ದಾಭೋಲ್ಕರ್, ಪಾನ್ಸಾರೆ, ಗೌರಿ ಲಂಕೇಶ ಮುಂತಾದವರ ಹತ್ಯೆಗಳತನಿಖೆಗಳ ಹಿಂದೆ ಕೇವಲ ರಾಜಕೀಯ ಉದ್ದೇಶ ! – ಡಾ. ಅಮಿತ ಥಡಾನಿ, ಲೇಖಕರು

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ದ ರ‍್ಯಾಷನಲಿಸ್ಟ್ ಮರ್ಡರ್ಸ್’ ಪುಸ್ತಕದ ಲೋಕಾರ್ಪಣೆ !

‘’ದ ರ‍್ಯಾಷನಲಿಸ್ಟ್ ಮರ್ಡರ್ಸ್’ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತಿರುವ ಎಡದಿಂದ ನ್ಯಾಯವಾದಿ ಪಿ. ಕೃಷ್ಣಮೂರ್ತಿ, ಲೇಖಕರಾದ ಡಾ. ಅಮಿತ ಥಡಾನಿ, ನ್ಯಾಯವಾದಿ (ಪೂ.) ಸುರೇಶ ಕುಲಕರ್ಣಿ ಮತ್ತು ನ್ಯಾಯವಾದಿ ವಿರೇಂದ್ರ ಇಚಲಕರಂಜಿಕರ

ಡಾ. ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸಾರೆ, ಎಂ.ಎಂ. ಕಲ್ಬುರ್ಗಿ ಹಾಗೂ ಗೌರಿ ಲಂಕೇಶ ಈ ನಾಸ್ತಿಕವಾದಿ ಹಾಗೂ ನಗರ ನಕ್ಸಲರೊಂದಿಗೆ ನಂಟಿದ್ದವರ ಹತ್ಯೆಯ ತನಿಖೆಯಲ್ಲಿ ರಾಜಕಾರಣ ನಡೆಯುತ್ತಿದೆ. ದೃಢವಾದ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ, ಹಿಂದುತ್ವನಿಷ್ಠರನ್ನು ಆರೋಪಿಗಳನ್ನಾಗಿ ಮಾಡಿ ಜೈಲಿಗೆ ಹಾಕಲಾಯಿತು. ಅವರ ವಿರುದ್ಧ ಚಾರ್ಜ್ ಶೀಟ್ ಕೂಡ ದಾಖಲಿಸಿದರು; ಆದರೆ ನಂತರ ತನಿಖಾ ಸಂಸ್ಥೆಗಳೇ ಕೊಲೆಯ ಹಿಂದೆ ಬಂಧಿತ ಆರೋಪಿಗಳ ಬದಲು ಹೊಸ ಆರೋಪಿಗಳಿದ್ದಾರೆ ಎಂದು ಹೇಳಿವೆ. ಒಟ್ಟಾರೆಯಾಗಿ ಇವೆಲ್ಲಾ ಪ್ರಕರಣಗಳಲ್ಲಿ ನಿರಂತರ ಆರೋಪಿಗಳ ಬದಲಾವಣೆ, ಶಸ್ತ್ರಾಸ್ತ್ರಗಳ ಬದಲಾವಣೆ ಮಾಡುವುದು ಇತ್ಯಾದಿ ಕಾನೂನುಬಾಹಿರ ಕೃತ್ಯಗಳು ನಡೆದವು. ಗೌರಿ ಲಂಕೇಶರ ಹಂತಕರು ರಾತ್ರಿಯ ಕತ್ತಲೆಯಲ್ಲಿ ಹೆಲ್ಮೆಟ್ ಧರಿಸಿ ಕೊಲೆ ಮಾಡಿದ್ದರೂ ಶಂಕಿತರ ಅನೇಕ ಛಾಯಾಚಿತ್ರಗಳನ್ನು ಚಿತ್ರಿಸಲಾಯಿತು; ಹಾಗಾದರೆ ಹೆಲ್ಮೆಟ್‌ನೊಳಗಿನ ಮುಖಗಳನ್ನು ಪೊಲೀಸರು ಹೇಗೆ ನೋಡಿದರು ? ಡಾ. ದಾಭೋಲ್ಕರ್ ಪ್ರಕರಣದಲ್ಲಿ ತುಂಡುಗಳಾಗಿ ಮಾಡಿ ಸಮುದ್ರಕ್ಕೆ ಎಸೆದಿದ್ದ ಪಿಸ್ತೂಲ್ ಅನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ; ಆದರೆ ಅವರಿಗೆ ಸಮುದ್ರದಲ್ಲಿ ಇಡೀ ಪಿಸ್ತೂಲು ಸಿಕ್ಕಿದೆ ! ಹಾಗಾದರೆ ಆ ಪಿಸ್ತೂಲನ್ನು ಆಳ ಸಮುದ್ರದಲ್ಲಿ ಜೋಡಿಸಿದವರು ಯಾರು ? ಒಟ್ಟಿನಲ್ಲಿ ತನಿಖಾ ಸಂಸ್ಥೆಗಳು ಈ ಕೊಲೆಗಳನ್ನು ಯಾರು ಮತ್ತು ಏಕೆ ಮಾಡಿದ್ದಾರೆ ಎಂಬುದನ್ನೂ ಪ್ರಾಮಾಣಿಕವಾಗಿ ತನಿಖೆ ಮಾಡಿಯೇ ಇಲ್ಲ. ಕೇವಲ ಈ ಹತ್ಯೆಗಳಿಂದ ರಾಜಕೀಯ ಲಾಭವನ್ನು ಹೇಗೆ ಪಡೆಯಬಹುದು ಎಂಬುದನ್ನು ನೋಡಲಾಯಿತು, ಎಂದು ‘ದ ರ‍್ಯಾಷನಲಿಸ್ಟ್ ಮರ್ಡರ್ಸ್ ಪುಸ್ತಕದ ಲೇಖಕರಾದ ಡಾ. ಅಮಿತ ಥಡಾನಿ ಇವರು ಹೇಳಿದರು. ಅವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ದ ರ‍್ಯಾಷನಲಿಸ್ಟ್ ಮರ್ಡರ್ಸ್’ ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವ್ಯಾಸಪೀಠದಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ಸಂಸ್ಥಾಪಕ ಸದಸ್ಯ ನ್ಯಾಯವಾದಿ (ಪೂ.) ಸುರೇಶ ಕುಲಕರ್ಣಿ, ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಮತ್ತು ನ್ಯಾಯವಾದಿ ಪಿ. ಕೃಷ್ಣಮೂರ್ತಿ ಇವರೂ ಉಪಸ್ಥಿತರಿದ್ದರು.

ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್

ಈ ಸಂದರ್ಭದಲ್ಲಿ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಇವರು ಮಾತನಾಡುತ್ತಾ, ”ನಾಸ್ತಿಕರನ್ನು ಕೊಂದ ನಂತರ ಹಿಂದುತ್ವನಿಷ್ಠರನ್ನು ಭಯೋತ್ಪಾದಕರು ಎಂದು ನಿರ್ಧರಿಸಲಾಗುತ್ತದೆ; ಆದರೆ ಸಾಮ್ಯವಾದಿಗಳು ಎಷ್ಟು ಜನರನ್ನು ಕೊಂದರು? ಈ ಪ್ರಶ್ನೆಯನ್ನು ಏಕೆ ಕೇಳುವುದಿಲ್ಲ ? ಸಾಮ್ಯವಾದಿಗಳು ವಿಶ್ವಾದ್ಯಂತ 10 ಕೋಟಿ ಜನರನ್ನು ಕೊಂದಿದ್ದಾರೆ, ನಕ್ಸಲೀಯರು 14 ಸಾವಿರಕ್ಕೂ ಹೆಚ್ಚು ಜನರನ್ನು ಕೊಂದಿದ್ದಾರೆ. ನಕ್ಸಲೀಯರೇ ಸಾಮ್ಯವಾದಿಗಳಿದ್ದಾರೆ ಮತ್ತು ಸಾಮ್ಯವಾದಿಗಳೇ ನಕ್ಸಲೀಯರಾಗಿದ್ದಾರೆ; ಆದರೆ ಇದನ್ನು ಯಾರೂ ಹೇಳುವುದಿಲ್ಲ. ಇದು ವೈಚಾರಿಕ ಭಯೋತ್ಪಾದನೆಯಾಗಿದೆ. ಆದ್ದರಿಂದ ವೈಚಾರಿಕ ಭಯೋತ್ಪಾದನೆಯ ವಿರುದ್ಧ ಎಲ್ಲರೂ ಪ್ರಶ್ನೆ ಕೇಳುವ ಧೈರ್ಯ ತೋರಬೇಕು!” ಎಂದು ಹೇಳಿದರು. ನ್ಯಾಯವಾದಿ ಪಿ. ಕೃಷ್ಣಮೂರ್ತಿ ಇವರು ಮಾತನಾಡುತ್ತಾ, “ನಾನು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (ಪಿಎಫ್‌ಐ) ಈ ಜಿಹಾದಿ ಸಂಘಟನೆಯ ವಿರುದ್ಧದ ಖಟ್ಲೆಯನ್ನು ಹೋರಾಡುತ್ತಿದ್ದೇನೆ. ಇದರಿಂದಾಗಿ ನನಗೆ ಬೆದರಿಕೆ ಹಾಕಿದ್ದರಲ್ಲದೆ, ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಸಹ ನಡೆಸಿದ್ದಾರೆ; ಆದರೆ ನಾನು ಶ್ರೀಕೃಷ್ಣನನ್ನು ಸ್ಮರಿಸಿದ್ದರಿಂದ ನನ್ನ ರಕ್ಷಣೆಯಾಯಿತು. ಹಾಗಾಗಿ ಸಮಾಜದಲ್ಲಿ ಹಿಂದುತ್ವನಿಷ್ಠ ನ್ಯಾಯವಾದಿಗಳು ಸಹ ಸಮಯ ಸಿಕ್ಕಾಗ ನಾಮಸ್ಮರಣೆ ಮಾಡಬೇಕು”, ಎಂದರು. ಈ ಸಂದರ್ಭದಲ್ಲಿ ನ್ಯಾಯವಾದಿ (ಪೂ.) ಹರಿಶಂಕರ ಜೈನ್ ಇವರು ಧರ್ಮಕ್ಕಾಗಿ ಬಲಿದಾನ ಮಾಡಿದವರನ್ನು ಮರೆಯಬೇಡಿ’ ಎಂದು ಕರೆ ನೀಡಿದರು. ಈ ಅಧಿವೇಶನವನ್ನು ಹಿಂದೂ ಜನಜಾಗೃತಿ ಸಮಿತಿಯ ವೆಬ್‌ಸೈಟ್ HinduJagruti.org ಮೂಲಕ ಮತ್ತು ಯೂಟ್ಯೂಬ್ ಚಾನೆಲ್ ‘HinduJagruti’ ಮೂಲಕ ನೇರ ಪ್ರಸಾರ ಮಾಡಲಾಗುತ್ತಿದೆ.