ಆಪತ್ಕಾಲದಲ್ಲಿ ಪೆಟ್ರೋಲ್, ಡೀಸಲ್ ಇತ್ಯಾದಿ ಇಂಧನಗಳ ಕೊರತೆಯಾಗುವ ಸಾಧ್ಯತೆ ಇರುವುದರಿಂದ ಸೈಕಲ್‌ನ ಪರ್ಯಾಯವನ್ನು ಆಯ್ಕೆ ಮಾಡಿ !

ಸಾಧಕರಿಗೆ ಸೂಚನೆ, ಹಾಗೆಯೇ ಓದುಗರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

‘ಸೈಕಲ್ ಇದು ಇಂಧನವಿಲ್ಲದೇ ನಡೆಯುವ ಸಾರಿಗೆ ಸಾಧನವಾಗಿದೆ. ಸೈಕಲ್ ಓಡಿಸುವುದರಿಂದ ವ್ಯಾಯಾಮವಾಗುತ್ತದೆ ಹಾಗೂ ಇದು ವೈಯಕ್ತಿಕ ಆರೋಗ್ಯಕ್ಕಾಗಿಯೂ ಲಾಭದಾಯಕವಾಗಿದೆ.  ಇತರ ವಾಹನಗಳು ವಾಯು ಹಾಗೂ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತವೆ;  ಆದರೆ ಸೈಕಲ್ ಓಡಿಸುವುದರಿಂದ ಯಾವುದೇ ಮಾಲಿನ್ಯವಾಗುವುದಿಲ್ಲ. ಆದ್ದರಿಂದ ಸೈಕಲ್ ಪರಿಸರಸ್ನೇಹಿಯಾಗಿದೆ.

ಆಪತ್ಕಾಲದಲ್ಲಿ ಪೆಟ್ರೋಲ್, ಡೀಸೆಲ್ ಇತ್ಯಾದಿಗಳ ಕೊರತೆ ಆಗುತ್ತದೆ. ಆಗ ಅಂತಹ ಇಂಧನಗಳಿಂದ ಚಲಿಸುವ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳು ನಿರುಪಯುಕ್ತವಾಗುತ್ತವೆ. ಸಂಭಾವ್ಯ ಆಪತ್ಕಾಲದ ತೀವ್ರತೆಯನ್ನು ಗಮನದಲ್ಲಿಟ್ಟು ಸೈಕಲ್ ಇರುವವರು ‘ಅದು ಬಳಸಬಹುದಾದ ಸ್ಥಿತಿಯಲ್ಲಿದೆಯೇ ? ಎಂದು ನೋಡ ಬೇಕು.  ಸೈಕಲ್ ಹಾಳಾಗಿದ್ದರೆ, ಅದನ್ನು ದುರಸ್ತಿ ಮಾಡಬೇಕು. ಸೈಕಲ್ ದುರಸ್ತಿ ಮಾಡಲು  ಬರದಿದ್ದರೆ, ದುರಸ್ತಿ ಮಾಡಲು ಕಲಿಯಿರಿ.  ಉತ್ತಮ ಗುಣಮಟ್ಟದ ಮತ್ತು ಬಾಳಿಕೆ ಬರುವ ಸೈಕಲ್ ಬಿಡಿ ಭಾಗಗಳನ್ನು (ಸ್ಪೇರ್ ಪಾರ್ಟ್ಸ್) ಈಗಲೇ ಖರೀದಿಸಿ.  ಇದರಿಂದ ಭವಿಷ್ಯದಲ್ಲಿ ಸೈಕಲ್  ಹಾಳಾದರೆ ಅದನ್ನು ಮನೆಯಲ್ಲಿಯೇ ದುರಸ್ತಿ ಮಾಡಬಹುದು