ಹಿಂದೂ ಹಬ್ಬಗಳನ್ನು ಅವಮಾನಿಸುವುದು ಮತ್ತು ಇತರ ಪಂಥೀಯರನ್ನು ಒಳ್ಳೆಯವರೆಂದು ಬಿಂಬಿಸುವುದು ಇದು ವೈಚಾರಿಕ ಭಯೋತ್ಪಾದನೆ ! – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ಹಿಂದೂ ವಿಧಿಜ್ಞ ಪರಿಷದ

‘ಸುರಾಜ್ಯ ನಿರ್ಮಾಣದಲ್ಲಿ ನ್ಯಾಯವಾದಿಗಳ ಕೊಡುಗೆ !’ ಕುರಿತು ಆನ್‌ಲೈನ್ ಚರ್ಚಾಗೋಷ್ಠಿ !

ಗಣೇಶೋತ್ಸವ ಬಂದಾಗ, ಜಲ ಪ್ರದೂಷಣೆಯಾಗುತ್ತದೆ, ದೀಪಾವಳಿಯಂದು ಪಟಾಕಿ ಸಿಡಿಸಿದರೆ ವಾಯು ಮತ್ತು ಧ್ವನಿ ಪ್ರದೂಷಣೆಯಾಗುತ್ತದೆ, ಎಂದೆಲ್ಲ ದೊಡ್ಡ ಪ್ರಮಾಣದಲ್ಲಿ ಪ್ರಸಾರ ಮಾಡಿ ಹಿಂದೂಗಳ ಶ್ರದ್ಧಾಸ್ಥಾನಗಳನ್ನು ಅವಮಾನಿಸಲಾಗುತ್ತಿದೆ. ಇದರಿಂದ ಹಿಂದೂಗಳಲ್ಲಿ ತಮ್ಮದೇ ಧರ್ಮದ ಬಗ್ಗೆ ಕೀಳರಿಮೆ ಉಂಟಾಗಬೇಕು ಮತ್ತು ಏನಾದರೂ ಒಳ್ಳೆಯದಿದ್ದರೆ ಅದು ಕ್ರೈಸ್ತ-ಮುಸ್ಲಿಂ ಪಂಥಗಳಲ್ಲಿ ಮಾತ್ರ ಇದೆ ಎಂಬುದನ್ನು ತೋರಿಸಲು ನಿರಂತರ ಅಟ್ಟಹಾಸ ನಡೆಯುತ್ತಿರುತ್ತದೆ. ಇದೊಂದು ವೈಚಾರಿಕ ಭಯೋತ್ಪಾದನೆಯೇ ಆಗಿದೆ. ಮಸೀದಿಗಳಲ್ಲಿನ ಭೋಂಗಾಗಳ ಬಗ್ಗೆ ಯಾವುದೇ ಚರ್ಚೆ ಆಗುವುದಿಲ್ಲ; ಆದರೆ ಹಿಂದೂಗಳ ಹಬ್ಬಗಳಲ್ಲಿನ ಧ್ವನಿ ಪ್ರದೂಷಣೆಯ ಬಗ್ಗೆ ಚರ್ಚಿಸಲಾಗುತ್ತದೆ. ಇದು ಸಹ ವೈಚಾರಿಕ ಭಯೋತ್ಪಾದನೆಯಾಗಿದೆ, ಎಂದು ಹಿಂದೂ ವಿಧಿಜ್ಞ ಪರಿಷದನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಇವರು ಖಂಡತುಂಡವಾಗಿ ಹೇಳಿದರು. ಅವರು ‘ಹಿಂದೂ ವಿಧಿಜ್ಞ ಪರಿಷದನ’ ೯ ನೇ ವರ್ಧ್ಯಂತ್ಯುತ್ಸವದ ಸಂದರ್ಭದಲ್ಲಿ ‘ಸುರಾಜ್ಯ ನಿರ್ಮಾಣದಲ್ಲಿ ನ್ಯಾಯವಾದಿಗಳ ಕೊಡುಗೆ’ ಈ ವಿಷಯದ ಬಗ್ಗೆ ‘ಸನಾತನ ಸಂವಾದ’ ಈ ಆನ್‌ಲೈನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಸಮಿತಿಯ ಜಾಲತಾಣ Hindujagruti.org ಮತ್ತು ಯೂಟ್ಯೂಬ್, ಟ್ವಿಟರ್‌ನಲ್ಲಿ 2645 ಜನರು ಪ್ರತ್ಯಕ್ಷವಾಗಿ ವೀಕ್ಷಿಸಿದ್ದಾರೆ.

