ಬೀಜಿಂಗ್ (ಚೀನಾ) – ಕಳೆದ ಒಂದು ವರ್ಷದಲ್ಲಿ ಚೀನಾ ಮತ್ತು ಭಾರತ ನಡುವಿನ ಸಂಬಂಧಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ. ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ‘ಭಾರತವು ಚೀನಾದೊಂದಿಗೆ ಸ್ಥಿರ ಸಂಬಂಧವನ್ನು ಬಯಸುತ್ತದೆ’ ಎಂದು ಹೇಳಿದ್ದರು. ಇದಕ್ಕೆ ಪರಸ್ಪರ ಯಶಸ್ಸನ್ನು ಸಾಧಿಸಲು ಉಭಯ ದೇಶಗಳೂ ಒಟ್ಟಾಗಿ ಕೆಲಸ ಮಾಡುವತ್ತ ಗಮನ ಹರಿಸುವುದು ಅವಶ್ಯಕವಾಗಿದೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
ಎರಡೂ ದೇಶಗಳು ಪರಸ್ಪರ ಬೆಂಬಲಿಸಬೇಕು, ಪರಸ್ಪರ ದುರ್ಬಲಗೊಳಿಸಲು ಪ್ರಯತ್ನಿಸಬಾರದು. ‘ಗ್ಲೋಬಲ್ ಸೌತ್’ ದೇಶಗಳ ಅಭಿವೃದ್ಧಿಯನ್ನು ಉತ್ತೇಜಿಸಲು ಚೀನಾ ಮತ್ತು ಭಾರತ ಒಟ್ಟಾಗಿ ಸೇರಬೇಕು. ಉಭಯ ದೇಶಗಳ ನಡುವಿನ ಗಡಿ ವಿವಾದ ಅವರ ದ್ವಿಪಕ್ಷೀಯ ಸಂಬಂಧಗಳನ್ನು ನಿರ್ಧರಿಸುವ ಏಕೈಕ ಅಂಶವಾಗಿರಬಾರದು. ಭಾರತ ಮತ್ತು ಚೀನಾ ಪರಸ್ಪರ ಜಾಗರೂಕರಾಗಿರುವ ಬದಲು ಪರಸ್ಪರ ಸಹಕರಿಸಬೇಕು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಚೀನಾ ಏನೇ ಹೇಳಿದರೂ, ಅದು ನಂಬಲರ್ಹವಲ್ಲದ ದೇಶ ಆಗಿರುವುದರಿಂದ ಎಂದಿಗೂ ಅದರ ಮೇಲೆ ನಂಬಿಕೆ ಇಡಲು ಆಗುವುದಿಲ್ಲ ! |