನು  ಸಲ್ಲಿಸುವಂತೆ  ಸೂಚಿಸಿತು

ಈ ಹಿಂಸಾಚಾರದ ಪ್ರಕರಣದಲ್ಲಿ ಬಂಗಾಲ ಉಚ್ಚ ನ್ಯಾಯಾಲಯದಲ್ಲಿ ೧೦ ಸಾರ್ವಜನಿಕ ಹಿತಾಸಕ್ತಿ ದೂರುಗಳು ದಾಖಲಾದವು. ಎಲ್ಲ ದೂರುಗಳನ್ನು ನ್ಯಾಯಾಲಯವು ಆಲಿಕೆಗೆ ತೆಗೆದುಕೊಂಡಿತು. ಈ ಬಗ್ಗೆ ತೃಣಮೂಲ ಪಕ್ಷವು ನ್ಯಾಯಾಲಯದಲ್ಲಿ ‘ಎಲ್ಲ ದೂರುಗಳು ಸುಳ್ಳಾಗಿದ್ದು, ದೌರ್ಜನ್ಯ ನಡೆದೇ ಇಲ್ಲ, ಹಿಂಸಾಚಾರ ನಡೆದಿದೆ; ಆದರೆ ಅದರಲ್ಲಿ ಧಾರ್ಮಿಕ ಮತ್ತು ಕೋಮು ವಿಚಾರವಿರಲಿಲ್ಲ. ಭಾಜಪ ಇದಕ್ಕೆ ಕೋಮುಬಣ್ಣವನ್ನು ಬಳಿಯುತ್ತಿದೆ, ಎಂದು ಆರೋಪಿಸಿತು. ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು ಆಗಾಗ ಆಲಿಕೆಯನ್ನು ಮಾಡಿತು. ಉಚ್ಚ ನ್ಯಾಯಾಲಯವು ಕೇಂದ್ರೀಯ ಮತ್ತು ರಾಜ್ಯ ಮಾನವಾಧಿಕಾರ ಸಂಘಟನೆಗಳ ಕಾರ್ಯಕರ್ತರು ಮತ್ತು ಸರಕಾರದ ಪ್ರತಿನಿಧಿಗಳನ್ನು ಒಳಗೊಂಡಂತೆ ಒಂದು ಸಮಿತಿಯನ್ನು ರಚಿಸಿತು. ಸಮಿತಿಗೆ ಹಿಂಸಾಚಾರಗಳು ನಡೆದ ಪ್ರದೇಶಗಳ ಪ್ರತ್ಯಕ್ಷ ಪ್ರವಾಸವನ್ನು ಕೈಗೊಂಡು ಅವುಗಳ ವಾಸ್ತವ ವರದಿಯನ್ನು ಸಲ್ಲಿಸಲು ತಿಳಿಸಿತು. ಈ ವರದಿಯನ್ನು ಪರಿಶೀಲಿಸಿದ ಬಳಿಕ ಉಚ್ಚ ನ್ಯಾಯಾಲಯವು ಬಂಗಾಲ ಸರಕಾರ ಮತ್ತು ಆಡಳಿತವರ್ಗಕ್ಕೆ ವಿವಿಧ ಸೂಚನೆಗಳನ್ನು ನೀಡಿತು. ಆದರೆ ಬಂಗಾಲ ಸರಕಾರ ಮತ್ತು ಆಡಳಿತ ವರ್ಗವು ‘ಯಾರ ಮೇಲೆಯೂ ದೌರ್ಜನ್ಯ ನಡೆದಿಲ್ಲ. ಈ ಎಲ್ಲ ದೂರುಗಳನ್ನು ಭಾಜಪ ರಾಜಕೀಯ ದ್ವೇಷದಿಂದ ಮತ್ತು ಚುನಾವಣೆಯಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಿರುವುದರಿಂದ ನಮಗೆ ಕೆಟ್ಟ ಹೆಸರು ತರಲು ದಾಖಲಿಸಲಾಗಿದೆ ಎಂದು ಹೇಳಿತು. ರಾಜ್ಯ ಸರಕಾರ ಮತ್ತು ಮಾನವಾಧಿಕಾರ ಸಮಿತಿಯು ನೀಡಿದ ಅಂಕಿ-ಅಂಶಗಳಲ್ಲಿ ತುಂಬಾ ವ್ಯತ್ಯಾಸ ಕಂಡು ಬಂದಿತು