ನ್ಯಾಯವಾದಿ ಇಚಲಕರಂಜಿಕರ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಮಾಲೆಗಾಂವ್ ಬಾಂಬ್ ಸ್ಫೋಟದ ಹೆಸರನ್ನು ಪ್ರಸ್ತಾಪಿಸಿದಾಗ, ಸಾಧ್ವಿ ಪ್ರಜ್ಞಾ ಸಿಂಗ್ ಅವರ ಹೆಸರನ್ನು ನೆನಪಿಸಿಕೊಳ್ಳಲಾಗುತ್ತದೆ; ಆದರೆ ೨೦೦೮ ರ ಸ್ಫೋಟದ ಮೊದಲು, ೨೦೦೬ ರ ಮಾಲೆಗಾಂವ್ ಸ್ಫೋಟದ ಆರೋಪಿಗಳೆಲ್ಲರೂ ಮುಸಲ್ಮಾನರಾಗಿದ್ದರು. ಅವರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿದೆ ಎಂದು ಆರೋಪಿಸಿ ಎಟಿಎಸ್ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ‘ಸಿಬಿಐ’ ಕೂಡ ಅದೇ ಮಾತನ್ನು ಹೇಳಿದೆ; ಆದರೆ, ಆಗಿನ ಕಾಂಗ್ರೆಸ್ ಸರಕಾರಕ್ಕೆ ಇಷ್ಟವಾಗದೇ ಇದ್ದರಿಂದ ಅವರು ‘ಎನ್‌ಐಎ’ ಯಿಂದ ತನಿಖೆ ನಡೆಸಿ ಎಲ್ಲಾ ಮುಸಲ್ಮಾನ ಆರೋಪಿಗಳನ್ನು ನಿರಪರಾಧಿಗಳು ಎಂದು ಹೇಳುತ್ತಾ ಹಿಂದೂಗಳನ್ನು ಆರೋಪಿಗಳನ್ನಾಗಿಸಿದರು. ದಾಭೋಲ್ಕರ್ ಪ್ರಕರಣದಲ್ಲಿಯೂ ಇದನ್ನೇ ಪುನರಾವರ್ತಿಸಲಾಗಿದೆ. ಈ ಮೊದಲು ನಾಗೋರಿ ಮತ್ತು ಖಂಡೆಲವಾಲ ಇವರ ಪಿಸ್ತೂಲಿನಿಂದ ಹತ್ಯೆಯಾಗಿದೆ ಎಂದು ಹೇಳಿ ಅವರನ್ನು ಬಂಧಿಸಲಾಯಿತು; ನಂತರ ಅವರಲ್ಲ ಅಕೋಲಕರ ಮತ್ತು ವಿನಯ ಪವಾರ ಅವರ ಹೆಸರನ್ನು ಮುಂದಿಟ್ಟು ಅವರ ಪೋಸ್ಟರ್‌ಗಳನ್ನು ರಾಜ್ಯದಲ್ಲಿ ಹಾಕಿದರು. ನಂತರ ಅವರಲ್ಲ, ಶರದ ಕಳಸ್ಕರ ಮತ್ತು ಸಚಿನ್ ಅಂದುರೆ ಕೊಲೆಗಾರರು ಎಂದು ಅವರು ಹೇಳಿದರು. ಸಾಫ್ಟ್‌ವೇರ್‌ನ ಹೊಸ ‘ಆವೃತ್ತಿ’ಗಳು ಬರುವ ಬಗ್ಗೆ ನಾನು ಕೇಳಿದ್ದೇನೆ; ಆದರೆ ಒಂದೇ ಖಟ್ಲೆಯಲ್ಲಿನ ಹೊಸ ಹೊಸ ‘ವರ್ಶನ್’ ಹೇಗೆ ಇರಬಲ್ಲದು ಎಂದು ಅವರು ಪ್ರಶ್ನಿಸಿದರು.

