ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದೂದ್ವೇಷದ ಮುಖವಾಡವಾಗಿರುವ ‘ಬಿಬಿಸಿ’ಯ ಬಣ್ಣ ಬಯಲು ಮಾಡುವ ಡಾಕ್ಯುಮೆಂಟರಿ ಬಿಡುಗಡೆಯಾಗಲಿದೆ !

‘ಗ್ಲೋಬಲ್ ಹಿಂದೂ ಫೌಂಡೇಶನ್’ ಮತ್ತು ‘ಸ್ಟ್ರಿಂಗ್ ರಿವೀಲ್ಸ್’ ಈ ಹಿಂದುತ್ವನಿಷ್ಠ ಸಂಘಟನೆಯಿಂದ ಅಕ್ಟೋಬರ್ ೨೫ ರಂದು ಪ್ರಸಾರ !

(ಡಾಕ್ಯುಮೆಂಟರಿ ಎಂದರೆ ಕಿರುಚಿತ್ರ)

ಲಂಡನ್ (ಇಂಗ್ಲೆಂಡ್) – ಬಿಬಿಸಿ, ಎಂದರೆ ‘ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್’, ಈ ವಾರ್ತಾವಾಹಿನಿ ಹಿಂದೂದ್ವೇಷದಿಂದ ಕೂಡಿದ್ದೂ ಭಾರತ ಮತ್ತು ಹಿಂದೂಗಳ ವಿಷಯದಲ್ಲಿ ಕಟ್ಟು ಕಥೆಗಳನ್ನು ಪ್ರಸ್ತುತಪಡಿಸುವುದಕ್ಕಾಗಿ ಅದು ಕುಖ್ಯಾತಿ ಪಡೆದಿದೆ. ಇಂತಹ ಬಿಬಿಸಿಯ ವಿರುದ್ಧ ಇದೇ ಮೊದಲಬಾರಿ ಒಂದು ಅತ್ಯಂತ ಅಧ್ಯಯನಪೂರ್ಣ ‘ಡಾಕ್ಯುಮೆಂಟ್ರಿ’ ಪ್ರಸಾರ ಮಾಡಲಾಗುವುದು. ‘ಬಿಬಿಸಿ ಆನ್ ಟ್ರಾಯಲ್'(ಬಿಬಿಸಿಯ ವಿರುದ್ಧ ಮೊಕದ್ದಮೆ) ಹೇಗೆ ಅದರ ಹೆಸರು ಆಗಿದ್ದು ಅಕ್ಟೋಬರ್ ೨೫ ರಂದು ಪ್ರಸಾರಗೊಳ್ಳುವುದು, ಎಂದು ‘ಸ್ಟ್ರಿಂಗ್ ರಿವೀಲ್ಸ್’ ಈ ಹಿಂದುತ್ವನಿಷ್ಠ ಸಂಘಟನೆಯ ಮುಖ್ಯಸ್ಥ ಶ್ರೀ. ವಿನೋದ ಕುಮಾರ ಇವರು ಸನಾತನ ಪ್ರಭಾತಗೆ ಮಾಹಿತಿ ನೀಡಿದರು. ಈ ಡಾಕ್ಯುಮೆಂಟರಿಯ ‘ಟ್ರೈಲರ್’ (ಚಿಕ್ಕ ಜಾಹಿರಾತು) ಅಕ್ಟೋಬರ್ ೧೩ ರಂದು ರಾತ್ರಿ ಪ್ರಸಾರ ಮಾಡಲಾಯಿತು. ‘ಗ್ಲೋಬಲ್ ಹಿಂದೂ ಫೌಂಡೇಶನ್’ ಮತ್ತು ‘ಸ್ಪ್ರಿಂಗ್ ರಿವೀಲ್ಸ್’ ಈ ಹಿಂದುತ್ವನಿಷ್ಠ ಸಂಘಟನೆಯ ಜಂಟಿ ಸಹಯೋಗದಿಂದ ಈ ಡಾಕ್ಯುಮೆಂಟ್ರಿ ತಯಾರಿಸಲಾಗಿದೆ.

ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ #BBCOn Trial, #BBC documentary, #DeportTheBBC, #DefundTheBBC ಈ ಹ್ಯಾಶ್ ಟ್ಯಾಗ್ ನಿಂದ (ಒಂದೇ ವಿಷಯದ ಕುರಿತು ಚರ್ಚೆ ನಡೆಸಲು ಬಳಸುವ ಪದ) ಪ್ರಸಾರ ಮಾಡಲಾಗಿದೆ.

ಟ್ರೇಲರ್ ಮೂಲಕ ಮಂಡಿಸಲಾದ ಅಂಶಗಳು !

೧. ಆರಂಭದಲ್ಲಿ ಟೀನಾ ಭಾರದ್ವಾಜ್ ಹೆಸರಿನ ಮಾಜಿ ‘ಬಿಬಿಸಿ ಟಿವಿ ಲಯನ್ಸ್ ಫಿ ಪೇಯರ್’ (ಬಿಬಿಸಿ ನೋಡುವುದಕ್ಕಾಗಿ ತೆರಿಗೆ ನೀಡುವ ವ್ಯಕ್ತಿ ), ನಾನು ‘ಬಿಬಿಸಿ’ಯನ್ನು ನಿರಂತರವಾಗಿ, ದೋಷಪುರಿತ ಮತ್ತು ಕಟ್ಟರವಾದಿ ವಾರ್ತೆಗಳಿಗೆ ಬೇಸತ್ತಿದ್ದೇನೆ. (ಬಿಬಿಸಿ ವಾರ್ತಾವಾಹಿನಿ ನೋಡುವುದಕ್ಕಾಗಿ ಜನರಿಗೆ ಇಂಗ್ಲೆಂಡ್‌ನಲ್ಲಿ ಬಲವಂತವಾಗಿ ತೆರಗೆ ನೀಡಬೇಕಾಗುತ್ತದೆ.)