೪. ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಮಾನವಾಧಿಕಾರ ಆಯೋಗದ ವರದಿಯಿಂದ ಬಂಗಾಲ ಸರಕಾರದಿಂದ ನಡೆದಿರುವ ಹಿಂಸಾಚಾರ ನ್ಯಾಯಾಲಯದ ಎದುರಿಗೆ ಬಹಿರಂಗಗೊಂಡು, ಸರಕಾರದ ಸುಳ್ಳು ಬಯಲಾಗುವುದು

ಒಬ್ಬ ದೂರುದಾರನು ಸಮಾಜಕಂಟಕರು ಅವನ ಮನೆಯನ್ನು ಸುಟ್ಟರು ಮತ್ತು ಅವನ ವ್ಯವಸಾಯವನ್ನು ಬಂದು ಮಾಡಿದರು. ಇದನ್ನು ವಿರೋಧಿಸಿ ಅವನು ಪೊಲೀಸರ ಬಳಿಗೆ ಹೋದನು. ಆದರೆ ಅವನಿಗೆ ಪೊಲೀಸರಿಂದ ಯಾವುದೇ ಸಹಾಯ ಸಿಗಲಿಲ್ಲ. ಅವನ ಉಪಜೀವನವನ್ನು ನಾಶಗೊಳಿಸಲಾಗಿದೆ. ಇದರಿಂದ  ಭಾರತೀಯ ಸಂವಿಧಾನ ಕಲಂ ೨೧ ರ ಪ್ರಕಾರ ಇದು ಅನ್ಯಾಯವಾಗಿದೆ ಎಂದು ಹೇಳಿದ್ದಾನೆ. ಅನ್ಯಾಯದ ವಿರುದ್ಧ ಪೊಲೀಸರಲ್ಲಿ ನೀಡಿರುವ ದೂರನ್ನು ಹಿಂಪಡೆಯಲು ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದೂ ಅವನು ಹೇಳಿಕೆಯನ್ನು ನೀಡಿದ್ದಾನೆ. ಪೊಲೀಸರು ಈ ಎಲ್ಲ ದೂರುಗಳ ಬಗ್ಗೆ ಗಮನ ಹರಿಸಲಿಲ್ಲ. ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾದವು. ಆಗ ಪೊಲೀಸರು ನೊಂದವರಿಗೆ ಸ್ಪಷ್ಟವಾಗಿ, ಈಗ ನೀವು ನ್ಯಾಯಾಲಯಕ್ಕೆ ಹೋಗಿದ್ದೀರಲ್ಲವೇ ? ಈಗ ನ್ಯಾಯಾಲಯವೇ ನಿಮಗೆ ನ್ಯಾಯ ನೀಡುವುದು. ನಮ್ಮ ಬಳಿಗೆ ಬರಬೇಡಿರಿ, ಎಂದು ಹೇಳಿದರು. ಅದೇ ಸಮಯದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ನೊಂದವರಿಗೆ ರಾಜ್ಯಸರಕಾರ ಸಹಾಯ ಮಾಡುತ್ತಿದೆ ಎಂದು ಉಚ್ಚ ನ್ಯಾಯಾಲಯದಲ್ಲಿ ಹೇಳುತ್ತಿದ್ದರು. ತದನಂತರ ನ್ಯಾಯಾಲಯವು ಮಾನವಾಧಿಕಾರ ಕಾರ್ಯಾಲಯದ ವರದಿಯನ್ನು ಕೋರಿತು. ವರದಿಯಲ್ಲಿ  ಹಿಂಸಾಚಾರ ಭಯಾನಕವಾಗಿತ್ತು ಮತ್ತು ರಾಜ್ಯ ಸರಕಾರ ಯಾವುದೇ ಸಹಾಯ ಮಾಡುತ್ತಿರಲಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು.

