ಹಿಂದೂ ವಿಧಿಜ್ಞ ಪರಿಷತ್ತಿನ ದೂರಿನ ನಂತರ ಕ್ರೀಡಾ ಸಚಿವಾಲಯದಿಂದ ಕ್ರಮ !
ಮುಂಬಯಿ – ಸರಕಾರದಿಂದ ನಿಧಿ ಪಡೆದರೂ ರಾಜ್ಯದ ಅನೇಕ ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾ ಪರಿಷತ್ತಿನ ವಾರ್ಷಿಕ ಲೇಕ್ಕಪರಿಶೋಧನೆಯ ವರದಿ ಸರಕಾರಕ್ಕೆ ಪ್ರಸ್ತುತಪಡಿಸುತ್ತಿಲ್ಲ. ಇದು ಕೆಲವು ಕ್ರೀಡಾ ಸಮಿತಿಗಳಿಂದ ಹಿಂದಿನ ಕೆಲವು ವರ್ಷಗಳಿಂದ ನಡೆಯುತ್ತಿದೆ. ಆದ್ದರಿಂದ ಇದರಲ್ಲಿ ಕೋಟ್ಯಾಂತರ ರೂಪಾಯಿಯ ದುರುಪಯೋಗ ಮತ್ತು ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ವ್ಯಕ್ತಪಡಿಸುತ್ತಾ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಇವರು ಇದರ ಬಗ್ಗೆ ರಾಜ್ಯದ ಕ್ರೀಡಾ ಸಚಿವಾಲಯಕ್ಕೆ ಲಿಖಿತ ದೂರು ನೀಡಿದ್ದರು. ಈ ದೂರು ಗಮನಕ್ಕೆ ತೆಗೆದುಕೊಂಡು ಕ್ರೀಡಾ ಸಚಿವಾಲಯದಿಂದ ರಾಜ್ಯದಲ್ಲಿನ ಎಲ್ಲಾ ವಿಭಾಗೀಯ ಉಪ ಸಂಚಾಲಕರಿಗೆ ಹಾಗೂ ಜಿಲ್ಲಾ ಮತ್ತು ತಾಲೂಕ ಮಟ್ಟದ ಕ್ರೀಡಾ ಅಧಿಕಾರಿಗಳಿಗೆ ಪತ್ರ ಕಳುಹಿಸಿ ಅವರಿಗೆ ತತ್ಪರ್ತೆಯಿಂದ ವರದಿ ಪ್ರಸ್ತುತಪಡಿಸುವ ಆದೇಶ ನೀಡಿದ್ದಾರೆ.
೧. ‘ಎಲ್ಲಿಯವರೆಗೆ ಲೇಕ್ಕಪರೀಕ್ಷಣೆಯ ವರದಿ ಮತ್ತು ತತ್ಸಮ ದಾಖಲೆ ಪ್ರಸ್ತುತಪಡಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಕ್ರೀಡಾಪರಿಷತ್ತಿಗೆ ಮತ್ತು ಕ್ರೀಡಾ ಸಂಕೀರ್ಣಗಳಿಗೆ ಸರಕಾರಿ ನಿಧಿ ನೀಡಬಾರದೆಂದು’, ಹಿಂದೂ ವಿಧಿಜ್ಞ ಪರಿಷತ್ತಿನ ವತಿಯಿಂದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಇವರು ಕ್ರೀಡಾ ಸಂಚಾಲಕರಿಗೆ ಪತ್ರ ಬರೆದಿದ್ದರು.
೨. ಇದನ್ನು ಗಮನಕ್ಕೆ ತೆಗೆದುಕೊಂಡು ಕ್ರೀಡಾ ಸಚಿವಾಲಯವು ನ್ಯಾಯವಾದಿ ಇಚಲಕರಂಜಿಕರ ಇವರ ದೂರಿನ ಪ್ರತಿ ರಾಜ್ಯದಲ್ಲಿನ ಎಲ್ಲಾ ಕ್ರೀಡಾ ಅಧಿಕಾರಿಗಳಿಗೆ ಕಳುಹಿಸಿ ಈ ಅಂಶಗಳ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳುವ ಆದೇಶ ನೀಡಿದೆ.