ಈ ಸಮಯದಲ್ಲಿ, ಹಿಂದೂ ವಿಧಿಜ್ಞ ಪರಿಷದನ ಸಂಸ್ಥಾಪಕ ಸದಸ್ಯ ಪೂ. ಸುರೇಶ ಕುಲಕರ್ಣಿಯವರು ಮಾತನಾಡಿ, ಹಿಂದೂ ಕಾರ್ಯಕರ್ತರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪೊಲೀಸರು ಮತ್ತು ಆಡಳಿತ ಮಾತ್ರವಲ್ಲದೆ ರಾಜಕಾರಣಿಗಳೂ ಭಾಗಿಯಾಗಿದ್ದಾರೆ. ನಂದೂರಬಾರ ಜಿಲ್ಲೆಯಲ್ಲಿ ಕೆಲವು ಹಿಂದೂ ಕಾರ್ಯಕರ್ತರನ್ನು ಪೊಲೀಸರು ಮತ್ತು ಆಡಳಿತವು ಅಯೋಗ್ಯ ಪದ್ಧತಿಯಲ್ಲಿ ಗಡಿಪಾರು ಮಾಡಿತ್ತು. ನಾವು ಗಡಿಪಾರನ್ನು ರದ್ದುಪಡಿಸಿ ಪ್ರತಿಯೊಬ್ಬ ಪೊಲೀಸರಿಂದ ತಲಾ ೧೦೦೦೦ ರೂಪಾಯಿ ದಂಡವನ್ನು ವಸೂಲು ಮಾಡಿದ್ದೇವೆ ಹಾಗೂ ಹಿಂದೂ ವಿಧಿಜ್ಞ ಪರಿಷದನ ಸಂಘಟನಾ ನ್ಯಾಯವಾದಿ ನೀಲೇಶ ಸಾಂಗೋಲಕರ ಅವರು ದೇವಸ್ಥಾನಗಳ ಸರಕಾರಿಕರಣದಿಂದಾಗಿದ್ದ ಹಗರಣಗಳು ಹೇಗೆ ಬಹಿರಂಗ ಪಡಿಸಿದೆವು, ಎಂಬುದನ್ನು ಹೇಳುತ್ತಾ ಮಸೀದಿಗಳಲ್ಲಿನ ಭೋಂಗಾದ ಶಬ್ದದಿಂದ ಉಂಟಾಗುವ ಶಬ್ದ ಮಾಲಿನ್ಯದ ಬಗ್ಗೆ ಮಾಹಿತಿ ಅಧಿಕಾರದ ಹಕ್ಕನ್ನು ಬಳಸಿಕೊಂಡು, ಹಾಗೆಯೇ ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ಆಧಾರವನ್ನು ನೀಡಿ ದೂರು ದಾಖಲಿಸಬೇಕು, ಎಂದು ಕರೆ ನೀಡಿದರು. ಈ ಸಮಯದಲ್ಲಿ, ‘ಭಾರತವು ವೈಭವಶಾಲಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಹೊಂದಿದೆ, ಅದನ್ನು ಹೊಸ ಸಾಂವಿಧಾನಿಕ ಭಾಷೆಯಲ್ಲಿ ಸಮಾಜಕ್ಕೆ ತಲುಪಿಸಬೇಕು’ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಆರ್. ವೆಂಕಟರಮಣಿ ಇವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.