೫. ಮಾನವಾಧಿಕಾರ ಸಮಿತಿಗೆ ನೊಂದವರ ಮೇಲೆ ದೊಡ್ಡ ಪ್ರಮಾಣದಲ್ಲಿ ದೌರ್ಜನ್ಯ ನಡೆದಿರುವುದು ಕಂಡು ಬಂದಿತು

ಕೇಂದ್ರ ಮತ್ತು ರಾಜ್ಯ ಸರಕಾರ ಸಂಯುಕ್ತವಾಗಿ ರಚಿಸಿದ ಮಾನವಾಧಿಕಾರ ಸಮಿತಿಯು ವರದಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿತು. ಅದರಲ್ಲಿ ಬಂಗಾಲ ರಾಜ್ಯದಲ್ಲಿ ಚುನಾವಣೆಯ ಬಳಿಕ ದೊಡ್ಡ ಪ್ರಮಾಣದಲ್ಲಿ ದೌರ್ಜನ್ಯ ನಡೆದಿದೆಯೆಂದು ಹೇಳಲಾಗಿತ್ತು.

ಅ. ನಾಗರಿಕರ ಆಸ್ತಿ-ಪಾಸ್ತಿಗಳು ಲೂಟಿಯಾಗಿದ್ದು, ಅವರಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

ಆ. ಗಲಭೆಕೋರರು ಭಯದ ವಾತಾವರಣವನ್ನು ಸೃಷ್ಟಿಸಿದ್ದರಿಂದ ನಾಗರಿಕರಿಗೆ ತಮ್ಮ ಮನೆ ಬಿಟ್ಟು ಓಡಿ ಹೋಗಬೇಕಾಯಿತು.

ಇ. ತೊಂದರೆಗೀಡಾದ ನಾಗರಿಕರು ಹೊರರಾಜ್ಯಗಳಿಗೆ ಸ್ಥಳಾಂತರಗೊಂಡರು. ತದನಂತರ ಅವರ ಮಹಿಳೆಯರನ್ನು ಥಳಿಸಿದರು. ಅಲ್ಲದೇ ಅವರ ಮೇಲೆ ಲೈಂಗಿಕ ಅತ್ಯಾಚಾರವೂ ಆಯಿತು.

ಈ. ಹಿಂದೂಗಳ ಆಸ್ತಿ-ಪಾಸ್ತಿಗಳನ್ನು ಲೂಟಿ ಮಾಡಿ ಅವುಗಳ ಮೇಲೆ ಅತಿಕ್ರಮಣ ಮಾಡಲಾಯಿತು. ಗಲಭೆಕೋರರು ಒತ್ತಾಯದಿಂದ ನೊಂದವರ ಅಂಗಡಿ ಮತ್ತು ಉದ್ಯೋಗಗಳನ್ನು ಬಂದು ಮಾಡಿದರು. ಅಲ್ಲದೇ ಅವರ ಬಳಿ ಹಣವನ್ನೂ ಕೇಳಲಾಯಿತು

೬. ಬಂಗಾಲ ಪೊಲೀಸರಿಂದ ನೊಂದವರ ಮೇಲೆ ನಡೆದ ದೌರ್ಜನ್ಯಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಯಿತು

೧೦ ಜೂನರಂದು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾದ ವರದಿಯಂತೆ ಒಟ್ಟು ೩ ಸಾವಿರ ೨೪೩ ವ್ಯಕ್ತಿಗಳು ನೊಂದವರೆಂದು ಕಂಡು ಬಂದಿತು. ಅವರ ದೂರುಗಳು ಕೇಂದ್ರ ಮತ್ತು ರಾಜ್ಯ ಮಾನವಾಧಿಕಾರ ಆಯೋಗಕ್ಕೆ ಬಂದವು. ತದನಂತರ ಕೇಂದ್ರದ ಮಾನವಾಧಿಕಾರದ ವತಿಯಿಂದ ಈ ದೂರಿನ ಪ್ರತಿಗಳನ್ನು ಸ್ಥಳೀಯ ಪೊಲೀಸರಿಗೆ ಮತ್ತು ಪ್ರತಿಯೊಂದು ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ನೀಡಲಾಯಿತು. ಆ ಸಮಯದಲ್ಲಿ ‘ಇಂತಹ  ಯಾವುದೇ ದೂರು ನಮಗೆ ಸಿಕ್ಕಿಲ್ಲ. ರಾಜ್ಯದಲ್ಲಿ ಯಾರ ಮೇಲೆಯೂ ದೌರ್ಜನ್ಯ ನಡೆದಿಲ್ಲ. ಬದಲು ಪೊಲೀಸರೇ ಜನರಿಗೆ ಸಹಾಯ ಮಾಡುತ್ತಿದ್ದಾರೆ, ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದರು. ಅದಕ್ಕೆ ಉಚ್ಚ ನ್ಯಾಯಾಲಯವು, ಈ ಪ್ರಶ್ನೆ ಒಂದು ಚುನಾವಣಾ ಕ್ಷೇತ್ರಕ್ಕೆ ಸಂಬಂಧಿಸಿಲ್ಲ. ಅದು ಸಂಪೂರ್ಣ ರಾಜ್ಯದ ಜನತೆಯ ಸುರಕ್ಷತೆಗೆ ಸಂಬಂಧಿಸಿದೆ. ಆದುದರಿಂದ ಪ್ರತಿಯೊಬ್ಬ ನೊಂದ ವ್ಯಕ್ತಿಗೆ ಪೊಲೀಸರ ಸಂರಕ್ಷಣೆ ಸಿಗಬೇಕು ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿತು.

ಈ ಆಲಿಸುವಿಕೆಯ ಸಮಯದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ‘ಇ-ಮೇಲ ನ ಒಂದು ವಿಳಾಸವನ್ನು ನೀಡಿ, ಇದರ ಮೇಲೆ ನೊಂದ ವ್ಯಕ್ತಿಗಳು ದೂರು ದಾಖಲಿಸಿದರೆ, ಆ ನೊಂದವರ ದೂರಿನ ಮೇಲೆ ವಿಚಾರಣೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದರು.

೭. ಬಂಗಾಲ ಉಚ್ಚ ನ್ಯಾಯಾಲಯವು ಬಂಗಾಲ ಸರಕಾರದ ಮೇಲೆ ಗಂಭೀರ ಅಭಿಪ್ರಾಯವನ್ನು (ರಿಮಾರ್ಕ) ವ್ಯಕ್ತಪಡಿಸಿ, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಆದೇಶಿಸಿತು.

ಬಂಗಾಲ ಉಚ್ಚ ನ್ಯಾಯಾಲಯ

ಬಂಗಾಲದಲ್ಲಿ ಗಲಭೆಖೋರರು ಮಾಡಿರುವ ಹಿಂಸಾಚಾರಗಳ ಪ್ರಕರಣದಲ್ಲಿ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಅನೇಕ ಬಾರಿ ಆಕ್ರೋಶವನ್ನು ವ್ಯಕ್ತಪಡಿಸಿದೆ.  ನ್ಯಾಯಾಲಯದ ಹೇಳಿಕೆಯಂತೆ ಜನತೆಯ ದೈನಂದಿನ ಉಪಜೀವನವನ್ನು ಕಸಿದುಕೊಳ್ಳುತ್ತಿರುವಾಗ ಮತ್ತು ಅವರ ಆಸ್ತಿ-ಪಾಸ್ತಿಗಳನ್ನು  ನಾಶಮಾಡುತ್ತಿರುವಾಗ ಸರಕಾರದ ನಿಷ್ಕ್ರಿಯತೆಯು ಯೋಗ್ಯವಲ್ಲ. ಈ ರೀತಿ ಸರಕಾರಕ್ಕೆ ನಡೆದುಕೊಳ್ಳಲು ನಾವು ಬಿಡುವುದಿಲ್ಲ. ಜನರ ಮೇಲಿನ ಅತ್ಯಾಚಾರಗಳ ಬಗ್ಗೆ ಕೂಡಲೇ ವಿಚಾರವಿನಮಯವಾಗಿ ನೊಂದವರಿಗೆ ನ್ಯಾಯ ಸಿಗಬೇಕು. ಜನರಲ್ಲಿ ವಿಶ್ವಾಸ ನಿರ್ಮಾಣವಾಗುವಂತೆ ಮತ್ತು ಅವರ ಮನಸ್ಸಿನಲ್ಲಿರುವ ಭಯವನ್ನು ದೂರಗೊಳಿಸುವ ಜಾಗೃತಿಯನ್ನು ಮಾಡಬೇಕು. ನೊಂದವರಿಗೆ ಪುನಃ ಅವರ ಮಾತೃಭೂಮಿಯಲ್ಲಿ ವಾಸಿಸಲು ಅವಕಾಶ ಮಾಡಿಕೊಡಬೇಕು. ಗಲಭೆಖೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚನೆಯನ್ನು ನೀಡಿತು.

ಈ ತೀರ್ಪಿನಲ್ಲಿ ನ್ಯಾಯಾಲಯವು ಮಾನವಾಧಿಕಾರ ಸಮೀತಿಯನ್ನು ರಚಿಸಲು ತಿಳಿಸಿದೆ. ‘ಈ ಸಮಿತಿ ಪ್ರತಿಯೊಂದು ಜಿಲ್ಲೆಯಲ್ಲಿ ಪ್ರವಾಸ ಮಾಡಿ ನೊಂದವರ ಮೇಲೆ ಆಗಿರುವ ದೌರ್ಜನ್ಯಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದೂ ಹೇಳಿದೆ. ಈ ಸಮಿತಿಗೆ ಸಹಾಯ ಮಾಡುವ ಸ್ಪಷ್ಟ ಆದೇಶವನ್ನು ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನೀಡಿದೆ. ‘ಜನತೆಯಲ್ಲಿ ವಿಶ್ವಾಸ ನಿರ್ಮಾಣವಾಗುವಂತೆ ರಾಜ್ಯ ಸರಕಾರವು ಕಾನೂನು-ಸುವ್ಯವಸ್ಥೆಯನ್ನು ನಿರ್ಮಿಸಬೇಕು ಎಂದೂ ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಿಳಿಸಿದೆ. ಜನತೆಯ ಮೇಲೆ ದೌರ್ಜನ್ಯಗಳಾಗುತ್ತಿರುವಾಗ ಅವರ ದೈನಂದಿನ ಉಪಜೀವನವನ್ನು ಕಸಿದುಕೊಳ್ಳುತ್ತಿರುವಾಗ ಮತ್ತು ಅವರ ಮಹಿಳೆಯರ ಮೇಲೆ ದೌರ್ಜನ್ಯಗಳು ಜರುಗುತ್ತಿರುವಾಗ ಪೊಲೀಸರು ಮತ್ತು ಸರಕಾರ ಮೂಕ ದರ್ಶಕರಾಗಿ ನೋಡುತ್ತಿದ್ದರು. ಇದು ನ್ಯಾಯಾಲಯಕ್ಕೆ ಸ್ವಲ್ಪವೂ ಇಷ್ಟವಾಗಿಲ್ಲ. ಆದುದರಿಂದ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸರಕಾರದ ಮೇಲೆ ಗಂಭೀರ ಅಭಿಪ್ರಾಯವನ್ನು (ರಿಮಾರ್ಕ) ವ್ಯಕ್ತಪಡಿಸಿದೆ. ಈ ಪ್ರಕರಣದ ಮುಂದಿನ ಆಲಿಕೆಯನ್ನು  ಜೂನ ೩೦ರಂದು ಇಡಲಾಗಿತ್ತು. ಜೂನ ೩೦ ರಂದು ನಡೆದ ಆಲಿಕೆಯಲ್ಲಿ  ನ್ಯಾಯಾಲಯವು ಕೇಂದ್ರ ಸರಕಾರ, ಬಂಗಾಲ ಸರಕಾರ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ನೋಟೀಸು ಜಾರಿಗೊಳಿಸಿದೆ.

