ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು !

೧. ಬಂಗಾಲದಲ್ಲಿ ರಾಷ್ಟ್ರಪತಿ ಆಳ್ವಿಕೆ ತನ್ನಿ !

ಬಂಗಾಲದಲ್ಲಿ ವಿಧಾನಸಭೆಯ ಚುನಾವಣೆಯ ನಂತರದ ಹಿಂಸಾಚಾರದಲ್ಲಿ ೬೦ ವರ್ಷದ ವೃದ್ಧ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಪೊಲೀಸರು ದೂರು ದಾಖಲಿಸದ ಕಾರಣ ಆಕೆ ಸರ್ವೋಚ್ಚ  ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತನಿಖೆ ನಡೆಸಲು ಆಗ್ರಹಿಸಿದ್ದಾಳೆ.

೨. ಜಾತ್ಯತೀತವಾದಿಗಳು ಇವರ ಪ್ರಬೋಧನೆ ಏಕೆ ಮಾಡುವುದಿಲ್ಲ ?

ಪ್ರಸ್ತುತ ಕರೊನಾ ಪ್ರತಿಬಂಧಕ ಲಸೀಕರಣದಿಂದ ದೇಶದ ಮುಸಲ್ಮಾನರು ದೂರ ಉಳಿದಿದ್ದಾರೆ ಎಂದು ನಾನು ಅವರ ಹೆಸರನ್ನು ಉಲ್ಲೇಖಿಸಿ ಹೇಳುತ್ತಿದ್ದೇನೆ.  ಲಸೀಕರಣದ ಬಗ್ಗೆ ಅವರಿಗೆ ತಪ್ಪು ಕಲ್ಪನೆ ಇದೆ ಎಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.

೩. ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು !

ಆನ್‌ಲೈನ್ ಮಾರಾಟ ಮಾಡುವ ‘ಫ್ಲಿಪ್‌ಕಾರ್ಟ್’ ಕಂಪನಿಯು ತನ್ನ ಜಾಲತಾಣದಲ್ಲಿ ಭಗವಾನ್ ಶಿವ ಮತ್ತು ಪಾರ್ವತಿ ಮಾತೆಯ ಇವರು ಪ್ರಣಯಕ್ರೀಡೆ ಮಾಡುತ್ತಿರುವ ಚಿತ್ರವಿರುವ ಸಂಚಾರವಾಣಿಯ ‘ಕವರ್’ ಅನ್ನು ಮಾರಾಟಕ್ಕೆ ಇಟ್ಟಿತ್ತು. ಇದನ್ನು ವಿರೋಧಿಸಿದ ನಂತರ ಅದನ್ನು ತೆಗೆಯಲಾಗಿದೆ.

೪. ಭಾರತವು ‘ಇಸ್ಲಾಮಿಕ್ ದೇಶ’ವಾಗುವ ಮೊದಲು ಎಚ್ಚರವಾಗಿರಿ !

ಅಸ್ಸಾಂನ ಭಾಜಪ ಶಾಸಕ ಮತ್ತು ಪ್ರದೇಶ ಉಪಾಧ್ಯಕ್ಷ ಜಯಂತ ಮಲ್ಲಾ ಬರುವಾ ಅವರು ಅಸ್ಸಾಂನಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ ಮತ್ತು ೨೦೩೮ರ ವರೆಗೆ ಮುಸಲ್ಮಾನರು ಬಹುಸಂಖ್ಯಾತರಾಗುವರು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

೫. ಭಾರತವು ಈ ಹಣವನ್ನು ಯಾವಾಗ ಮರಳಿ ತರಲಿದೆ ?

ಸ್ವಿಝರ್ಲ್ಯಾಂಡ್‌ನ ಸ್ವಿಸ್ ನ್ಯಾಶನಲ್ ಬ್ಯಾಂಕ್ ಇದು ಜೂನ್ ೧೭ ರಂದು ಬಿಡುಗಡೆ ಮಾಡಿದ ವಾರ್ಷಿಕ ಅಂಕಿಅಂಶಗಳಿಂದ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಠೇವಣಿ ಇಟ್ಟ ಮೊತ್ತವು ೨೦ ಸಾವಿರ ಕೋಟಿ ರೂಪಾಯಿಗೂ ಹೆಚ್ಚಿದೆ ಎಂದು ಬೆಳಕಿಗೆ ಬಂದಿದೆ.

೬. ಎನ್.ಸಿ.ಇ.ಆರ್.ಟಿ.ಯ ಹಿಂದೂದ್ವೇಷಿ ಪುಸ್ತಕಗಳಲ್ಲಿ ಬದಲಾವಣೆ ಯಾವಾಗ ?

ಸತಿಸಹಗಮನದ ಇತಿಹಾಸವನ್ನು ‘ಎನ್‌ಸಿಇಆರ್‌ಟಿಯ ಪುಸ್ತಕದಲ್ಲಿ ಕೊಡ ಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಾಕ್ಷಾಧಾರಗಳನ್ನು ಕೇಳಲು ಪ್ರಯತ್ನಿಸಿದಾಗ, ಎನ್.ಸಿ.ಇ.ಆರ್.ಟಿ.ಯು, ‘ನಮ್ಮಲ್ಲಿ ಪುರಾವೆಗಳಿಲ್ಲ ಎಂದು ಉತ್ತರಿಸಿದೆ.

೭. ಭಾರತದ್ವೇಷಿ ‘ಬಿಬಿಸಿಯನ್ನು ನಿಷೇಧಿಸಿ !

ಬಿಬಿಸಿ ವಾರ್ತಾವಾಹಿನಿಯಲ್ಲಿ ಕೊರೊನಾದ ಸುದ್ದಿಯ ವೀಡಿಯೊದಲ್ಲಿ ತೋರಿಸಿದ ಭಾರತದ ನಕಾಶೆಯಲ್ಲಿ ‘ಜಮ್ಮು-ಕಾಶ್ಮೀರ ಮತ್ತು ‘ಲಡಾಖ್ನ ಭಾಗವನ್ನು ತೆಗೆದುಹಾಕಲಾಗಿದೆ. ಅದನ್ನು ವಿರೋಧಿಸಿದಾಗ ಸರಿಯಾದ ನಕಾಶೆಯನ್ನು ತೋರಿಸುವ ಬದಲು, ವಾರ್ತಾವಾಹಿನಿಯು ರಾಷ್ಟ್ರಧ್ವಜವನ್ನು ತೋರಿಸಿತು.