ಹಿಂದೂ ವಿಧಿಜ್ಞ ಪರಿಷತ್ತಿನ ಪತ್ರದ ನಂತರ ಮಹಾರಾಷ್ಟ್ರ ಪುರಾತತ್ವ ಇಲಾಖೆ ತನ್ನ ವೆಬ್‌ಸೈಟ್ ಅನ್ನು ಪ್ರಾರಂಭಿಸಿತು !

ಮುಂಬಯಿ, ಜುಲೈ 20 (ವಾರ್ತೆ.) – ರಾಜ್ಯದ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುವ ಸ್ಮಾರಕಗಳು ಮತ್ತು ಅದರ ಬಗೆಗಿನ ಅಧಿಕೃತ ಮಾಹಿತಿಯು ನಾಗರಿಕರಿಗೆ ಸಿಗಬೇಕು, ಇದಕ್ಕಾಗಿ, ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ವೀರೇಂದ್ರ ಇಚಲಕರಂಜಿಕರ್ ಅವರು ಮಹಾರಾಷ್ಟ್ರದ ಸಂಸೃತ ಸಚಿವಾಲಯಕ್ಕೆ ಹಾಗೂ ಮಹಾರಾಷ್ಟ್ರದ ಪುರಾತತ್ವ ಇಲಾಖೆಯ ಸಂಚಾಲಕರಿಗೆ 2019 ರಂದು ಪತ್ರವನ್ನು ಕಳುಹಿಸಲಾಗಿತ್ತು. ಇದರ ಬೆನ್ನಲ್ಲೇ ಮಹಾರಾಷ್ಟ್ರ ಪುರಾತತ್ವ ಇಲಾಖೆ ತನ್ನ ವೆಬ್‌ಸೈಟ್‌ ಆರಂಭಿಸಿದೆ.

1. ‘ಮಾಹಿತಿ ಹಕ್ಕು ಕಾಯಿದೆ, 2005’ ಸೆಕ್ಷನ್ 4 ರ ಪ್ರಕಾರ, ಪುರಾತತ್ವ ಇಲಾಖೆಯು ತನ್ನ ಚಟುವಟಿಕೆಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಇರಿಸಬೇಕಾಗುತ್ತದೆ. ಮಾಹಿತಿ ಹಕ್ಕು ಕಾಯ್ದೆಯು ಮಹಾರಾಷ್ಟ್ರದಲ್ಲಿ ಅಕ್ಟೋಬರ್ 12, 2019 ರಂದು ಜಾರಿಗೆ ಬಂದಿತು; ಆದರೆ ಮಹಾರಾಷ್ಟ್ರ ರಾಜ್ಯ ಪುರಾತತ್ವ ಇಲಾಖೆಯು ತನ್ನ ಮಾಹಿತಿಯನ್ನು ಪ್ರಸಾರ ಮಾಡದೆ, ತನ್ನದೇ ಆದ ವೆಬ್‌ಸೈಟ್ ಅನ್ನು ಸಹ ಪ್ರಾರಂಭಿಸಿಲ್ಲ.

2. ‘ಮಾಹಿತಿ ಹಕ್ಕು ಕಾಯಿದೆ 2005’ ಪ್ರಕಾರ, ಸರಕಾರದಿಂದ ಅನುದಾನವನ್ನು ಪಡೆಯುವ ಸರಕಾರ ಅಥವಾ ಅರೆ ಸರಕಾರಿ ಸಂಸ್ಥೆಗಳು ವೆಬ್‌ಸೈಟ್‌ನಲ್ಲಿ ತಮ್ಮ ಕೆಲಸದ ಮಾಹಿತಿಯನ್ನು ಇಟ್ಟುಕೊಳ್ಳುವ ಮೂಲಕ ತಮ್ಮ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆಯನ್ನು ತರಲು ನಿರೀಕ್ಷಿಸಲಾಗಿದೆ; ಆದರೆ, ಮಹಾರಾಷ್ಟ್ರ ಪುರಾತತ್ವ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ವಕೀಲ ವೀರೇಂದ್ರ ಇಚಲಕರಂಜಿಕರ್ ಇವರು ಮಹಾರಾಷ್ಟ್ರ ಸರಕಾರದ ಗಮನ ಸೆಳೆದಿದ್ದರು.

3. ‘https://www.mahaarchaeology.in/contact_us’ ಎಂಬುದು ಮಹಾರಾಷ್ಟ್ರ ಪುರಾತತ್ವ ಇಲಾಖೆಯ ವೆಬ್‌ಸೈಟ್‌ಗೆ ಲಿಂಕ್ ಆಗಿದೆ. ಪ್ರಸ್ತುತ ಈ ವೆಬ್‌ಸೈಟ್‌ನಲ್ಲಿ ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳ ಹೆಸರು, ಹುದ್ದೆ ಮತ್ತು ಕಚೇರಿ ವಿಳಾಸಗಳನ್ನು ಮಾತ್ರ ನೀಡಲಾಗಿದೆ.