ಅಮೇರಿಕಾದ ೩೬ ರಾಜ್ಯಗಳಿಂದ ಗೂಗಲ್ ಸಂಸ್ಥೆಯ ವಿರುದ್ಧ ದೂರು ದಾಖಲು !

ಗೂಗಲ್ ಪ್ಲೆಸ್ಟೋರ್ ಮೇಲಿನ ದುರ್ವರ್ತನೆಗೆ ವಿರೋಧ !

ಗೂಗಲ್‍ನ ಗೂಂಡಾಗಿರಿ ಸ್ವಂತ ದೇಶದಲ್ಲೇ ಕಂಡು ಬರುತ್ತಿದೆ. ಆದ್ದರಿಂದ ಈಗ ವಿಶ್ವಮಟ್ಟದಲ್ಲಿ ಗೂಗಲ್ ಮೇಲೆ ಕಡಿವಾಣ ಹಾಕಲು ಸಂಘಟಿತರಾಗಿ ಪ್ರಯತ್ನಿಸಬೇಕು !

ವಾಶಿಂಗ್ಟನ್ (ಅಮೇರಿಕಾ) – ಅಮೇರಿಕಾದ ೩೬ ರಾಜ್ಯಗಳು ಗೂಗಲ್ ಸಂಸ್ಥೆಯ ವಿರುದ್ಧ ದೂರನ್ನು ದಾಖಲಿಸಿವೆ. ಗೂಗಲ್‍ನ ಪ್ಲೆ ಸ್ಟೋರ್ ನಲ್ಲಿ ಆ್ಯಪನ್ನು ಹುಡುಕುವಾಗ ಗೂಗಲ್‍ನಿಂದ ಸೀಮಿತ ಆ್ಯಪನ್ನು ತೋರಿಸಲಾಗುತ್ತಿದೆ. ಅನೇಕ ಸಂಸ್ಥೆಗಳ ಆ್ಯಪನ್ನು ತೋರಿಸುವುದಿಲ್ಲ. ಅದನ್ನು ಬ್ಲಾಕ್ ಮಾಡಲಾಗಿದೆ, ಎಂದು ಆರೋಪಿಸಲಾಗಿದೆ. ‘ಗೂಗಲ್‍ನ ಮಾಧ್ಯಮದಿಂದ ಅಂಡ್ರೈಡ್ ಆ್ಯಪ್ ಸ್ಟೋರ್’ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಇದು ದೇಶದ ಏಕಸಾಮ್ಯ ಕಾನೂನಿನ ಉಲ್ಲಂಘನೆಯಾಗಿದೆ’, ಎಂದು ಈ ರಾಜ್ಯಗಳು ಹೇಳಿವೆ.

ನ್ಯೂಯಾರ್ಕ್‍ನ ಅಟಾರ್ನಿ ಜನರಲ್ ಜೆಮ್ಸ್ ಮತ್ತು ಅವರ ಸಹಕಾರಿಗಳು, ಆ್ಯಪ್‍ಅನ್ನು ಅಭಿವೃದ್ಧಿ ಪಡಿಸುವವರನ್ನು ತಮ್ಮ ಆ್ಯಪ್ ಮತ್ತು ಇತರ ಸಾಹಿತ್ಯಗಳನ್ನು ಗೂಗಲ್ ಪ್ಲೆಸ್ಟೋರ್ ನ ಮಾಧ್ಯಮದಿಂದ ಮಾರಾಟ ಮಾಡಬೇಕೆಂದು ಗೂಗಲ್‍ನಿಂದ ಒತ್ತಾಯಿಸಲಾಗುತ್ತದೆ ಹಾಗೂ ಅದಕ್ಕಾಗಿ ಗೂಗಲ್ ಶೇ. ೩೦ ರಷ್ಟು ಕಮಿಶನ ಪಡೆಯುುತ್ತಿದೆ ಎಂದು ಆರೋಪವನ್ನು ಮಾಡಿದ್ದಾರೆ