ವಿದ್ಯಾಧಿರಾಜ ಸಭಾಗೃಹ – ಎಂ ಎಂ ಕಲಬುರ್ಗಿ ಇವರ ಹತ್ಯೆಯ ನಂತರ ೬೩ ಜನರು ಪ್ರಶಸ್ತಿ ಹಿಂತಿರುಗಿಸಿದರು .(ಪುರಸ್ಕಾರ ವಾಪಸಿ) ಮೋಹನ ದಾಸ ಗಾಂಧಿ ಇವರ ಹತ್ಯೆಯ ತದನಂತರದ ಕಾಲದಲ್ಲಿ ಯಾವುದೇ ಹತ್ಯೆಗಳು ನಡೆದಿಲ್ಲವೇನೋ ಎಂಬಂತೆ ಮತ್ತು ಧಾಭೋಲಕರ, ಕಲಬುರ್ಗಿ ಇವರ ಹತ್ಯೆಯ ನಂತರ ಭಯಂಕರವಾದುದೇನೋ ಆಗಿದೆ ಎಂಬಂತಹ ವಾತಾವರಣವನ್ನು ಉಂಟುಮಾಡಲಾಗಿದೆ. ನಮಗೆ ಯಾರ ಹತ್ಯೆಯನ್ನು ಸಹ ಸಮರ್ಥನೆ ಮಾಡಲಿಕ್ಕಿಲ್ಲ. ನಾಸ್ತಿಕವವಾದಿಗಳ ಹತ್ಯೆಯ ನಂತರ ಹಿಂದುತ್ವನಿಷ್ಠರನ್ನು ಭಯೋತ್ಪಾದಕರೆಂದು ನಿರ್ಧರಿಸಲಾಗುತ್ತದೆ, ಆದರೆ ಸಾಮ್ಯವಾದಿಗಳು ಎಷ್ಟು ಜನರನ್ನು ಹತ್ಯೆ ಮಾಡಿದ್ದಾರೆ ? ಎಂಬ ಪ್ರಶ್ನೆಯನ್ನು ಯಾರಾದರೂ ವಿಚಾರಿಸಿದ್ದಾರೇನು ? ಸಾಮ್ಯವಾದಿಗಳು ಜಗತ್ತಿನಾದ್ಯಂತ ಹತ್ಯೆ ಮಾಡಿರುವ ಸಂಖ್ಯೆ ೧೦ ಕೋಟಿಗಿಂತಲೂ ಜಾಸ್ತಿಯಿದೆ. ನಕ್ಸಲವಾದಿಗಳಿಂದ ಭಾರತದಲ್ಲಾಗಿರುವ ಹತ್ಯೆಗಳ ಸಂಖ್ಯೆ ೧೪ ಸಾವಿರಕ್ಕಿಂತಲೂ ಹೆಚ್ಚಿದೆ. ನಕ್ಸಲವಾದಿಗಳಿಂದ ಹತ್ಯೆಯಾದವರಲ್ಲಿ ಆದಿವಾಸಿಗಳು, ಶಾಸಕರು, ಸಚಿವರು ಇದ್ದಾರೆ ! ಆದರೆ ಇದುನ್ನು ನಮಗೆ ತಿಳಿಸಲಾಗುವುದಿಲ್ಲ. ತಥಾಕಥಿತ ಬುದ್ಧಿಜೀವಿಗಳು ನಮಗೆ ಏನನ್ನು ತೋರಿಸುತ್ತಾರೋ ನಾವು, ಅದನ್ನು ಮಾತ್ರ ನೋಡುತ್ತೇವೆ. ಸಾಮ್ಯವಾದಿಗಳು ಭಾರತದಲ್ಲಿ ನಡೆಸಿರುವ ೧೪ ಸಾವಿರ ಹತ್ಯೆಗಿಂತ ೪ ನಾಸ್ತಿಕರ ಹತ್ಯೆ ನಮಗೆ ದೊಡ್ಡದೆನಿಸುತ್ತದೆ. ನಕ್ಸಲವಾದಿಗಳೇ ಸಾಮ್ಯವಾದಿಗಳಾಗಿದ್ದಾರೆ, ಮತ್ತು ಸಾಮ್ಯವಾದಿಗಳೇ ನಕ್ಸಲವಾದಿಗಳಾಗಿದ್ದಾರೆ; ಆದರೆ ಇದನ್ನು ಯಾರೂ ಹೇಳುವುದಿಲ್ಲ, ಇದೇ ವೈಚಾರಿಕ ಭಯೋತ್ಪಾದನಯಾಗಿದೆ. ನಕ್ಸಲರು ನಡೆಸಿರುವ ದಾಳಿಯ ನಂತರ ಕಮ್ಯುನಿಸ್ಟರು ಎಂದಾದರೂ ಶೋಕ ಸಭೆ ನಡೆಸಿದ್ದಾರೆಯೆ ?
ತದ್ವಿರುದ್ಧ ನಕ್ಸಲರ ಕಾರ್ಯಚಟುವಟಿಕೆಗಳನ್ನು ಸಮರ್ಥನೆ ಮಾಡಲಾಗುತ್ತದೆ. ಭಾರತದ ಮೇಲೆ ಮೊಘಲರು ಮಾಡಿರುವ ದಾಳಿಯ ಬಗ್ಗೆ ಚರ್ಚೆ ನಡೆಯುತ್ತದೆ. ಆಗ ಅದು, ೪೦೦ ವರ್ಷಗಳ ಹಿಂದಿನ ವಿಷಯ ಎಂದು ಹೇಳಲಾಗುತ್ತದೆ. ಆದರೆ ೨ ಸಾವಿರ ವರ್ಷಗಳ ಹಿಂದೆ ಮತ್ತು ಎಲ್ಲಿಯೂ ಲಿಖಿತ ರೂಪದಲ್ಲಿ ಇಲ್ಲದಿರುವಾಗಲೂ, ಆರ್ಯರು ದ್ರಾವಿಡರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ನಮಗೆ ಹೇಳಲಾಗುತ್ತದೆ, ಇದುವೇ ವೈಚಾರಿಕ ಭಯೋತ್ಪಾದನೆ ಆಗಿದೆ. ಕೇವಲ ೪ ನಾಸ್ತಿಕವಾದಿಗಳ ಹತ್ಯೆಗಳ ಬಗ್ಗೆ ಅಲ್ಲ, ಸಾಮ್ಯವಾದಿಗಳು ಇಲ್ಲಿಯವರೆಗೆ ನಡೆಸಿರುವ ಸಾವಿರಾರು ಹತ್ಯೆಗಳ ಬಗ್ಗೆ ಹಿಂದುತ್ವನಿಷ್ಠರು ಪ್ರಶ್ನೆಗಳನ್ನು ಎತ್ತಬೇಕು, ಎಂದು ಹಿಂದೂ ವಿಧಿಜ್ಞ ಪರಿಷತ್ ನ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ ಇವರು ಹೇಳಿದರು.
(ಸೌಜನ್ಯ – Hindu Janajagruti Samiti)