ನ್ಯಾಯಾಂಗದಲ್ಲಿ ಕರ್ಮಫಲನ್ಯಾಯ ಸಿದ್ಧಾಂತದ ಸೇರ್ಪಡೆ ಅತ್ಯಾವಶ್ಯಕ ! – ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದು ವಿಧಿಜ್ಞ ಪರಿಷದ್

ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ , ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್

ರಾಮನಾಥಿ, ೧೯ ಜೂನ್ (ವಾರ್ತೆ.) – ಭಾರತೀಯ ಕಾನೂನು ಆಯೋಗದ (‘ಲಾ ಕಮಿಶನ್’ನ) ಒಂದು ವರದಿಗನುಸಾರ ೨೦೦೦ ದಿಂದ ೨೦೧೫ ಈ ಕಾಲಾವಧಿಯಲ್ಲಿ ದೇಶದಲ್ಲಿನ ಸೆಷನ್ಸ್ ನ್ಯಾಯಾಲಯಗಳು ಒಟ್ಟು ೧ ಸಾವಿರದ ೭೯೦ ಜನರಿಗೆ ಗಲ್ಲು ಶಿಕ್ಷೆಯನ್ನು ನೀಡಿದವು. ಅವುಗಳಲ್ಲಿನ ೧ ಸಾವಿರದ ೫೧೨ ಪ್ರಕರಣಗಳು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳವರೆಗೆ ಬಂದವು. ಅದರಲ್ಲಿ ಕೇವಲ ಶೇ. ೪.೩ ಜನರಿಗೆ ಗಲ್ಲಿಗೇರಿಸಲಾಯಿತು. ಇತರರು ನಿರಪರಾದಿಗಳೆಂದು ಬಿಡುಗಡೆಯಾದರು. ಹಾಗಾದರೆ ಸೆಷನ್ಸ್ ನ್ಯಾಯಾಲಯಗಳ ನ್ಯಾಯಾಧೀಶರು ತಪ್ಪು ಮಾಡಿದರು ಎಂದು ಹೇಳಬೇಕೆ ? ಯಾರಾದರೊಬ್ಬ ಸರಕಾರಿ ಅಧಿಕಾರಿಗಳು ತಪ್ಪು ಮಾಡಿದರೆ ವಿಚಾರಣೆ ಮಾಡಲಾಗುತ್ತದೆ, ಹಾಗಾದರೆ ನ್ಯಾಯಾಧೀಶರ ತಪ್ಪು ನಿರ್ಣಯದ ಬಗ್ಗೆ ಏನು ಹೇಳುವುದು ? ಅಲಾಹಾಬಾದ್ ಉಚ್ಚ ನ್ಯಾಯಾಲಯವು ೧೯೭೬ ರಲ್ಲಿ ೪ ಜನರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತು. ಅವರಲ್ಲಿನ ಒಬ್ಬ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರು, ಒಬ್ಬನನ್ನು ಗಲ್ಲಿಗೇರಿಸಲಾಯಿತು, ಮತ್ತು ಇತರ ಇಬ್ಬರಿಗೆ ಕ್ಷಮಾದಾನ ಅರ್ಜಿಯ ಮೇರೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಒಂದೇ ರೀತಿಯ ಅಪರಾಧವಿದ್ದರೂ ಅಪರಾದಿಗಳಿಗೆ ಬೇರೆ ಬೇರೆ ಶಿಕ್ಷೆ ಹೇಗಾಯಿತು ? ಇದರ ಹಿಂದೆ ಕರ್ಮಫಲಸಿದ್ಧಾಂತ ಇದೆ ಏನು ? ಒಬ್ಬನಿಂದ ಬಲಾತ್ಕಾರದಂತಹ ಅಪರಾಧವಾದಾಗ, ಅದರ ಹಿಂದೆ ‘ಕಾಮ’ ಮತ್ತು ಕ್ರೋಧ’ ಈ ಷಡ್‌ರಿಪುಗಳಲ್ಲಿನ ದೋಷಗಳ ಸಮಾವೇಶವಿರುತ್ತದೆ. ಈ ಬಗ್ಗೆ ಅಧ್ಯಯನ ಬೇಡವೇ ? ವಿವಿಧ ಅಪರಾಧಗಳ ಖಟ್ಲೆಗಳನ್ನು ನಡೆಸಲು ವಿಶೇಷ ನ್ಯಾಯಾಲಯಗಳ ಸ್ಥಾಪನೆಯನ್ನು ಮಾಡಲಾಗುತ್ತದೆ, ಹೊಸ ಹೊಸ ಕಾನೂನುಗಳನ್ನು ಮಾಡಲಾಗುತ್ತದೆ; ಆದರೆ ಈ ಅಪರಾಧಗಳು ಯಾವ ಷಡ್‌ರಿಪುಗಳಿಂದಾಗಿ ಆಗುತ್ತವೆ, ಎಂಬುದರ ಬಗ್ಗೆ ಅಧ್ಯಯನ ಯಾವಾಗ ? ಕಣ್ಣುಗಳ ಮೇಲೆ ಪಟ್ಟಿ ಕಟ್ಟಿಕೊಂಡಿರುವ ನ್ಯಾಯದೇವತೆಯ ಮೂರ್ತಿ ಕರ್ಮಫಲನ್ಯಾಯ ಸಿದ್ಧಾಂತವನ್ನು ಒಪ್ಪಿಕೊಳ್ಳದ ಪಾಶ್ಚಾತ್ಯ ಸಂಕಲ್ಪನೆಯ ಆಧಾರದ ಮೇಲಿದೆ. ಯಾವುದಾದರೊಂದು ಖಟ್ಲೆಯ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯ ಅಮೇರಿಕಾ, ಇಂಗ್ಲಡ್ ಈ ದೇಶಗಳಲ್ಲಿನ ತೀರ್ಪುಗಳ ಅಧ್ಯಯನ ಮಾಡುತ್ತದೆ; ಆದರೆ ನಮ್ಮ ದೇಶದ ಕರ್ಮಫಲ ಸಿದ್ಧಾಂತದ ಅಧ್ಯಯನ ಏಕೆ ಮಾಡುವುದಿಲ್ಲ ? ನ್ಯಾಯವ್ಯವಸ್ಥೆಯಲ್ಲಿ ಕರ್ಮಫಲನ್ಯಾಯ ಸಿದ್ಧಾಂತಗಳ ಸಮಾವೇಶ ಅತ್ಯಾವಶ್ಯಕವಾಗಿದೆ. ಎಂದು ಹಿಂದು ವಿಧಿಜ್ಞ ಪರಿಷದ್‌ನ ಅಧ್ಯಕ್ಷ ವೀರೇಂದ್ರ ಇಚಲಕರಂಜೀಕರ ಇವರು ಹೇಳಿದರು. ಅವರು ಇಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ನಾಲ್ಕನೇ ದಿನ (೧೯.೬.೨೦೨೩ ರಂದು) ಉಪಸ್ಥಿತರಿಗೆ ಸಂಬೋಧಿಸುತ್ತಿದ್ದರು.