೨. ಈ ಸಮಯದಲ್ಲಿ ಬಿಬಿಸಿಯ ಕಾರ್ಯಾಲಯದ ಹೊರಗೆ ಹಿಂದುಗಳು ಪ್ರತಿಭಟನೆ ಮಾಡುತ್ತಿರುವುದು ಕಾಣುತ್ತದೆ. ಹಾಗೂ ಬಿಬಿಸಿಯ ನಿರೂಪಕರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಯೋಧ್ಯೆಯಲ್ಲಿನ ರಾಮ ಮಂದಿರ ಈ ವಿಷಯದ ಕುರಿತು ಅವಾಚ್ಯ ಪದಗಳಲ್ಲಿ ಮಾತನಾಡುವುದು ತೋರಿಸಲಾಗಿದೆ.

೩. ಮುಂದೆ ‘ನಕಲಿ ವಾರ್ತೆಗಳನ್ನು ಸೃಷ್ಟಿಸುವ ಜಗತ್ತಿನ ಎಲ್ಲಕ್ಕಿಂತ ದೊಡ್ಡ ಕಂಪನಿ’ ಎಂದು ಬಿಬಿಸಿಯನ್ನು ತೋರಿಸುತ್ತಿದ್ದು ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ, ‘ಎಕ್ಸ್’ನ ಮಾಲಿಕ ಇಲಾನ್ ಮಾಸ್ಕ್, ‘ಗ್ಲೋಬಲ್ ಹಿಂದೂ ಫೌಂಡೇಶನ್’ನ ಪಂಡಿತ ಸತೀಶ ಶರ್ಮ, ತಜ್ಞ ರುಚಿರ ಶರ್ಮಾ, ಬ್ರಿಟನ್ ನಲ್ಲಿನ ಲೇಖಕ ಕಪಿಲ್ ದುಡಾಕಿಯ, ಸದ್ಗುರು ಜಗ್ಗಿ ವಾಸುದೇವ್ ಮುಂತಾದವರು ಆಗಾಗಾ ಬಿಬಿಸಿಯನ್ನು ಖಂಡಿಸುತ್ತಿರುವುದನ್ನು ತೋರಿಸಲಾಗಿದೆ.

೪. ಬಿಬಿಸಿಗೆ ಭಾರತ ವಿರೋಧಿ ‘ಗೇಟ್ಸ್ ಫೌಂಡೇಶನ್’ ಈ ಸಂಸ್ಥೆಯಿಂದ ಕೋಟ್ಯಾಂತರ ರೂಪಾಯಿ ಹರಿದು ಬರುತ್ತಿದೆ ಎಂದು ಹೇಳಲಾಗಿದೆ.

೫. ಕೊನೆಯಲ್ಲಿ ‘ಸ್ಪ್ರಿಂಗ್ ರಿವಿಲ್ಸ್’ನ ಮುಖ್ಯಸ್ಥ ಶ್ರೀ. ವಿನೋದ ಕುಮಾರ ಇವರು, ಪಕ್ಷಪಾತ ಮತ್ತು ಸುಳ್ಳುತನದ ಇನ್ನೊಂದು ಹೆಸರು ಹೇಳಬೇಕೆಂದರೆ ಅದು ಇದೆ ‘ಬಿಬಿಸಿ’ ಆಗಿದೆ ಎಂದು ಹೇಳುತ್ತಾರೆ. ಬಿಬಿಸಿ ಎಂದರೆ ಕೆಲವು ವಸಾಹತವಾದಿಗಳ ಗುಂಪು ಆಗಿದೆ. ಅವರಿಗೆ ನ್ಯಾಯಾಲಯಕ್ಕೆ ಎಳೆದು ತರಬೇಕು. ಭಾರತದಲ್ಲಿ ಅವರ ಮೇಲೆ ನಿಷೇಧ ಹೇರಬೇಕು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದುದ್ವೇಷ ಕಣಕಣಲ್ಲಿ ತುಂಬಿರುವ ಮತ್ತು ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅವಮಾನಿಸುವ ಬಿಬಿಸಿಯ ವಿರುದ್ಧ ತೊಡೆತಟ್ಟುವುದು ಅವಶ್ಯಕತೆ ಆಗಿದೆ. ಇದಕ್ಕಾಗಿ ಈ ‘ಡಾಕ್ಯುಮೆಂಟರಿ’ ಒಂದು ಮಹತ್ವದ ಹೆಜ್ಜೆಯಾಗಿದ್ದು ಹಿಂದುಗಳು ಬಿಬಿಸಿಯನ್ನು ಭಾರತದಿಂದ ನಾಶಗೊಳಿಸುವುದಕ್ಕಾಗಿ ಈಗ ಕಟಿಬದ್ಧವಾಗಬೇಕು !