ಮತಾಂತರಗೊಂಡ ಹಿಂದೂಗಳನ್ನು ಮರಳಿ ತನ್ನಿ !

೧. ಮತಾಂತರಗೊಂಡ ಹಿಂದೂಗಳನ್ನು ಮರಳಿ ತನ್ನಿ !

ಉತ್ತರಪ್ರದೇಶದಲ್ಲಿ ಪ್ರೇರಕ ಚಿಂತನೆ (ಮೋಟಿವೇಶನಲ್ ಥಾಟ್) ಎಂಬ ನಯವಾದ ಹೆಸರಿನಲ್ಲಿ ೧ ಸಾವಿರ ಬಡ ಹಿಂದೂಗಳನ್ನು ಮತಾಂತರಗೊಳಿಸಿದ ಇಬ್ಬರು ಮೌಲಾನಾರನ್ನು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ.

೨. ಇಂತಹ ಕಟುಕರನ್ನು ಗಲ್ಲಿಗೇರಿಸಿ !

ಗುಜರಾತದ ವಲಸಾಡ್ ಇಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ಟೆಂಪೋವೊಂದರಲ್ಲಿದ್ದ ಮತಾಂಧ ಕಟುಕರು ಹಾರ್ದಿಕ ಕಂಸಾರಾ ಎಂಬ ೨೯ ವರ್ಷದ ಗೋರಕ್ಷಕನನ್ನು ವಾಹನದಡಿ ಹೊಸಕಿ ಹಾಕಿದರು.  ಪೊಲೀಸರು ಈ ಪ್ರಕರಣದಲ್ಲಿ ೧೦ ಜನರನ್ನು ಬಂಧಿಸಿದ್ದಾರೆ.

೩. ವ್ಯಾಟಿಕನ್ ಚರ್ಚ್ ಇದಕ್ಕೆ ಯಾವಾಗ ಉತ್ತರಿಸುವುದು ?

ವಿಶ್ವ ಸಂಸ್ಥೆಯೊಂದಿಗೆ ಕೆಲಸ ಮಾಡುವ ಸ್ವತಂತ್ರ ಮಾನವಹಕ್ಕುಗಳ ತಜ್ಞರು ವಿಶ್ವದಾದ್ಯಂತದ ಚರ್ಚ್‌ಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ ಮಾಡುವ ಅಧಿಕಾರಿಗಳಿಗೆ  ವ್ಯಾಟಿಕನ್ ಚರ್ಚ್ ಬೆಂಬಲ ನೀಡುತ್ತಿದೆ, ಎಂದು ಆರೋಪಿಸಿದ್ದಾರೆ.

೪. ಇದು ಸಂಭವಿಸಲು ಕಾನಪೂರ ಪಾಕಿಸ್ತಾನದಲ್ಲಿ ಇದೆಯೇ ?

ಕಾನಪೂರದ (ಉತ್ತರಪ್ರದೇಶ) ಕರ್ನಲ್‌ಗಂಜ್ ಪ್ರದೇಶದ ಅಲ್ಪಸಂಖ್ಯಾತ ಹಿಂದೂಗಳು ಮುಸಲ್ಮಾನ ಬಹುಸಂಖ್ಯಾತರ ಭಯೋತ್ಪಾದನೆಯಿಂದ ತಮ್ಮ ಮನೆಗಳನ್ನು ಮಾರಿ ಪರಾರಿಯಾಗಲು ತಯಾರಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಮನೆ ಮಾರಾಟಕ್ಕಿದೆ ಎಂದು ಹಿಂದೂಗಳು ತಮ್ಮ ಮನೆಗಳ ಹೊರಗೆ ಫಲಕಗಳನ್ನು ಹಾಕಿದ್ದಾರೆ.

೫. ವಿದೇಶಿ ಸಾಮಾಜಿಕ ಮಾಧ್ಯಮಗಳ ದಬ್ಬಾಳಿಕೆಯನ್ನು ತೊರೆಯಿರಿ !

ಭಾರತದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ ಅವರ ಟ್ವಿಟರ್ ಖಾತೆಯನ್ನು ಟ್ವಿಟರ್ ಸಂಸ್ಥೆಯು ಒಂದು ಗಂಟೆ ನಿರ್ಬಂಧಿಸಿತ್ತು. ಅನಂತರ ಟ್ವಿಟರ್ ರವಿಶಂಕರ ಪ್ರಸಾದ ಅವರಿಗೆ ಎಚ್ಚರಿಕೆ ನೀಡಿ ಅದನ್ನು ಪುನರಾರಂಭಿಸಿತು.

೬. ಅಂತಹ ಮತಾಂಧರಿಗೆ ಯಾವಾಗ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ?

ವಡೋದರಾ (ಗುಜರಾತ್) ಇಲ್ಲಿನ ಸಮೀರ್ ಕುರೇಶಿಯು ತನ್ನ ಹೆಸರು ಸ್ಯಾಮ್ ಮಾರ್ಟಿನ್ ಎಂದು ಸುಳ್ಳು ಹೇಳಿ ಹಿಂದೂ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದನು. ದೈಹಿಕ ಸಂಬಂಧವನ್ನು ಬೆಳೆಸಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಅವಳ ಛಾಯಾಚಿತ್ರಗಳನ್ನು ತೆಗೆದುಕೊಂಡು ಮದುವೆಯಾಗಲು ಒತ್ತಾಯಿಸಿದನು. ಮದುವೆಯ ನಂತರ ಅವನ ಸುಳ್ಳುತನ ಬಹಿರಂಗವಾಯಿತು.

೭. ಪಾಕಿಸ್ತಾನದ ಅಸ್ತಿತ್ವವನ್ನು ಯಾವಾಗ ನಾಶ ಮಾಡುವಿರಿ ?

ಪಾಕಿಸ್ತಾನ ಪ್ರಾಯೋಜಿತ ಜಿಹಾದಿ ಉಗ್ರರು ಜಮ್ಮುವಿನ ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿರುವ ಭಾರತೀಯ ವಾಯುಪಡೆಯ ಯುದ್ಧ ಹೆಲಿಕಾಪ್ಟರ್‌ಗಳ ಮೇಲೆ ಡ್ರೋನ್ ದಾಳಿ ನಡೆಸಿದರು.  ಅದೃಷ್ಟವಶಾತ್ ಬಾಂಬ್ ಹೆಲಿಕಾಪ್ಟರ್‌ಗಳ ಬದಲು ಕಟ್ಟಡದ ಮೇಲೆ ಬಿದ್ದುದರಿಂದ ದೊಡ್ಡ ಹಾನಿಯು ತಪ್ಪಿತು.