೮. ನ್ಯಾಯಾಲಯದ ತೀರ್ಪು!

ಈ ತೀರ್ಪಿನಿಂದ ಬಂಗಾಲದ ಮಮತಾ ಬ್ಯಾನರ್ಜಿ ಸರಕಾರದ ನಿದ್ದೆಗೆಟ್ಟಿದೆ. ರಾಜ್ಯ ಸರಕಾರವು ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಅರ್ಜಿಯನ್ನು ದಾಖಲಿಸಿ, ಈ ಆದೇಶವನ್ನು ಪ್ರಶ್ನಿಸಿದೆ. ಈ ಅರ್ಜಿಯು ತುಂಬಾ ದಿನಗಳವರೆಗೆ ಆಲಿಕೆಗೆ ಬರದೇ ಇದ್ದಾಗ ರಾಜ್ಯ ಸರಕಾರವು ಉಚ್ಚ ನ್ಯಾಯಾಲಯದಲ್ಲಿ ಈ ಆದೇಶವನ್ನು ‘ರಿಕಾಲ್ ಮಾಡುವಂತೆ ಕೋರಿ  ಅರ್ಜಿಯನ್ನು ಸಲ್ಲಿಸಿತು. ಈ ಅರ್ಜಿಯಲ್ಲಿ ‘ನಮಗೆ ಸಾಕಷ್ಟು ಅವಕಾಶವನ್ನು ನೀಡಲಾಗಿಲ್ಲ. ಆದುದರಿಂದ ನಮಗೆ ಕಾಗದಪತ್ರಗಳನ್ನು ಹಾಜರು ಪಡಿಸಲು ಸಾಧ್ಯವಾಗಿಲ್ಲ. ಆದುದರಿಂದ ಈ ಆದೇಶವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿತು. ಆದರೆ ಉಚ್ಚ ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿತು.

ಈ ತೀರ್ಪು ನೊಂದ ಹಿಂದೂಗಳಿಗೆ ಆಶಾದಾಯಕ ಮತ್ತು ಭರವಸೆಯನ್ನು ನೀಡುವಂತಹದ್ದಾಗಿದೆ. ಆದ್ದರಿಂದಲೇ ದೇಶದ ೧೦೦ ಕೋಟಿ ಜನತೆಗೆ ಇಂದಿಗೂ ನ್ಯಾಯವ್ಯವಸ್ಥೆಯ ಮೇಲೆ ವಿಶ್ವಾಸವಿದೆ. ಜನರು ತಮ್ಮ ಮೇಲಾದ ಪ್ರತಿಯೊಂದು ಅನ್ಯಾಯದ ವಿರುದ್ಧ ನ್ಯಾಯಾಲಯಗಳು, ಮಾನವಾಧಿಕಾರ ಆಯೋಗ ಮತ್ತು ಮಹಿಳಾ ಆಯೋಗ ಇಂತಹ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯಲ್ಲಿ ನ್ಯಾಯವನ್ನು ಅವಶ್ಯ ಕೋರಬೇಕು.

ಶ್ರೀ ಕೃಷ್ಣಾರ್ಪಣಮಸ್ತು

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ (೨೩.೬.೨೦೨೧)