೩. ಕ್ರೀಡಾ ಸಂಕೀರ್ಣಗಳ ಬಗ್ಗೆ ಲೇಕ್ಕಪರೀಕ್ಷಣೆಯ ವರದಿ ಯಥಾವತ್ತಾಗಿ ಇರಿಸುವುದು ಮತ್ತು ಬದಲಾವಣೆಯ ವರದಿ ಅಥವಾ ತತ್ಸಮ ದಾಖಲೆಯ ಸಹಾಯದಿಂದ ಧಾರ್ಮಿಕ ದತ್ತಿ ಆಯುಕ್ತರ ಬಳಿ ಪ್ರಸ್ತುತಪಡಿಸುವ ಜವಾಬ್ದಾರಿ ವಿಭಾಗಿಯ ಸಂಚಾಲಕರು, ಜಿಲ್ಹಾ ಕ್ರೀಡಾ ಅಧಿಕಾರಿ, ತಾಲೂಕ ಕ್ರೀಡಾ ಅಧಿಕಾರಿ ಸಹಿತ ಸಂಬಂಧಪಟ್ಟ ಅಧಿಕಾರಿಗಳ ಬಳಿ ಇದೆ, ಇದು ರಾಜ್ಯದ ಕ್ರೀಡಾ ಸಚಿವಾಲಯದ ಸಹ ಸಂಚಾಲಕ ಚಂದ್ರಕಾಂತ ಕಾಂಬಳೆ ಇವರು ಪತ್ರಗಳ ಮೂಲಕ ರಾಜ್ಯದಲ್ಲಿನ ಎಲ್ಲಾ ಕ್ರೀಡಾ ಅಧಿಕಾರಿಗಳಿಗೆ ಗಮನಕ್ಕೆ ತಂದು ಕೊಟ್ಟಿದ್ದಾರೆ. ‘ಹಿಂದೂ ವಿಧಿಜ್ಞ ಪರಿಷತ್ತಿನ ಪತ್ರದಲ್ಲಿ ಹೇಳಿದಂತೆ ಕ್ರಮ ಕೈಗೊಳ್ಳಬೇಕು. ಇದರ ವರದಿ ಒಂದು ತಿಂಗಳಲ್ಲಿ ಪಡೆಯಲಾಗುವುದು, ಎಂದೂ ಸಹ ಕಾಂಬಳೆ ಇವರು ಪತ್ರದಲ್ಲಿ ಹೇಳಿದ್ದಾರೆ.
ಭ್ರಷ್ಟಾಚಾರ ಬಹಿರಂಗವಾದರೇ ಕ್ರೀಡಾ ಆಯುಕ್ತರನ್ನು ಆರೋಪಿ ಎಂದು ಒತ್ತಾಯಿಸಬೇಕಾಗುತ್ತದೆ ! – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ‘ನಮ್ಮ ಪತ್ರದಂತೆ ಆಯುಕ್ತರು ಯಾವುದೇ ಕ್ರಮ ಕೈಗೊಳ್ಳದೆ ಇದ್ದರೆ ಮತ್ತು ಭವಿಷ್ಯದಲ್ಲಿ ಕ್ರೀಡಾ ಪರಿಷತ್ತಿನಲ್ಲಿ ಅಥವಾ ಕ್ರೀಡಾ ಸಂಕೀರ್ಣಗಳಲ್ಲಿ ಕೆಲವು ಭ್ರಷ್ಟಾಚಾರ ಬಹಿರಂಗವಾದರೆ, ಲಿಖಿತ ದೂರು ನೀಡಿದರು ಕೂಡ ಆಯುಕ್ತರು ಗಮನ ಹರಿಸಲಿಲ್ಲ, ಅದಕ್ಕಾಗಿ ಆಯುಕ್ತರನ್ನು ಕೂಡ ಆರೋಪಿ ಎಂದು ನಾವು ಒತ್ತಾಯಿಸಬೇಕಾಗುತ್ತದೆ, ಎಂದೂ ಸಹ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ ಇವರು ಹೇಳಿದರು. ಕ್ರೀಡಾ ಸಂಕೀರ್ಣಗಳು ಮತ್ತು ಕ್ರೀಡಾಪರಿಷತ್ತಿನಲ್ಲಿ ಕೆಲವು ಭ್ರಷ್ಟಾಚಾರ ನಡೆಯುತ್ತಿರುವುದು ಗಮನಕ್ಕೆ ಬಂದ ನಂತರ ಅದರ ವಿರುದ್ಧ ಹೋರಾಡುವುದಿದ್ದರೆ ೯೮೫೦೮೫೯೩೮ ಈ ಸಂಪರ್ಕ ಸಂಖ್ಯೆಗೆ ಸಂಪರ್ಕಿಸಲು ನ್ಯಾಯವಾದಿ ಇಚಲಕರಂಜಿಕರ ಇವರು ಕರೆ ನೀಡಿದ್ದಾರೆ. |